ಸಮಾನತೆ ಸಾರಿದ ಕೊರೋನಾ ವೈರಸ್: ಬಾತ್ ರೂಮ್​ನಿಂದ ಗಾಯಕಿ ಹರಿಬಿಟ್ಟ ವಿಡಿಯೋ ವೈರಲ್..!

ಸದ್ಯ ವಿಶ್ವದೆಲ್ಲೆಡೆ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಜಾನ್ಸ್ ಹಾಪ್ಕಿನ್ಸ್ ಕರೋನವೈರಸ್ ಟ್ರ್ಯಾಕರ್ ಪ್ರಕಾರ, ಜಾಗತಿಕವಾಗಿ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 14,641 ಕ್ಕೆ ಏರಿದೆ

ಮಡೋನಾ

ಮಡೋನಾ

 • Share this:
  ಅಮೆರಿಕನ್ ಸಿಂಗರ್ ಮಡೋನಾ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ಒಂದಲ್ಲಾ ಒಂದು ವಿವಾದಗಳಿಂದ ಗಮನ ಸೆಳೆಯುವ ಗಾಯಕಿ ಈ ಬಾರಿ ಕೊರೋನಾ ವೈರಸ್​ ಅನ್ನು  "ದಿ ಗ್ರೇಟ್ ಇಕ್ವೆಲೈಜರ್" ಎಂದು ಕರೆದಿದ್ದಾರೆ.
  ಹೂಗಳಿಂದ ತುಂಬಿದ ಬಾತ್ ಟಬ್​ನಲ್ಲಿ ಸ್ನಾನ ಮಾಡುತ್ತಾ ಮಾತನಾಡಿರುವ ಈ ವಿಡಿಯೋದಲ್ಲಿ ಪಾಪ್ ತಾರೆ, ಕೊರೋನಾ ವೈರಸ್ ಹೇಗೆ ಸಮಾಜವನ್ನು ಸಮಾನತೆಯ ಎಡೆಗೆ ದೂಡುತ್ತಿದೆ ಎಂದು ವಿವರಿಸಿದ್ದಾರೆ.

  ಕೊರೋನಾ ವೈರಸ್​ ಇಲ್ಲಿ ಶ್ರೀಮಂತ ಹಾಗೂ ಬಡವರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ. ನೀವು ಎಷ್ಟೇ ಸಿರಿವಂತರಾಗಿದ್ದರೂ, ಖ್ಯಾತನಾಮರಾಗಿದ್ದರೂ, ಬುದ್ದಿವಂತರಾಗಿದ್ದರೂ ಕೋವಿಡ್-19 ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

  ನೀವು ಎಲ್ಲಿ ವಾಸಿಸುತ್ತಿದ್ದೀರಿ, ನಿಮ್ಮ ವಯಸ್ಸು ಎಷ್ಟು, ನೀವು ಯಾವ ರೀತಿ ಅದ್ಭುತ ಕಥೆಗಳನ್ನು ಹೇಳಬಹುದು ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಎಲ್ಲರನ್ನೂ ಒಂದೇ ರೀತಿ ಆಕ್ರಮಿಸುತ್ತದೆ. ಒಂದಾರ್ಥದಲ್ಲಿ ಕೊರೋನಾ ವೈರಸ್ ಎಲ್ಲರನ್ನು ವಿವಿಧ ರೀತಿಯಲ್ಲಿ ಸಮಾನರನ್ನಾಗಿ ಮಾಡಿದೆ ಎಂದು ಮಡೋನಾ ಹೇಳಿದ್ದಾರೆ.

  ಸದ್ಯ ಕೊರೋನಾ ವೈರಸ್ ಭೀತಿಯಿಂದ ಮನೆಯಲ್ಲಿಯೇ ಉಳಿದಿರುವ 61 ವರ್ಷದ ಗಾಯಕಿ, ಪ್ಯಾರಿಸ್​ನಲ್ಲಿ ನಡೆಯಬೇಕಿದ್ದ ಎರಡು ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.  ಇನ್ನು ತಮ್ಮ ಬಾತ್ ಟಬ್ ವಿಡಿಯೋದಲ್ಲಿ 1995 ರಲ್ಲಿ ಬಿಡುಗಡೆಯಾದ ಹ್ಯೂಮನ್ ನೇಚರ್ ಎಂಬ ಹಾಡನ್ನು ಉಲ್ಲೇಖಿಸಿ, ಇಂದು ನಾವೆಲ್ಲರೂ ಒಟ್ಟಿಗೆ  ಕೆಳಗೆ ಇಳಿದಿದ್ದೇವೆ ಅಂದಿದ್ದಾರೆ.   
  View this post on Instagram
   

  No-Discrimination- Covid-19!! #quarantine #covid_19 #staysafe #becreative #brianeno


  A post shared by Madonna (@madonna) on


  ಸದ್ಯ ವಿಶ್ವದೆಲ್ಲೆಡೆ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಜಾನ್ಸ್ ಹಾಪ್ಕಿನ್ಸ್ ಕರೋನವೈರಸ್ ಟ್ರ್ಯಾಕರ್ ಪ್ರಕಾರ, ಜಾಗತಿಕವಾಗಿ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 14,641 ಕ್ಕೆ ಏರಿದೆ. ಇನ್ನು 173 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 336,000 ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.
  First published: