Avatara Purusha:ಸಂಕ್ರಾಂತಿಗೆ `ಅವತಾರ ಪುರುಷ’ನ ದರ್ಶನ: ಬಿಗ್ ಬಜೆಟ್​ ಸಿನಿಮಾಗಳಿಗೆ ಸೆಡ್ಡು ಹೊಡೆದ ಸಿಂಪಲ್​ ಸುನಿ!

ಈ ಸಿನಿಮಾದಲ್ಲಿ ಶರಣ್ ಬರೋಬ್ಬರಿ 10 ಅವತಾರವೆತ್ತಿದ್ದಾರೆ. ಶರಣ್‌ ಚಿತ್ರಗಳು ಅಂದರೆ ಅಲ್ಲಿ ನಗುವಿಗೇನು ಕಡಿಮೆ ಇರುವುದಿಲ್ಲ. ಅದರಲ್ಲೂ ನಿರ್ದೇಶಕ ಸಿಂಪಲ್‌ ಸುನಿ ನಿರ್ದೇಶನ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. 

ಶ್ರೀನಗರ ಕಿಟ್ಟಿ, ಶರಣ್​, ಆಶಿಕಾ

ಶ್ರೀನಗರ ಕಿಟ್ಟಿ, ಶರಣ್​, ಆಶಿಕಾ

  • Share this:
‘ಸಖತ್’​(Sakath) ಸಕ್ಸಸ್​ ಅಲೆಯಲ್ಲಿ ನಿರ್ದೇಶಕ ಸಿಂಪಲ್ ಸುನಿ(Simple Suni) ಇದ್ದಾರೆ. ಗೋಲ್ಡನ್​ ಸ್ಟಾರ್​ ಗಣೇಶ್(Golden Star Ganesh)​ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ‘ಸಖತ್​​’ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಸಿಂಪಲ್​ ಸುನಿ ಆ್ಯಕ್ಷನ್​ ಕಟ್​ ಹೇಳಿದ್ದರು. ಸಿನಿಮಾ ಬಾಕ್ಸಾಫೀಸ್​ನಲ್ಲಿ ಕಮಾಲ್​ ಮಾಡಿದೆ. ಇತ್ತೀಚಿಗೆ ಸಿನಿಮಾ ತಂಡ ಸಕ್ಸಸ್​ ಮೀಟ್(Success Meet)ಸಹ ಮಾಡಿತ್ತು. ಇನ್ನೂ ನಿರ್ದೇಶಕ ಸಿಂಪಲ್​ ಸುನಿ ಅವರ ಮತ್ತೊಂದು ಚಿತ್ರ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಡಿಸೆಂಬರ್​ ತಿಂಗಳಿನಲ್ಲೇ ಈ ಸಿನಿಮಾ ಕೂಡ ತೆರೆಗೆ ಬರಬೇಕಿತ್ತು. ಕಾರಣಾಂತರದಿಂದ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.ಇದೀಗ ಸಂಕ್ರಾತಿ ಹಬ್ಬಕ್ಕೆ ‘ಅವತಾರ ಪುರುಷ’(Avatara Purusha) ದರ್ಶನ ನೀಡುವುದು ಖಚಿತವಾಗಿದೆ. ನಟ ಕಾಮಿಡಿ ಕಿಂಗ್‌ ಶರಣ್(Comedy King Sharan) ‘ಅವತಾರ ಪುರುಷ’ನಾಗಿ ಹೊಸ ಅವತಾರ ತಾಳಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಹಾಗೂ ಟೀಸರ್‌ನಿಂದ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಶರಣ್ ಬರೋಬ್ಬರಿ 10 ಅವತಾರವೆತ್ತಿದ್ದಾರೆ. ಶರಣ್‌ ಚಿತ್ರಗಳು ಅಂದರೆ ಅಲ್ಲಿ ನಗುವಿಗೇನು ಕಡಿಮೆ ಇರುವುದಿಲ್ಲ. ಅದರಲ್ಲೂ ನಿರ್ದೇಶಕ ಸಿಂಪಲ್‌ ಸುನಿ ನಿರ್ದೇಶನ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. 

ಸಂಕ್ರಾಂತಿಗೆ ‘ಅವತಾರ ಪುರುಷ’ನ ದರ್ಶನ!

ಇದೇ ವರ್ಷ ಡಿಸೆಂಬರ್ 10 ರಂದು ಶರಣ್ 10 ಅವತಾರಗಳಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಬೇಕಿತ್ತು. ಆದರೆ ಅದು ಸಾಧ್ಯ ಆಗಿಲ್ಲ. ಕೆಲ ಕಾರಣದಿಂದ ಚಿತ್ರದ ರಿಲೀಸ್ ಮುಂದೆ ಹೋಗಿತ್ತು. ಇದೀಗ'ಅವತಾರ ಪುರುಷ' ಚಿತ್ರ ಮುಂದಿನ ವರ್ಷ 2022ರ ಸಂಕ್ರಾಂತಿಗೆ ರಿಲೀಸ್‌ ಮಾಡುವ ಯೋಜನೆಯಲ್ಲಿದೆ. ಆದರೆ ದಿನಾಂಕವನ್ನು ಇನ್ನು ಬಹಿರಂಗ ಪಡಿಸಿಲ್ಲ. ಸಂಕ್ರಾಂತಿಗೆ ಸಿನಿಮಾ ರಿಲೀಸ್​ ಮಾಡುವುದಾಗಿ ಚಿತ್ರಂಡ ಹೇಳಿದೆ. ಚಿತ್ರಮಂದಿರಗಳ ಲಭ್ಯ  ನೋಡಿಕೊಂಡು ಡೇಟ್​ ಅನೌನ್ಸ್​ ಮಾಡುವುದಾಗಿ ಚಿತ್ರತಂಡ ಹೇಳಿದೆ. ಇನ್ನೂ ಈಗಾಗಲೇ ಈ ಸಿನಿಮಾದ ಟೀಸರ್​​ನಿಂದ ಭಾರೀ ನಿರೀಕ್ಷೆ ಸೃಷ್ಟಿಯಾಗಿದೆ. ಅದರಲ್ಲೂ ಸಿಂಪಲ್​ ಸುನಿ ಆ್ಯಕ್ಷನ್​ ಕಟ್ ಹೇಳಿರುವುದು ಮತ್ತಷ್ಟು ನಿರೀಕ್ಷೆ ಮೂಡಿಸಿದೆ.

ಇದನ್ನು ಓದಿ : Badava Rascal ಸಿನಿಮಾ ನೋಡಿದ ಶಿವರಾಜ್​ಕುಮಾರ್​​: ಡಿ.31ರ ಕರ್ನಾಟಕ ಬಂದ್ ಬಗ್ಗೆ ಹೇಳಿದ್ದೇನು?

ಕಮಾಲ್​ ಮಾಡೋಕೆ ಶರಣ್​-ಆಶಿಕಾ ರೆಡಿ!

ಅವತಾರ ಪುರುಷ ಸಿನಿಮಾ ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಚಿತ್ರ. ಹಾಗಾಗಿ ಈ ಚಿತ್ರ ವಿಭಿನ್ನವಾಗಿ ನಿಲ್ಲಲಿದೆ. ನಟ ಶರಣ್‌ ಜೊತೆಗೆ ನಟಿ ಆಶಿಕಾ ರಂಗನಾಥ್ ಕಮಾಲ್‌ ಮಾಡಲಿದ್ದಾರೆ. ಈ ಹಿಂದೆ ಈ ಜೋಡಿ ರ್ಯಾಂಬೋ ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ಗೆದ್ದಿದೆ. ಈಗ ಮತ್ತೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದೆ. ಸದ್ಯ ಚಿತ್ರದ ರಿಲೀಸ್ ದಿನಾಂಕಕ್ಕಾಗಿ ಶರಣ್ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯದಲ್ಲಿಯೆ ಚಿತ್ರ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ರಿವೀಲ್‌ ಮಾಡಲಿದೆ. ಆದರೆ ಸಂಕ್ರಾಂತಿಗೆ ಬಹುತೇಕ ಚಿತ್ರ ರಿಲೀಸ್‌ ಆಗುವುದು ಪಕ್ಕಾ ಆಗಿದೆ. ಹೀಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನು ಓದಿ : `ಕನ್ನಡತಿ’ ಧಾರಾವಾಹಿಯಿಂದ ಹೊರ ಬಂದ ನಟಿ ರಮೋಲಾ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಬಿಗ್ ಬಜೆಟ್​ ಸಿನಿಮಾಗಳಿಗೆ ಸೆಡ್ಡು ಹೊಡೆದ ಸುನಿ!

ಹೌದು, ಜನವರಿ 7ರಂದು ಭಾರತೀಯ ಚಿತ್ರರಂಗದ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಆರ್​ಆರ್​ಆರ್​ ಸಿನಿಮಾ ರಿಲೀಸ್​ ಆಗುತ್ತಿದೆ. ಇನ್ನೂ ಸಂಕ್ರಾಂತಿಗೆ ಪ್ರಭಾಸ್​ ನಟನೆಯ ರಾಧೆ-ಶ್ಯಾಮ್​ ಕೂಡ ಬಿಡುಗಡೆಯಾಗುತ್ತಿದೆ. ಆದರೆ, ಜನವರಿಯಲ್ಲಿ ಕನ್ನಡ ಚಿತ್ರರಂಗದಿಂದ ಯಾವುದೇ ಬಿಗ್​ ಬಜೆಟ್​ ಸಿನಿಮಾ ರಿಲೀಸ್​ ಆಗುತ್ತಿಲ್ಲ. ಈ ಸಿನಿಮಾಗಳ ಮಧ್ಯೆ ಸಿಂಪಲ್​ ಸುನಿ ತಮ್ಮ ಅವತಾರ ಪುರುಷ ರಿಲೀಸ್​ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಪೈಪೋಟಿ ನೀಡುವುದಕ್ಕೆ ಸಿಂಪಲ್​ ಸುನಿ ಮುಂದಾಗಿದ್ದಾರೆ
Published by:Vasudeva M
First published: