Comedy Khiladigalu: ಸಪ್ತಪದಿ ತುಳಿದ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಸದಾನಂದ - ಫೋಟೋಗಳು ವೈರಲ್​

Zee Kannada: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಕರ್ನಾಟಕದ ಪ್ರತಿಭೆಗಳನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತದೆ. ಅಲ್ಲದೇ ಜನರಿಗೆ ಅದ್ಭುತ ಮನರಂಜನೆಯನ್ನು ನೀಡುವ ಉದ್ದೇಶವನ್ನು ಹೊಂದಿರುವ ಈ ಕಾರ್ಯಕ್ರಮ ಈಗಾಗಲೇ ಹಲವಾರು ಸೀಸನ್ಗಳನ್ನು ಪೂರೈಸಿದೆ.

ನಟಿ ಸದಾನಂದ ಮದುವೆ ಫೋಟೋ

ನಟಿ ಸದಾನಂದ ಮದುವೆ ಫೋಟೋ

  • Share this:
ಕಿರುತೆರೆಯಲ್ಲಿ (Small Screen) ಹಲವಾರು ಸೂಪರ್ ಹಿಟ್ ರಿಯಾಲಿಟಿ (Reality Show)  ಶೋಗಳನ್ನು ನೀಡಿರುವ ಝೀ ಕನ್ನಡದ (Zee Kannada) ಪ್ರಸಿದ್ದ ಶೋಗಳಲ್ಲಿ ಒಂದಾಗ ಸೂಪರ್ ಹಿಟ್ `ಕಾಮಿಡಿ ಕಿಲಾಡಿಯ (Comedy Kiladigalu) ನಟ ಸದಾನಂದ ಸಪ್ತಪದಿ ತುಳಿದಿದ್ದಾರೆ. ಈ ಶೋ ಮೂಲಕ ಹೆಸರುಗಳಿಸಿದಿದ್ದ, ನಟ ಸದಾನಂದ ಮದುವೆಯ (Wedding) ಫೋಟೋಗಳ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಸುಲ್ತಾನ್ಪುರ ಗ್ರಾಮದ ಸದಾನಂದ, ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನರನ್ನು ರಂಜಿಸಿ ಮನೆಮಾತಾಗಿದ್ದರು.

ಇನ್ನು ನಟ ಸದಾನಂದ ಬಹಳ ಸರಳವಾಗಿ ದೇವಸ್ಥಾನದಲ್ಲಿ ವಿವಾಹವಾಗಿದ್ದು, ಕೇವಲ ಕೆಲ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದು, ಅಭಿಮಾನಿಗಳು ನೆಚ್ಚಿನ ನಟನಿಗೆ ಹೊಸ ಜೀವನದ ಶುಭಾಷಯ ಕೋರಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಗಮನ ಸೆಳೆದಿದ್ದ ನಟ ಸದಾನಂದ ಹಲವಾರು ಸೀರಿಯಲ್ ಮತ್ತು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಆಸೆ ಹೊಂದಿದ್ದಾರೆ.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಕರ್ನಾಟಕದ ಪ್ರತಿಭೆಗಳನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತದೆ. ಅಲ್ಲದೇ ಜನರಿಗೆ ಅದ್ಭುತ ಮನರಂಜನೆಯನ್ನು ನೀಡುವ ಉದ್ದೇಶವನ್ನು ಹೊಂದಿರುವ ಈ ಕಾರ್ಯಕ್ರಮ ಈಗಾಗಲೇ ಹಲವಾರು ಸೀಸನ್ಗಳನ್ನು ಪೂರೈಸಿದೆ.

ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಕರ್ನಾಟಕದ ನಂಬರ್ 1 ವಾಹಿನಿ ಜೀ ಕನ್ನಡ ಹಲವಾರು ಅದ್ಭುತ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಾ ಬಂದಿದೆ. ಕನ್ನಡ ಕಿರುತೆರೆಯ ಲೋಕದಲ್ಲಿ ಜೀ ಕನ್ನಡ(Zee Kannada) ವಾಹಿನಿ ಕೇವಲ ಮನರಂಜನೆಯ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೇ ಸದಭಿರುಚಿಯ ಕಾರ್ಯಕ್ರಮಗಳನ್ನೂ ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

ಇದನ್ನೂ ಓದಿ: ಐಷಾರಾಮಿ ಮನೆ ಖರೀದಿಸಿದ ಕರಣ್ ಕುಂದ್ರಾ - ಬಾಂದ್ರಾದ ಈ ಫ್ಲ್ಯಾಟ್​ ಬೆಲೆ ಕೇಳಿದ್ರೆ ಅಬ್ಬಾಬ್ಬ ಅಂತೀರಾ!

ಇಂತಹ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ‘ವೀಕೆಂಡ್ ವಿತ್ ರಮೇಶ್’ ‘ ಡ್ರಾಮಾ ಜೂನಿಯರ್ಸ್’ ‘ಸರಿಗಮಪ’ ‘ಕಾಮಿಡಿ ಕಿಲಾಡಿಗಳು’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಜೀನ್ಸ್’, ‘ಕನ್ನಡದ ಕಣ್ಮಣಿ’‘ಯಾರಿಗುಂಟು ಯಾರಿಗಿಲ್ಲ’, ಹೀಗೆ ಸಾಲು ಸಾಲು ವಿನೂತನ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನೆ-ಮನಗಳನ್ನು ಮೆಚ್ಚಿಸಿ ಸತತವಾಗಿ 3 ವರ್ಷದಿದಂದ ನಂಬರ್ 1 ಸ್ಥಾನದಲ್ಲಿರುವುದು ಜೀ ಕನ್ನಡಕ್ಕೆ ಹೆಮ್ಮೆಯ ಗರಿ. ಇತ್ತೀಚೆಗೆ ಬರೋಬ್ಬರಿ ಮೂರು ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆಂದೇ ಡ್ರಾಮ ಜೂನಿಯರ್ಸ್ ಸೀಸನ್ 4 ಕಾರ್ಯಕ್ರಮವನ್ನು ಅದ್ದೂರಿಯಾಗಿ ಲಾಂಚ್ ಮಾಡಿದೆ.

ವಾಹಿನಿ ಇದೀಗ ಒಂದು ಹೆಜ್ಜೆ ಮುಂದೆ ಇಟ್ಟು ಹೊಸದೊಂದು ಬಗೆಯ ಕಾರ್ಯಕ್ರಮವನ್ನು ನಡೆಸಿಕೊಡಲು ಮುಂದಾಗಿದೆ. ಇತ್ತೀಚೆಗಷ್ಟೇ ಗೋಲ್ಡನ್ ಗ್ಯಾಂಗ್ ಎಂಬ ಹೊಸ ರಿಯಾಲಿಟಿ ಶೋ ಆರಂಭಿಸಿ ಜನಮನ್ನಣೆಯನ್ನು ಪಡೆದಿದ್ದ ಜೀ ಕನ್ನಡ ವಾಹಿನಿ ಇದೀಗ ದಂಪತಿಗಳಿಗಾಗಿ ಜೋಡಿ ನಂ.1 ರಿಯಾಲಿಟಿ ಶೋ ಅನ್ನು ಆರಂಭಿಸಲು ಮುಂದಾಗಿದೆ. ಈಗಾಗಲೇ ಮನರಂಜನೆಯ ಮಂಟಪದಲ್ಲಿ ದಾಂಪತ್ಯದ ಉತ್ಸವಕ್ಕೆ ಶುಭ ಮೂಹೂರ್ತ ಕೂಡಿ ಬರುತ್ತಿದೆ. ಜೋಡಿ ನಂ. 1 ನಲ್ಲಿ ಶೀಘ್ರದಲ್ಲಿ ಎಂದು ಪ್ರೋಮೋವನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಿಗೆ ಗುಡ್​ ನ್ಯೂಸ್ - ವಿಕ್ರಾಂತ್ ರೋಣ ಲಿರಿಕಲ್ ಸಾಂಗ್ ರಿಲೀಸ್ ಡೇಟ್​ ಅನೌನ್ಸ್​ ​

ಪ್ರೋಮೋವನ್ನು ನೋಡಿ ಪ್ರೇಕ್ಷಕರು ಯಾವಾಗ ಶುರುವಾಗುತ್ತೆ ಎಂದು ಕಾತುರರಾಗಿದ್ದಾರೆ. ದಂಪತಿಗಳ ಬಬ್ಲಿ-ಬಬ್ಲಿ ಕಿತ್ತಾಟ, ಮುದ್ದು ಮುದ್ದು ಮುದ್ದಾಟ ನೋಡಿ ಅಭಿಮಾನಿಗಳ ಸಂತಸ ಪಡಲು ಕಾಯುತ್ತಿದ್ದಾರೆ. ದಂಪತಿಗಳನ್ನು ಆಟವಾಡಿಸಲು ವಾಹಿನಿ ಏನೋ ಸಿದ್ಧಗೊಂಡಿದೆ. ಆದರೆ, ಈ ಶೋನಲ್ಲಿ ಸೆಲಬ್ರಿಟಿ ದಂಪತಿಗಳಿರುತ್ತಾರಾ.? ಅಥವಾ ಯಾರಿರುತ್ತಾರೆ ಅನ್ನೋ ಪ್ರಶ್ನೆ ಎದ್ದಿದೆ. ಇದೆಲ್ಲದಕ್ಕೂ ಉತ್ತರ ಸಿಗಬೇಕೆಂದರೆ ರಿಯಾಲಿಟಿ ಶೋ ಆರಂಭವಾಗುವವರೆಗೂ ಕಾಯಲೇ ಬೇಕಿದೆ.
Published by:Sandhya M
First published: