ಮದುವೆಯಾದ ಕೆಲದಿನಗಳಲ್ಲೇ ಬೆತ್ತಲೆ ವಿಡಿಯೋ ಹರಿಬಿಟ್ಟ ಬಾಲಿವುಡ್​ ನಟಿ!

Poonam Pandey: ವಿವಾಹವಾದ ಕೆಲವು ದಿನಗಳ ನಂತರ ನಟಿ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಪೂನಂ ಪಾಂಡೆ ‘ಇಂದು ರಾತ್ರಿ ಹೊಸ ವಿಡಿಯೋವನ್ನು ಹಂಚಿಕೊಳ್ಳಲಿದ್ದೇನೆ‘ ಎಂದಿದ್ದರು

ಪೂನಂ ಪಾಂಡೆ

ಪೂನಂ ಪಾಂಡೆ

 • Share this:
  ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿರುವ ನಟಿ. ಇತ್ತೀಚೆಗೆ ಪಡ್ಡೆ ಹುಡುಗರ ನೆಚ್ಚಿನ ರಾಣಿ ಪೂನಂ ಪಾಂಡೆ ವಿವಾಹವಾಗುವ ಮೂಲಕ ತನ್ನ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿಕೊಟ್ಟಿದ್ದರು. ಗೆಳೆಯ ಸ್ಯಾಮ್​ ಬಾಂಬೆ ಜೊತೆಗೆ ಸದ್ದಿಲ್ಲದೆ ಹಸೆಮಣೆ ಏರುವ ಮೂಲಕ ನಾನು ವಿವಾಹವಾಗಿದ್ದೇನೆಂದು ಅಭಿಮಾನಿಗಳೊಂದಿಗೆ ಹೇಳಿಕೊಂಡರು. ಅದಕ್ಕೆ ಸಾಕ್ಷಿಯೆಂಬಂತೆ ಫೋಟೋವನ್ನು ಹಂಚಿಕೊಂಡಿದ್ದರು.

  ‘ನಿಮ್ಮೊಂದಿಗೆ ಏಳು ಜೀವಿತಾವಧಿ ಎದುರು ನೋಡುತ್ತಿದ್ದೇನೆ’ ಪೂನಂ ಪಾಂಡೆ, ಸ್ಯಾಮ್​ ಬಾಂಬೆ ಜೊತೆಗಿರುವ ಫೋಟೋ ಹಂಚಿಕೊಂಡಿದ್ದರು. ಅದರಂತೆ ಸ್ಯಾಮ್​ ಶುಕ್ರವಾರದಂದು ಇನ್​​ಸ್ಟಾಗ್ರಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

  ವಿವಾಹವಾದ ಕೆಲವು ದಿನಗಳ ನಂತರ ನಟಿ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಪೂನಂ ಪಾಂಡೆ ‘ಇಂದು ರಾತ್ರಿ ಹೊಸ ವಿಡಿಯೋವನ್ನು ಹಂಚಿಕೊಳ್ಳಲಿದ್ದೇನೆ‘ ಎಂದಿದ್ದರು. ಅದರಂತೆ ರಾತ್ರಿ ವೇಳೆಗೆ ಇನ್​​​ಸ್ಟಾಗ್ರಾಂನಲ್ಲಿ ಬೆತ್ತಲೆ ವಿಡಿಯೋ ಅಪ್ಲೋಡ್​ ಮಾಡಿದ್ದಾರೆ.

  ವಿವಾಹವಾದ ನಂತರ ಪೂನಂ ಪಾಂಡೆ ಯಾವುದೇ ವಿಡಿಯೋಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಆಕೆಯ ಅಭಿಮಾನಿಗಳು ಭಾವಿಸಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಬೆತ್ತಲೆ ವಿಡಿಯೋವನ್ನು ಶೇರ್​ ಮಾಡಿದ್ದಾರೆ.
  First published: