ಮಗಳಿಗಾಗಿ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳೋದಿಲ್ಲ ಅಂದ್ರಾ ರವಿಮಾಮ..!

ಪ್ರತಿ ವರ್ಷ ಕ್ರೇಜಿಸ್ಟಾರ್​ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಅವರು ಈ ಸಲ ತಮ್ಮ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳುವುದಿಲ್ಲವಂತೆ.

Anitha E | news18
Updated:May 17, 2019, 7:09 PM IST
ಮಗಳಿಗಾಗಿ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳೋದಿಲ್ಲ ಅಂದ್ರಾ ರವಿಮಾಮ..!
ರವಿಮಾಮನ ಮಗಳ ಮದುವೆಯ ಕರೆಯೋಲೆ
Anitha E | news18
Updated: May 17, 2019, 7:09 PM IST
ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಮಗಳ ಮದುವೆ ಬಗ್ಗೆ ಗೊತ್ತೇ ಇದೆ. ಅವರ ಮುದ್ದಿನ ಮಗಳು ಗೀತಾಂಜಲಿ ವಿವಾಹ ಇದೇ ತಿಂಗಳ 29ರಂದು ಅದ್ಧೂರಿಯಾಗಿ ನಡೆಯಲಿದೆ. ಸ್ಯಾಂಡಲ್​ವುಡ್​ನ ರವಿಮಾಮನ ಒಬ್ಬಳೇ ಮಗಳ ಮದುವೆಯಲ್ಲಿ ಸ್ಯಾಂಡಲ್​ವುಡ್ ಜತೆಗೆ ಬಾಲಿವುಡ್​, ಕಾಲಿವುಡ್​ ಹಾಗೂ ಟಾಲಿವುಡ್​ ತಾರೆಯರ ಸಂಗಮವೇ ಆಗಲಿದೆ.

ಹೌದು, ಕ್ರೇಜಿಸ್ಟಾರ್​ಗೆ ಮಗಳು ಎಂದರೆ ಎಷ್ಟು ಪ್ರೀತಿ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೌದು, ಮಗಳ ಮದುವೆಯ ಲಗ್ನಪತ್ರಿಕೆಯನ್ನು ಖುದ್ದು ರವಿಮಾಮನೇ ವಿನ್ಯಾಸ ಮಾಡಿಸಿದ್ದು ಗೊತ್ತೇ ಇದೆ. ಫುಲ್​ ಕಲರ್​ಫುಲ್​ ವೆಡ್ಡಿಂಗ್​ ಕಾರ್ಡ್​ ನೋಡಿದರೆ ಹೇಳಬಹುದು ಮದುವೆ ಇನ್ನೆಷ್ಟು ಚೆನ್ನಾಗಿರುತ್ತೆ ಅಂತ.

ಇದನ್ನೂ ಓದಿ: ಡಿಬಾಸ್​ರ 'ರಾಬರ್ಟ್'​ ಅಡ್ಡಾಗೆ ಕಾಲಿಡಲಿರುವ ನಾಯಕಿ ಯಾರು ಗೊತ್ತಾ..?

ಗೀತಾಂಜಲಿ, ಉದ್ಯಮಿ ಅಜಯ್ ಅವರನ್ನು ಮೇ 29ರಂದು ವರಿಸಿದಲಿದ್ದಾರೆ. ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯ ಸಭಾಂಗಣದಲ್ಲಿ ವಿವಾಹ ನೆರವೇರಲಿದೆ. ಆದರೆ ಮಗಳ ಮದುವೆಯ ಮಾರನೆ ದಿನವೇ ರವಿಚಂದ್ರನ್​ ಅವರ ಹುಟ್ಟುಹಬ್ಬ. ಆದರೆ ಅವರು ಮದುವೆ ಕೆಲಸದಲ್ಲಿ ಬ್ಯುಸಿ ಇದ್ದು, ಮನೆಯಲ್ಲಿ ಸಂಬಂಧಿಕರು, ಅತಿಥಿಗಳು ಬಂದಿರುತ್ತಾರೆ. ಈ ನಡುವೆ ಅವರು ತಮ್ಮ ಹುಟುಹಬ್ಬವನ್ನು ಆಚರಿಸಿಕೊಳ್ಳಲು ಸಾಧ್ಯವಿಲ್ಲವಂತೆ. ಅದಕ್ಕಾಗಿ ಅಭಿಮಾನಿಗಳು ಸಹಕರಿಸಬೇಕೆಂದು ಕೋರಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಮೇಲೆ ಕತ್ರಿನಾ ಕೈಫ್ ಕಣ್ಣು: ಪಂಜಾಬಿ ಮದುವೇಲಿ ಕುಣಿದು ಕುಪ್ಪಳಿಸಿದ ಜೋಡಿ !

ಪ್ರತಿ ವರ್ಷ ಕ್ರೇಜಿಸ್ಟಾರ್​ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಸಲ ಮಗಳ ಮದುವೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಇದು ಅಭಿಮಾನಿಗಳಿಗೆ ಕೊಂಚ ಬೇಸರ ತಂದರೂ, ಕ್ರೇಜಿಸ್ಟಾರ್​ ಜೀವನದಲ್ಲಿ ಮರೆಯಲಾರದ ಹುಟ್ಟುಹಬ್ಬವಾಗಲಿದೆ.'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'

ಹೇಗಿದೆ ಗೊತ್ತಾ ಪುನೀತ್ ರಾಜ್​ಕುಮಾರ್​​ರ ಅಮೆರಿಕ ಪ್ರವಾಸದ ವಿಡಿಯೋ..!
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ