200 ಕೋಟಿ ರೂಪಾಯಿ ವಂಚನೆ ಆರೋಪವನ್ನು ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ (Sukesh Chandrashekhar) ಜೈಲ್ ಸೆಲ್ ಮೇಲೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಈ ದಾಳಿಯಲ್ಲಿ (Raid) ಹಲವಾರು ಲಕ್ಷುರಿ ವಸ್ತುಗಳನ್ನು ವಶಕ್ಕೆ (Seize) ಪಡೆಯಲಾಗಿದೆ. 1.5 ಲಕ್ಷದ ಚಪ್ಪಲಿ, 80 ಸಾವಿರ ಬೆಲೆ ಬಾಳುವ ಮೂರು ಜೀನ್ಸ್ ಸೇರಿ ಹಲವು ವಸ್ತುಗಳನ್ನು ಸೀಜ್ ಮಾಡಲಾಗಿದೆ. ಇದೀಗ ಮಂಡೋಲಿ ಜೈಲ್ ಸೆಲ್ನಲ್ಲಿ ನಡೆದ ದಾಳಿಯ ಸಿಸಿಟಿವಿ ವಿಡಿಯೋ ಎಲ್ಲೆಡೆ ವೈರಲ್ (Video Viral) ಆಗಿದ್ದು ಎಲ್ಲರೂ ಶೇರ್ ಮಾಡುತ್ತಿದ್ದಾರೆ. ವಿಡಿಯೋದಲ್ಲಿ (Video) ಅಧಿಕಾರಿಗಳ ತಂಡ ಹಾಗೂ ಜೈಲು ಪ್ರಾಧಿಕಾರ ಸುಕೇಶ್ನನ್ನು ಸೆಲ್ ಒಳಗೆ ಕರೆತರುವುದನ್ನು ಕಾಣಬಹುದು. ನಂತರ ಆತ ಕಣ್ಣೊರೆಸುವುದನ್ನು ಕಾಣಬಹುದು. ಈ ರೇಡ್ ನಡೆದಾಗ ಸೆಲ್ ಒಳಗೆ ಸುಕೇಶ್ ಮಾತ್ರ ಇದ್ದ. ಗುರುವಾರ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸುಕೇಶ್ ಜೋರಾಗಿ ಅಳುವುದನ್ನು ಕೂಡಾ ಕಾಣಬಹುದು.
ಕಾನೂನು ಕಾರ್ಯದರ್ಶಿ ಎಂದು ಹೇಳಿಕೊಂಡು ಮಾಜಿ ರೆಲಿಗೇರ್ ಪ್ರವರ್ತಕ ಮಲ್ವಿಂದರ್ ಸಿಂಗ್ ಅವರ ಪತ್ನಿಯನ್ನು ಸುಕೇಶ್ ವಂಚಿಸಿದ್ದ. ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅವರನ್ನು ಫೆಬ್ರವರಿ 16 ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.
ಸುಕೇಶ್ ಮೂರನೇ ವಂಚನೆ ಪ್ರಕರಣ
ಫೆಡರಲ್ ತನಿಖಾ ಸಂಸ್ಥೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರಲ್ಲಿ ಆರೋಪಿಯನ್ನು 14 ದಿನಗಳ ಕಸ್ಟಡಿಗೆ ಕೋರಿತ್ತು. ಚಂದ್ರಶೇಖರ್ ಅವರನ್ನು ಇಡಿ ಬಂಧಿಸಿರುವ ಮೂರನೇ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ.
ಲಕ್ಷುರಿ ಜೀವನಶೈಲಿಗಾಗಿ ಮಾಜಿ ಫೋರ್ಟಿಸ್ ಸಿಬ್ಬಂದಿ ಪತ್ನಿಯಿಂದ 217 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪ ಸುಕೇಶ್ ಮೇಲಿದೆ.
ಇದನ್ನೂ ಓದಿ: Bigg Boss: ಬಿಗ್ಬಾಸ್ ಮನೆಯಲ್ಲಿ ಅವಮಾನ ಎದುರಿಸಿದ್ದ ನಟಿ ಮುಂಬೈನಲ್ಲಿ ಸ್ವಂತ ಬಂಗಲೆ ಖರೀದಿಸಿದ್ರು!
ಸುಕೇಶ್ ಇತ್ತೀಚೆಗೆ ಪ್ರೇಮಿಗಳ ದಿನದಂದು ನಟಿ ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ಶುಭ ಹಾರೈಸಿ ಸುದ್ದಿಯಲ್ಲಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ಯುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದರು.
#WATCH | Luxury items found in conman Sukesh Chandrasekhar’s jail cell. CCTV visuals from Mandoli jail shared by sources show Sukesh after raids caught items in his jail cell.
(Source: Mandoli Jail Administration) pic.twitter.com/Fr77ZAsGbF
— ANI (@ANI) February 23, 2023
ಮಲ್ವಿಂದರ್ ಸಿಂಗ್ ಅವರ ಸಹೋದರ ಶಿವಿಂದರ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಗೆ 200 ಕೋಟಿ ರೂಪಾಯಿ ವಂಚಿಸಿದ ಸುಕೇಶ್ ಮೇಲಿದೆ. ವಿಕೆ ಶಶಿಕಲಾ ಬಣಕ್ಕೆ ಎಐಎಡಿಎಂಕೆಯ 'ಎರಡು ಎಲೆ' ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಚಂದ್ರಶೇಖರ್ ವಿರುದ್ಧದ ಇನ್ನೆರಡು ಪ್ರಕರಣಗಳಾಗಿವೆ.
PMLA ಪ್ರಕರಣವು 2021 ರ ದೆಹಲಿ ಪೊಲೀಸ್ ವಿಶೇಷ ಸೆಲ್ ಎಫ್‌ಐಆರ್‌ನಿಂದ ಹುಟ್ಟಿಕೊಂಡಿದೆ. ಇದು ಚಂದ್ರಶೇಖರ್ ಮತ್ತು ಅವರ ಸಹಚರರು ಉನ್ನತ ಶ್ರೇಣಿಯ ಸರ್ಕಾರಿ ಸಿಬ್ಬಂದಿಯಂತೆ ವರ್ತಿಸಿ ಕ್ರಿಮಿನಲ್ ಸಂಚು ರೂಪಿಸಿದ್ದಾರೆ. ಮಲ್ವಿಂದರ್ ಸಿಂಗ್ ಅವರ ಪತ್ನಿ ಜಪ್ನಾ ಸಿಂಗ್ ಅವರಿಂದ 4 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ