83 Movie: ಬಿಡುಗಡೆಗೂ ಮುನ್ನವೇ ರಣ್ವೀರ್-ದೀಪಿಕಾ ಚಿತ್ರದ ಮೇಲೆ ಕೇಸ್!

Deepika Padukone: ಚಿತ್ರ ನಿರ್ಮಾಣದ ಕಾರ್ಯವನ್ನು ವಿಳಂಬ ಮಾಡಿ, ಬೇರೆ ಬೇರೆ ಕಂಪೆನಿಗಳೊಂದಿಗೆ ಫೈನಾನ್ಸರ್​​ನ ಅನುಮತಿ ಇಲ್ಲದೆ ಒಪ್ಪಂದ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಹಣ ವಿನಿಯೋಗಿಸಲಾಗಿದೆ ಎಂದು ಫ್ಯೂಚರ್​ ರಿಸೋರ್ಸ್​​ನ ಕಂಪೆನಿ ದೂರು ದಾಖಲು ಮಾಡಿದೆ..ಚಿತ್ರದ ನಿರ್ಮಾಪಕರಾದ ಕಬೀರ್​ ಖಾನ್​, ಸಾಜಿದ್​ ನಾಡಿಡ್​ವಾಲ, ನಟಿ ದೀಪಿಕಾ ಪಡುಕೋಣೆ ಹಾಗೂ ಇನ್ನಿಬ್ಬರ ಮೇಲೆ ಪ್ರಕರಣ ದಾಖಲು ಮಾಡಿದೆ.

83 ಸಿನಿಮಾ

83 ಸಿನಿಮಾ

 • Share this:
  ಇದೆ 24ರಂದು ದೇಶಾದ್ಯಂತ(All Over India) ಭಾರತ ಮೊದಲ ವಿಶ್ವಕಪ್(World Cup) ಗೆದ್ದ ರೋಚಕ ಕಥೆಯುಳ್ಳ 83 ಸಿನಿಮಾ ಬಿಡುಗಡೆ ಆಗಬೇಕಿತ್ತು.. ಆದ್ರೆ ಸಿನಿಮಾ(Film) ಬಿಡುಗಡೆ ಆಗುವ ಮುನ್ನವೇ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.. ಚಿತ್ರತಂಡ ನಮಗೆ ವಂಚನೆ ಮಾಡಿದೆ ಎಂದು ಯುಎಇ(UAE) ಮೂಲದ ಹೂಡಿಕೆದಾರರೊಬ್ಬರು ಚಿತ್ರದ ನಿರ್ಮಾಪಕರ(Producer) ವಿರುದ್ಧ ಮುಂಬೈನ(Mumbai) ಅಂಧೇರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ(Court) ದೂರು ದಾಖಲಿಸಿರೋದು ಬಿಡುಗಡೆಗೂ ಮುನ್ನವೇ ಸಿನಿಮಾಗೆ ಸಂಕಷ್ಟ ತಂದೊಡ್ಡಿದೆ.

  ದೀಪಿಕಾ ಪಡುಕೋಣೆ ಮೇಲು ದಾಖಲಾಯಿತು ದೂರು..

  ತಮ್ಮ ಕಂಪೆನಿ 83 ಚಿತ್ರದ ನಿರ್ಮಾಣ ಸಂಸ್ಥೆ ವಿಬ್ರಿ ಮೀಡಿಯಾದಿಂದ ಉತ್ತಮ ರಿಟರ್ನ್ಸ್​​ನ ವಾಯ್ದೆಯ ಮೇರೆಗೆ ಚಿತ್ರದಲ್ಲಿ 16 ಕೋಟಿ ರೂ.ಗಳನ್ನು ಹೂಡಿದೆ. ಆದರೆ ಈವರೆಗೆ ತಮಗೆ ಹೇಳಿದಂತೆ ಯಾವುದೇ ಮೊತ್ತ ನೀಡಿಲ್ಲ. ಚಿತ್ರ ನಿರ್ಮಾಣದ ಕಾರ್ಯವನ್ನು ವಿಳಂಬ ಮಾಡಿ, ಬೇರೆ ಬೇರೆ ಕಂಪೆನಿಗಳೊಂದಿಗೆ ಫೈನಾನ್ಸರ್​​ನ ಅನುಮತಿ ಇಲ್ಲದೆ ಒಪ್ಪಂದ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಹಣ ವಿನಿಯೋಗಿಸಲಾಗಿದೆ ಎಂದು ಫ್ಯೂಚರ್​ ರಿಸೋರ್ಸ್​​ನ ಕಂಪೆನಿ ದೂರು ದಾಖಲು ಮಾಡಿದೆ..ಚಿತ್ರದ ನಿರ್ಮಾಪಕರಾದ ಕಬೀರ್​ ಖಾನ್​, ಸಾಜಿದ್​ ನಾಡಿಡ್​ವಾಲ, ನಟಿ ದೀಪಿಕಾ ಪಡುಕೋಣೆ ಹಾಗೂ ಇನ್ನಿಬ್ಬರ ಮೇಲೆ ಪ್ರಕರಣ ದಾಖಲು ಮಾಡಿದೆ.

  ಇದನ್ನೂ ಓದಿ: 83 ಸಿನಿಮಾದ ಟೀಸರ್ ಝಲಕ್ ಗೆ ಅಭಿಮಾನಿಗಳು ಫಿದಾ

  ಭಾರತದ ಮೊದಲ ವಿಶ್ವಕಪ್ ಗೆದ್ದ ಕಥೆಯಾಧಾರಿತ ಸಿನಿಮಾ..

  ಜೂನ್ 25, 1983. ಭಾರತ ಕ್ರಿಕೆಟ್​ ಪ್ರೇಮಿಗಳು ಎಂದು ಮರೆಯದ ದಿನ. ಅಂದು ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವ ಕಪ್ ಎತ್ತಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಅಂದಿನ ಕಾಲದಲ್ಲಿ ಕ್ರಿಕೆಟ್ ಸಾಮ್ರಾಜ್ಯವನ್ನಾಳುತ್ತಿದ್ದ ವಿಂಡೀಸ್ ​​​ತಂಡವನ್ನು ಸೋಲಿಸಿ, ಭಾರತ ತಂಡ ತನ್ನ ಮೊದಲ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.ಮೊದಲ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕರಾಗಿ ಕಪಿಲ್ ದೇವ್ ಅವರು ಇದ್ದರು.. 83 ಸಿನಿಮಾದಲ್ಲಿ ಕಪಿಲ್ ದೇವ್ ಅವರ ಜೀವನ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಇದ್ದ ಏಳುಬೀಳಿನ ಹಾದಿಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ

  83 ಸಿನಿಮಾದಲ್ಲಿ ರಣವೀರ ಪತ್ನಿಯಾಗಿ ದೀಪಿಕಾ ನಟನೆ

  ಇನ್ನು ನಿಜಜೀವನದಲ್ಲೂ ಗಂಡ-ಹೆಂಡತಿ ಆಗಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ 83 ಸಿನಿಮಾದಲ್ಲಿಯೂ ಸಹ ಗಂಡ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ.. 83 ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟನೆಯ ಮಾಡಿದ್ದಾರೆ. ಹೀಗಾಗಿ ಕಪಿಲ್ ದೇವ್ ಅವರ ಪತ್ನಿ ರೂಮಿ ದೇವ್ ಅವರ ಪಾತ್ರದಲ್ಲಿ ದೀಪಿಕಾ ಪಡುಕೋಣೆ ರನ್ವೀರ್ ಸಿಂಗ್ ಜೊತೆಗೆ ನಟನೆ ಮಾಡಿದ್ದಾರೆ..

  ಡಿಸೆಂಬರ್ 24ಕ್ಕೆ ಬಿಡುಗಡೆ ಆಗಬೇಕಿದ್ದ ಸಿನಿಮಾ..

  ಇನ್ನು ಸಿನಿಮಾ ತಂಡ ಕಳೆದ ಏಪ್ರಿಲ್ ನಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಿತ್ತು.. ಆದರೆ ಕೊರೋನಾ ಕಾರಣದಿಂದ ಸಿನಿಮಾ ಬಿಡುಗಡೆ ವಿಳಂಬವಾಗುತ್ತಾ ಬಂದಿತ್ತು.. ಆದರೆ ಈಗ ಡಿಸೆಂಬರ್ 24ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಕೆಲವು ದಿನಗಳ ಹಿಂದೆ ಚಿತ್ರತಂಡ ಘೋಷಣೆ ಮಾಡಿತ್ತು. ಅಲ್ಲದೆ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಮೂಲಕವೇ ಸಿನಿಮಾದ ಸಣ್ಣ ಸಣ್ಣ ಗ್ಲಿಮ್ಪಂಸ್ ನ್ನು ಅಭಿಮಾನಿಗಳಿಗೆ ಸಿನಿಮಾ ತಂಡ ನೀಡಿತ್ತು.ಇನ್ನು ಹಿಂದಿ , ತಮಿಳ , ತೆಲುಗು , ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ತೆರೆಕಾಣಲಿದೆ.

  ಇದನ್ನೂ ಓದಿ: ಬಹುತೇಕ ಬಾಲಿವುಡ್ ತಾರೆಯರು ತಮ್ಮ ಮದುವೆಗೆ ಸಬ್ಯಸಾಚಿ ಡಿಸೈನ್ ಮಾಡಿದ ಬಟ್ಟೆಗಳನ್ನೇ ಯಾಕೆ ಆಯ್ದುಕೊಳ್ತಾರೆ? ಇದರ ಹಿಂದಿದೆ ಇಂಟರೆಸ್ಟಿಂಗ್ ವಿಚಾರ

  ಇನ್ನು ಮೊದಲ ವಿಶ್ವಕಪ್ ಗೆದ್ದ ನಾಯಕ ಎಂದು ಖ್ಯಾತಿ ಪಡೆದಿರುವ ಕಪಿಲ್ ದೇವ್ ಪಾತ್ರದಲ್ಲಿ ರಣ್‌ವೀರ್ ಸಿಂಗ್ ಕಾಣಿಸಿಕೊಂಡ್ರೆ, ತಹೀರ್ ರಾಜ್‌ ಭಾಸಿನ್ ಅವರು ಸುನೀಲ್ ಗಾವಸ್ಕರ್ ಆಗಿ, ಕೃಷ್ಣಮಾಚಾರಿ ಶ್ರೀಕಾಂತ್ ಆಗಿ ಜೀವಾ, ಮೊಹೀಂದರ್ ಅಮರ್‌ನಾಥ್ ಆಗಿ ಸಾಕಿಬ್ ಸಲೀಮ್, ಸಂದೀಪ್ ಪಾಟೀಲ್ ಆಗಿ ಚಿರಾಗ್ ಪಾಟೀಲ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
  Published by:ranjumbkgowda1 ranjumbkgowda1
  First published: