Serial Case: ಛೇ.. ಫೇಮಸ್​ ಸೀರಿಯಲ್​ನಲ್ಲೇ ಇದೆಂಥಾ ದೃಶ್ಯ: ತಂಡದ ವಿರುದ್ಧ ದೂರು ಕೊಟ್ಟ ಪ್ರೇಕ್ಷಕರು!

ತಮಿಳಿನ ಹೆಸರಾಂತ ‘ಭಾಗ್ಯಲಕ್ಷ್ಮೀ’ ಸೀರಿಯಲ್​ ವಿರುದ್ಧ ಚೆನ್ನೈ ಕಮಿಷನರ್​ ಕಚೇರಿ(Chennai Commissioner Office)ಯಲ್ಲಿ ದೂರು ದಾಖಲಾಗಿದೆ. ಈ ಧಾರಾವಾಹಿಯ ಪ್ರೋಮೋ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಪ್ರೋಮೋ(Promo) ನೋಡಿದ ಪ್ರೇಕ್ಷಕರು ಕೋಪಗೊಂಡಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿಯ ಕಲಾವಿದರು

ಭಾಗ್ಯಲಕ್ಷ್ಮೀ ಧಾರಾವಾಹಿಯ ಕಲಾವಿದರು

  • Share this:
ಧಾರಾವಾಹಿ(Serials) ಇರಲಿ, ಸಿನಿಮಾ(Movie) ಇರಲಿ, ಅದರಲ್ಲಿ ಜನರಿಗೆ ಸಂದೇಶ ಇರುತ್ತದೆ. ಹೀಗಾಗಿ ಜನರಿಗೆ ಮನರಂಜನೆ ಜೊತೆಗೆ ಸಂದೇಶ ನೀಡುವ ಕೆಲಸವನ್ನು ತಂಡದವರು ಮಾಡುತ್ತಾರೆ. ಅದರಲ್ಲೂ ಸೀರಿಯಲ್​ ಅಂದರೆ ಮಹಿಳೆ(Women)ಯರಿಗೆ ಅಚ್ಚುಮೆಚ್ಚು. ಯಾಕೆಂದರೆ ಸಾಮನ್ಯರ ಜೀವನಕ್ಕೆ ಧಾರಾವಾಹಿ ಕಥೆಯೂ ಹತ್ತಿರವಾಗಿರುತ್ತದೆ. ಕೆಲವೊಂದು ಸೀರಿಯಲ್​ಗಳು ಜನರ ಜೀವನದ ಜೊತೆ ಬೆರೆತು ಹೋಗಿರುತ್ತೆ. ಆದರೆ, ಇಲ್ಲೋಂದು ಸೀರಿಯಲ್​ ವಿರುದ್ಧ ದೂರು(Case) ದಾಖಲಾಗಿದೆ. ಜನಪ್ರಿಯ ಧಾರಾವಾಹಿಯಲ್ಲಿ ತೋರಿಸಲಾದ ಒಂದು ದೃಶ್ಯ(Scene)ದ ವಿರುದ್ಧ ಪ್ರೇಕ್ಷಕರು ಗರಂ ಆಗಿದ್ದಾರೆ. ಆ ಒಂದು ದೃಶ್ಯದ ವಿರುದ್ಧ ದೂರು ಸಹ ದಾಖಲಾಗಿದೆ. ನೀವೇ ಹೀಗೆ ತೋರಿಸಿದೆ ಹೇಗೆ ಎಂದು  ಪ್ರೇಕ್ಷಕರು(Audience) ಪ್ರಶ್ನೆ ಮಾಡುತ್ತಿದ್ದಾರೆ. ಹೌದು, ತಮಿಳಿನ ಹೆಸರಾಂತ ‘ಭಾಗ್ಯಲಕ್ಷ್ಮೀ’ ಸೀರಿಯಲ್​ ವಿರುದ್ಧ ಚೆನ್ನೈ ಕಮಿಷನರ್​ ಕಚೇರಿ(Chennai Commissioner Office)ಯಲ್ಲಿ ದೂರು ದಾಖಲಾಗಿದೆ. ಈ ಧಾರಾವಾಹಿಯ ಪ್ರೋಮೋ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಪ್ರೋಮೋ(Promo) ನೋಡಿದ ಪ್ರೇಕ್ಷಕರು ಕೋಪಗೊಂಡಿದ್ದಾರೆ. ಅಷ್ಟಕ್ಕೂ ಧಾರಾವಾಹಿಯಲ್ಲಿನ ಪ್ರೋಮೋ ನೋಡಿದವರು ಸಿಟ್ಟಾಗಿ ಪೊಲೀಸ್ ಕಮಿಷನರ್ ಆಫೀಸ್‌ನಲ್ಲಿ ದೂರು ನೀಡಿದ್ದು ಯಾಕೆ? ಆ ಧಾರಾವಾಹಿಯಲ್ಲಿ ಅಂತದ್ದು ಏನಿತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ಪ್ರೋಮೊದಲ್ಲಿರುವ ಸೂಸೈಡ್​ ದೃಶ್ಯ ತೆಗೆಯುವಂತೆ ದೂರು!

ಭಾಗ್ಯಲಕ್ಮೀ ಪ್ರೋಮೋದಲ್ಲಿ ಶಾಲೆಯಲ್ಲಿ ಹುಡುಗಿಗೆ ಟೀಚರ್ ಲೈಂಗಿಕ ದೌರ್ಜನ್ಯ ನೀಡುತ್ತಿದ್ದು, ಅದರಿಂದ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಹೀಗಾಗಿ ನಿರ್ದೇಶಕರು, ಧಾರಾವಾಹಿ ತಂಡದ ವಿರುದ್ಧ ದೂರು ದಾಖಲಿಸಲಾಗಿದೆ. ಈ ದೃಶ್ಯವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಲಾಗಿದೆ. ಇಂತಹ ದೃಶ್ಯಗಳನ್ನು ನೀವು ಟಿವಿಯಲ್ಲಿ  ಪ್ರಸಾರ ಮಾಡಿದರೆ ತಪ್ಪು ಸಂದೇಶ ನೀಡಿದಂತೆ. ಇದನ್ನು ಹಲವರು ಅನುಸರಿಸಲು ಮುಂದಾಗುತ್ತಾರೆ. ಅಮಾಯಕ ಜೀವಗಳ ಬಲಿಗೆ ನೀವು ಕಾರಣ ಆಗುತ್ತೀರ. ಧಾರಾವಾಹಿಗಳು ಜನರ ಜೀವನವನ್ನು ಬದಲಿಸುವಂತೆ ಇರಬೇಕು. ಜೀವನವನ್ನೇ ಮುಗಿಸಿಕೊಳ್ಳುವಂತೆ ಪ್ರೇರೆಪಿಸಬಾರದು ಎಂದು ಪ್ರೇಕ್ಷಕರು ಗರಂ ಆಗಿದ್ದಾರೆ.

ಇದನ್ನು ಓದಿ : ತಾಯಿಯಾಗ್ತಿದ್ದಾರೆ `ಮಗಧೀರ’ನ ಬೆಡಗಿ.. ಸಂತಸ ಹಂಚಿಕೊಂಡ ಕಾಜಲ್​ ಪತಿ ಗೌತಮ್​!

ಕನ್ನಡದ ‘ಇಂತಿ ನಿಮ್ಮ ಆಶಾ’ ಧಾರಾವಾಹಿ ರಿಮೇಕ್​!

ಕನ್ನಡದ 'ಇಂತಿ ನಿಮ್ಮ ಆಶಾ' ಧಾರಾವಾಹಿಯ ರಿಮೇಕ್ ಇದಾಗಿದ್ದು, ತೆಲುಗು, ಮರಾಠಿ, ಮಲಯಾಳಂನಲ್ಲಿಯೂ ಪ್ರಸಾರವಾಗುತ್ತಿದೆ. ಮಲಯಾಳಂನಲ್ಲಿ ಈ ಧಾರಾವಾಹಿ ಬಹಳ ಕಡಿಮೆ ಸಮಯದಲ್ಲಿ ನಂಬರ್ 1 ಸ್ಥಾನ ಪಡೆದಿದೆ.Telecom Regulatory Authority of India ಹಾಗೂ IBಗೆ ಈ ಕೇಸ್‌ನ್ನು ವರ್ಗಾವಣೆ ಮಾಡಲಾಗಿದೆ. ರೇಷ್ಮಾ ಪಸುಪಲೆಟಿ ( Reshma Pasupuleti ), ನೇಹಾ ಮೆನನ್, ಕೆ ಎಸ್ ಸುಚಿತ್ರಾ, ಪ್ರಿಯಾ, ರಿತಿಕಾ ತಮಿಳ್ ಸೆಲ್ವಿ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ತಮಿಳಿನ ವಿಜಯ ಟಿವಿಯಲ್ಲಿ 2020ರಿಂದ ಈ ಧಾರಾವಾಹಿ ಪ್ರಸಾರ ಆಗುತ್ತಲಿದೆ. ಶಿವ ಶೇಖರ್ ಈ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ. ಸುಚಿತ್ರಾ ಎಂಬುವವರು ಈ ಧಾರಾವಾಹಿಯಲ್ಲಿ ಭಾಗ್ಯಲಕ್ಷ್ಮೀ ಪಾತ್ರ ಮಾಡುತ್ತಿದ್ದಾರೆ.

ಇದನ್ನು ಓದಿ : ಅಂತೆ-ಕಂತೆಗಳಿಗೆ ಫುಲ್​ಸ್ಟಾಪ್​ ಇಟ್ಟ `ರಾಧೆ ಶ್ಯಾಮ್​’: ಹೇಳಿದ್​ ಡೇಟ್​ಗೆ ಸಿನಿಮಾ ರಿಲೀಸ್​!

ಪ್ರೇಕ್ಷಕರು ಕೇಳ್ತಿರೋದೇನು?

ಇತ್ತೀಚೆನ ದಿನಗಳಲ್ಲಿ ಸಿನಿಮಾಗಳಂತೆ ಧಾರಾವಾಹಿಗಳು ಅದ್ದೂರಿಯಾಗಿ ಪ್ರಸಾರ ಆಗುತ್ತಿವೆ, ಹಾಗೆಯೇ ಕಂಟೆಂಟ್ ಕೂಡ ಸ್ವಲ್ಪ ಬೋಲ್ಡ್ ಆಗಿರುತ್ತದೆ. ಮಕ್ಕಳು ಕೂಡ ಪಾಲಕರ ಜೊತೆ ಧಾರಾವಾಹಿ ನೋಡುವುದರಿಂದ ಅಶ್ಲೀಲ, ಅಸಭ್ಯವಾದ ರೀತಿಯಲ್ಲಿ ಎಪಿಸೋಡ್ ಇರಬಾರದು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಈ ರೀತಿಯ ಆತ್ಮಹತ್ಯೆಯ ದೃಶ್ಯಗಳನ್ನು ತೋರಿಸುವುದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎಂದು ಹೇಳಿದ್ದಾರೆ.
Published by:Vasudeva M
First published: