ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲು ಥಿಯೇಟರ್ ಮಾಲೀಕರು ನಿರ್ಧರಿಸಿದ್ದಾರೆ. ಸೋಂಕು ಹೆಚ್ಚಳ ಜೊತೆಗೆ ಜನರು ಕೂಡ ಸಿನಿಮಾ ಮಂದಿರಗಳತ್ತ ಮುಖ ಮಾಡುತ್ತಿಲ್ಲ. ಜೊತೆಗೆ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಇದರಿಂದ ಚಿತ್ರ ಮಂದಿರ ನಿರ್ವಹಣೆ ಕಷ್ಟವಾಗುತ್ತಿದೆ. ಈ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ವೀರೇಶ್ ಚಿತ್ರಮಂದಿರದ ಮಾಲೀಕ ಕೆ ವಿ ಚಂದ್ರಶೇಖರ್ ತಿಳಿಸಿದ್ದಾರೆ. ರಾಜ್ಯದಲ್ಲಿರುವ 650ಕ್ಕೂ ಹೆಚ್ಚೂ ಚಿತ್ರಮಂದಿಗಳನ್ನು ಇದೇ ಏಪ್ರಿಲ್ 23ರಿಂದ ಬಂದ್ ಮಾಡಲಾಗುವುದು. ಸೋಂಕು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಸರ್ಕಾರವನ್ನು ಬೆಂಬಲ ಜೊತೆಗೆ ಅನಿವಾರ್ಯ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಕಳೆದ ವರ್ಷ ಲಾಕ್ಡೌನ್ನಿಂದಾಗಿ ಚಿತ್ರ ಮಂದಿರಗಳು ನಷ್ಟ ಅನುಭವಿಸಿದ್ದವು. ಕಳೆದ ಫೆಬ್ರವರಿಯಿಂದ ಶೇ 50ರಷ್ಟು ಆಸನ ಭರ್ತಿಗೆ ಸರ್ಕಾರಗಳು ಅನುಮತಿ ನೀಡಿದ್ದವು. ಇದಾದ ಬಳಿಕ ಒಂದೆರಡು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗಿದ್ದವು. ಇನ್ನೇನು ತುಸು ಚೇತರಿಕೆ ಕಾಣಲಿದೆ ಎಂಬ ಮಾಲೀಕರ ಲೆಕ್ಕಾಚಾರ ಮತ್ತೆ ಉಲ್ಟಾ ಆಗಿದೆ.
ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಬಾರದ ಹಿನ್ನಲೆ ಚಿತ್ರ ಬಿಡುಗಡೆಯೇ ಇಲ್ಲದಿರುವ ಈ ಸಮಯದಲ್ಲಿ ನಿರ್ವಹಣೆ ಕೂಡ ಮಾಲೀಕರಿಗೆ ಕಷ್ಟವಾಗಿದೆ. ಅಲ್ಲದೇ ಈ ಸಮಯದಲ್ಲಿ ಚಿತ್ರ ಮಂದಿರ ನಿರ್ವಹಣಾಕಾರರ ಆರೋಗ್ಯ ಕಾಪಾಡುವುದು ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಲಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ