Kichcha Sudeep: ಕಿಚ್ಚ ಸುದೀಪ್‌ ಅವಹೇಳನ ಮಾಡಿದ್ದವರ ವಿರುದ್ಧ ಸೈಬರ್‌ ಕ್ರೈಮ್‌ಗೆ ದೂರು!

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

  • Share this:
ಬೆಂಗಳೂರು: ಸ್ಯಾಂಡಲ್‌ವುಡ್‌ ನಟ (Sandalwood Actor), ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ (Social Media) ಅವಹೇಳನ ಮಾಡಿದ್ದಾರೆ ಅಂತ ಆರೋಪಿಸಿ ಇಬ್ಬರ ವಿರುದ್ಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ (Cyber Crime Police Station) ದೂರು ದಾಖಲಾಗಿದ್ದೆ. ಆನ್‌ಲೈನ್ ಗೇಮ್‌ (Online Game) ಜಾಹೀರಾತಿನಲ್ಲಿ (Advertisement) ಅಭಿನಯಿಸಿದ್ದನ್ನು ವಿರೋಧಿಸಿ ಚರಣ್ ಎಂಬ ಯುವಕ ಸುದೀಪ್ ಅವರನ್ನು ಬೈಯ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ (Video) ಹರಿ ಬಿಟ್ಟಿದ್ದ. ಮತ್ತೊಂದೆಡೆ ಲೇಖಕ (Writer) ಅಹೋರಾತ್ರ ಎಂಬುವರು ಕಿಚ್ಚ ಸುದೀಪ್ ವಿರುದ್ಧ ಅವಹೇಳನ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಚರಣ್ ಹಾಗೂ ಆಹೋರಾತ್ರ ವಿರುದ್ಧ ಸೈಬರ್ ಕ್ರೈಮ್ ಪೊಲೀಸರಿಗೆ ದೂರು (Compliant) ನೀಡಲಾಗಿದೆ.

ಸುದೀಪ್‌ ವಿರುದ್ಧ ಅವಹೇಳನ ಮಾಡಿದ್ದ ಅಹೋರಾತ್ರ

ಕಿಚ್ಚ ಸುದೀಪ್ ಅವರನ್ನು ಲೇಖಕ ಅಹೋರಾತ್ರ ಎನ್ನುವವರು ಅವಹೇಳನ ಮಾಡಿದ್ದರು. ಫೇಸ್‌ಬುಕ್ ಸೇರಿದಂತೆ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಸುದೀಪ್ ಅವರನ್ನು ನಿಂದಿಸಿ ವಿಡಿಯೋ ಮಾಡಿದ್ದರು. ಸುದೀಪ್, ಜೂಜಿನ ಜಾಹೀರಾತಿನಲ್ಲಿ ನಟಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಸುದೀಪ್ ಅವರನ್ನು ಬಂಧಿಸಬೇಕು ಎಂದು ಅಹೋರಾತ್ರ ಒತ್ತಾಯಿಸಿದ್ದರು. ಜೊತೆಗೆ ಸರಣಿ ವಿಡಿಯೋಗಳನ್ನು ಮಾಡಿ ಅವರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ್ದರು.

Kiccha Sudeep: ಮುಂದುವರೆದ ಕಿಚ್ಚನ ಸಮಾಜಮುಖಿ ಕಾರ್ಯ, ಈ ಬಾರಿ ಮಾಡಿರೋ ಸಹಾಯ ನೋಡಿದ್ರೆ ನಿಮಗೂ ಸ್ಫೂರ್ತಿ ಬರುತ್ತೆ!
ದೂರಿನ ಪ್ರತಿ


ಸುದೀಪ್‌ ವಿರುದ್ದ ಚರಣ್ ವಿಡಿಯೋ

ಇತ್ತೀಚಿಗೆ ಚರಣ್ ಎಂಬ ಯುವಕ ಕೂಡ ಸುದೀಪ್  ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ. ಸುದೀಪ್ ಅವರ ಜಾಹೀರಾತಿನಿಂದ ವ್ಯಕ್ತಿಯೊಬ್ಬ ತನ್ನ ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದ.

ಇದನ್ನೂ ಓದಿ: Kichha Sudeep: ಕಿಚ್ಚ ಸುದೀಪ್‌ ವಿರುದ್ಧ ಯುವಕನ ವಿಡಿಯೋ! ಇದು ಆಕ್ರೋಶವೋ? ಅವಹೇಳನವೋ?

ಇಬ್ಬರ ವಿರುದ್ಧವೂ ಸೈಬರ್‌ ಕ್ರೈಮ್‌ಗೆ ದೂರು

ಅಹೋರಾತ್ರ ಹಾಗೂ ಚರಣ್ ವರ್ತನೆಗೆ ಸುದೀಪ್ ಅಭಿಮಾನಿಗಳು ಹಾಗೂ ಸ್ಯಾಂಡಲ್​​​ವುಡ್ ಇತರ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಫಿಲ್ಮ್ ಚೇಂಬರ್ ಅಧ್ಯಕ್ಷ ಬಾ.ಮಾ. ಹರೀಶ್ ಅವರು ಇಬ್ಬರ ವಿರುದ್ಧ ಸೈಬರ್ ಕ್ರೈಂ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಸೈಬರ್‌ ಕ್ರೈಮ್‌ಗೆ ದೂರು


ದೂರಿನ ಪ್ರತಿಯಲ್ಲಿ ಏನಿದೆ?

ಫಿಲ್ಮ್ ಚೇಂಬರ್‌ ಅಧ್ಯಕ್ಷ ಬಾಮಾ ಹರೀಶ್ ನೀಡಿರುವ ದೂರಿನಲ್ಲಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಭಾರತೀಯ ಚಲನಚಿತ್ರರಂಗದ ಹೆಸರಾಂತ ಕಲಾವಿದ, ಕಿಚ್ಚ ಸುದೀಪ್ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಸುದೀಪ್ ವಿರುದ್ಧ ಅಹೋರಾತ್ರ ಹಾಗೂ ಚರಣ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ, ಅವಹೇಳನಕಾರಿ ಪದ ಬಳಕೆ ಮಾಡುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಸುದೀಪ್ ಅವರ ಘನತೆ, ಗೌರವಕ್ಕೆ ಚ್ಯುತಿ ತರುವ ಹೇಳಿಕೆ ನೀಡಿರುವುದು ಬೇಸರದ ಸಂಗತಿಯಾಗಿದೆ. ಇಂತಹ ಹೇಳಿಕೆಗಳಿಂದ ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಬಗ್ಗೆ ಸಾರ್ವಜನಿಕರಲ್ಲಿ ಇಲ್ಲಸಲ್ಲದ ಗೊಂದಲಕ್ಕೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ ಅಂತ ಬೇಸರ ವ್ಯಕ್ತಪಡಿಸಿದ್ದಾಳೆ.

ಇದನ್ನೂ ಓದಿ: Kiccha Sudeep: ಮುಂದುವರೆದ ಕಿಚ್ಚನ ಸಮಾಜಮುಖಿ ಕಾರ್ಯ, ಈ ಬಾರಿ ಮಾಡಿರೋ ಸಹಾಯ ನೋಡಿದ್ರೆ ನಿಮಗೂ ಸ್ಫೂರ್ತಿ ಬರುತ್ತೆ!

ಇಬ್ಬರ ವಿರುದ್ಧ ಕ್ರಮಕ್ಕೆ ಮನವಿ

“ತಾವು ದಯಮಾಡಿ ಅಹೋರಾತ್ರ ಹಾಗೂ ಚರಣ್, ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗಳುಳ್ಳ ವಿಡಿಯೋಗಳನ್ನು ತೆಗೆದುಹಾಕುವಂತೆ ವಿನಂತಿಸುತ್ತಾ, ಕಾನೂನು ಕ್ರಮ ಜರುಗಿಸಿ ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿಯ ಚ್ಯುತಿ ಬರದಂತೆ ಸಹಕರಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇವೆ” ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.
Published by:Annappa Achari
First published: