ನ್ಯಾಯಾಧೀಶರನ್ನು ನಿಂದಿಸಿ ಟ್ವೀಟ್ (Tweet) ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ನಟ ಚೇತನ್ಗೆ(Actor Chetan) ನಿನ್ನೆ ಜಾಮೀನು (Bail) ಮಂಜೂರಾಗಿದೆ. ಕೆಲ ಷರತ್ತುಗಳನ್ನು ಹಾಕಿ ಜಾಮೀನು ನೀಡಲಾಗಿದೆ. ಇದರಿಂದ ನಟನಿಗೆ ರಿಲೀಫ್ ಸಿಕ್ಕಿದೆ. ಆದರೆ ಚೇತನ್ಗೆ ಜಾಮೀನು ಸಿಕ್ಕರೂ ಇಂದು (ಫೆ.26) ಬಿಡುಗಡೆ ಭಾಗ್ಯ ಇಲ್ಲ. ಚೇತನ್ಗೆ ಸಂಬಂಧಿಸಿದ ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆ ಇನ್ನೂ ಇರಡು ದಿನ ಜೈಲಿನಲ್ಲಿ ಉಳಿಯುತ್ತಾರೆ. ಇಂದು ನಾಲ್ಕನೇ ಶನಿವಾರ ಮತ್ತು ನಾಳೆ ಭಾನುವಾರ ಆಗಿರುವ ಕಾರಣ ಸರ್ಕಾರ ರಜೆ ಇದೆ. ಹೀಗಾಗಿ ಚೇತನ್ಗೆ ಜಾಮೀನು ಸಿಕ್ಕರೂ ಇಂದು ಬಿಡುಗಡೆ ಆಗುತ್ತಿಲ್ಲ. ಸೋಮವಾರ ಬಾಂಡ್ ಪ್ರಕ್ರಿಯೆ ಪೂರೈಸಿದ ಬಳಿಕ ಜೈಲು ವಾಸ ಅಂತ್ಯವಾಗಲಿದೆ. ಫೆಬ್ರವರಿ 16ರಂದು ನಟ ಚೇತನ್ ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು.
ನ್ಯಾಯದೀಶರ ಕುರಿತು ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ನಟ
ನಟ ಚೇತನ್ ಮಾಡಿದ್ದ ಟ್ವೀಟ್ನಲ್ಲಿ ಆಕ್ಷೇಪಾರ್ಹ ಅಂಶಗಳು ಇದೆ ಎನ್ನುವ ಆರೋಪದ ಮೇಲೆ ಚೇತನ್ ಬಂಧನಕ್ಕೆ ಒಳಗಾಗಿದ್ದರು. ನಂತರ ಚೇತನ್ ಅವರ ಪತ್ನಿ ಮೇಘಾ ಫೇಸ್ ಬುಕ್ ಲೈವ್ ಬಂದು, ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಯಾವುದೇ ಮಾಹಿತಿ ನೀಡದೆ, ಅಪಹರಣದ ರೀತಿಯಲ್ಲಿ ಪತಿಯನ್ನು ಕರೆದೊಯ್ಯಲಾಗಿದೆ ಎಂದು ಆರೋಪಿಸಿದ್ದರು. ಮೊನ್ನೆ 24ರಂದು ನಟ ಚೇತನ್ ಅವರ ಹುಟ್ಟುಹಬ್ಬವಿತ್ತು. ಮನೆಯಿಂದ ಊಟ ಹಾಗೂ ಹೊದಿಕೆಯನ್ನು ಪತ್ನಿ ಮೇಘನಾ ಜೈಲಿಗೆ ತೆರಳಿ ಅವರಿಗೆ ನೀಡಿದ್ದರು.
ಹಲವು ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದ ಚೇತನ್!
ನಟನೆಯ ಜೊತೆಗೆ ನಟ ಚೇತನ್ಹಲವು ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದರು. ಹಿಜಾಬ್ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ನ್ಯಾಯಮೂರ್ತಿಗಳ ಹಳೆಯ ಹೇಳಿಕೆಯೊಂದನ್ನು ಉಲ್ಲೇಖಿಸಿ ಮಾಡಿದ್ದ ಟ್ವೀಟ್ವಿವಾದಕ್ಕೊಳಗಾಗಿದೆ.
ಚೇತನ್ ಪರ ನಟಿ ರಮ್ಯಾ ಬ್ಯಾಟಿಂಗ್
ನಟಿ ರಮ್ಯಾ ಈ ವಿಚಾರವಾಗಿ ದನಿ ಎತ್ತಿದ್ದಾರೆ. ನಟ ಚೇತನ್ ಮಾಡಿರುವ ಅಪರಾಧವಾದರೂ ಏನು? ಅವರು ಮಾಡಿರುವ ಟ್ವೀಟ್ನಲ್ಲಿ ಏನಿದೆ ಎಂದು ಪ್ರಶ್ನೆ ಮಾಡಿದ್ದರು. ಚೇತನ್ ಬಂಧನಕ್ಕೆ ಕಾರಣ ಆಗಿರುವ ಟ್ವೀಟ್ಗಳನ್ನು ಪೋಸ್ಟ್ ಮಾಡಿ, ‘ಪೊಲೀಸರು ಚೇತನ್ ಅವರನ್ನು ಬಂಧಿಸುವಂತಹ ದೋಷ ಈ ಟ್ವೀಟ್ನಲ್ಲಿ ಏನಿದೆ?’ ಎಂದು ರಮ್ಯಾ ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದರು. ಈ ಮೂಲಕ ಅವರು ಚೇತನ್ ಅವರ ಟ್ವೀಟ್ನಲ್ಲಿ ತಪ್ಪಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು.
ಇದನ್ನೂ ಓದಿ: ಜಡ್ಜ್ ವಿರುದ್ಧ ಟ್ವೀಟ್ ಪ್ರಕರಣ: ನಟ ಚೇತನ್ಗೆ ಜಾಮೀನು ಮಂಜೂರು
ಚೇತನ್ ಹೋರಾಟದ ಬಗ್ಗೆ ಪತ್ನಿ ಮಾತು!
ಚೇತನ್ ಪತ್ನಿ ಮೇಘಾ ವಿಚಾರ ತಿಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಚೇತನ್ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಅವಕಾಶ ಎಲ್ಲರಿಗೂ ಇದೆ. ಪೊಲೀಸ್, ಜಡ್ಜ್, ಮೋದಿ ಯಾರೇ ಆಗಿರಲಿ ಪ್ರಶ್ನಿಸುವ ಅಧಿಕಾರವಿದೆ. ಯಾವುದೇ ಆಕ್ಷೇಪಾರ್ಹ ಪದಗಳನ್ನು ಬಳಸಿ ಚೇತನ್ ಮಾತನಾಡಿಲ್ಲ. ಚೇತನ್ ಜೊತೆ ಮಾತನಾಡಿದ್ದೇನೆ, ಆತ್ಮವಿಶ್ವಾಸದಿಂದಿದ್ದಾರೆ. ಬಂಧನದ ವಿರುದ್ಧವಾಗಿ ನಾವು ಕಾನೂನು ಹೋರಾಟ ಕೈಗೊಳ್ಳಲಿದ್ದೇವೆ ಎಂದಿದ್ದರು.
ಇದನ್ನೂ ಓದಿ: ಚಿತ್ರರಂಗದಲ್ಲಿ 12 ವರ್ಷ ಪೂರೈಸಿದ ಚೆಂದುಳ್ಳಿ ಚೆಲುವೆ.. ಸಮಂತಾಗೆ ಸರಿಸಾಟಿ ನಟಿ ಇಲ್ವೇ ಇಲ್ಲ!
ಮನೆಯಲ್ಲಿದ್ದವರು ಏಕಾಏಕಿ ಕಾಣಿಸದೇ ಇದ್ದಾಗ, ನಾನು ಮನೆಯಲ್ಲಾ ಹುಡುಕಿದೆ, ಚೇತನ್ ಎಲ್ಲಿ ಎಂದು ಅಲ್ಲೇ ಇದ್ದವರನ್ನು ಕೇಳಿದಾಗ ಪೊಲೀಸ್ ನವರು ಕರೆದುಕೊಂಡು ಹೋದರು ಎಂದು ಹೇಳಿದರು ಎಂದು ಅಳಲು ತೋಡಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ