Actor Dwarakish: ಹಾಸ್ಯ ಕಲಾವಿದ ಹೀರೋ ಆದ್ರೆ ಚಿತ್ರ ಹಿಟ್, ಹೀರೋ ಕಾಮಿಡಿ ಮಾಡಿದ್ರೆ ಸೂಪರ್ ಡೂಪರ್ ಹಿಟ್!

ಒಬ್ಬ ಹಾಸ್ಯ ಕಲಾವಿದ ಹೀರೋ ಆಗಿ ಮಾಡಿದ್ರೆ ಚಿತ್ರ ಹಿಟ್-ಹೀರೋನೆ ಕಾಮಿಡಿ ಮಾಡಿದ್ರೆ ಸಿನಿಮಾ ಸೂಪರ್ ಡೂಪರ್ ಹಿಟ್ ಎಂದು ಗುರು ಶಿಷ್ಯರು ಸಿನಿಮಾದ ಟ್ರೈಲರ್ ಇವೆಂಟ್​ ನಲ್ಲಿ ದ್ವಾರಕೀಶ್ ಹೇಳಿದ್ದಾರೆ.

ದ್ವಾರಕೀಶ್

ದ್ವಾರಕೀಶ್

  • Share this:
ಒಬ್ಬ ಹಾಸ್ಯ ಕಲಾವಿದ (Comedy Actor) ಹೀರೋ ಆಗಿ ಮಾಡಿದ್ರೆ ಸಿನಿಮಾ ಸೂಪರ್ ಹಿಟ್ (Super Hit) ಆಗುತ್ತದೆ. ಒಬ್ಬ ಹೀರೋ ಕಾಮಿಡಿ ಮಾಡಿದ್ರೆ, ಆ ಸಿನಿಮಾ ಸೂಪರ್ ಡೂಪರ್ (Super Duper Hit) ಹಿಟ್ ಆಗುತ್ತದೆ. ಇದು ಸತ್ಯವಾದ ಮಾತು. ಇದನ್ನ ನಾವು ಹೇಳುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಹಾಸ್ಯದ ಮೂಲಕ, ಸಿನಿಮಾ (Cinema) ನಿರ್ಮಾಣ ಮೂಲಕ ತಮ್ಮದೇ ಛಾಪು ಮೂಡಿಸಿರೋ ಹಿರಿಯ ಕಲಾವಿದ ದ್ವಾರಕೀಶ್ (Dwarakish) ಹೇಳಿದರು. ಹೀಗೆ ಹೇಳಲು ಒಂದು ಬಲವಾದ ಕಾರಣವೂ ಇತ್ತು. ಆ ಕಾರಣದ ಹೆಸರು ಗುರು ಶಿಷ್ಯರು. ಶರಣ್ ಅಭಿನಯದ ಗುರು ಶಿಷ್ಯರು ಸಿನಿಮಾದ ಟ್ರೈಲರ್ ರಿಲೀಸ್ (Trailer Release) ಇವೆಂಟ್​ ನಲ್ಲಿ ದ್ವಾರಕೀಶ್ ಇನ್ನು ಸಾಕಷ್ಟು ಮಾತನಾಡಿದ್ದಾರೆ. ಅದರ ಡೀಟೆಲ್ಸ್ ಇಲ್ಲಿದೆ.

ಗುರು ಶಿಷ್ಯರು ಸಿನಿಮಾ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಹಾಸ್ಯ ನಾಯಕ ನಟ ಶರಣ್ ನಟಿಸಿದ್ದಾರೆ. ಒಬ್ಬ ಹಾಸ್ಯ ಕಲಾವಿದನಾಗಿಯೂ ಇಲ್ಲಿ ಹಾಸ್ಯ ಚೌಕಟ್ಟಿನಲ್ಲಿಯೇ ಹೀರೋಯಿಸಂ ಪ್ರದರ್ಶನ ಮಾಡಿದ್ದಾರೆ. ಗುರು ಶಿಷ್ಯರು ಅನ್ನೋ ಈ ಕ್ಲಾಸಿಕ್ ಟೈಟಲ್ ಇಟ್ಟುಕೊಂಡು ಪ್ರೇಕ್ಷಕರನ್ನ ಹಾಸ್ಯದ ಹೊನಲಲ್ಲಿ ತೇಲಿಸೋದ್ರ ಜೊತೆಗೆ ಕ್ರೀಡಾಧಾರಿತ ಕಥೆಯನ್ನೂ ಹೇಳೋಕೆ ಶರಣ್ ಇಲ್ಲಿ ಬರ್ತಿದ್ದಾರೆ.

ಗುರು ಶಿಷ್ಯರು ಟ್ರೈಲರ್ ರಿಲೀಸ್ ಇವೆಂಟ್​ ನಲ್ಲಿ ಕನ್ನಡದ ಕುಳ್ಳ ದ್ವಾರಕೀಶ್

ಗುರು ಶಿಷ್ಯರು ಟ್ರೈಲರ್ ರಿಲೀಸ್ ಇವೆಂಟ್​ ನಲ್ಲಿ ಕನ್ನಡದ ಕುಳ್ಳ ಹಿರಿಯ ಕಲಾವಿದ-ನಿರ್ಮಾಪಕ ದ್ವಾರಕೀಶ್ ಕೂಡ ಬಂದಿದ್ದರು. ಇವರು ಬಂದು ಇಲ್ಲಿ ತಮ್ಮದೇ ಶೈಲಿಯಲ್ಲಿ ಮಾತನಾಡಿದರು.

ಒಬ್ಬ ಹಾಸ್ಯ ಕಲಾವಿದ ಹೀರೋ ಆದರೆ ಸಿನಿಮಾ ಸೂಪರ್ ಹಿಟ್

ಹಾಸ್ಯ ಕಲೆ ಮತ್ತು ಅದರ ರೀಚ್ ಬಗ್ಗೆ ತುಂಬಾನೇ ತಿಳಿದುಕೊಂಡಿರೋ ಹಿರಿಯ ನಟ ದ್ವಾರಕೀಶ್ ಅವ್ರು, ಹಾಸ್ಯ ಕಲಾವಿದ ಹೀರೋ ಆದ್ರೆ ಸಿನಿಮಾ ಸೂಪರ್ ಹಿಟ್ ಆಗುತ್ತದೆ. ಅದೇ ಹಾಸ್ಯವನ್ನ ಒಬ್ಬ ಹೀರೋ ಮಾಡಿದರೆ, ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತದೆ ಎಂದು ತಮ್ಮ ಅನುಭವದ ಮಾತುಗಳನ್ನ ಗುರು ಶಿಷ್ಯರು ಟ್ರೈಲರ್ ರಿಲೀಸ್ ಇವೆಂಟ್​ ನಲ್ಲಿ ದ್ವಾರಕೀಶ್ ಆಡಿದ್ದಾರೆ.

ಇದನ್ನೂ ಓದಿ: ಗಣೇಶ ವಿಸರ್ಜನೆಯಲ್ಲಿ ಅಲ್ಲು ಅರ್ಜುನ್ ಸಖತ್ ಡ್ಯಾನ್ಸ್; ಮಗಳನ್ನು ಎತ್ತಿಕೊಂಡು ಕುಣಿದಾಡಿದ ಬನ್ನಿ!

ಆ ದಿನಗಳನ್ನ ನೆನಪಿಸಿಕೊಂಡ ಹಿರಿಯ ನಟ ದ್ವಾರಕೀಶ್

ಡಾಕ್ಟರ್ ರಾಜಕುಮಾರ್ ಜೊತೆಗೆ 58 ಸಿನಿಮಾ ಮಾಡಿದ್ದೇನೆ. ಮೇಯರ್ ಮುತ್ತಣ್ಣ, ಅಣ್ಣತಂಗಿ, ಹೀಗೆ ಹಲವು ಸಿನಿಮಾಗಳಲ್ಲಿ ಕಾಮಿಡಿ ಮಾಡಿದ್ದೇನೆ.ಇವೆಲ್ಲವೂ ಸೂಪರ್ ಹಿಟ್ ಆಗಿವೆ. ನಮ್ಮ ಸಿನಿಮಾಗಳು ಅಂದು 25 ವಾರ ಓಡುತ್ತಿದ್ದವು. ಈ ಹಾಸ್ಯಮಯ ಸಿನಿಮಾ 100 ದಿನ ಓಡೋದಿಲ್ವೇ ಅಂತಲೇ ಭರವಸೆಯ ಮಾತುಗಳನ್ನೂ ದ್ವಾರಕೀಶ್ ಹೇಳಿದ್ದಾರೆ.

ಹೀಗೆ ಗುರು ಶಿಷ್ಯರು ಸಿನಿಮಾಗೆ ಶುಭ ಹಾರೈಸಿದ ದ್ವಾರಕೀಶ್ ಅವ್ರು, ತರುಣ್ ಸುಧೀರ್ ತುಂಬಾ ಬುದ್ದಿವಂತ ಹುಡುಗ,ನನ್ನ ಬ್ಯಾನರ್​ ನಲ್ಲಿ ಸೂಪರ್ ಹಿಟ್ ಚೌಕ ಸಿನಿಮಾ ಕೊಟ್ಟಿದ್ದಾನೆ. ಈಗ ಗುರು ಶಿಷ್ಯರು ಸಿನಿಮಾ ಮಾಡಿದ್ದಾನೆ. ಇದು ಸೂಪರ್ ಹಿಟ್ ಆಗಲಿ ಅಂತಲೇ ದ್ವಾರಕೀಶ್ ವಿಶ್ ಮಾಡಿದ್ದಾರೆ.

ಇದನ್ನೂ ಓದಿ: ಎಷ್ಟು ಚಂದ ಕಾಣ್ತಾರೆ ನೋಡಿ ರಮ್ಯಾ! ಪ್ಲೀಸ್ ಮೂವಿ ಮಾಡಿ ಅಂತಿದ್ದಾರೆ ಫ್ಯಾನ್ಸ್

ಗುರು ಶಿಷ್ಯರು ಸಿನಿಮಾದ ಟ್ರೈಲರ್ ಇವೆಂಟ್​ ನಲ್ಲಿ ಸಾಕಷ್ಟು ವಿಶೇಷತೆಗಳು ನಡೆದಿವೆ. ಹಿರಿಯ ಕಲಾವಿದರಿಗೆ ಇಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಹಿರಿಯ ನಟ ದ್ವಾರಕೀಶ್ ಸೇರಿದಂತೆ ಹಿರಿಯ ನಟ ಉಮೇಶ್ ಅವರನ್ನೂ ಸನ್ಮಾನಿಸಲಾಗಿದೆ. ಒಂದು ರೀತಿ ಗುರು ಶಿಷ್ಯರು ವೇದಿಕೆ ಹಿರಿಯ ಕಲಾವಿದರ ಮತ್ತು ಕಿರಿಯ ಕಲಾವಿದರು ಅವರ ಮಕ್ಕಳ ಸಮಾಗಮದ ವೇದಿಕೆಯಂತೆ ಕಂಗೊಳಿಸಿದೆ.
First published: