• Home
 • »
 • News
 • »
 • entertainment
 • »
 • Corona Effect: ಕುರಿ ಕಾಯುತ್ತ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಬಿಗ್​ ಬಾಸ್ ಮಾಜಿ​ ವಿನ್ನರ್​!

Corona Effect: ಕುರಿ ಕಾಯುತ್ತ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಬಿಗ್​ ಬಾಸ್ ಮಾಜಿ​ ವಿನ್ನರ್​!

ನಟ ಪ್ರಥಮ್

ನಟ ಪ್ರಥಮ್

ಬಿಗ್​ಬಾಸ್​ ಮನೆಯಲ್ಲಿ ಫೋನ್​ ಮತ್ತು ಹೊರಗಿನವರ ಸಂಪರ್ಕವಿಲ್ಲದೆ 114 ದಿನಗಳನ್ನು ಕಳೆದ ಪ್ರಥಮ್​​ ಫೈನಲ್​ ಗೆದ್ದು ಬಂದಿದ್ದರು. ಆದಾಗಲೇ ಸಾಕಷ್ಟು ಅಭಿಮಾನಿ ಬಳಗವನ್ನು ಒಳ್ಳೆ ಹುಡುಗ ಪ್ರಥಮ್​ ಗಳಿಸಿಕೊಂಡಿದ್ದರು.

 • Share this:

  ಕೊರೋನಾ ವೈರಸ್​ನಿಂದಾಗಿ ದೇಶವೇ ಲಾಕ್​ಡೌನ್​ ಆಗಿದೆ. ಕೆಸಲಕ್ಕೆಂದು ಪೇಟೆಗೆ ಬಂದ ವಾಸಿಗಳು ಕೊರೋನಾ ಭೀತಿಯಿಂದಾಗಿ ಮರಳಿ ಊರು ಸೇರಿದ್ದಾರೆ. ಇಂತಹ ಸಂದರ್ಭದಲ್ಲಿ ಒಳ್ಳೆ ಹುಡುಗ ಪ್ರಥಮ್​ ಏನು ಮಾಡುತ್ತಿದ್ದಾರೆ ಗೊತ್ತಾ?


  ನಟ/ನಿರ್ದೇಶಕ ಪ್ರಥಮ್​ ತಮ್ಮ ಹುಟ್ಟೂರಿನಲ್ಲಿ ಹಳ್ಳಿ ಜೀವನ ನಡೆಸುತ್ತಿದ್ದಾರೆ. ಹಸುವಿನ ಹಾಲು ಕರೆಯುತ್ತ. ಕುರಿಗಳನ್ನು ಮೇಯಿಸುತ್ತ ಕಾಲ ಕಳೆಯುತ್ತಿದ್ದಾರೆ.


  ಬಿಗ್​ಬಾಸ್​ ಮನೆಯಲ್ಲಿ ಫೋನ್​ ಮತ್ತು ಹೊರಗಿನವರ ಸಂಪರ್ಕವಿಲ್ಲದೆ 114 ದಿನಗಳನ್ನು ಕಳೆದ ಪ್ರಥಮ್​​ ಫೈನಲ್​ ಗೆದ್ದು ಬಂದಿದ್ದರು. ಆದಾಗಲೇ ಸಾಕಷ್ಟು ಅಭಿಮಾನಿ ಬಳಗವನ್ನು ಒಳ್ಳೆ ಹುಡುಗ ಪ್ರಥಮ್​ ಗಳಿಸಿಕೊಂಡಿದ್ದರು. ಬಿಗ್ ಬಾಸ್​ ಮನೆಯಲ್ಲಿ ಅಷ್ಟು ದಿನ ಕಳೆದವರಿಗೆ 21 ದಿನಗಳನ್ನು ಕಳೆಯಲು ಸಾಧ್ಯವಿಲ್ಲವೇ ಎಂದು ತಮ್ಮ ಹುಟ್ಟೂರಿನಲ್ಲಿ ಬೀಡುಬಿಟ್ಟಿದ್ದಾರೆ. ಇಲ್ಲೇ ಸಾಕು ಪ್ರಾಣಿಗಳನ್ನು ಮೇಯಿಸುತ್ತಾ, ಅವುಗಳ ಆರೈಕೆ ಮಾಡುತ್ತಿದ್ದಾರೆ.


  ಊರಲ್ಲಿ ಬೆಳಿಗ್ಗೆ ಎದ್ರೆ ಕುರಿ ಮೇಯಿಸೋದು, ಸಂಜೆ ಹಾಲು ಕರೆಯೋದು, ನಮಗೆಷ್ಟು ಬೇಕೋ ಅಷ್ಟನ್ನು ಇಟ್ಕೊಂಡು ಮಿಕ್ಕಿದ್ದು ಡೈರಿಗೆ ಹಾಕೋದು. ಇಲ್ಲಿ ಯಾವ ಕೊರೋನಾ, ಕರೀನಾ ಭಯ ಇಲ್ಲ. ಇಷ್ಟೇ ಜೀವನ. ಎಂದು ಹೇಳುತ್ತಿದ್ದಾರೆ ನಟ ಪ್ರಥಮ್​.
  ಟಿವಿ, ಮೊಬೈಲ್‌ ಎಲ್ಲಾ ಇದ್ದೂ ಕೇವಲ 21 ದಿನ ಮನೆಯಲ್ಲಿ ಇರಲು ಆಗ್ತಾ ಇರಲಿಲ್ಲ. ಆದರೆ 114 ದಿನ ಫೋನ್‌ ಇಲ್ಲ.  ಹೊಟ್ಟೆ ತುಂಬಾ ಊಟ ಇಲ್ಲ. ಎಬ್ಬಿಸಿದಾಗ ಏಳಬೇಕು. ಲೈಟ್‌ ಆಫ್‌ ಆದಾಗ ಮಲ್ಕೊಬೇಕು. ಈಗ ಗೊತ್ತಾಯ್ತು ನಾನೆಷ್ಟು ಕಷ್ಟ ಪಟ್ಟು ಬಿಗ್ ಬಾಸ್‌ ಗೆದ್ದೆ ಅಂತ? ಅಸಲಿಗೆ, ನಾನ್ ಕಷ್ಟ ಪಟ್ಟಿಲ್ಲ. ಇಷ್ಟಪಟ್ಟೆ ಆಡಿದ್ದೇನೆ. ನೀವು ನನ್ನನ್ನು ಗೆಲ್ಲಿಸಿದ್ದೀರಿ. ಎಂದು ಹೇಳಿದ್ದಾರೆ ಪ್ರಥಮ್‌.

  Published by:Harshith AS
  First published: