Corona Effect: ಸರಳ ಮದುವೆಗೆ ಮುಂದಾದರಾ ನಟ ನಿಖಿಲ್​ ಕುಮಾರಸ್ವಾಮಿ?

Corona Effect: ಫೆ.10ರಂದು  ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಮಗ ನಿಖಿಲ್​ ಕುಮಾರ್​ಗೆ​​ ನಿಶ್ಚಿತಾರ್ಥವಾಗಿತ್ತು. ರೇವತಿ  ಜೊತೆಗೆ ನಿಖಿಲ್​ಗೆ ಮದುವೆ ಫಿಕ್ಸ್​ ಆಗಿತ್ತು. ಇವರಿಬ್ಬರ ಮದುವೆಯನ್ನು ಏಪ್ರಿಲ್​ 17ರಂದು ಮನೆಯ ಹಿರಿಯರು ನಿಶ್ಚಯಿಸಿದ್ದರು.

news18-kannada
Updated:March 29, 2020, 10:43 PM IST
Corona Effect: ಸರಳ ಮದುವೆಗೆ ಮುಂದಾದರಾ ನಟ ನಿಖಿಲ್​ ಕುಮಾರಸ್ವಾಮಿ?
ನಿಖಿಲ್​ ಮತ್ತು ರೇವತಿ
  • Share this:
ಮಹಾಮಾರಿ ಕೊರೋನಾದಿಂದಾಗಿ ದೇಶ ಲಾಕ್​ ಡೌನ್​ ಆಗಿದೆ. ಏ.14ರ ವರೆಗೆ ಲಾಕ್​ ಡೌನ್​ ಮಾಡುವಂತೆ ಕ್ರೇಂದ್ರ ಸರ್ಕಾರ ಆದೇಶ ಹೊರಡಿಸಿಗೆ. ಮಹಾಮಾರಿ ಕೊರೋನಾ ಇಂದು ವ್ಯಾಪಕವಾಗಿ ಹರಡುತ್ತಿದ್ದು, ಅನೇಕರಿಗೆ ಸಂಕಟವನ್ನು ತಂದೊಡ್ಡಿದೆ. ಜನರು ಮನೆಯಿಂದ ಹೊರ ಬರದಂತ ಪರಿಸ್ಥಿತಿ ಎದುರಾಗಿಗೆ. ಈ ನಡುವೆ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಅವರ ಮಗನ ಮದುವೆಗೂ ಕೊರೋನಾ ಅಡ್ಡಿಪಡಿಸಿದೆ.

ಫೆ.10ರಂದು  ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಮಗ ನಿಖಿಲ್​ ಕುಮಾರ್​ಗೆ​​ ನಿಶ್ಚಿತಾರ್ಥವಾಗಿತ್ತು. ರೇವತಿ  ಜೊತೆಗೆ ನಿಖಿಲ್​ಗೆ ಮದುವೆ ಫಿಕ್ಸ್​ ಆಗಿತ್ತು. ಇವರಿಬ್ಬರ ಮದುವೆಯನ್ನು ಏಪ್ರಿಲ್​ 17ರಂದು ಮನೆಯ ಹಿರಿಯರು ನಿಶ್ಚಯಿಸಿದ್ದರು. ಅದರಂತೆ ಈ ಅದ್ದೂರಿ ಮದುವೆಯ ಎಲ್ಲಾ ಕಾರ್ಯಗಳು ಕೂಡ ಬರದಿಂದ ಸಾಗುತ್ತಿದ್ದವು. ಆದರೀಗ ವಿಶ್ವದಾದ್ಯಂತ ಹರಡಿರುವ ಮಹಾಮಾರಿ ಕೊರೋನಾ ನಟ ನಿಖಿಲ್​ ಮತ್ತು ರೇವತಿ ಮದುವೆಗೆ ಅಡ್ಡಿಯುಂಟು ಮಾಡಿದೆ.

ಹಾಗಿದ್ದರೆ, ನಿಖಿಲ್​-ರೇವತಿ ಮದುವೆ?

ಮೂಲಗಳ ಪ್ರಕಾರ ನಿಖಿಲ್​ ಮತ್ತು ರೇವತಿ ಮದುವೆಯನ್ನು ಸರಳವಾಗಿ ಆಚರಿಸಲು ಮನೆಯ ಸದಸ್ಯರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರನ ಕಡೆಯಿಂದ 20 ಜನ, ವಧುವಿನ ಕಡೆಯಿಂದ 20 ಜನರಷ್ಟೇ ಮದುವೆಗೆ ಪಾಲ್ಗೊಳ್ಳಲ್ಲಿದ್ದಾರೆ . ಅದ್ಧೂರಿತನವನ್ನು ಬದಿಗೊತ್ತಿ ಸರಳವಾಗಿ ಈ ಜೋಡಿ ವಿವಾಹವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಕಳೆದ ಫೆಬ್ರವರಿ 10ರಂದು ನಿಖಿಲ್ ಮತ್ತು ರೇವತಿ ನಿಖ್ಚಿತಾರ್ಥ ಬೆಂಗಳೂರಿನ ತಾಜ್​ ವೆಸ್ಟ್​ ಎಂಡ್​ ಹೊಟೇಲಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಸಿನಿ ತಾರೆಯರು ಸೇರಿದಂತೆ ರಾಜಕೀಯ ಗಣ್ಯರು ಕೂಡ ಇವರಿಬ್ಬರ ನಿಶ್ಚಿತಾರ್ಥಕ್ಕೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು.

ಇದನ್ನೂ ಓದಿ: ರಾಯಲ್​ ಎನ್​ಫೀಲ್ಡ್​​ ಪ್ರಿಯರೇ..! ಬಿಡುಗಡೆಗೆ ಸಿದ್ಧವಾಗಿದೆ ಹೊಸ ಮೆಟೊರ್​ 350 ಬೈಕ್​
First published: March 29, 2020, 10:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading