• Home
 • »
 • News
 • »
 • entertainment
 • »
 • Covid-19: ವೈದ್ಯರು ಉಳಿದುಕೊಳ್ಳಲು ಐಷರಾಮಿ ಹೋಟೆಲನ್ನು ಬಿಟ್ಟುಕೊಟ್ಟ ಖ್ಯಾತ ವಿಲನ್​​​​​​!

Covid-19: ವೈದ್ಯರು ಉಳಿದುಕೊಳ್ಳಲು ಐಷರಾಮಿ ಹೋಟೆಲನ್ನು ಬಿಟ್ಟುಕೊಟ್ಟ ಖ್ಯಾತ ವಿಲನ್​​​​​​!

ನಟ ಸೋನು ಸೂದ್​

ನಟ ಸೋನು ಸೂದ್​

ನಟ ಸೋನು ಸೂದ್​ ಕೂಡ ತಮ್ಮ ಐಷಾರಾಮಿ ಹೋಟೆಲ್​ವೊಂದನ್ನು ಕೊರೋನಾ ಪೀಡಿತರ ಚಿಕಿತ್ಸೆಗಾಗಿ ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಭಂಧಿಗಳು ವಾಸವಿರಲು ಬಿಟ್ಟುಕೊಟ್ಟಿದ್ದಾರೆ.

 • Share this:

  ಬಾಲಿವುಡ್​ನ ಅನೇಕ ನಟ-ನಟಿಯರ ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಅಕ್ಷಯ್​ ಕುಮಾರ್​​, ಶಾರುಖ್​​ ಖಾನ್​, ಸಲ್ಮಾನ್​, ಅನುಷ್ಕಾ ಶರ್ಮಾ ಹೀಗೆ ಅನೇಕರು ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇನ್ನು ಹಲವರು ಕೊರೋನಾ ಲಾಕ್​ ಡೌನ್​ನಿಂದಾಗಿ ಸಂಕಷ್ಟದಲ್ಲಿರುವ ಬಡವರಿಗೆ ಆಹಾರ ವಿತರಿಸುವ ಮೂಲಕ ಅವರ ಹಸಿವು ನೀಗಿಸುತ್ತಿದ್ದಾರೆ. ಅದರಂತೆ ನಟ ಸೋನು ಸೂದ್​ ಕೂಡ ತಮ್ಮ ಐಷಾರಾಮಿ ಹೋಟೆಲ್​ವೊಂದನ್ನು ಕೊರೋನಾ ಪೀಡಿತರ ಚಿಕಿತ್ಸೆಗಾಗಿ ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂಧಿಗಳು ವಾಸವಿರಲು ಬಿಟ್ಟುಕೊಟ್ಟಿದ್ದಾರೆ.

  ತಮ್ಮ ಆರು ಆಂತಸ್ತಿನ ಐಷಾರಾಮಿ ಹೋಟೆಲನ್ನು ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಭಂಧಿಗಳು ಉಳಿದುಕೊಳ್ಳುವಂತೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ನಟ ಸೋನು ಸೂದ್​.

  ಇನ್ನು ಈ ಬಗ್ಗೆ ಮಾತನಾಡಿದ್ದ ಅವರು ‘ಡಾಕ್ಟರ್ಸ್​​, ನರ್ಸ್​ ಹಾಗೂ ಪ್ಯಾರಾ ಮೆಡಿಕಲ್​​ ಕೆಲಸ ಮಾಡುತ್ತಿರುವ ಸಹಾಯ ಮಾಡುವುದು ನನ್ನ ಕರ್ತವ್ಯ. ನಮ್ಮ ದೇಶವನ್ನು ರಕ್ಷಿಸಲು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನನ್ನ ಹೋಟೆಲನ್ನು ಇಂತಹ ರಿಯಲ್​ ಹೀರೋಗಳಿಗೆ ನೀಡುತ್ತಿರುವುದು ನನಗೆ ಸಂತೋಷ ತಂದಿದೆ‘ ಎಂದು ಹೇಳಿದ್ದಾರೆ.

  ಮಹಾಮಾರಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೋನಾ ಸೋಂಕು ಹರಡದಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಲಾಕ್​ ಡೌನ್​ ಆದೇಶ ಏಪ್ರಿಲ್ 30ರವರೆಗೆ ವಿಸ್ತರಣೆ ಮಾಡುವುದಾಗಿ ನಿರ್ಧರಿಸಿದೆ. ಈ ಮಹಾಮಾರಿ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಹೆಚ್ಚಿನ ಕ್ರಮ ಕೈಗೊಂಡಿದೆ. ಬಾಲಿವುಡ್​ ಸ್ಟಾರ್​ ನಟ-ನಟಿಯರು, ಸೆಲೆಬ್ರಿಟಿಗಳು ಕೂಡ ಕೊರೋನಾ ವಿರುದ್ಧ ಹೋರಾಟಕ್ಕೆ ಸರ್ಕಾರದ ಜೊತೆ ಕೈ ಜೋಡಿಸುತ್ತಿದ್ದಾರೆ.

  ಇದನ್ನೂ ಓದಿ: ಕೊರೋನಾಗೆ ಬಲಿಯಾದರು ಈ ಖ್ಯಾತ ನಟಿ!

  ಇದನ್ನೂ ಓದಿ:ಡಿ‘ಬಾಸ್​​‘ ದರ್ಶನ್​ ಬಗ್ಗೆ ಹರಿದಾಡುತ್ತಿದೆ ಹೀಗೊಂದು ಸುಳ್ಳು ಸುದ್ದಿ; ಏನದು?

  ಇದನ್ನೂ ಓದಿ: Rajinikanth: ಮದುವೆ ಮಂಟಪವನ್ನೇ ಕೊರೋನಾ ರೋಗಿಗಳ ಚಿಕಿತ್ಸೆಗೆ ನೀಡಿದ ಸೂಪರ್ ಸ್ಟಾರ್ ರಜನಿ​ಕಾಂತ್

  First published: