'ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟರ್' ಚಿತ್ರಕ್ಕೆ ಕಂಟಕ; ತಂಡದ ವಿರುದ್ಧ ಎಫ್​ಐಆರ್​ ದಾಖಲಿಸಲು ಕೋರ್ಟ್​ ಆದೇಶ!

ಸಿನಿಮಾ ಬಿಡುಗಡೆಗೆ ಕಾಂಗ್ರೆಸ್​​ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಲೋಕಸಭೆ ಚುನಾವಣೆಗೂ ಮೊದಲೇ ಸಿನಿಮಾ ತೆರೆಕಾಣುತ್ತಿರುವುದರಿಂದ ಕಾಂಗ್ರೆಸ್​​ಗೆ ಹಿನ್ನಡೆ ಉಂಟಾಗಲಿದೆ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದರು.

Rajesh Duggumane | news18
Updated:January 8, 2019, 4:04 PM IST
'ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟರ್' ಚಿತ್ರಕ್ಕೆ ಕಂಟಕ; ತಂಡದ ವಿರುದ್ಧ ಎಫ್​ಐಆರ್​ ದಾಖಲಿಸಲು ಕೋರ್ಟ್​ ಆದೇಶ!
ಆ್ಯಕ್ಸಿಡೆಂಟಲ್​ ಪ್ರೈಮಿನಿಸ್ಟರ್​ ತಂಡ
Rajesh Duggumane | news18
Updated: January 8, 2019, 4:04 PM IST
‘ಆ್ಯಕ್ಸಿಡೆಂಟಲ್​ ಪ್ರೈಮಿನಿಸ್ಟರ್​’ ಚಿತ್ರ ನಾನಾ ವಿಚಾರಕ್ಕೆ ಸದ್ದು ಮಾಡುತ್ತಿದೆ. ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರ ಆಡಳಿತದ ಸಂದರ್ಭದಲ್ಲಿ ಏನೆಲ್ಲ ಆಯಿತು, ಸೋನಿಯಾ ಗಾಂಧಿ ಪ್ರಧಾನಿಯನ್ನು ಹೇಗೆ ನಿಯಂತ್ರಿಸುತ್ತಿದ್ದರು ಎಂಬಿತ್ಯಾದಿ ವಿಚಾರಗಳ ಮೇಲೆ ಸಿನಿಮಾ ಮಾಡಲಾಗಿದೆಯಂತೆ. ಈ ವಾರ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮೊದಲು ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ.

ಮನಮೋಹನ್​ ಸಿಂಗ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನುಪಮ್​ ಖೇರ್​​ ಸೇರಿದಂತೆ ಚಿತ್ರತಂಡದ 13 ಮಂದಿ ವಿರುದ್ಧ ಎಫ್​ಐಆರ್​ ದಾಖಲು ಮಾಡಲು ಬಿಹಾರದ ಮುಝಾಫರ್​ ನಗರದ ನ್ಯಾಯಾಲಯ ಅನುಮತಿ ನೀಡಿದೆ.

ಸಿನಿಮಾ ಬಿಡುಗಡೆಗೆ ಕಾಂಗ್ರೆಸ್​​ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಲೋಕಸಭೆ ಚುನಾವಣೆಗೂ ಮೊದಲೇ ಸಿನಿಮಾ ತೆರೆಕಾಣುತ್ತಿರುವುದರಿಂದ ಕಾಂಗ್ರೆಸ್​​ಗೆ ಹಿನ್ನಡೆ ಉಂಟಾಗಲಿದೆ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದರು. ಈ ಸಂಬಂಧ ಕಾಂಗ್ರೆಸ್​ ನ್ಯಾಯಾಲಯದ ಮೆಟ್ಟಿಲೇರಿದೆ. ಅರ್ಜಿ ವಿವಾರಣೆ ನಡೆಸಿದ ಕೋರ್ಟ್​ ತಂಡದ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಳ್ಳಲು ಅನುಮತಿ ನೀಡಿದೆ.

ಸದ್ಯ ಈ ಚಿತ್ರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಿಜಯ್​ ರತ್ನಾಕರ್​ ಗುಟ್ಲೆ ಈ ಚಿತ್ರವನ್ನು  ನಿರ್ದೇಶನ ಮಾಡಿದ್ದಾರೆ. ಸಂಜಯಾ ಬಾರು ಬರೆದ 'ಆ್ಯಕ್ಸಿಡೆಂಟಲ್​ ಪ್ರೈಮಿನಿಸ್ಟರ್​' ಪುಸ್ತಕ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಅನುಪಮ್​ ಖೇರ್​, ಅಕ್ಷಯ್​ ಖನ್ನಾ ಮೊದಲಾದವರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: 'ದಿ ಆ್ಯಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್' ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಬಣ್ಣ ಹಚ್ಚಿದವರು ಯಾರು ಗೊತ್ತಾ?

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ