• Home
  • »
  • News
  • »
  • entertainment
  • »
  • Head Bush: ಪೊಲೀಸ್​ ಠಾಣೆ ಮೆಟ್ಟಿಲೇರಿದ ಹೆಡ್ ಬುಷ್ ವಿವಾದ; ಚಿತ್ರತಂಡದ ವಿರುದ್ಧ ದೂರು ಕೊಟ್ಟು ಬಜರಂಗ ದಳ, ವಿಶ್ವ ಹಿಂದೂ ಪರಿಷತ್​

Head Bush: ಪೊಲೀಸ್​ ಠಾಣೆ ಮೆಟ್ಟಿಲೇರಿದ ಹೆಡ್ ಬುಷ್ ವಿವಾದ; ಚಿತ್ರತಂಡದ ವಿರುದ್ಧ ದೂರು ಕೊಟ್ಟು ಬಜರಂಗ ದಳ, ವಿಶ್ವ ಹಿಂದೂ ಪರಿಷತ್​

ಹೆಡ್​ ಬುಷ್​ ತಂಡದ​ ವಿರುದ್ಧ ದೂರು

ಹೆಡ್​ ಬುಷ್​ ತಂಡದ​ ವಿರುದ್ಧ ದೂರು

ಹೆಡ್​ ಬುಷ್​ ಸಿನಿಮಾದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್​ ಮತ್ತು ಬಜರಂಗ ದಳದ ಕಾರ್ಯಕರ್ತರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ನಟ ಡಾಲಿ ಧನಂಜಯ್​ ಅಭಿನಯದ ‘ಹೆಡ್​ ಬುಷ್​’ (Head Bush) ಸಿನಿಮಾ ಅಕ್ಟೋಬರ್​ 21ರಂದು ತೆರೆ ಕಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಡಾನ್​ ಜಯರಾಜ್​ ಅವರ ಜೀವನದ ಕಥೆಯನ್ನು ಆಧರಿಸಿ ಈ ಸಿನಿಮಾ ತೆಗೆಯಲಾಗಿದೆ. ಈ ಸಿನಿಮಾದಲ್ಲಿರುವ ಕೆಲ ದೃಶ್ಯಗಳು ಇದೀಗ ವಿವಾದಕ್ಕೆ ಕಾರಣವಾಗಿದೆ. ವೀರಗಾಸೆ (Veeragase) ಕಲಾವಿದರ ಮೇಲೆ ಹಲ್ಲೆ ಮಾಡುವಂತಹ ದೃಶ್ಯಗಳು ಈ ಚಿತ್ರದಲ್ಲಿ ಇವೆ ಎಂಬ ಕಾರಣಕ್ಕೆ ಕೆಲವರು ಈ ಸಿನಿಮಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಕುರಿತಂತೆ ವಿಶ್ವ ಹಿಂದೂ ಪರಿಷತ್​ ಮತ್ತು ಬಜರಂಗ ದಳದ ಕಾರ್ಯಕರ್ತರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಚಿತ್ರತಂಡಕ್ಕೆ  ಸಂಕಷ್ಟ ಎದುರಾಗಿದೆ.



Dhananjay Starrer head bush Digital Rights sold to 22 Crores to zee Studio
ಸಾಂದರ್ಭಿಕ ಚಿತ್ರ


ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ಕೊಟ್ಟ ಧನಂಜಯ್​


ಹೆಡ್ ಬುಷ್ (Head Bush) ಸಿನಿಮಾದಲ್ಲಿ ವೀರಗಾಸೆಗೆ (Veeragase) ಅವಮಾನ ಮಾಡಲಾಗಿದೆ ಎನ್ನುವ ಆರೋಪದ ಬಗ್ಗೆ ಚಿತ್ರತಂಡ ಪ್ರೆಸ್ ಮೀಟ್ ಮಾಡಿ ಸ್ಪಷ್ಟನೆ ನೀಡಿದೆ. ಡಾಲಿ ಧನಂಜಯ್ (Daali  Dhananjay) ನಿರ್ದೇಶಿಸಿ ಅಭಿನಯಿಸಿದ ಸಿನಿಮಾದಲ್ಲಿ ಕರ್ನಾಟಕದ  ಹೆಮ್ಮೆಯ ಕಲೆ ವೀರಗಾಸೆಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ವಿವಾದ ಕುರಿತು ಚರ್ಚೆ ಹೆಚ್ಚಾಗುತ್ತಿದ್ದಂತೆ ನಟ ಡಾಲಿ ಧನಂಜಯ್ ಅವರು ಟ್ವೀಟ್ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈಗ ಮತ್ತೆ ಈ ವಿಚಾರದ ಬಗ್ಗೆ ಚಿತ್ರತಂಡ ಪ್ರೆಸ್​ಮೀಟ್  (Press Meet) ಮಾಡಿ ಸ್ಪಷ್ಟನೆ ಕೊಟ್ಟಿದೆ. ಈ ಸುದ್ದಿಗೋಷ್ಠಿಯಲ್ಲಿ ಡಾಲಿ ಧನಂಜಯ, ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು (Bengaluru) ಜಿಲ್ಲಾ ಅಧ್ಯಕ್ಷ ಎಸ್.ಗುರುಸ್ವಾಮಿ, ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ,ಚಕ್ರವರ್ತಿ ಚಂದ್ರಚೂಡ್ ಕೂಡಾ ಭಾಗಿಯಾಗಿದ್ರು.


ಕಾಣದ ಕೈಗಳು ನನ್ನ ವಿರುದ್ದ ಕೆಲಸ ಮಾಡ್ತಿವೆ


ಹೆಡ್ ಬುಷ್ ವಿವಾದದ ಬಗ್ಗೆ ಡಾಲಿ ಧನಂಜಯ ಮಾತನಾಡಿದ್ದಾರೆ. ಕೆಲವು ಕಿಡಿಗೇಡಿ ಕಾಣದ ಕೈಗಳು ನನ್ನ ವಿರುದ್ದ ಕೆಲಸ ಮಾಡುತ್ತಿವೆ. ನಾನು ಸಿನಿಮಾ ಮಾಡೋಕೆ ಬಂದಿದ್ದೇನೆ. ರಾಜಕೀಯ ಮಾಡೋಕೆ ಅಲ್ಲ. ಸಿನಿಮಾವನ್ನು ಸಿನಿಮಾ ರೀತಿ ನೋಡಿ ರಾಜಕೀಯ ಮಾಡಬೇಡಿ ಎಂದು ಅವರು ಹೇಳಿದ್ದಾರೆ.


complaint lodged against head bush team by vishwa hindu parishad and bajrang dal
ಹೆಡ್​ ಬುಷ್​ ತಂಡದ​ ವಿರುದ್ಧ ದೂರು


ವೀರಗಾಸೆಗೆ ನಾವು ಅಪಮಾನ ಮಾಡಿಲ್ಲ

 ಕರಗ, ವೀರಗಾಸೆಗೆ ನಾವು ಅಪಮಾನ ಮಾಡಿಲ್ಲ. ಸಿನಿಮಾ ಬಗ್ಗೆ ಎರಡು ಸಮುದಾಯದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರೆ ಒಂದು ಡೈಲಾಗ್ ಬಗ್ಗೆ ಕರಗ ಸಮಿತಿ ಬೇಸರ ವ್ಯಕ್ತಪಡಿಸಿದ್ದಾರೆ. ಈಗ ವೀರಭದ್ರ ಸ್ವಾಮಿ ಭಕ್ತರು ಹಾಗೂ ಕರಗ ಸಮಿತಿ ಅವರು ಬರುತ್ತಾರೆ. ಅವರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ. ನಾನು ಕೂಡ ಸಂಪ್ರದಾಯ ಪಾಲಿಸಿಕೊಂಡು ಬಂದ ಕುಟುಂಬದಿಂದ ಬಂದಿದ್ದೆನೆ ಎಂದು ಹೆಡ್ ಬುಷ್ ಚಿತ್ರದ ವಿವಾದದ ಬಗ್ಗೆ ಡಾಲಿ ಧನಂಜಯ ತಿಳಿಸಿದ್ದಾರೆ.





ಇದನ್ನೂ ಓದಿ: Gandhada Gudi: ಅಪ್ಪು ಸಮಾಧಿ ಬಳಿ ಫ್ಯಾನ್ಸ್, ಪುನೀತ್ ಕಟೌಟ್​ಗೆ ಪೂಜೆ ಸಲ್ಲಿಸಿದ ಮಗು


ಸಿನಿಮಾವನ್ನು ಸಿನಿಮಾ ಆಗಿ ನೋಡಿ


ಇನ್ನು ವಿವಾದ ಬಗ್ಗೆ ಚಿತ್ರತಂಡ ಪ್ರತಿಕ್ರಿಯಿಸಿ ಸಿನಿಮಾವನ್ನು ಸಿನಿಮಾ ಆಗಿ ನೋಡಿ. ಸೂಕ್ಷ್ಮವಾಗಿ ಸಿನಿಮಾವನ್ನು ನೋಡಿ. ಇದರಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿಲ್ಲ. ಬೇಕಿದ್ದರೆ ಸಿನಿಮಾ ತೋರಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Raveena Tandon: KGF ಖಡಕ್ ಪ್ರಧಾನಿ ರಮೀಕಾ ಬರ್ತ್​ಡೇ! ಹುಟ್ಟುಹಬ್ಬದ ಸಂಭ್ರಮದಲ್ಲಿ ರವೀನಾ


ವೀರಗಾಸೆ ಕಲಾವಿದರಿಗೆ ಮಾಸಾಶನ


ವೀರಗಾಸೆ ಉಳಿದ ಎಲ್ಲ ಕಲೆಗಳಂತಹ ಒಂದು ಕಲೆ. ಅದರ ಕಲಾವಿದರಿಗೆ ಕೂಡಾ ಮಾಸಾಶನ ಕೊಡಬೇಕು ಎಂದು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ ಎಂದು ಧನಂಜಯ್ ಕೇಳಿಕೊಂಡಿದ್ದಾರೆ.




Published by:ಪಾವನ ಎಚ್ ಎಸ್
First published: