Coronavirus: ಶಾರುಖ್ ಖಾನ್ - ಕತ್ರಿನಾಗೂ ಕೋವಿಡ್ ಕಂಟಕ, ಬಾಲಿವುಡ್ ಅಂಗಳದಲ್ಲಿ ಸಾಲು ಸಾಲು ಪಾಸಿಟಿವ್ ಕೇಸ್

ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿನ ಕೊರೋನಾ ಸ್ಪೋಟವಾಗಿದ್ದು, ಇದರ ಜೊತೆ ಇದೀಗ ಬಾಲಿವುಡ್ ಬಾದ್​ಶಾ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಮತ್ತು ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್

ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್

  • Share this:
ಕಳೆದ ಕೆಲ ದಿನಗಳ ಹಿಂದೆ ಕರಣ್ ಜೋಹರ್ (Karan Johar)  ಬರ್ತ್ ಡೇಯನ್ನು ಆಚರಿಸಿಕೊಂಡಿದ್ದರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 50 ರಿಂದ 55 ಜನಕ್ಕೆ ಕೊರೋನಾ (Corona) ಪಾಸಿಟಿವ್ ಬಂದಿದೆ. ಹೌದು, ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿನ ಕೊರೋನಾ ಸ್ಪೋಟವಾಗಿದ್ದು, ಇದರ ಜೊತೆ ಇದೀಗ ಬಾಲಿವುಡ್ ಬಾದ್​ಶಾ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಮತ್ತು ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತು ಮಾಹಿತಿಯೊಂದು ವರಿ ಮೂಲಕ ತಿಳಿದುಬಂದಿದ್ದು, ಈ ಇಬ್ಬರೂ ಸ್ಟಾರ್​ ಗಳು ಸದ್ಯ ಕ್ವಾರಂಟೈನ್​ ನಲ್ಲಿ ಇರುವುದಾಗಿ ತಿಳಿದುಬಂದಿದೆ. ಅಲ್ಲದೇ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕರಣ್ ಜೋಹಾರ್ ಅವರ ಬರ್ತಡೇ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಶಾರುಖ್ ಮತ್ತು ಕತ್ರಿನಾಗೆ ಕೊರೋನಾ ದೃಢ:

ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಇಬ್ಬರಿಗೂ ಇದೀಗ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅಲ್ಲದೇ ಇವರಿಬ್ಬರೂ ಕ್ವಾರಂಟೈನ್ ನಲ್ಲಿ ಇರುವುದಾಗಿ ತಿಳಿದುಬಂದಿದೆ. ಇದಲ್ಲದೇ ಕೆಲವು ದಿನಗಳ ಹಿಂದೆ ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್ ಮತ್ತು ಆದಿತ್ಯ ರಾಯ್ ಕಪೂರ್ ಕೊರೋನಾಗೆ ತುತ್ತಾಗಿದ್ದರು. ಕೊರೋನಾ ಕುರಿತು ಕಲಾವಿದರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದರು. ಕರಣ್ ಜೋಹರ್ ಅವರ ಹುಟ್ಟುಹಬ್ಬದ ಪಾರ್ಟಿಯಿಂದ ಕೆಲವು ಬಾಲಿವುಡ್ ಸೆಲೆಬ್ರಿಟಿಗಳಿಗೆ ಕೊರೋನಾ ಸೋಂಕು ತಗುಲಿದೆ ಎಂಬ ವದಂತಿಯೂ ಇದೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಕೆಲವು ಸೆಲೆಬ್ರಿಟಿಗಳಿಗೆ ಕೊರೋನಾ ಸೋಂಕು ತಗುಲಿರುವುದು ವರದಿಯಾಗಿದೆ.

50ಕ್ಕೂ ಹೆಚ್ಚಿನ ಜನರಿಗೆ ಕೊರೋನಾ:

ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಯಶ್ ರಾಜ್ ಫಿಲ್ಮ್ಸ್ ಸ್ಟುಡಿಯೋದಲ್ಲಿ ಕರಣ್ ಜೋಹರ್ ತಮ್ಮ 50ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಹೃತಿಕ್ ರೋಷನ್, ಶಾರುಖ್ ಖಾನ್, ಕತ್ರಿನಾ ಕೈಫ್, ಕಿಯಾರಾ ಅಡ್ವಾಣಿ, ಜಾನ್ವಿ ಕಪೂರ್, ಮಲೈಕಾ ಅರೋರಾ, ಕರೀನಾ ಕಪೂರ್ ಖಾನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಆದರೆ ಇತ್ತೀಚಿನ ವರದಿ ಪ್ರಕಾರ ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಸುಮಾರು 50 ರಿಂದ 55 ಜನಕ್ಕೆ ಕೊರೋನಾ ಪಾಸಿಟಿವ್ ಬಂದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Karan Johar: ಕರಣ್ ಜೋಹರ್ ಪಾರ್ಟಿಗೆ ಹೋಗದೇ ಬಚಾವಾದ ಯಶ್! ಏನಾಯ್ತಪ್ಪ ಅಂತೀರಾ? ಈ ಸ್ಟೋರಿ ಓದಿ

ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿದೆ ಕೊರೋನಾ:

ಇನ್ನು, ಮಹಾರಾಷ್ಟ್ರದಲ್ಲಿ COVID-19 ಪ್ರಕರಣಗಳಲ್ಲಿ ಅನಿರೀಕ್ಷಿತ ಹೆಚ್ಚಳದಿಂದಾಗಿ , ರಾಜ್ಯದ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಜೂನ್ 5 ರಂದು ಕೊರೋನಾ ಹರಡುವುದನ್ನು ತಡೆಯಲು ಮಾಸ್ಕ್​ ಅಗತ್ಯವಿರಬಹುದು ಎಂದು ಎಚ್ಚರಿಸಿದ್ದಾರೆ. ಜೂನ್ 4 ರಂದು 24 ಗಂಟೆಗಳ ಅವಧಿಯಲ್ಲಿ, ಮುಂಬೈನಲ್ಲಿ 889 ಜನರು COVID-19 ಗೆ ಧನಾತ್ಮಕ ವರದಿ ಬಂದಿದೆ.

ಇದರೊಂದಿಗೆ ಇಂದು ಸಹ ಪ್ರಕರಣ ಹೆಚ್ಚಳವಾಗಿದ್ದು, ಇಂದು (ಜೂನ್ 5) ರಂದು 961 ಹೊಸ ಪ್ರಕರಣಗಳು ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ಇದರ ನಡುವೆ, ದಿನನಿತ್ಯದ ಹೊಸ ಕೊರೋನಾ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳವಾಗುತ್ತಿರುವುದರಿಂದ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮುಂಬೈ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Samantha: ಅಕ್ಕಿನೇನಿ ಕುಟುಂಬಕ್ಕಾಗಿ ಸಮಂತಾ ತ್ಯಾಗ, ಬಾಲಿವುಡ್​ ಕಿಂಗ್​ ಖಾನ್​ಗೆ ಶಾಕ್ ನೀಡಿದ ಬ್ಯೂಟಿ!

ದೇಶದಲ್ಲಿಯೂ ಹೆಚ್ಚುತ್ತಿದೆ ಕೋವಿಡ್ 19:

ಭಾರತವು 4,270 ಹೊಸ ಕೊರೋನಾ ಸೋಂಕನ್ನು ದಾಖಲಿಸಿದ್ದು, COVID-19 ಪ್ರಕರಣಗಳ ಸಂಖ್ಯೆ 4,31,76,817 ಕ್ಕೆ ತಲುಪಿದೆ. ಆದರೆ 34 ದಿನಗಳ ನಂತರ ದೈನಂದಿನ ಸಕಾರಾತ್ಮಕತೆಯ ದರವು ಒಂದು ಶೇಕಡಾಕ್ಕಿಂತ ಹೆಚ್ಚು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಭಾನುವಾರ ತಿಳಿಸಿದೆ.
Published by:shrikrishna bhat
First published: