• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Salman Khan: ವಂಚನೆ ಪ್ರಕರಣ: ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​-ಸಹೋದರಿಗೆ ಸಮನ್ಸ್ ಜಾರಿ

Salman Khan: ವಂಚನೆ ಪ್ರಕರಣ: ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​-ಸಹೋದರಿಗೆ ಸಮನ್ಸ್ ಜಾರಿ

ಸಹೋದರಿ ಜತೆ ಸಲ್ಮಾನ್ ಖಾನ್​

ಸಹೋದರಿ ಜತೆ ಸಲ್ಮಾನ್ ಖಾನ್​

ಪದೇ ಪದೇ ವಿವಾದಗಳಿಂದಾಗಿ ಸುದ್ದಿಯಲ್ಲಿರುವ ಸಲ್ಮಾನ್ ಖಾನ್​ ಅವರ ವಿರುದ್ಧ ವಂಚನೆ ಪ್ರಕರಣವೊಂದು ದಾಖಲಾಗಿದೆ. ಇನ್ನು ಸಲ್ಮಾನ್ ಖಾನ್​, ಅವರ ಸಹೋದರಿ ಹಾಗೂ ಇತರೆ ಆರು ಮಂದಿಗೆ ಈಗ ಸಮನ್ಸ್​ ಜಾರಿ ಆಗಿದೆ.

  • Share this:

ಬಾಲಿವುಡ್​ ಬ್ಯಾಡ್ ಬಾಯ್​ ಸಲ್ಮಾನ್​ ಹೆಸರು ಅವರ ಸಿನಿಮಾಗಳಿಂದಾಗಿ ಹಾಗೂ ವಿವಾದಗಳಿಂದಾಗಿ ಹೆಚ್ಚಾಗಿ ಸುದ್ದಿಯಲ್ಲಿರುತ್ತದೆ. ಸಲ್ಮಾನ್ ಖಾನ್ ಹಾಗೂ ವಿವಾದಗಳಿಗೆ ಒಂದು ರೀತಿಯ ನಂಟು ಬೆಳೆದುಕೊಂಡಿರುವಂತಿದೆ. ಒಂದಲ್ಲಾಒಂದಲ್ಲಾ ಪ್ರಕರಣಗಳಿಂದಾಗಿ ಸಲ್ಮಾನ್​ ಖಾನ್ ಸುದ್ದಿಯಲ್ಲಿರುತ್ತಾರೆ. ಹೌದು, ಈಗಲೂ ಸಹ ಸಲ್ಮಾನ್ ಖಾನ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸದ್ದು ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೆ ಸಲ್ಮಾನ್​ ಹೆಸರು ಹೇಳಿಕೊಂಡು ಮಹಿಳೆಯೊಬ್ಬರಿಗೆ 12 ಲಕ್ಷ ವಂಚಿಸಿರುವ ಪ್ರಕರಣ ಜೋಧಪುರದಲ್ಲಿ ನಡೆದಿತ್ತು. ಈ ಪ್ರಕರಣದ ಸಂಬಂಧ ತನಿಖೆ ನಡೆಸುವಂತೆ ರಾಜಸ್ಥಾನದ ಹೈಕೋರ್ಟ್​ ಆದೇಶ ನೀಡಿತ್ತು. ಈಗ ಮತ್ತೊಂದು ವಂಚನೆ ಪರಕರಣದಲ್ಲಿ ಸಲ್ಮಾನ್ ಖಾನ್ ಅವರ ಸಹೋದರಿ ಸೇರಿದಂತೆ ಒಟ್ಟು ಎಂಟು ಮಂದಿಯ ಹೆಸರು ಕೇಳಿ ಬರುತ್ತಿದೆ.  


ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುವ ನಟ ಸಲ್ಮಾನ್​ ಖಾನ್​. ಅದಕ್ಕೆ ಇವರನ್ನು ಬ್ಯಾಡ್​ ಬಾಯ್​ ಆಫ್ ಬಾಲಿವುಡ್​ ಎನ್ನಲಾಗುತ್ತದೆ. ಸಲ್ಮಾನ್ ಖಾನ್​ ಅವರ ಹೆಸರು ಈಗ ವಂಚನೆ ಪ್ರಕರಣವೊಂದರಲ್ಲಿ ಕೇಳಿ ಬರುತ್ತಿದೆ. ಸಲ್ಮಾನ್ ಖಾನ್​ ಅವರ ಸಹೋದರಿ ಅಲ್ವಿರಾ ಖಾನ್​ ಹಾಗೂ ಇತರೆ ಆರು ಮಂದಿ ಇರುದ್ಧ ಚಂಡೀಗಡ ಪೊಲೀಸರು ಈ ಪ್ರಕರಕ್ಕೆ ಸಂಬಂಧಿಸಿದಂತೆ ಸಮನ್ಸ್​ ಜಾರಿ ಮಾಡಿದ್ದಾರೆ.


Radhe Piracy, Delhi High court, Radhe, OTT Ralease, Radhe Movie OTT Release, Bollywood, ರಾಧೆ ಸಿನಿಮಾ, ಸಲ್ಮಾನ್​ ಖಾನ್​, ರಾಧೆ ಸಿನಿಮಾ ಒಟಿಟಿ ರಿಲೀಸ್​, salman khan, salman farming, salman farming video, ms dhoni farming, dhoni in agriculture, dhoni organic farming, salman agriculture, ಸಲ್ಮಾನ್​ ಖಾನ್​, ಸುಶಾಂತ್ ಸಿಂಗ್​ ಆತ್ಮಹತ್ಯೆ, ಸಲ್ಮಾನ್​ ಖಾನ್​ ಟ್ರ್ಯಾಕ್ಟರ್​ ಓಡಿಸಿದ ವಿಡಿಯೋ, ಕೃಷಿ ಮಾಡುತ್ತಿರುವ ಸಲ್ಮಾನ್ ಖಾನ್​​, ಟ್ರೋಲಾದ ಸಲ್ಮಾನ್ ಖಾನ್​
ಸಲ್ಮಾನ್ ಖಾನ್​


ಸಲ್ಮಾನ್​ ಖಾನ್​ ಒಡೆತನದ ಬೀಯಿಂಗ್​ ಹ್ಯೂಮನ್​ ಮತ್ತು ಬೀಯಿಂಗ್​ ಹ್ಯೂಮನ್ ಜ್ಯುವೆಲ್ಲರಿ ವಿರುದ್ಧ ಉದ್ಯಮಿ ಅರುಣ್​ ಗುಪ್ತಾ ಎಂಬುವರು ವಂಚನೆ ಪ್ರಕರಣ ದಾಖಲಿಸಿದ್ದಾರೆ. ಬೀಯಿಂಗ್ ಹ್ಯೂಮನ್​ ಜ್ಯುವೆಲ್ಲರಿ ಬ್ರ್ಯಾಂಡ್​ ಅಡಿಯಲ್ಲಿ ಉದ್ಯಮಿ ಅರುಣ್​ ಗುಪ್ತಾ ಅವರು 2018ರಲ್ಲಿ ಒಂದು ಶಾಪ್​ ತೆರೆದಿದ್ದರು. ಈ ಅಂಗಡಿ ತೆರೆಯಲು 2-3 ಕೋಟಿ ಹಣ ಖರ್ಚು ಮಾಡಿದ್ದಾರಂತೆ ಅರುಣ್​ ಗುಪ್ತಾ. ಇನ್ನು ಶಾಪ್​ ತೆರೆಯುವ ಮುನ್ನ ಅರುಣ್​ ಗುಪ್ತಾ ಅವರಿಗೆ ಎಲ್ಲರ ರೀತಿಯಲ್ಲೂ ಸಹಕರಿಸುವುದಾಗಿ ಮಾತು ಕೊಟ್ಟಿದ್ದರಂತೆ ಜೊತೆಗೆ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವುದಾಗಿಯೂ ಹೇಳಿದ್ದರಂತೆ. ಆದರೆ ಈಗ ಆಡಿದ ಮಾತಿಗೆ ತಪ್ಪಿರುವ ಬೀಯಿಂಗ್ ಹ್ಯೂಮನ್​ ಜುವೆಲ್ಲರಿ ತಂಡದವರು ತಮ್ಮ ಶಾಪ್​ಗೆ ಸರಕುಗಳನ್ನೂ ಕೊಡುತ್ತಿಲ್ಲ ಎಂದು ಅರುಣ್​ ಗುಪ್ತಾ ಆರೋಪಿಸಿದ್ದಾರೆ.


ಇದನ್ನೂ ಓದಿ: ಎಡವಟ್ಟಿನ ಮೇಲೆ ಎಡವಟ್ಟು: ಮತ್ತೆ ಟ್ರೋಲ್​ ಆಗುತ್ತಿರುವ ಬಿಗ್​ ಬಾಸ್​ ಸ್ಪರ್ಧಿ ಕೆ ಪಿ ಅರವಿಂದ್


ತಮ್ಮ ಬ್ಯ್ರಾಂಡ್​ ಅನ್ನು ಖುದ್ದು ಸಲ್ಮಾನ್ ಖಾನ್ ಅವರೇ ಪ್ರಮೋಟ್ ಮಾಡುತ್ತಾರೆ ಹಾಗೂ ಅವರೇ ಶಾಪ್​ ಉದ್ಘಾಟನೆ ಮಾಡಲಿದ್ದಾರೆ ಎಂದು ಬೀಯಿಂಗ್ ಹ್ಯೂಮನ್​ ಜುವೆಲ್ಲರಿ ಅವರು ಮಾತು ಕೊಟ್ಟಿದ್ದರಂತೆ. ಅದೂ ಆಗಲಿಲ್ಲ. ಇತ್ತ ಶಾಪ್​ ತೆರೆದ ನಂತರ ಶಾಪ್​ಗೆ ಪೂರೈಸಬೇಕಾದ ವಸ್ತುಗಳನ್ನೂ ಕೊಡುತ್ತಿಲ್ಲವಂತೆ. ಈ ಬಗ್ಗೆ ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಅರುಣ್ ಗುಪ್ತಾ.


ಅರುಣ್​ ಗುಪ್ತಾ ಅವರು ನೀಡಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಲ್ಮಾನ್ ಖಾನ್, ಅವರ ಸಹೋದರಿ ಅಲ್ವಿರಾ ಖಾನ್​ ಹಾಗೂ ಇತರೆ ಆರು ಮಂದಿಗೆ ಚಂಡೀಗಡ ಪೊಲೀಸರು ಸಮನ್ಸ್​ ಜಾರಿ ಮಾಡಿದ್ದಾರೆ.


ಏನಿದು ಕುದುರೆ ಮಾರಾಟ ಪ್ರಕರಣ


ಸಲ್ಮಾನ್​ ಅವರು ತಮ್ಮ ತೋಟದ ಮನೆಯಲ್ಲಿ ಕುದುರೆಗಳನ್ನು ಸಾಕಿರುವ ವಿಷಯ ಗೊತ್ತೇ ಇದೆ.ಅವರು ಆಗಾಗ ತಮ್ಮ ಕುದುರೆಗಳೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.


ಇದನ್ನೂ ಓದಿ: Sanjjanaa Galrani: ಸಂಜನಾ ಗಲ್ರಾನಿ ಬೆನ್ನಿನ ಮೇಲೆ ಗಂಡ ಅಜೀಜ್ ಹೆಸರಿನ ಟ್ಯಾಟೂ: ವರ್ಷಗಳ ನಂತರ ರಿವೀಲ್​ ಮಾಡಿದ ನಟಿ..!


ಸಲ್ಮಾನ್​ ಅವರ ಜೊತೆಗಿರುವ ಕುದುರೆಯನ್ನು ಮಾರುವುದಾಗಿ ಹೇಳಿ ಮೂರು ಮಂದಿ ಮಹಿಳೆಯೊಬ್ಬರಿಗೆ 12 ಲಕ್ಷ ವಂಚಿಸಿದ್ದಾರೆ.ಈ ಸಂಬಂಧ ಈಗಾಗಲೇ ಜೋಧಪುರದಲ್ಲಿ ಪ್ರಕರಕಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್​ ಹೆಸರು ಇರುವುದರಿಂದ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ವಂಚನೆಗೊಳಗಾದವರು ರಾಜಸ್ಥಾನದ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.ಕುದುರೆ ಖರೀದಿಸಲು ಮಹಿಳೆ 11 ಲಕ್ಷದ ಚೆಕ್​ ಹಾಗೂ ಒಂದು ಲಕ್ಷ ನಗದು ನೀಡಿದ್ದು, ನಂತರ ಆರೋಪಿಗಳು ಕುದುರೆ ಕೊಡದೆ ಯಾಮಾರಿಸಿದ್ದಾರಂತೆ.


ಸಲ್ಮಾನ್​ ಖಾನ್​ ತಮ್ಮ ಕುದುರೆಯನ್ನು ಮಾರುತ್ತಿದ್ದು, ಅದನ್ನು ನೀವು ಖರೀದಿಸಿದ ನಂತರ ಮಾರಿದರೆ ಲಕ್ಷಗಟ್ಟಲೆ ಲಾಭ ಸಿಗುತ್ತದೆ ಎಂದು ಆರೋಪಿಗಳು ಸಲ್ಮಾನ್ ಜೊತೆಗಿರುವ ಕುದುರೆಯ ಫೋಟೋ ತೋರಿದ್ದರಂತೆ. ದಾಣಿ ಸಾಂಗರಿಯಾ ನಿವಾಸಿಯಾಗಿರುವ ವಂಚಿತ ಮಹಿಳೆ ಹೆಸರು ಸಂತೋಷ್​ ಬಾಟಿ. ವಂಚಿತರಾದ ನಿಭರ್ಯ್ ಸಿಂಗ್​, ರಾಜ್​ ಪ್ರೀತ್​ ಹಾಗೂ ಇತರರ ವಿರುದ್ಧ ಈಗ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

First published: