HOME » NEWS » Entertainment » CORONA INFECTION FOR BOLLYWOOD STARS SHOOTING OF MANY MOVIES STOPPED HTV MAK

CoronaVirus: ಬಾಲಿವುಡ್ ಸ್ಟಾರ್​ಗಳಿಗೆ ಕೊರೋನಾ ಸೋಂಕು, ಹಲವು ಚಿತ್ರಗಳ ಶೂಟಿಂಗ್ ಸ್ಥಗಿತ!

ಮತ್ತೊಂದೆಡೆ ಬಾಲಿವುಡ್ ನಟಿ ಆಲಿಯಾ ಭಟ್ ಅವರಿಗೂ ಕೊರೋನಾ ಸೋಂಕು ತಗುಲಿದ್ದು, ಅವರೂ ಸಹ ಸದ್ಯ ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ. ಅವರ ಅಕಾಲಿಕ ಆರೋಗ್ಯ ಸಮಸ್ಯೆಯಿಂದಾಗಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಶೂಟಿಂಗ್‍ಅನ್ನು ಮುಂದೂಡಲಾಗಿದೆ.

news18-kannada
Updated:April 6, 2021, 8:53 PM IST
CoronaVirus: ಬಾಲಿವುಡ್ ಸ್ಟಾರ್​ಗಳಿಗೆ ಕೊರೋನಾ ಸೋಂಕು, ಹಲವು ಚಿತ್ರಗಳ ಶೂಟಿಂಗ್ ಸ್ಥಗಿತ!
ಬಾಲಿವುಡ್ ಸ್ಟಾರ್ಸ್​.
  • Share this:
ಭಾರತದಲ್ಲಿ ಕೊರೋನಾ ಎರಡನೇ ಅಲೆ ಪ್ರಾರಂಭವಾಗಿ ಹಲವು ದಿನಗಳೇ ಆಗಿವೆ. ಅದರಲ್ಲಂತೂ ಮಹಾರಾಷ್ಟ್ರ ರಾಜ್ಯದಲ್ಲಿಯೇ ಬೇರೆಲ್ಲ ರಾಜ್ಯಗಳಿಗಿಂತಲೂ ಅತಿಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ವಾಣಿಜ್ಯ ನಗರಿ ಮುಂಬೈನಲ್ಲೂ ಕೊವಿಡ್ ಕೇಸ್‍ಗಳು ತಾಂಡವವಾಡುತ್ತಿವೆ. ಇದರಿಂದ ಬಾಲಿವುಡ್ ಸ್ಟಾರ್​ಗಳೂ ಹೊರತಾಗಿಲ್ಲ. ಹೌದು, ಇತ್ತೀಚೆಗಷ್ಟೇ ಬಾಲಿವುಡ್ ಸೂಪರ್‍ಸ್ಟಾರ್ ಖಿಲಾಡಿ ಅಕ್ಷಯ್ ಕುಮಾರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ರಿಪೋರ್ಟ್ ಬಂದ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ರಾಮ್‍ಸೇತು ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು.

ತಕ್ಷಣ ಚಿತ್ರತಂಡದವರನ್ನು ಕೊವಿಡ್ ಟೆಸ್ಟ್ ಮಾಡಿಸಿದರೆ ಬರೋಬ್ಬರಿ 45 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನು ಕೆಲವರು ಮನೆಗಳಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಹೀಗಾಗಿ ಕೆಲ ದಿನಗಳ ಹಿಂದಷ್ಟೇ ಪ್ರಾರಂಭವಾದ ರಾಮ್‍ಸೇತು ಚಿತ್ರದ ಶೂಟಿಂಗ್‍ಅನ್ನು ಮುಂದೂಡಲಾಗಿದೆ.

ಮತ್ತೊಂದೆಡೆ ಬಾಲಿವುಡ್ ನಟಿ ಆಲಿಯಾ ಭಟ್ ಅವರಿಗೂ ಕೊರೋನಾ ಸೋಂಕು ತಗುಲಿದ್ದು, ಅವರೂ ಸಹ ಸದ್ಯ ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ. ಅವರ ಅಕಾಲಿಕ ಆರೋಗ್ಯ ಸಮಸ್ಯೆಯಿಂದಾಗಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಶೂಟಿಂಗ್‍ಅನ್ನು ಮುಂದೂಡಲಾಗಿದೆ. ಕೆಲ ತಿಂಗಳ ಹಿಂದೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಕೊರೊನಾ ಪಾಸಿಟಿವ್ ಆಗಿ, ಚಿತ್ರದ ಶೂಟಿಂಗ್‍ಅನ್ನು ಸ್ಥಗಿತಗೊಳಿಸಲಾಗಿತ್ತು. ಈಗ ನಾಯಕಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಮತ್ತೊಮ್ಮೆ ಮುಂದೂಡಲಾಗಿದೆ.https://twitter.com/akshaykumar/status/1378927360272080899?s=19

ಹಾಗೇ ಮಿಸ್ಟರ್ ಲೆಲೆ ಚಿತ್ರದ ನಾಯಕ ವಿಕ್ಕಿ ಕೌಶಲ್ ಹಾಗೂ ನಾಯಕಿ ಭೂಮಿ ಪೆಡ್ನೇಕರ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಸೋಮವಾರವಷ್ಟೇ ದೃಢಪಡಿಸಿರುವ ವಿಕ್ಕಿ ಮತ್ತು ಭೂಮಿ, ಸದ್ಯ ಹೋಮ್ ಕ್ವಾರಂಟೈನ್‍ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಕಾರಣದಿಂದಾಗಿ ಸದ್ಯ ಮಿಸ್ಟರ್ ಲೆಲೆ ಚಿತ್ರದ ಚಿತ್ರೀಕರಣವನ್ನೂ ಮುಂದೂಡಲಾಗಿದೆ.

ಇದನ್ನೂ ಓದಿ: prathima devi: ಕನ್ನಡದ ಖ್ಯಾತ ಹಿರಿಯ ನಟಿ ಪ್ರತಿಮಾ ದೇವಿ ಇನ್ನಿಲ್ಲ...

ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಬಾಲಿವುಡ್ ಸ್ಟಾರ್‍ಗಳು ಕೊರೊನಾ ಸೋಂಕು ತಗುಲಿ ಆಸ್ಪತ್ರೆ ಸೇರುತ್ತಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿದೆ. ಹಾಗಂತ ಇವರಷ್ಟೇ ಅಲ್ಲ ಈ ಹಿಂದೆಯೂ ಹಲವಾರು ಬಿಟೌನ್ ಸೆಲೆಬ್ರಿಟಿಗಳಿಗೆ ಕೊರೊನಾ ಸೋಂಕು ತಗುಲಿತ್ತು. ಪ್ಯಾರ್ ಕಾ ಪಂಚ್‍ನಾಮಾ ಖ್ಯಾತಿಯ ಕಾರ್ತಿಕ್ ಆರ್ಯನ್ ಭಾನುವಾರವಷ್ಟೇ 14 ದಿನಗಳ ಚಿಕಿತ್ಸೆ ಮುಗಿಸಿಕೊಂಡು, ನೆಗಟಿವ್ ರಿಪೋರ್ಟ್‍ನೊಂದಿಗೆ ಖುಷಿಯಿಂದ ಮನೆಗೆ ಮರಳಿದ್ದಾರೆ.
Youtube Video

ಹಾಗೇ ಕಳೆದ ವರ್ಷ ಬಿಗ್‍ಬಿ ಅಮಿತಾಭ್ ಬಚ್ಚನ್, ಅವರ ಪುತ್ರ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಹಾಗೂ ಅವರ ಪುತ್ರಿ ಆರಾಧ್ಯ, ಆಮಿರ್ ಖಾನ್, ಆರ್. ಮಾಧವನ್, ಮನೋಜ್ ಬಾಜ್‍ಪೈ, ಫಾತಿಮಾ ಸನಾ ಶೇಖ್, ರಣಬೀರ್ ಕಪೂರ್, ಅವರ ತಾಯಿ ನೀತು ಕಪೂರ್, ಪರೇಶ್ ರಾವಲ್, ವಿಕ್ರಾಂತ್ ಮಸ್ಸೀ, ಸತೀಶ್ ಕೌಶಿಕ್, ತಾರಾ ಸುಟಾರಿಯಾ... ಹೀಗೆ ಹಲವಾರು ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಎಲ್ಲರೂ ಸಹ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್ಸಾಗಿದ್ದರು.
Published by: MAshok Kumar
First published: April 6, 2021, 8:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories