ಅಮಿತಾಭ್​ ಬಚ್ಚನ್ ಆರೋಗ್ಯದಲ್ಲಿ ಏರುಪೇರು; ಆತಂಕದಲ್ಲಿ ಅಭಿಮಾನಿಗಳು

Amitabh Bachchan Health: 1982ರಲ್ಲಿ ಕೂಲಿ ಸಿನಿಮಾದ ಶೂಟಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ಅಮಿತಾಭ್ ಬಚ್ಚನ್ ಅವರ ಲಿವರ್ ಶೇ. 75ರಷ್ಟು ಹಾನಿಯಾಗಿತ್ತು. ಅದಾದ ಬಳಿಕ ಅವರು ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ

news18-kannada
Updated:October 18, 2019, 9:41 AM IST
ಅಮಿತಾಭ್​ ಬಚ್ಚನ್ ಆರೋಗ್ಯದಲ್ಲಿ ಏರುಪೇರು; ಆತಂಕದಲ್ಲಿ ಅಭಿಮಾನಿಗಳು
ಬಾಲಿವುಡ್ ನಟ ಅಮಿತಾಬ್​​ ಬಚ್ಛನ್​​​​​​​​​​
  • Share this:
ಬಾಲಿವುಡ್ ಬಿಗ್​ಬಿ ಅಮಿತಾಭ್​ ಬಚ್ಚನ್ ಅವರಿಗೆ ಲಿವರ್ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅಮಿತಾಭ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇನ್ನು ಕೆಲವು ಮಾಧ್ಯಮಗಳು ಇದೊಂದು ಸುಳ್ಳು ಸುದ್ದಿ ಎಂದು ವರದಿ ಮಾಡಿವೆ.

ಈ ಬಗ್ಗೆ ವರದಿ ಮಾಡಿದ್ದ ಟೈಮ್ಸ್​ ಆಫ್​ ಇಂಡಿಯಾ ಪತ್ರಿಕೆ, 77 ವರ್ಷದ ಅಮಿತಾಭ್ ಬಚ್ಚನ್ ಅ. 15ರಿಂದ ಮುಂಬೈನ ಆಖಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅ. 15ರಂದು ಮಧ್ಯರಾತ್ರಿ 2 ಗಂಟೆಗೆ ಅವರನ್ನು ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಿದೆ.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅಮಿತಾಭ್ ಬಚ್ಚನ್ ಅವರಿಗೆ ವಿಶೇಷ ಕ್ಯಾಬಿನ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ನೋಡಲು ಆಪ್ತ ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಮಾಧ್ಯಮದವರಿಗೆ ಹೆಚ್ಚಿನ ಮಾಹಿತಿ ನೀಡಲು ಕುಟುಂಬಸ್ಥರು ನಿರಾಕರಿಸಿದ್ದಾರೆ ಎಂದು ವರದಿ ಮಾಡಿದೆ.

ಚಂದನ್-ನಿವೇದಿತಾ ಹಾದಿಯಲ್ಲಿ ಬಿಗ್​ಬಾಸ್​ನ ಈ ಜೋಡಿ; ಓಪನ್ ಆಗೇ ಫ್ಲರ್ಟ್ ಮಾಡ್ತಿದ್ರೂ ಅಣ್ಣ-ತಂಗಿಯಂತೆ!

ಆದರೆ, ಈ ಸುದ್ದಿಯನ್ನು ಅಲ್ಲಗಳೆದಿರುವ ಅಮರ್ ಉಜಾಲ ಎಂಬ ಪತ್ರಿಕೆ, ಇದೊಂದು ಕಾಲ್ಪನಿಕ ಸುದ್ದಿ. ಅಭಿಮಾನಿಗಳು ಗಾಬರಿಯಾಗುವ ಅಗತ್ಯವಿಲ್ಲ. ಅಮಿತಾಭ್ ಬಚ್ಚನ್ ಆರೋಗ್ಯವಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂಬ ಸುದ್ದಿ ಸುಳ್ಳು. ನಾನಾವತಿ ಆಸ್ಪತ್ರೆಗೆ ರೊಟೀನ್​ ಚೆಕಪ್​ಗೆಂದು ಹೋಗಿದ್ದ ಅಮಿತಾಭ್ ಬಚ್ಚನ್ ನಂತರ ಮನೆಗೆ ಮರಳಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದು ಇದಕ್ಕೆ ಸಾಕ್ಷಿ ಎಂದು ಹಿಂದಿ ಪತ್ರಿಕೆ ವರದಿ ಮಾಡಿದೆ.

ಬಿಗ್​ಬಾಸ್​ ಮನೆಯಲ್ಲಿದ್ದಾರೆ ಗಂಡ-ಹೆಂಡತಿ; ಕೊನೆಗೂ ರಿವೀಲ್ ಆಯ್ತು ಸೀಕ್ರೆಟ್

ಅ. 17ರಂದು ಅಮಿತಾಭ್ ಬಚ್ಚನ್ ತಮ್ಮ ಹೆಂತಡಿ ಜಯಾ ಬಚ್ಚನ್ ಜೊತೆಗಿನ ಹಳೇ ಫೋಟೋವೊಂದನ್ನು ಟ್ವೀಟ್ ಮಾಡಿಕೊಂಡಿದ್ದರು. ತಮ್ಮ ಫೋಟೋವನ್ನು ಅರ್ಧ ಕತ್ತರಿಸಿಕೊಂಡು ಪೋಸ್ಟ್​ ಮಾಡಿದ್ದ ಅಮಿತಾಭ್ 'ಈಕೆ ನನ್ನ ಅರ್ಧಾಂಗಿ' ಎಂದು ಕ್ಯಾಪ್ಷನ್ ನೀಡಿದ್ದರು. 1982ರಲ್ಲಿ ಕೂಲಿ ಸಿನಿಮಾದ ಶೂಟಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ಅಮಿತಾಭ್ ಬಚ್ಚನ್ ಅವರ ಲಿವರ್ ಶೇ. 75ರಷ್ಟು ಹಾನಿಯಾಗಿತ್ತು. ಅದಾದ ಬಳಿಕ ಅವರು ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಸದ್ಯಕ್ಕೆ ಅವರ ಆರೋಗ್ಯದ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.
First published:October 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading