ಕ್ರೇಜಿ ಸ್ಟಾರ್ ರವಿಚಂದ್ರನ್ (Vikram Ravichandran New Movie) ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಎರಡನೇ ಚಿತ್ರ ಒಪ್ಪಿ ಆಗಿದೆ. ಆ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ ಜೊತೆಗೆ ಮೊದಲ ದೃಶ್ಯಕ್ಕೂ ಕ್ಲಾಪ್ ಮಾಡಲಾಗಿದೆ. ರವಿಚಂದ್ರನ್ ಅವರ ಮೊದಲ ಮಗ ಮನೋರಂಜನ್ ಈ ಚಿತ್ರಕ್ಕೆ ಕ್ಲಾಪ್ ಕೂಡ ಮಾಡಿದ್ದಾರೆ. ಈ ಚಿತ್ರದ ಕೆಲಸ (Vikram Ravichandran) ಈಗ ಎಲ್ಲಿಗೆ ಬಂತು? ಏನೆಲ್ಲ ಆಗುತ್ತಿದೆ. ಸಿನಿಮಾ ಪೂಜೆ ಆದ್ಮೇಲೆ ಚಿತ್ರದ ನಿರ್ದೇಶಕರು ಎಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದೊಂದು ಆ್ಯಕ್ಷನ್ ಪ್ಯಾಕ್ಡ್ (Vikram Ravichandran Second Movie) ಸಿನಿಮಾವಾಗಿದ್ದು, ಇದರಲ್ಲಿ ವಿಕ್ರಮ್ ರವಿಚಂದ್ರನ್ ಹೇಗೆ ಕಾಣುಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಮಾಹಿತಿಯ ನಿರೀಕ್ಷೆಯಲ್ಲಿರೋರಿಗೆ ಸಿನಿಮಾ (Vikram Ravichandran New Movie Launch) ತಂಡ ಒಂದು ವೀಡಿಯೋ ಬಿಟ್ಟಿದೆ. ಇದು ವಿಶೇಷವಾಗಿಯೇ ಇದೆ.
ವಿಕ್ರಮ್ ರವಿಚಂದ್ರನ್ ಚಿತ್ರದಲ್ಲಿ ಮುಧೋಳ ನಾಯಿ!
ವಿಕ್ರಮ್ ರವಿಚಂದ್ರನ್ ಜೊತೆಗೆ ಆ ಬಿಳಿ ಮುಧೋಳ ನಾಯಿ ಇರೋದು ಯಾಕೆ? ಈ ಒಂದು ಕುತೂಹಲದ ಪ್ರಶ್ನೆ ಈಗ ಮೂಡಿದೆ. ಚಿತ್ರ ತಂಡ ಈಗ ಬಿಟ್ಟಿರೋ ವಿಶೇಷ ವೀಡಿಯೋದಲ್ಲಿ ಅದೇ ಕ್ಯೂರಿಯೋಸಿಟಿ ಮೂಡಿದೆ.
ವಿಕ್ರಮ್ ರವಿಚಂದ್ರನ್ ತಮ್ಮ ಮೊದಲ ತ್ರಿವಿಕ್ರಮ್ ಆದ್ಮೇಲೆ ಬೇರೆ ಚಿತ್ರ ಒಪ್ಪಿಕೊಂಡಿರಲಿಲ್ಲ. ತುಂಬಾ ದಿನಗಳ ಬಳಿಕ ವಿಕ್ರಮ್ ರವಿಚಂದ್ರನ್ ಈಗ ಒಂದು ಚಿತ್ರ ಒಪ್ಪಿದ್ದಾರೆ.
ವಿಕ್ರಮ್ ರವಿಚಂದ್ರನ್ ಜೊತೆಗೆ ಮುಧೋಳ ನಾಯಿ ಇರೋದ್ಯಾಕೆ?
ವಿಕ್ರಮ್ ರವಿಚಂದ್ರನ್ ಚಿತ್ರದಲ್ಲಿ ಮುಧೋಳ ನಾಯಿ ಕೂಡ ಇದೆ. ಇದು ಯಾರು ಸಾಕಿರೋ ನಾಯಿ? ಸ್ವತಃ ವಿಕ್ರಮ್ ರವಿಚಂದ್ರನ್ ಈ ಡಾಗ್ ಅನ್ನ ಸಾಕಿದ್ದಾರಾ ? ಪ್ರೀತಿಯಿಂದ ಸಾಕಿರೋ ನಾಯಿಯನ್ನೆ ಚಿತ್ರ ಮುಹೂರ್ತಕ್ಕೆ ತೆಗೆದುಕೊಂಡು ಬಂದಿದ್ದರೇ?
ಈ ಎಲ್ಲ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಆದರೆ ಈ ನಾಯಿ ಬಗ್ಗೆ ಈಗಲೇ ಕುತೂಹಲ ಮೂಡೋಕೆ ಕಾರಣವೂ ಇದೆ. ಚಿತ್ರ ತಂಡ ಬಿಟ್ಟಿರೋ ವೀಡಿಯೋದಲ್ಲಿ ವಿಕ್ರಮ್ ರವಿಚಂದ್ರನ್ ಬಿಳಿ ಮುಧೋಳ ನಾಯಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ್ದಾರೆ.
ವಿಕ್ರಮ್ ರವಿಚಂದ್ರನ್ ಚಿತ್ರದಲ್ಲಿ ಮುಧೋಳ ನಾಯಿ ರೋಲ್!
ವಿಕ್ರಮ್ ರವಿಚಂದ್ರನ್ ಅಭಿನಯದ, ಇನ್ನೂ ಹೆಸರು ಇಡದೇ ಇರೋ ಚಿತ್ರದಲ್ಲಿ ನಾಯಿ ಕೂಡ ಪ್ರಮುಖ ಪಾತ್ರದಲ್ಲಿಯೇ ಇದೆ. ಈ ಹಿನ್ನೆಲೆ ಚಿತ್ರದ ಪೂಜೆ ವೇಳೆ ವಿಕ್ರಮ್ ರವಿಚಂದ್ರನ್ ಬೇಟೆ ನಾಯಿಯನ್ನ ತೆಗೆದುಕೊಂಡೇ ಬಂದಿದ್ದರು. ಇದೀಗ ಚಿತ್ರ ತಂಡ ರಿಲೀಸ್ ಮಾಡಿರುವ ವೀಡಿಯೋದಲ್ಲೂ ನಾಯಿ ಭಾರೀ ಗಮನ ಸೆಳೆಯುತ್ತಿದೆ.
ವಿಕ್ರಮ್ ರವಿಚಂದ್ರನ್ ಅಭಿನಯದ ಈ ಚಿತ್ರದಲ್ಲಿ ಹತ್ತು ಹಲವು ವಿಶೇಷತೆಗಳಿವೆ. ವಿಕ್ರಮ್ ರವಿಚಂದ್ರನ್ ಈ ಚಿತ್ರದಲ್ಲಿ ಬೇರೆ ರೀತಿಯ ಪಾತ್ರವನ್ನೆ ಮಾಡುತ್ತಿದ್ದಾರೆ. ಇದರ ಝಲಕ್ ಕೂಡ ಚಿತ್ರದ ಪೂಜೆಯ ದಿನವೇ ಸಿಕ್ಕಂತಿದೆ.
ವಿಕ್ರಮ್ ರವಿಚಂದ್ರನ್ ವೈಟ್ ಆ್ಯಂಡ್ ವೈಟ್ ನಲ್ಲಿ ಬಂದಿದ್ದೇಕೆ?
ಈ ಒಂದು ಕುತೂಹಲದ ಪ್ರಶ್ನೆ ಕೂಡ ಈಗ ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಚಿತ್ರದ ಮುಹೂರ್ತಕ್ಕೆ ಸಿಂಪಲ್ ಆಗಿಯೇ ಬಂದಿರುತ್ತಾರೆ. ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡೋವಾಗ ಪಾತ್ರದ ಕಾಸ್ಟೂಮ್ ಧರಿಸೋದು ಇದೆ. ವಿಕ್ರಮ್ ರವಿಚಂದ್ರನ್ ವಿಷಯದಲ್ಲಿ ಕೊಂಚ ಡಿಫರಂಟ್ ಅಂತಲೇ ಹೇಳಬಹುದು.
ವಿಕ್ರಮ್ ರವಿಚಂದ್ರನ್ ತಮ್ಮ ಚಿತ್ರದ ಮುಹೂರ್ತಕ್ಕೆ ವೈಟ್ ಆ್ಯಂಡ್ ವೈಟ್ ಡ್ರೆಸ್ ನಲ್ಲಿಯೇ ಬಂದಿದ್ದರು. ವಿಶೇಷವಾಗಿ ಬಿಳಿ ಮುಧೋಳ ನಾಯಿ ಜೊತೆಗೂ ಎಂಟ್ರಿ ಕೊಟ್ಟಿದ್ದರು. ಅಲ್ಲಿಗೆ ಸಿನಿಮಾ ತಮ್ಮ ಕ್ಯಾರೆಕ್ಟರ್ ಹೀಗೆ ಇರುತ್ತದೆ ಅನ್ನೋ ಝಲಕ್ ಅನ್ನೂ ಇಲ್ಲಿ ತೋರಿಸಿದ್ದರು ಅಂತಲೇ ಹೇಳಬಹುದು.
ವಿಕ್ರಮ್ ರವಿಚಂದ್ರನ್ ಚಿತ್ರದ ಶೂಟಿಂಗ್ ಶುರು ಆಗಿದಿಯೇ?
ವಿಕ್ರಮ್ ರವಿಚಂದ್ರನ್ ಒಪ್ಪಿರೋ ಈ ಚಿತ್ರದ ಕೆಲಸ ಇನ್ನೂ ಶುರು ಆಗಿಲ್ಲ. ಸಿನಿಮಾ ತಂಡ ಚಿತ್ರೀಕರಣಕ್ಕೆ ಈಗ ಪ್ಲಾನ್ ಕೂಡ ಮಾಡುತ್ತಿದೆ. ಚಿತ್ರಕ್ಕೆ ಕಾರ್ತಿಕ್ ರಾಜನ್ ನಿರ್ದೇಶನದ ಮಾಡುತ್ತಿದ್ದಾರೆ. ಯುವರಾಜ್ ಚಂದ್ರನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ನಿಂದ ಆರ್ಯವರ್ಧನ್ ಗುರೂಜಿ ಔಟ್! ಕೈ ಕೊಡ್ತಾ ನಂಬರ್ ಗೇಮ್?
ಇನ್ನು ಸಾಹಸ ನಿರ್ದೇಶಕ ರವಿ ವರ್ಮ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲು ಒಪ್ಪಿದ್ದಾರೆ. ಸದ್ಯಕ್ಕೆ ಸಿನಿಮಾ ಮುಹೂರ್ತದ ದಿನದ ವೀಡಿಯೋ ಸಾಕಷ್ಟು ಗಮನ ಸೆಳೆಯುತ್ತಿದೆ. ಉಳಿದ ಅಪ್ಡೇಟ್ಸ್ ಕೊಡ್ತಾಯಿರುತ್ತೇವೆ ವೇಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ