• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Aamir Khan: ಭಾರತೀಯ ಸೇನೆಗೆ ಆಮೀರ್​ ಖಾನ್​ ಅವಮಾನ? ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ವಿರುದ್ಧ ದೂರು ದಾಖಲು

Aamir Khan: ಭಾರತೀಯ ಸೇನೆಗೆ ಆಮೀರ್​ ಖಾನ್​ ಅವಮಾನ? ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ವಿರುದ್ಧ ದೂರು ದಾಖಲು

ಆಮೀರ್​ ಖಾನ್​

ಆಮೀರ್​ ಖಾನ್​

ಭಾರತೀಯ ಸೇನೆಗೆ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಅಲ್ಲದೇ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

  • Share this:

ನಟ ಆಮಿರ್​ ಖಾನ್ (Aamir Khan) ​ ಅಭಿನಯದ ಲಾಲ್​ ಸಿಂಗ್​ ಚಡ್ಡಾ ಆಗಸ್ಟ್​ 11ರಂದು ರಿಲೀಸ್​ ಆಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.  ಇದೀಗ ಚಿತ್ರದಲ್ಲಿನ ಒಂದಷ್ಟು ದೃಶ್ಯಗಳು ಜನರ ಕೆಂಗಣ್ಣಿಗೆ ಗುರಿಯಾಗಿವೆ.  ಭಾರತೀಯ ಸೇನೆಗೆ (Indian Army) ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಅಲ್ಲದೇ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಕೂಡ ಸಾಮಾಜಿಕ ಜಾಲತಾಣದಲ್ಲಿ (Social Media) ಆಕ್ರೋಶ ವ್ಯಕ್ತವಾಗಿದೆ.


ಭಾರತೀಯ ಸೇನೆಗೆ ಅವಮಾನ!?


ಲಾಲ್​ ಸಿಂಗ್​ ಚಡ್ಡಾ ಚಿತ್ರದ ಒಂದು ದೃಶ್ಯದಲ್ಲಿ ಆಮಿರ್ ಖಾನ್​ ಅವರು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನಸಿಕವಾಗಿ ಸಮರ್ಥವಲ್ಲದ ವ್ಯಕ್ತಿಯ ಪಾತ್ರ ಇದಾಗಿದ್ದು, ಅಂಥ ವ್ಯಕ್ತಿಗೆ ಭಾರತೀಯ ಸೇನೆಯಲ್ಲಿ ಕೆಲಸ ಸಿಗುತ್ತದೆಯೇ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಕಾರ್ಗಿಲ್​ ಯುದ್ಧದಲ್ಲಿ ಈ ರೀತಿಯ ವ್ಯಕ್ತಿ ಹೋರಾಡಿದ್ದ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಇದರಿಂದ ಭಾರತೀಯ ಸೇನೆಗೆ ಅವಮಾನ ಆಗಿದೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಲ್​ ಸಿಂಗ್​ ಚಡ್ಡಾ ಚಿತ್ರತಂಡದ ವಿರುದ್ಧ ದೂರು


ದೆಹಲಿ ಮೂಲದ ವಕೀಲ ವಿನೀತ್​ ಜಿಂದಾಲ್​ ಅವರು ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರತಂಡದ ವಿರುದ್ಧ ದೂರು ನೀಡಿದ್ದಾರೆ. ನಟ ಆಮಿರ್​ ಖಾನ್​, ನಿರ್ದೇಶಕ ಅದ್ವೈತ್​ ಚಂದನ್ ಹಾಗೂ ನಿರ್ಮಾಣ ಸಂಸ್ಥೆಯಾದ ‘ಪ್ಯಾರಮೌಂಟ್​ ಪಿಕ್ಚರ್ಸ್​’ ವಿರುದ್ಧ ದೂರು ನೀಡಲಾಗಿದೆ.


ಇದನ್ನೂ ಓದಿ;Aamir Khan: 'ಲಾಲ್​ ಸಿಂಗ್​ ಚಡ್ಡಾ‘ ಸಿನಿಮಾ ನೋಡಲು ಬರ್ತಿಲ್ವಂತೆ ಜನ; 1300 ಶೋಗಳು ರದ್ದು


‘ಕಾರ್ಗಿಲ್​ ಯುದ್ಧಕ್ಕಾಗಿ ಅತ್ಯುತ್ತಮ ಮತ್ತು ಸಮರ್ಥ ಸೈನಿಕರನ್ನು ಕಳಿಸಲಾಗಿತ್ತು. ಆದರೆ ಈ ಚಿತ್ರದಲ್ಲಿ ಮಾನಸಿಕ ಸ್ತಿಮಿತ ಇಲ್ಲದ ವ್ಯಕ್ತಿಯನ್ನು ಸೈನಿಕನ ಪಾತ್ರದಲ್ಲಿ ತೋರಿಸಲಾಗಿದೆ. ಇದರಿಂದ ಭಾರತೀಯ ಸೇನೆಯನ್ನು ಅವಮಾನಿಸಿದಂತೆ ಆಗಿದೆ’ ಎಂದು ದೂರಿನಲ್ಲಿ ಹೇಳಲಾಗಿದೆ.


ಈ ಸಿನಿಮಾದಲ್ಲಿ ಆಮಿರ್​ ಖಾನ್​ ಮತ್ತು ಕರೀನಾ ಕಪೂರ್​ ಖಾನ್​ ಜೋಡಿಯಾಗಿ ನಟಿಸಿದ್ದಾರೆ. ನಾಗ ಚೈತನ್ಯ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಮೊದಲ ದಿನ 11.70 ಕೋಟಿ ರೂಪಾಯಿ ಗಳಿಸುವಲ್ಲಿ ಈ ಚಿತ್ರ ಯಶಸ್ವಿ ಆಗಿತ್ತು. ಆದರೆ ಎರಡನೇ ದಿನ ಇದರ ಕಲೆಕ್ಷನ್​ ಗಣನೀಯವಾಗಿ ಕುಸಿದಿದೆ. ಶುಕ್ರವಾರ (ಆಗಸ್ಟ್​ 12) ಕೇವಲ 7.26 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.


ಕಂಗೆಟ್ಟ ಆಮೀರ್​ ಖಾನ್​


ಕಳೆದ 13 ವರ್ಷಗಳಲ್ಲಿ ಆಮೀರ್ ಖಾನ್‌ಗೆ ಇದು ಅತ್ಯಂತ ಕಳಪೆ ಓಪನಿಂಗ್ ಎಂದು ಬಾಲಿವುಡ್ ಹಂಗಾಮಾ ಹೇಳಿದೆ. ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಈ ಚಿತ್ರ ಟಾಮ್ ಹ್ಯಾಂಕ್ಸ್ ಅವರ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಇದಾಗಿದೆ. ಆಮೀರ್ ಅವರ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರ ಹಿಂದಿ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಫ್ಲಾಪ್ ಎಂದು ಪರಿಗಣಿಸಲಾಗಿದೆ. 2018 ರಲ್ಲಿ ಬಿಡುಗಡೆಯಾದ ಈ ಚಿತ್ರ ತನ್ನ ಆರಂಭಿಕ ದಿನದಲ್ಲಿ 52 ಕೋಟಿ ರೂ. ಗಳಿಸಿತು.


ಇದನ್ನೂ ಓದಿ: Aamir Khan: ನಟ ಆಮಿರ್ ತಮ್ಮ ಮಕ್ಕಳ ಜೊತೆ ಹೆಚ್ಚು ಸಮಯ ಕಳೆದಿಲ್ವಂತೆ, ಕಾರಣ ಕೇಳಿ


ಜನರ ನಿರೀಕ್ಷೆಯಲ್ಲಿ ಲಾಲ್ ಸಿಂಗ್ ಚಡ್ಡ


ಲಾಲ್ ಸಿಂಗ್ ಚಡ್ಡ' ಸಿನಿಮಾ ತಂಡ ಈಗ ವಾರಾಂತ್ಯದ ಕಲೆಕ್ಷನ್ ಮೇಲೆ ಕಣ್ಣಿಟ್ಟಿದೆ. ಸ್ವಾತಂತ್ರ್ಯೋತ್ಸವ ಸಹ ಇರುವ ಕಾರಣ ಸರಣಿ ರಜೆಗಳಿದ್ದು, ಈ ಸಮಯದಲ್ಲಿ ಹೆಚ್ಚು ಮಂದಿ ಮಲ್ಟಿಪ್ಲೆಕ್ಸ್‌ಗಳಿಗೆ ಬರಬಹುದೆನ್ನುವ ನಿರೀಕ್ಷೆ ಇದೆ.  ಸಿನಿಮಾದಲ್ಲಿ ಮುಗ್ಧ ಸಿಖ್ ಪಾತ್ರದಲ್ಲಿ ಆಮಿರ್ ಖಾನ್ ನಟಿಸಿದ್ದಾರೆ. ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ ಚಿತ್ರಕತೆ ಬರೆದಿರುವುದು ಅತುಲ್ ಕುಲಕರ್ಣಿ. ಸಂಗೀತ ನೀಡಿರುವುದು ಪ್ರೀತಮ್ ಮತ್ತು ತನುಜ್ ಟಿಕ್ಕು.

Published by:Pavana HS
First published: