ಟಾಲಿವುಡ್​ನಲ್ಲಿ ಸಾಯಿ ಪಲ್ಲವಿಯನ್ನು ಹಿಂದಿಕ್ಕಿದ ರಶ್ಮಿಕಾ; ತೆಲುಗಿನಲ್ಲಿ ನಂ.1ಸ್ಥಾನಕ್ಕೇರಲಿದ್ದಾರಾ ಕಿರಿಕ್​ ಬೆಡಗಿ?

news18
Updated:September 6, 2018, 7:25 PM IST
ಟಾಲಿವುಡ್​ನಲ್ಲಿ ಸಾಯಿ ಪಲ್ಲವಿಯನ್ನು ಹಿಂದಿಕ್ಕಿದ ರಶ್ಮಿಕಾ; ತೆಲುಗಿನಲ್ಲಿ ನಂ.1ಸ್ಥಾನಕ್ಕೇರಲಿದ್ದಾರಾ ಕಿರಿಕ್​ ಬೆಡಗಿ?
news18
Updated: September 6, 2018, 7:25 PM IST
ನ್ಯೂಸ್​ 18 ಕನ್ನಡ

ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣಗೆ ಟಾಲಿವುಡ್​ನಲ್ಲಿ ಈಗ ಎಲ್ಲಿಲ್ಲದ ಬೇಡಿಕೆ. ವಿಜಯ್​ ದೇವರಕೊಂಡ ಜೊತೆಗಿನ 'ಗೀತ ಗೋವಿಂದಂ' ಚಿತ್ರ ಸೂಪರ್​ ಹಿಟ್​ ಆದ ಬಳಿಕವಂತೂ  ತೆಲುಗು ಸಿನಿಮಾ ಅವಕಾಶಗಳು ಆಕೆಯನ್ನು ಅರಸಿ ಬರುತ್ತಿವೆ.

ತೆಲುಗಿನಲ್ಲಿ ಡೈಲಾಗ್​ ಹೊಡೆಯುತ್ತಾ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ರಶ್ಮಿಕಾ ಈಗ ಟಾಲಿವುಡ್​ನ ಹೊಸ ಕ್ರಶ್​ ಆಗಿದ್ದಾರೆ. ಗೀತ ಗೋವಿಂದಂ ಯಶಸ್ಸಿನ ಮೂಲಕ ತೆಲುಗು ನೆಲದಲ್ಲಿ ತಮ್ಮ ನೆಲೆ ಭದ್ರಪಡಿಸಿಕೊಂಡಿದ್ದಾರೆ.

ರಶ್ಮಿಕಾ ಟಾಲಿವುಡ್​ನಲ್ಲಿ ಬೆಳೆಯುತ್ತಿರುವುದನ್ನು ನೋಡಿದರೆ ನಂ 1ಸ್ಥಾನ ತಲುಪುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಈ ಹಿಂದೆ 'ಫಿದಾ' ಚಿತ್ರದ ಮೂಲಕ ತೆಲುಗು ಚಿತ್ರರಸಿಕರ ಮನ ಗೆದ್ದಿದ್ದ ಸಾಯಿ ಪಲ್ಲವಿಯನ್ನು ಹಿಂದಿಕ್ಕಿ, ಕಿರಿಕ್​ ಹುಡುಗಿ ಸಿನಿ ರಸಿಕರ ಮೇಲೆ ಮೋಡಿ ಮಾಡುತ್ತಿದ್ದಾರೆ,

ಇತ್ತೀಚಿನ ದಿನಗಳಲ್ಲಿ ತೆಲುಗಿನಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ನಟಿಯರೆಂದರೆ  ಸಾಯಿ ಪಲ್ಲವಿ ಹಾಗೂ ರಶ್ಮಿಕಾ.  ಆದರೆ  ಈಗ ಇವರಿಬ್ಬರಲ್ಲಿ ನಿರ್ದೇಶಕರ  ನೆಚ್ಚಿನ ನಾಯಕಿಯಾಗಿರುವುದು ಮಾತ್ರ ಕನ್ನಡದ ರಶ್ಮಿಕಾ. ಕಾರಣ, ರಶ್ಮಿಕಾ ಚಿತ್ರದಲ್ಲಿ ಸಣ್ಣ ಪಾತ್ರವಿದ್ದರೂ ಓಕೆ ಎನ್ನುತ್ತಾರೆ.  ಆದರೆ ಮಲಯಾಳಂ ನಟಿ ಸಾಯಿ ಪಲ್ಲವಿ ತೂಕದ ಪಾತ್ರವಿಲ್ಲದೇ ಚಿತ್ರವನ್ನು ಒಪ್ಪಿಕೊಳ್ಳುವುದಿಲ್ಲ.  ಇದರಿಂದ ಸಾಯಿ ಪಲ್ಲವಿಗೆ ಅವಕಾಶಗಳು ಕಡಿಮೆಯಾಗುತ್ತವೆ. ಇದರಿಂದ ಅದರ ಲಾಭವನ್ನು ರಶ್ಮಿಕಾ ಪಡೆದುಕೊಳ್ಳುತ್ತಿದ್ದಾರೆ

ಸದ್ಯ ತೆಲುಗು ಚಿತ್ರವನ್ನು ಆಳುತ್ತಿದ್ದ ನಟಿ ಸಮಂತಾ,  ಅಕ್ಕಿನೇನಿ ಕುಟುಂಬದ ಸೊಸೆಯಾದರೆ, ನಟಿ ಕಾಜಲ್​ , ತಮ್ಮನ್ನಾ ಆಗೊಮ್ಮೆ ಈಗೊಮ್ಮೆ ನಟಿಸಿದರೂ ಪ್ರೇಕ್ಷಕರಿಗೆ ಈ ಹಿಂದೆ ಇದ್ದಷ್ಟು ಕ್ರೇಜ್​ ಉಳಿಸಿಕೊಂಡಿಲ್ಲ. ಇನ್ನು ಅನುಷ್ಕಾ ಶೆಟ್ಟಿ ಚಿತ್ರಗಳೇ ವಿಭಿನ್ನ. ಇಂತಹ ಪರಿಸ್ಥಿತಿಯಲ್ಲಿ ಗ್ಲಾಮರಸ್​ ಗೊಂಬೆಗಿ ರಶ್ಮಿಕಾ ಟಾಲಿವುಡ್​ನಲ್ಲಿ ಟಾಪ್​ ಒನ್​ ಆದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ತೆಲುಗು ಮಂದಿ.

First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...