Sandalwood: ಕನ್ನಡ ಸಿನಿಮಾದಲ್ಲಿ ಮತ್ತೆ ರೆಟ್ರೊ ಸ್ಟೈಲ್ ಕಾಸ್ಟ್ಯೂಮ್ ಟ್ರೆಂಡ್ ಶುರು, KGFನಲ್ಲಿ ನೋಡ್ಲಿಲ್ವಾ?

ಚಲನಚಿತ್ರಗಳು ಹೇಗೆ ಪ್ರಸಿದ್ಧಿ ಪಡೆಯುತ್ತಿವೆಯೋ ಹಾಗೆಯೇ ಆ ಚಲನಚಿತ್ರಗಳಲ್ಲಿ ಧರಿಸಿದ ಹಳೆ ಕಾಲದ ಶೈಲಿ ʼರೆಟ್ರೊ ಶೈಲಿʼ ಯ ಬಟ್ಟೆಗಳು ಎಲ್ಲರ ಮನ ಗೆಲ್ಲುತ್ತಿವೆ. ಅವುಗಳನ್ನು ಧರಿಸಲು ಯುವ ಜನತೆ ನಾ ಮುಂದೆ ತಾ ಮುಂದೆ ಎನ್ನುತ್ತಿದ್ದಾರೆ. ಅದರಲ್ಲೂ ಕೆ.ಜಿ.ಎಫ್‌ ಚಾಪ್ಟರ್‌ 2 ಚಲನಚಿತ್ರದಲ್ಲಿ ಪ್ಯಾನ್‌ ಇಂಡಿಯಾ ಸ್ಟಾರ್‌ ಯಶ್‌ ಧರಿಸಿರುವ ಸೂಟ್‌ಗಳು ಚಲನಚಿತ್ರ ಪ್ರಿಯರ ಮೇಲೆ ತುಂಬಾನೇ ಪ್ರಭಾವ ಬೀರಿದೆ ಹೇಗೆ ಅಂತೀರಾ ಇಲ್ಲಿದೆ ನೋಡಿ.

 ಯಶ್‌

ಯಶ್‌

  • Share this:
ಕನ್ನಡ ಸಿನಿಮಾಗಳೆಂದರೆ (Kannada Cinema) ಕೆಲವು ವರ್ಷಗಳ ಹಿಂದೆ ಮೂಗು ಮುರಿಯವವರೇ ಜಾಸ್ತಿ ಆಗಿದ್ದರು. ಕನ್ನಡ ಸಿನಿಮಾ ನೋಡ್ತಿವಿ ಅಂದರೆ ಸಾಕು ಏನೋ ತಪ್ಪು ಮಾಡ್ತಿದೀವಿ ಅನ್ನೊ ಭಾವನೆ ಹೊತ್ತ ಮುಖವನ್ನು (Face) ನಮ್ಮ ಮುಂದೆ ಪ್ರದರ್ಶನ ಮಾಡುತ್ತಿದ್ದ ಅನ್ಯ ಭಾಷಿಗಳು ಆಗ ಎಲ್ಲ ಕಡೆ ಇದ್ದರು. ಆದರೆ ಈಗ ಆ ಪರಿಸ್ಥಿತಿ ಎಲ್ಲ ತಲೆ ಕೆಳಗಾಗಿದೆ. ಏಕೆಂದರೆ ಇಂದು ಕನ್ನಡ ಭಾಷೆಯ (Kannada Language) ಚಲನಚತ್ರಗಳು ಪ್ಯಾನ್‌ ಇಂಡಿಯಾ ಚಲನಚಿತ್ರಗಳಾಗಿ (Pan-India Movies) ಹೊರಹೊಮ್ಮತ್ತಿರುವುದು ಕನ್ನಡ ಭಾಷೆಯ ಚಲನಚಿತ್ರ ರಂಗದಲ್ಲಿ ಅತ್ಯಂತ ಆಶಾದಾಯಕ ಬೆಳವಣಿಗೆ ಆಗಿದೆ.

ಎಲ್ಲರ ಮನ ಗೆಲ್ಲುತ್ತಿರುವ ʼರೆಟ್ರೊ ಶೈಲಿʼ ಯ ಬಟ್ಟೆಗಳು
ಹಾಗೆಯೇ, ಚಲನಚಿತ್ರಗಳು ಹೇಗೆ ಪ್ರಸಿದ್ಧಿ ಪಡೆಯುತ್ತಿವೆಯೋ ಹಾಗೆಯೇ ಆ ಚಲನಚಿತ್ರಗಳಲ್ಲಿ ಧರಿಸಿದ ಹಳೆ ಕಾಲದ ಶೈಲಿ ʼರೆಟ್ರೊ ಶೈಲಿʼ ಯ ಬಟ್ಟೆಗಳು ಎಲ್ಲರ ಮನ ಗೆಲ್ಲುತ್ತಿವೆ. ಅವುಗಳನ್ನು ಧರಿಸಲು ಯುವ ಜನತೆ ನಾ ಮುಂದೆ ತಾ ಮುಂದೆ ಎನ್ನುತ್ತಿದ್ದಾರೆ. ಅದರಲ್ಲೂ ಕೆ.ಜಿ.ಎಫ್‌ ಚಾಪ್ಟರ್‌ 2 ಚಲನಚಿತ್ರದಲ್ಲಿ ಪ್ಯಾನ್‌ ಇಂಡಿಯಾ ಸ್ಟಾರ್‌ ಯಶ್‌ ಧರಿಸಿರುವ ಸೂಟ್‌ಗಳು ಚಲನಚಿತ್ರ ಪ್ರಿಯರ ಮೇಲೆ ಎಷ್ಟು ಪ್ರಭಾವ ಬೀರಿವೆ ಎಂದರೆ ಆ ಕ್ಲಾಸಿ ಬಟ್ಟೆಗಳ ಸೂಟ್‌ನ ಸೆಟ್‌ಗಳನ್ನು ಧರಿಸಿದ ಆ ನಟನನ್ನು ನೋಡಲು ಮತ್ತೆ ಮತ್ತೆ ಚಲನಚಿತ್ರವನ್ನು ವೀಕ್ಷಿಸಲು ಬಯಸುತ್ತಿರುವುದು ನಿಜಕ್ಕೂ ಆ ಬಟ್ಟೆಯ ಸುಂದರತೆ ಎಷ್ಟಿದೆ ಎಂದು ಇದರಿಂದ ತಿಳಿದು ಬರುತ್ತದೆ.

ಯುವಜನತೆಗೆ ಯಶ್ ಒಬ್ಬ ದೊಡ್ಡ ಮಾಡೆಲ್‌ ಆಗಿ ಹೊರಹೊಮ್ಮುತ್ತಿರುವುದೇಕೆ?
"ಯಶ್‌ ಯುವಜನತೆಗೆ ಒಬ್ಬ ದೊಡ್ಡ ಮಾಡೆಲ್‌ ಆಗಿ ಹೊರಹೊಮ್ಮಿದ್ದಾರೆ. ಕೆ. ಜಿ.ಎಫ್‌. ಚಾಪ್ಟರ್‌ 2 ಚಲನಚಿತ್ರ ಬಿಡುಗಡೆಯಾದಾಗಿನಿಂದ ಅವರು ಆ ಚಲನಚಿತ್ರದಲ್ಲಿ ಧರಿಸಿರುವ ಬಟ್ಟೆಯ ತರ ನಮಗೂ ಬೇಕು ಎಂದು ಕೇಳುವವರ ಜನರ ಸಂಖ್ಯೆ ದಿನ-ದಿನಕ್ಕೂ ಹೆಚ್ಚಾಗುತ್ತಿದೆ ಎಂದರೆ ನೀವು ನಂಬುವುದಿಲ್ಲ. ಕೈಗಾರಿಕೋದ್ಯಮಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ, ಪ್ರತಿಯೊಬ್ಬರೂ ಚಲನಚಿತ್ರದಲ್ಲಿ ರಾಕಿ ಭಾಯ್‌ ಆಗಿ ಯಶ್‌ ಧರಿಸಿದ್ದನ್ನು ಧರಿಸಲು ಬಯಸುತ್ತಿದ್ದಾರೆ. ಈ ರೀತಿಯ ವಸ್ತ್ರ ವಿನ್ಯಾಸ ತಯಾರಿಸಿದ್ದನ್ನು ಬಾಲಿವುಡ್ ವೃತ್ತಿಪರರು ನಮ್ಮ ಕೆಲಸವನ್ನು ಹೊಗಳುತ್ತಿದ್ದಾರೆ” ಎಂದು ಚಲನಚಿತ್ರದ ವಸ್ತ್ರ ವಿನ್ಯಾಸಕಿ ಸಾನಿಯಾ ಸರ್ದಾರಿಯಾ ಅವರು ಸುದ್ದಿ ಮಾಧ್ಯಮಗಳಿಗೆ ಹೇಳುತ್ತಾರೆ.

ಇದನ್ನೂ ಓದಿ: Naga Chaitanya-Samantha: ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ಏನಂದ್ರು ನಾಗ ಚೈತನ್ಯ

ಕನ್ನಡ ಚಲನಚಿತ್ರಗಳಲ್ಲಿನ ಫ್ಯಾಷನ್ ತೀವ್ರ ಬದಲಾವಣೆಗೆ ಒಳಗಾಗಿದೆ. ಚಲನಚಿತ್ರಗಳಲ್ಲಿನ ಪಾತ್ರಗಳ ಡ್ರೆಸ್ಸಿಂಗ್ ಶೈಲಿಯು ಅತ್ಯಂತ ಉತ್ತಮಗೊಳ್ಳುತ್ತಿದೆ. ಈ ರೀತಿಯ ಡ್ರೆಸಿಂಗ್‌ ಶೈಲಿಯು ಮಹತ್ವಾಕಾಂಕ್ಷೆಯ ಚಲನಚಿತ್ರಗಳಲ್ಲಿ ಒಂದು ಪ್ಲಸ್‌ ಪಾಯಿಂಟ್‌ ಆಗುತ್ತಿದೆ. ಅದಕ್ಕೆ ಅನಂತ ಕೋಟಿ ಧನ್ಯವಾದಗಳು ಎಂದು ಅನೇಕ ಪ್ರತಿಭಾನ್ವಿತ ಫ್ಯಾಷನ್ ವಿನ್ಯಾಸಕರು ಈ ಕೆ.ಜಿ.ಎಫ್‌. ಚಾಪ್ಟರ್‌ 2 ಚಲನಚಿತ್ರದ ನಿರ್ಮಾಪಕರ ದೃಷ್ಟಿಕೋನವನ್ನು ಮನ ದುಂಬಿ ಹೊಗಳುತ್ತಿದ್ದಾರೆ.

ಈ ಬಗ್ಗೆ ಅನುಭವಿ ವಸ್ತ್ರ ವಿನ್ಯಾಸಕಿ ಸಾನಿಯಾ ಸರ್ದಾರಿಯಾ ಏನು ಹೇಳಿದ್ದಾರೆ?
ಅನುಭವಿ ವಸ್ತ್ರ ವಿನ್ಯಾಸಕಿ ಮತ್ತು ಯಶ್ ಅವರ ವೈಯಕ್ತಿಕ ಸ್ಟೈಲಿಸ್ಟ್ ಸಾನಿಯಾ ಅವರು ಚಲನಚಿತ್ರದಲ್ಲಿ “70 ಮತ್ತು 80 ರ ದಶಕವು ಅತ್ಯಂತ ಹೆಚ್ಚು ಫ್ಯಾಶನ್‌ನಿಂದ ಗುರುತಿಸಲ್ಪಟ್ಟಿದೆ. ಇದು ಆ ಸಮಯದಲ್ಲಿನ ಚಲನಚಿತ್ರದಂತಿದ್ದರೂ, ನಾನು ಅವರ ಆ ಪಾತ್ರದ ಬಗ್ಗೆ ತಿಳಿದುಕೊಂಡಾಗ ಇದು ಹಳೆ ಕಥೆ ಹೊಂದಿರುವ ನವ ಚಲನಚಿತ್ರವಾಗಿದೆ ಎಂದು ಅರಿತು ಕೊಂಡೆ. ಸಂಶೋಧನೆ ನಡೆಸಿದ ಮೇಲೆ ಚಲನಚಿತ್ರದಲ್ಲಿ ಅವರ ವ್ಯಕ್ತಿಯೂ ಸ್ವಲ್ಪ ಗಟ್ಟಿತನದಿಂದ ಕೂಡಿರುವುದರಿಂದ, ನಾನು ಈ ರೀತಿಯ ರೆಟ್ರೋ ದಿರಿಸುಗಳನ್ನು ವಿನ್ಯಾಸಗೊಳಿಸುವ ಚಿಂತನೆ ಬಂದಿತು. ಹೆಚ್ಚು ಹೂಗಳು ಇರುವ ದಿರಿಸುಗಳನ್ನು ನಾನು ಇಲ್ಲಿ ತಯಾರಿಸಿಲ್ಲ. ಏಕೆಂದರೆ ಈ ಚಲನಚಿತ್ರದಲ್ಲಿ ನಾಯಕ ನಟನು ರೋಮ್ಯಾಂಟಿಕ್‌ ವ್ಯಕ್ತಿ ಆಗಿರುವುದಿಲ್ಲ ಹಾಗಾಗಿ ವಿಭಿನ್ನವಾದ ಬಟ್ಟೆಯನ್ನು ವಿನ್ಯಾಸಗೊಳಿಸಲಾಯಿತು” ಎಂದು ಅವರು ಹೇಳಿದರು.

ಇದನ್ನೂ ಓದಿ: Bollywood: ಒಟ್ಟಿಗೆ ಕಾಣಿಸಿಕೊಂಡ ರಿತೇಶ್​ ಹಾಗೂ ಶಾಹಿದ್​ ದಂಪತಿಗಳು, ಪಾಪರಾಜಿಗಳ ಫೋಟೋಗೆ ಪೋಸ್​ ಕೊಟ್ಟ ಸ್ಟಾರ್ಸ್

ಅಂತಿಮವಾಗಿ ಈಗ ಕನ್ನಡ ಚಲನಚಿತ್ರದ ಟ್ರೆಂಡ್‌ ʼಓಲ್ಡ್‌ ಈಸ್‌ ಗೋಲ್ಡ್‌ʼ ಎಂಬ ನುಡಿಮುತ್ತಿಗೆ ಅನುಗುಣವಾಗಿ ಚಲನಚಿತ್ರದಲ್ಲಿ ಬಳಸುವ ವಸ್ತ್ರ ವಿನ್ಯಾಸಗಳು ತಯಾರು ಆಗುತ್ತಿವೆ. ಚಲನಚಿತ್ರದಲ್ಲಿ ಇನ್ನು ಹೇಗೆಲ್ಲ ವಸ್ರ್ತ ವಿನ್ಯಾಸ ತಯಾರು ಮಾಡಬಹುದು ಎಂಬುದು ಕನ್ನಡ ಚಲನಚಿತ್ರಗಳ ಮುಂದಿನ ಸವಾಲುಗಳಲ್ಲಿ ಒಂದು ಆಗಿದೆ ಎನ್ನಬಹುದೇನೋ.
Published by:Ashwini Prabhu
First published: