Love Propose: ವಜ್ರದುಂಗುರ ನೀಡಿ ಜಾಕಲಿನ್ ಪ್ರಪೋಸ್ ಮಾಡಿದ 200 ಕೋಟಿ ವಂಚಕ..!

ಜಾಕ್ವೆಲಿನ್ ಫರ್ನಾಂಡಿಸ್​ಗೆ 200 ಕೋಟಿ ರುಪಾಯಿ ವಂಚಕ ಸುಕೇಶ್ ಚಂದ್ರಶೇಖರ್ ಪ್ರೇಮ ನಿವೇದನೆ ಮಾಡಿದ್ದಾನೆ. ಇದು ಅಂತಿಂಥಾ ಪ್ರಪೋಸ್ ಅಲ್ಲ, ತನ್ನ ನೆಚ್ಚಿನ ಚೆಲುವೆಗಾಗಿ ಈ ವಂಚಕ ದುಬಾರಿ ವಜ್ರದುಂಗುರವನ್ನೇ ಕೊಟ್ಟಿದ್ದಾನೆ.

ಜಾಕ್ವೆಲಿನ್ ಫರ್ನಾಂಡಿಸ್-ಸುಕೇಶ್ ಚಂದ್ರಶೇಖರ್

ಜಾಕ್ವೆಲಿನ್ ಫರ್ನಾಂಡಿಸ್-ಸುಕೇಶ್ ಚಂದ್ರಶೇಖರ್

  • Share this:
ವಿಕ್ರಾಂತ್ ರೋಣ ಬೆಡಗಿಗೆ ಲವ್ ಪ್ರಪೋಸಲ್ (Love Propose) ಬಂದಿದೆ. ಜಾಕಲಿನ್ ಫರ್ನಾಂಡಿಸ್​ಗೆ 200 ಕೋಟಿ ರುಪಾಯಿ ವಂಚಕ ಸುಕೇಶ್ ಚಂದ್ರಶೇಖರ್ (Conman Sukesh Chandrashekhar) ಪ್ರೇಮ ನಿವೇದನೆ ಮಾಡಿದ್ದಾನೆ. ಇದು ಅಂತಿಂಥಾ ಪ್ರಪೋಸ್ ಅಲ್ಲ, ತನ್ನ ನೆಚ್ಚಿನ ಚೆಲುವೆಗಾಗಿ ಈ ವಂಚಕ ದುಬಾರಿ ವಜ್ರದುಂಗುರವನ್ನೇ ಕೊಟ್ಟಿದ್ದಾನೆ. ಇಷ್ಟೇ ಅಲ್ಲದೆ ಸುಕೇಶ್ ವಿವಾಹಿತ. ಆತನಿಗೆ ಪತ್ನಿಯೂ ಇದ್ದಾಳೆ. ಜಾಕಲಿನ್ (Jacqueline Fernandez) ಸ್ನೇಹ ಬೆಳೆಸಿ ಆಕೆಗೆ ಕುದುರೆ, ಬೆಕ್ಕು, ಕಾರು, ಲಕ್ಷುರಿ ಶೂಸ್ ಗಿಫ್ಟ್ ಮಾಡಿದ ಈತ ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೊಗಳು ಸೋಷಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದ್ದವು. ಇದೀಗ ಇವರ ಲವ್, ಪ್ರಪೋಸ್, ಡೈಮಂಡ್ ರಿಂಗ್ ಸುದ್ದಿ ಮಾಡುತ್ತಿದೆ. ವಂಚಕನ ಪ್ರೀತಿ ಸ್ವೀಕರಿಸಿದ್ದಾರಾ ಜಾಕ್ವೆಲಿನ್ ಫರ್ನಾಂಡಿಸ್ ? ಡೈಮಂಡ್ ರಿಂಗ್ ಏನಾಯ್ತ ? ಇಲ್ಲಿದೆ ಡೀಟೆಲ್ಸ್

200 ಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಒಳಗೊಂಡ ದೆಹಲಿಯ ಅತಿ ದೊಡ್ಡ ಬಹುಕೋಟಿ ಸುಲಿಗೆ ದಂಧೆಯನ್ನು ಜಾರಿ ನಿರ್ದೇಶನಾಲಯ ಬಯಲಿಗೆಳೆದಿದೆ. ಆ ನಂತರದಲ್ಲಿ ನಟಿ ಜಾಕಲಿನ್ ಫರ್ನಾಂಡೀಸ್ ಅವರ ಹೆಸರು ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಬಂಧಕ್ಕಾಗಿ ಹೆಚ್ಚು ಸುದ್ದಿಯಾಗುತ್ತಿದೆ. ಜಾಕಲಿನ್ ಮತ್ತು ಸುಕೇಶ್ ಸಂಬಂಧದಲ್ಲಿದ್ದಾರೆ ಎಂದು ಭಾರೀ ಸುದ್ದಿಯಾಗಿತ್ತು. ಈ ಜೋಡಿಯ ಬಹಳಷ್ಟು ಇಂಟಿಮೇಟ್ ಫೋಟೋಗಳು ವೈರಲ್ ಆಗಿದ್ದವು.

ಟಿಫಾನಿ ಡೈಮಂಡ್ ರಿಂಗ್ ಕೊಟ್ಟು ಪ್ರಪೋಸ್

ಸುಕೇಶ್ ನಟಿಗೆ ಕೋಟಿ ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂದು ಇಡಿ ಬಹಿರಂಗಪಡಿಸಿದೆ. ಇದೀಗ ಇಡಿ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ಬೆಳಕಿಗೆ ಬಂದಿವೆ. ಜಾಕಲಿನ್ ಪ್ರಪೋಸ್ ಮಾಡಲು ಸುಕೇಶ್ ಟಿಫಾನಿ ಡೈಮಂಡ್ ರಿಂಗ್ ನೀಡಿದ್ದರು ಎಂದು ಇಡಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಜೆ & ಎಸ್ ಇನಿಶಿಯಲ್ ಆಗಿ ಇತ್ತು. ವರದಿಗಳ ಪ್ರಕಾರ ನಟಿ ಜಾಕಲಿನ್ ಫರ್ನಾಂಡಿಸ್ ಮೇಲೆ ಪ್ರಭಾವ ಬೀರಲು ಸುಕೇಶ್ ಅವರು ಗೃಹ ಸಚಿವರ ಹೆಸರನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ.

ಜಗಳ ಸರಿ ಮಾಡಿದ್ದಕ್ಕೆ ಪಿಂಕಿ ಇರಾನಿಗೆ 10 ಕೋಟಿ ನೀಡಿದ್ದ ಸುಕೇಶ್

ಜಾಕಲಿನ್ ತನ್ನನ್ನು ಪರಿಚಯಿಸಿಕೊಳ್ಳಲು ಪಿಂಕಿ ಇರಾನಿಯನ್ನೂ ಬಳಸಿಕೊಂಡಿದ್ದಾರೆ. ಇಬ್ಬರೂ ಸಾಕಷ್ಟು ಹತ್ತಿರವಾದ ನಂತರ, ಪ್ರೇಮಿಗಳ ದಿನದಂದು ಜಗಳವಾಡುತ್ತಿದ್ದರಿಂದ ತನ್ನ ಮತ್ತು ಜಾಕಲಿನ್ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪಿಂಕಿಗೆ 10 ಕೋಟಿ ರೂಪಾಯಿ ನೀಡಿದ್ದರು ಸುಕೇಶ್ ಚಂದ್ರಶೇಖರ್. ಆದಾದ ನಂತರ ಅವರು ಜಾಕಲಿನ್ ಅವರಿಗೆ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡುವ ಮೂಲಕ 'ಪ್ರಪೋಸ್' ಮಾಡಿದರು.

ಇದನ್ನೂ ಓದಿ: Jacqueline Fernandez: ಈ ಸಲ ಮುತ್ತು ಕೊಟ್ಟಿರೋದು ನಟಿ ಜಾಕಲಿನ್ ! ಏನು ಇವರ ಕತೆ?

ಜೈಲಿನಲ್ಲಿದ್ದುಕೊಂಡೇ ಮಾಸ್ಟರ್ ಪ್ಲಾನ್:

ಗಮನಾರ್ಹವಾಗಿ, ಪಿಂಕಿ ಇರಾನಿ ಅನೇಕ ನಟಿ/ಮಾಡೆಲ್‌ಗಳನ್ನು ಸುಕೇಶ್‌ಗೆ ಪರಿಚಯಿಸಲು ತಿಹಾರ್ ಜೈಲಿಗೆ ಕರೆದೊಯ್ದರು. ಇಡಿ ತನಿಖೆಯ ಸಮಯದಲ್ಲಿ, ಸುಖೇಶ್ ಚಂದ್ರಶೇಖರ್ ಅವರು ಪಿಂಕಿ ಮೂಲಕ ಪ್ರಭಾವ ಬೀರಲು ಪ್ರಯತ್ನಿಸಿದ ಇತರ ನಟಿಯರಲ್ಲಿ ಭೂಮಿ ಪೆಡ್ನೇಕರ್, ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಸೇರಿದ್ದಾರೆ ಎಂದು ತಿಳಿದುಬಂದಿದೆ.

ನಟಿಯರಿಗೆಲ್ಲಾ ಉಡುಗೊರೆಯ ಆಫರ್

ಅವರಲ್ಲಿ ಕೆಲವರು ದುಬಾರಿ ಉಡುಗೊರೆಗಳನ್ನು ಸ್ವೀಕರಿಸಲು ಒಪ್ಪಿಕೊಂಡರೆ, ಇತರರು ನಿರಾಕರಿಸಿದರು. ಏತನ್ಮಧ್ಯೆ, ಈ ಹಿಂದೆ ಸುಕೇಶ್ ತಮ್ಮ ಹೇಳಿಕೆಯಲ್ಲಿ ಜಾಕ್ವೆಲಿನ್ ಮತ್ತು ಇತರ ಬಿ-ಟೌನ್ ನಟಿಯರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಜಾಕಲಿನ್​ ಫರ್ನಾಂಡಿಸ್​ ಅಸಲಿ ಬಣ್ಣ ತೆರೆದಿಟ್ಟ ಸುಕೇಶ್​: ಏನೆಲ್ಲಾ ಗಿಫ್ಟ್​ ಕೊಟ್ಟಿದ್ದಾನಪ್ಪ..!

ನಾನು ಜಾಕಲಿನ್ ಜೊತೆ ಸಂಬಂಧ ಹೊಂದಿದ್ದೆ. ಅದಕ್ಕಾಗಿಯೇ ನಾನು ಅವರಿಗೆ ಉಡುಗೊರೆಗಳನ್ನು ನೀಡಿದ್ದೇನೆ. ಆಕೆಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನನ್ನ ಮಾನಹಾನಿ ಮತ್ತು ಸಮಾಜದಲ್ಲಿ ನನ್ನನ್ನು ಕೆಟ್ಟ ದೃಷ್ಟಿಯಲ್ಲಿ ಕಾಣುವಂತೆ ಮಾಡುವುದಲ್ಲದೆ ಬಾಲಿವುಡ್‌ನಲ್ಲಿರುವ ನನ್ನ ಎಲ್ಲ ಸ್ನೇಹಿತರನ್ನು ಗುರಿಯಾಗಿಸಲಾಗುತ್ತಿದೆ. ಇದರಿಂದ ನಾನು ಸಿನಿಮಾ ಸಂಬಂಧಿಸಿದ ವ್ಯವಹಾರವನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ ಸುಕೇಶ್.
Published by:Divya D
First published: