Ravichandran: ವೈರಲ್ ಆಯ್ತು ಕ್ರೇಜಿಸ್ಟಾರ್ ಮಗನ ಮದುವೆ ಪತ್ರಿಕೆ, ಭರ್ಜರಿ ತಯಾರಿಯಲ್ಲಿ ರವಿಮಾಮ ಬ್ಯುಸಿ

Marriage Invitation: ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಕೆಲ ಸಿನಿಮಾಗಳನ್ನು ಮಾಡಿದ್ದಾರೆ. ಸಾಹೇಬ, ರಣಧೀರ, ಮುಗಿಲ್ ಪೇಟೆ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ರವಿಚಂದ್ರನ್​

ರವಿಚಂದ್ರನ್​

  • Share this:
ಸದ್ಯ ಸಿನಿಮಾರಂಗದಲ್ಲಿ (film Industry) ನಟ, ನಟಿಯರ ಮದುವೆಯ ಸುದ್ದಿ ಸದ್ದು ಮಾಡುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಸ್ಯಾಂಡಲ್​ವುಡ್​ನ (sandalwood) ಕ್ರೇಜಿಸ್ಟಾರ್ ರವಿಚಂದ್ರನ್ (Crazy Star Ravichandran) ಅವರ ಮಗ ಮನೋರಂಜನ್ ರವಿಚಂದ್ರನ್ (Manoranjan Ravichandran) ಹಸೆಮಣೆ ಏರುತ್ತಿದ್ದಾರೆ. ಸದ್ಯ ಅವರ ಮದುವೆಯ ಆಮಂತ್ರಣ ಪತ್ರಿಕೆ (Wedding Invitation) ಎಲ್ಲೆಡೆ ವೈರಲ್​ ಆಗುತ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ಕನಸುಗಾರನ ಮಗನ ಮದುವೆ ಪತ್ರಿಕೆ ಹರಿದಾಡುತ್ತಿದ್ದು, ಅದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ವೈರಲ್​ ಆಯ್ತು ಮದುವೆ ಆಮಂತ್ರಣ ಪತ್ರಿಕೆ

ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಕೆಲ ಸಿನಿಮಾಗಳನ್ನು ಮಾಡಿದ್ದಾರೆ. ಸಾಹೇb, ರಣಧೀರ, ಮುಗಿಲ್ ಪೇಟೆ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದೀಗ ಮದುವೆಯಾಗುತ್ತಿದ್ದು, ಇದೇ ಆಗಸ್ಟ್​ 21 ಹಾಗೂ 22 ರಂದು ವಿವಾಹ ಕಾರ್ಯಕ್ರಮ ನಡೆಯುತ್ತಿದೆ.


ಮೂಲಗಳ ಪ್ರಕಾರ ಮನೋರಂಜನ್ ವೈದ್ಯಕೀಯ ಹಿನ್ನೆಲೆ ಇರುವ ಸಂಗೀತಾ ದೀಪಕ್ ಅವರನ್ನು ವಿವಾಹವಾಗುತ್ತಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಮದುವೆ ನಡೆಯಲಿದ್ದು, ಸಿನಿಮಾರಂಗದ ಗಣ್ಯರನ್ನು ಆಮಂತ್ರಿಸುವುದರಲ್ಲಿ ಕ್ರೇಜಿಸ್ಟಾರ್ ಬ್ಯುಸಿ ಇದ್ದಾರೆ. ಇನ್ನು ಸದ್ಯ ವಯರಲ್​ ಆಗಿರುವ ಆಮಂತ್ರಣ ಪತ್ರಿಕೆ ಬಹಳ ಸುಂದರವಾಗಿ ಮೂಡಿ ಬಂದಿದ್ದು, ಕನಸುಗಾರನ ಕಲ್ಪನೆಯಲ್ಲಿ ತಯಾರಾಗಿದೆ.  ಇದರ ನಡುವೆ ರವಿಚಂದ್ರನ್ ಅವರ ಪುತ್ರನ ವಿವಾಹದ ಸುದ್ದಿ ತಿಳಿದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರುತ್ತಿದ್ದಾರೆ.

ಸ್ಯಾಂಡಲ್​ವುಡ್​ನ ಕನಸುಗಾರ ವಿ. ರವಿಚಂದ್ರನ್ ತಮ್ಮ ಪುತ್ರಿಯ ವಿವಾಹವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. 2019ರಲ್ಲಿ ರವಿಚಂದ್ರನ್ ಅವರ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಹಿರಿಯ ಮಗ ಮನೋರಂಜನ್ ಅವರ ವಿವಾಹವು ನಡೆಯಲಿದೆ. ಕಿರಿಯ ಪುತ್ರ ವಿಕ್ರಮ್​ ರವಿಚಂದ್ರನ್ ಇತ್ತೀಚೆಗೆ ತೆರೆಕಂಡ 'ತ್ರಿವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ಟಾಪ್​ ನಟಿಯರ ಲಿಸ್ಟ್​ನಲ್ಲಿ ರಮ್ಯಾ, ಇವರೇ ಅಂತೆ ನಂಬರ್ ಒನ್​ ಹೀರೋಯಿನ್​
ರವಿಂಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಸದ್ಯ ಸ್ಯಾಂಡಲ್​ವುಡ್​ನ ಬ್ಯುಸಿ ನಟರುಗಳಲ್ಲಿ ಒಬ್ಬರು. ಇವರು 2017ರಲ್ಲಿ ತೆರೆಕಂಡ 'ಸಾಹೇಬ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಪ್ರಾರಂಭ, ಬ್ರಹಸ್ಪತಿ, ಕ್ರೇಜಿಸ್ಟಾರ್​ ಮತ್ತು ಮುಗಿಲು ಪೇಟೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಲು ಸಾಲು ಸಿನಿಮಾಗಳ ನಡುವೆ ಇದೀಗ ಮನೋರಂಜನ್ ಅವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ರವಿಂದ್ರನ್ ಅವರ ಇಬ್ಬರು ಗಂಡು ಮಕ್ಕಳು ಸಹ ಚಿತ್ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ಕೊನೆಗೂ ಗಾಯಕ ಮಿಕಾ ಸಿಂಗ್ ಮದುವೆ ಫಿಕ್ಸ್​, ಸ್ವಯಂವರದಲ್ಲಿ ಆಯ್ಕೆಯಾದ ಹುಡುಗಿ ಇವರೇ ನೋಡಿ!

ಇನ್ನು ಮಗನ ಮದುವೆಯ ಸಂಭ್ರಮದಲ್ಲಿರುವ ಕ್ರೇಜಿಸ್ಟಾರ್​ ಒಂದು ಕಡೆ ಕೆಲಸದಲ್ಲಿ ಸಹ ಬ್ಯುಸಿ ಇದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಫುಲ್ ಬ್ಯುಸಿ. ಒಂದೆಡೆ ರೀಲಿಸ್‌ಗೆ ಅವರ ಸಿನಿಮಾಗಳು ರೆಡಿಯಾಗಿವೆ. ಮತ್ತೊಂದೆಡೆ ಸಿನಿಮಾಗಳ ಮೇಲೆ ಸಿನಿಮಾ ಮಾಡ್ತಿದ್ದಾರೆ. ಇದರ ನಡುವೆಯೇ ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಕ್ರೇಜಿಸ್ಟಾರ್ ಆ್ಯಕ್ಟ್ ಮಾಡ್ತಿದ್ದಾರೆ. ಇದೀಗ ಅವರ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಬಂದಿದೆ. ಅದೇನಪ್ಪಾ ಅಂದ್ರೆ ರವಿಚಂದ್ರನ್ ಅವರು ತೆಲುಗು ಸಿನಿಮಾದ ಸ್ಟಾರ್ ನಟ ಮಹೇಶ್​ ಬಾಬು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಆ್ಯಕ್ಟ್ ಮಾಡ್ತಿದ್ದಾರಂತೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
Published by:Sandhya M
First published: