Chandan Shetty: ಕೋಲುಮಂಡೆ ರೀಮಿಕ್ಸ್ ವಿವಾದ: ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ದ ದೂರು ದಾಖಲು..!

Kolu Mande Song: ಚಂದನ್​ ಶೆಟ್ಟಿ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾಗಿದೆ. ಕೋಲುಮಂಡೆ ಹಾಡನ್ನ ವಿಕೃತಗೊಳಿಸಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ, ಅಂತರಾಷ್ಟ್ರೀಯ ಕಂಸಾಳೆ ಮಹದೇವಯ್ಯ ಕಲಾಸಂಘದ ವತಿಯಿಂದ  ದೂರು ದಾಖಲಿಸಲಾಗಿದೆ. 

ಚಂದನ್​ ಶೆಟ್ಟಿ

ಚಂದನ್​ ಶೆಟ್ಟಿ

  • Share this:
ರ‍್ಯಾಪರ್ ಚಂದನ್ ಶೆಟ್ಟಿ ಇದೇ ತಿಂಗಳ 22 ರಂದ ಯೂಟ್ಯೂಬ್‌ನಲ್ಲಿ ಕೋಲು ಮಂಡೆ ಹಾಡು ಬಿಡುಗಡೆ ಮಾಡಿದ್ದರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬಿಡುಗಡೆಯಾದ ಮೂರು ದಿನಗಳಲ್ಲಿ 30 ಲಕ್ಷ ವೀಕ್ಷಣೆ ಪಡೆದುಕೊಂಡಿತ್ತು. ಆದರೆ ಈ ಹಾಡಿನಲ್ಲಿ ಶಿವಶರಣೆ ಸಂಕವ್ವ ಅವರ ಪಾತ್ರವನ್ನು ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ ಎಂದು ಮಲೆ ಮಹದೇಶ್ವರ ಸ್ವಾಮಿಯ ಭಕ್ತರು ಚಂದನ್​ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 

ಚಂದನ್​ ಶೆಟ್ಟಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೋಗೊಂಡಿದ್ದ ಭಕ್ತರು ಪೋಸ್ಟ್​ಗಳನ್ನು ಮಾಡುತ್ತಿದ್ದರು. ಇದರ ಬೆನ್ನಲ್ಲೇ ಚಂದನ್​ ಶೆಟ್ಟಿ ಭಕ್ತರ ಬಳಿ, ತಪ್ಪಾಗಿದೆ ಕ್ಷಮಿಸಿ ಎಂದು ವಿವಾದಕ್ಕೆ ತೆರೆ ಎಳೆದಿದ್ದರು. ಅಲ್ಲದೆ ಯೂಟ್ಯೂಬ್​ನಿಂದ  ಆ ಹಾಡನ್ನು ಡಿಲೀಟ್​ ಮಾಡಿಸಿದರು. ಈ ಹಾಡಿನ ಮರು ಚಿತ್ರೀಕರಣ ಮಾಡುವುದಾಗಿ ಹೇಳಿದ್ದರು. ಆದರೆ ಈ ವಿವಾದ ಇಷ್ಟಕ್ಕೆ ತಣ್ಣಗಾಗಿಲ್ಲ. ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇತ್ತು.

Rapper Chandan Shetty apologized and ended the new controversy regarding his new album Kolu mande song
ಕೋಲುಮಂಡೆ ಹಾಡಿನ ವಿವಾದ


ಹೌದು, ಚಂದನ್​ ಶೆಟ್ಟಿ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾಗಿದೆ. ಕೋಲುಮಂಡೆ ಹಾಡನ್ನ ವಿಕೃತಗೊಳಿಸಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ, ಅಂತರಾಷ್ಟ್ರೀಯ ಕಂಸಾಳೆ ಮಹದೇವಯ್ಯ ಕಲಾಸಂಘದ ವತಿಯಿಂದ  ದೂರು ದಾಖಲಿಸಲಾಗಿದೆ.

Complaint filed against Rapper Chandan Shetty in Mysuru regarding Kolu Mande song issue
ಚಂದನ್​ ಶೆಟ್ಟಿ ವಿರುದ್ಧ ದೂರು ದಾಖಲು


ಡಿಸಿಪಿ ಪ್ರಕಾಶ್ ಗೌಡ ರವರಿಗೆ ದೂರು ನೀಡಿರುವ ಕಂಸಾಳೆ ಕಲಾವಿದರಾದ ಕಂಸಾಳೆ ಕಲಾವಿದರು, ಈ ಹಾಡಿನ ಮರು ಚಿತ್ರೀಕರಣ ಸಹ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಜೊತೆಗೆ ಸೆನ್ಸಾರ್ ಮಂಡಳಿಗೂ ದೂರು ನೀಡಲು ನಿರ್ಧರಿಸಿದ್ದಾರೆ ಕಂಸಾಳೆ ಕಲಾವಿದರು. ಇನ್ನೇನು ಹಾಡು ಡಿಲೀಟ್ ಮಾಡಿದ ನಂತರ ಎಲ್ಲ ತಣ್ಣಗಾಯಿತು ಎಂದು ಚಂದನ್​ ಶೆಟ್ಟಿ ನೆಮ್ಮದಿಯ ನಿಟ್ಟುಸಿರು ಬಿಡುವಾಗಲೇ ಈ ದೂರು ದಾಖಲಾಗಿದೆ.
Published by:Anitha E
First published: