Jacqueline Fernandez: ಲಿಯೋನಾರ್ಡೋ ಡಿಕ್ಯಾಪ್ರಿಯೋ ಜೊತೆ ನಟಿಸುವ ಚಾನ್ಸ್ ಕೊಡಿಸ್ತೀನಿ ಅಂತ ಕಾಗೆ ಹಾರಿಸಿದ್ನಂತೆ ಸುಕೇಶ್​!

‘’ನನಗೆ ಹಾಲಿವುಡ್ ತಾರೆಯರ ಜೊತೆಗೆ ನಂಟಿದೆ. ಹೀಗಾಗಿ ಹಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೊಡಿಸುತ್ತೇನೆ. ಅದರಲ್ಲೂ ಜನಪ್ರಿಯ ನಟ ಲಿಯೋನಾರ್ಡೋ ಡಿಕ್ಯಾಪ್ರಿಯೋ(Leonardo DiCaprio) ಜೊತೆ ನಟಿಸುವ ಚಾನ್ಸ್ ಕೊಡಿಸುವೆ’’ ಅಂತ ಜಾಕಲಿನ್ ಫರ್ನಾಂಡಿಸ್‌ಗೆ ಸುಖೇಶ್ ಚಂದ್ರಶೇಖರ್ ಆಶ್ವಾಸನೆ ನೀಡಿದ್ರಂತೆ.

ಜಾಕಲಿನ್​, ಸುಕೇಶ್​, ಲಿಯೋನಾರ್ಡೋ ಡಿಕ್ಯಾಪ್ರಿಯೋ

ಜಾಕಲಿನ್​, ಸುಕೇಶ್​, ಲಿಯೋನಾರ್ಡೋ ಡಿಕ್ಯಾಪ್ರಿಯೋ

  • Share this:
ಸುಕೇಶ್ ಚಂದ್ರಶೇಖರ್ (Sukesh Chandrasekhar) ಬಾಲಿವುಡ್ ನಟಿ ಜಾಕಲಿನ್​ ಫರ್ನಾಂಡಿಸ್ (Jacqueline Fernandez) ಜೊತೆ 500 ಕೋಟಿ ರೂಪಾಯಿ ಬಜೆಟ್‌ನ ದೊಡ್ಡ ಸರಣಿ ಚಿತ್ರಗಳನ್ನು ಮಾಡಲು ಬಯಸಿದ್ದರು ಎಂಬ ಮಾತುಗಳು ಬಲವಾಗಿ ಕೇಳಿ(Rumors) ಬಂದಿತ್ತು. ಇದಾದ ಬಳಿಕ ಒಟಿಟಿ ಮಾಧ್ಯಮದ ನಿರ್ಮಾಪಕರೊಬ್ಬರು ಅನಾಮಧೇಯತೆಯ ವಿನಂತಿಯ ಮೇರೆಗೆ, ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಕಥೆಯಲ್ಲಿ ಭಾರಿ ಆಸಕ್ತಿ ಇದೆ ಮತ್ತು ಅದರ ಕಾಲ್ಪನಿಕ ಕಥೆ ಮಾಡುವ ಯೋಜನೆ ಇದೆ ಎಂದು ಸುದ್ದಿ ಮಾಧ್ಯಮಕ್ಕೆ ಹೇಳಿದರು. "ಈ ಪ್ರಕರಣದ ವಿಷಯದ ಬಗ್ಗೆ ವೆಬ್ ಸೀರಿಸ್ ಅಥವಾ ಸಾಕ್ಷ್ಯಚಿತ್ರವನ್ನಾಗಿ ಮಾಡಬಹುದು” ಎಂದು ಹೇಳಿದ್ದರು. ಇದೀಗ ಮತ್ತೊಂದು ಸ್ಫೋಟಕ ವಿಚಾರ ಬಹಿರಂಗಕೊಂಡಿದೆ. ಇದನ್ನು ಕೇಳಿದ ಜನ ಸರಿಯಾಗೇ ಕಲರ್​ ಕಲರ್​ ಕಾಗೆ ಹಾರಿಸಿದ್ದಾನೆ.ಜಾಕಲಿನ್ ಫರ್ನಾಂಡಿಸ್‌ ಜೊತೆ ಆಪ್ತವಾಗಿದ್ದ ಸುಖೇಶ್ ಚಂದ್ರಶೇಖರ್ ಆಕೆಗೆ ಒಂದು ಪ್ರಾಮಿಸ್‌ ಮಾಡಿದ್ದರಂತೆ. ಆ ಪ್ರಾಮಿಸ್(Promise)​ ಏನು ಎಂಬುಂದು ಇದೀಗ ಬಹಿರಂಗವಾಗಿದೆ. ಇದನ್ನು ಕೇಳಿದ ನೆಟ್ಟಿಗರು ಒಂದೇ ಸಮನೇ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಅದೇನು ಅಂತ ನೋಡುವುದಕ್ಕೆ ನಿಮಗೂ ಕುತೂಹಲನಾ? ಮುಂದೆ ಇದೆ ನೋಡಿ.

‘ಲಿಯೋನಾರ್ಡೋ  ಜೊತೆ ನಟಿಸುವ ಚಾನ್ಸ್​ ಕೊಡಿಸ್ತೀನಿ’

ಇದನ್ನು ಕೇಳಿದ ನಿಮಗೆ ಶಾಕ್​ ಆಗಿರಬಹುದು. ಆದರೂ, ಇದು ನಿಜ ಜಾಕಲಿನ್​ ಫರ್ನಾಂಡಿಸ್‌ಗೆ ಹಾಲಿವುಡ್ ಚಿತ್ರದಲ್ಲಿ ನಟಿಸುವ ಆಫರ್ ಕೊಡಿಸುವೆ ಎಂದು ಆರೋಪಿ ಸುಖೇಶ್ ಚಂದ್ರಶೇಖರ್ ಪ್ರಾಮಿಸ್ ಮಾಡಿದ್ದರು. ‘’ನನಗೆ ಹಾಲಿವುಡ್ ತಾರೆಯರ ಜೊತೆಗೆ ನಂಟಿದೆ. ಹೀಗಾಗಿ ಹಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೊಡಿಸುತ್ತೇನೆ. ಅದರಲ್ಲೂ ಜನಪ್ರಿಯ ನಟ ಲಿಯೋನಾರ್ಡೋ ಡಿಕ್ಯಾಪ್ರಿಯೋ(Leonardo DiCaprio) ಜೊತೆ ನಟಿಸುವ ಚಾನ್ಸ್ ಕೊಡಿಸುವೆ’’ ಅಂತ ಜಾಕಲಿನ್ ಫರ್ನಾಂಡಿಸ್‌ಗೆ ಸುಖೇಶ್ ಚಂದ್ರಶೇಖರ್ ಆಶ್ವಾಸನೆ ನೀಡಿದ್ರಂತೆ. ಈತನ ಮಾತಿಗೆ ಮರುಳಾದ ಜಾಕಲಿನ್​ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನು ಓದಿ : ಜಾಕಲಿನ್​​, ನೋರಾ ಬಳಿಕ ಶಿಲ್ಪಾ ಶೆಟ್ಟಿ, ಶ್ರದ್ಧಾ ಕಪೂರ್​​ಗೆ ಸಂಕಷ್ಟ​: ಇವ್ನು ಹೇಳ್ತಿರೋದೆಲ್ಲ ನಿಜನಾ...?

500 ಕೋಟಿ ಬಜೆಟ್​ನ ಸಿನಿಮಾದ ಪ್ರಾಮಿಸ್!

ಇತ್ತೀಚೆಗೆ ಸುದ್ದಿ ಮಾಧ್ಯಮವೊಂದು ಬಿತ್ತರಿಸಿದ ವರದಿಯು ಸುಕೇಶ್ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರ ಜೊತೆಗೆ, ಜಾಕ್ವೆಲಿನ್ ಅನ್ನು ಹಾಕಿಕೊಂಡು ಸರಣಿ ಚಲನಚಿತ್ರಗಳನ್ನು ಸಹ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 500 ಕೋಟಿ ರೂಪಾಯಿಗಳ 3 ಭಾಗಗಳನ್ನು ಹೊಂದಿರುವ ಮಹಿಳಾ ಸೂಪರ್ ಹೀರೋ ಸರಣಿ ಚಿತ್ರಗಳನ್ನು ಮಾಡುವ ಯೋಜನೆಯ ಬಗ್ಗೆ ಇವರು ನಟಿಗೆ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಜಾಕಲಿನ್​ ಫರ್ನಾಂಡಿಸ್​ ಅಸಲಿ ಬಣ್ಣ ತೆರೆದಿಟ್ಟ ಸುಕೇಶ್​: ಏನೆಲ್ಲಾ ಗಿಫ್ಟ್​ ಕೊಟ್ಟಿದ್ದಾನಪ್ಪ..!

ಶಿಲ್ಪಾ ಶೆಟ್ಟಿ, ಶ್ರದ್ಧಾ ಕಪೂರ್​​ಗೂ ಸಂಕಷ್ಟ!

ಹಲವಾರು ನಟಿಯರ ಜೊತೆ ವಂಚಕ ಸುಕೇಶ್​ ಚಂದ್ರಶೇಖರ್​ ನಂಟು ಹೊಂದಿದ್ದ. ಈ ಬಗ್ಗೆ ಅಧಿಕಾರಿಗಳ ಮುಂದೆ ಆತ ಹೇಳಿರುವ ಹೇಳಿಕೆಗಳೂ ನಿಜಕ್ಕೂ ಶಾಕ್​ ನೀಡಲಿದೆ. ಜಾಕಲಿನ್​ ಫರ್ನಾಂಡಿಸ್​ ನಾನು ಡೇಟಿಂಗ್​ ಮಾಡುತ್ತಿದ್ವಿ ಎಂದು ಹೇಳಿದ್ದ. ಈ ಹೇಳಿಕೆ ಬಾಲಿವುಡ್​ ಅಂಗಳದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಇದೀಗ ಶಿಲ್ಪಾ ಶೆಟ್ಟಿ, ಶ್ರದ್ಧಾ ಕಪೂರ್​ ಅವರ ಹೆಸರನ್ನು ಹೇಳಿದ್ದಾನೆ. 2015ರಿಂದ ನಾನು ಶ್ರದ್ಧಾ ಕಪೂರ್​ ಜೊತೆ ನಂಟು ಹೊಂದಿದ್ದೇನೆ ಎಂದು ವಂಚಕ ಸುಕೇಶ್​ ಚಂದ್ರಶೇಖರ್​ ಹೇಳಿದ್ದಾನೆ. ನಾರ್ಕೋಟಿಕ್ಸ್​  ಕಂಟ್ರೋಲ್​ ಬ್ಯೂರೋ ಕೇಸ್​ನಲ್ಲಿ ಶ್ರದ್ಧಾ ಕಪೂರ್​ಗೆ ಸಹಾಯ ಮಾಡಿದ್ದೇ ನಾನು ಎಂದು ಹೇಳಿದ್ದಾನೆ.
Published by:Vasudeva M
First published: