ರಣವೀರ್ ಸಿಂಗ್ (Ranveer Singh) ಯಾವಾಗಲೂ ಒಂದೆಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಹೆಚ್ಚಾಗಿ ಅವರು ತಮ್ಮ ವಿಚಿತ್ರ ಬಟ್ಟೆಯ ಶೈಲಿಯ ಮೂಲಕ ಟ್ರೋಲ್ (Troll) ಆಗುತ್ತಾರೆ. ಇನ್ನು ಕಳೆದ ವಾರ ಮ್ಯಾಗಜೀನ್‌ಗಾಗಿ ನಗ್ನ ಫೋಟೋಶೂಟ್ (Photoshoot) ಮಾಡಿಸಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರು. ಕೆಲವು ಇದನ್ನು ಇಷ್ಟಪಟ್ಟರೆ, ಇನ್ನೂ ಕೆಲವರಿಗೆ ಇದು ಇಷ್ಟವಾದಂತಿಲ್ಲ. ಇದೀಗ ಈ ವಿಚಾರವಾಗಿ ನಟ ರಣವೀರ್ ಸಿಂಗ್ ವಿರುದ್ದ ಪ್ರಕರಣ (case) ದಾಖಲಾಗಿದೆ.
ರಣವೀರ್ ವಿರುದ್ದ ಪ್ರಕರಣ ದಾಖಲು
ಹೌದು, ನಗ್ನವಾಗಿ ಫೋಟೋಶೂಟ್ ಮಾಡಿಸಿದ್ದು ನಟ ರಣವೀರ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ನಗ್ನ ಫೋಟೋಗಳ ಮೂಲಕ ಮಹಿಳೆಯರ ಭಾವನೆಗಳನ್ನು ಧಕ್ಕೆತರುವ ಪ್ರಯತ್ನ ಎಂದು ಎಫ್‌ಐಆರ್ ದಾಖಲಿಸುವಂತೆ ಕೋರಿ ಮುಂಬೈ ಪೊಲೀಸರಿಗೆ ಸೋಮವಾರ ಅರ್ಜಿ ಸಲ್ಲಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಪೂರ್ವ ಮುಂಬೈ ಉಪನಗರದಲ್ಲಿರುವ ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಪದಾಧಿಕಾರಿಯೊಬ್ಬರು ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರಿನ ಅರ್ಜಿ ಸಲ್ಲಿಸಿದ್ದಾರೆ. ನಟ ತನ್ನ ಫೋಟೋಗಳ ಮೂಲಕ ಮಹಿಳೆಯರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ಅವರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಟನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರುದಾರರು ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ. ನಾವು ಸೋಮವಾರ ಎನ್‌ಜಿಒಗೆ ಸಂಬಂಧಿಸಿದ ವ್ಯಕ್ತಿಯಿಂದ ದೂರಿನ ಅರ್ಜಿಯನ್ನು ಸ್ವೀಕರಿಸಿದ್ದೇವೆ. ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫುಲ್ ವೈರಲ್ ಆಗಿದ್ದ ಬೆತ್ತಲೆ ಫೋಟೋ
ತನ್ನ ಫೋಟೋಶೂಟ್ ಮೂಲಕ, ರಣವೀರ್ ಸಿಂಗ್ ಅಮೇರಿಕನ್ ಪಾಪ್ ಸಂಸ್ಕೃತಿಯ ಐಕಾನ್ ಎಂದು ಕರೆಯಲ್ಪಡುವ ಹಿರಿಯ ನಟ ಬರ್ಟ್ ರೆನಾಲ್ಡ್ಸ್ ಅವರಿಗೆ ಗೌರವ ಸಲ್ಲಿಸಿದ್ದರು. ಮ್ಯಾಗಜೀನ್‌ಗಾಗಿ ಮಾಡಲಾದ ಈ ಫೋಟೋಶೂಟ್ನಲ್ಲಿ, ರಣವೀರ್ ಬೆತ್ತಲೆಯಾಗಿ ರಗ್ ಮೇಲೆ ಮಲಗಿರುವುದನ್ನು ಬರ್ಟ್ ರೆನಾಲ್ಡ್ಸ್ ಅವರ ಪ್ರಸಿದ್ಧ ಫೋಟೋವೊಂದನ್ನು ಮರುಸೃಷ್ಟಿಸಿದಂತೆ ಕಾಣುತ್ತಿದೆ.
ಇದನ್ನೂ ಓದಿ: ಟಾಪ್ ನಟಿಯರ ಲಿಸ್ಟ್ನಲ್ಲಿ ರಮ್ಯಾ, ಇವರೇ ಅಂತೆ ನಂಬರ್ ಒನ್ ಹೀರೋಯಿನ್
ರಣವೀರ್ ಬೆತ್ತಲೆ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ, ಈ ಫೋಟೋವನ್ನು ಬಳಸಿಕೊಂಡು ಹಲವಾರು ಟ್ರೋಲ್ ಹಾಗೂ ಮೀಮ್ಗಳನ್ನು ಸಹ ಮಾಡಲಾಗಿತ್ತು.
ರಣವೀರ್ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ ವಿಶೇಷ ರಣವೀರ್ vs ವೈಲ್ಡ್ ವಿತ್ ಬೇರ್ ಗ್ರಿಲ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಇತ್ತೀಚೆಗಷ್ಟೇ ಶಾರುಖ್ ಖಾನ್ ಅವರ ಮನ್ನತ್ ಬಳಿ ₹119ಮೌಲ್ಯದ ಆಸ್ತಿಯನ್ನು ಖರೀದಿಸಿ ಸಖತ್ ಸುದ್ದಿಯಲ್ಲಿದ್ದಾರೆ. ಇನ್ನು ರಣವೀರ್ ಸಿಂಗ್, ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂದಿನ ನಿರ್ದೇಶನದ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಪೂಜಾ ಹೆಗ್ಡೆ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. 2022 ರ ಸಮಯದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಕೊನೆಗೂ ಗಾಯಕ ಮಿಕಾ ಸಿಂಗ್ ಮದುವೆ ಫಿಕ್ಸ್, ಸ್ವಯಂವರದಲ್ಲಿ ಆಯ್ಕೆಯಾದ ಹುಡುಗಿ ಇವರೇ ನೋಡಿ!
ಇದಲ್ಲದೆ, ರಣವೀರ್ ಆಲಿಯಾ ಭಟ್, ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಅವರೊಂದಿಗೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಎನ್ನುವ ಸಿನಿಮಾವನ್ನು ಸಹ ಮಾಡುತ್ತಿದ್ದಾರೆ. ಚಿತ್ರವು ಫೆಬ್ರವರಿ 11, 2023 ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ