Guru Shishyaru: ಶಿಕ್ಷಕರ ದಿನ ಗುರುಶಿಷ್ಯರು ಟ್ರೈಲರ್ ರಿಲೀಸ್! ಗುರುವನ್ನು ಕಾಡೋ ಶಿಷ್ಯರ ಹಾಸ್ಯದ ಹೊನಲು !

ಗುರು ಶಿಷ್ಯರು ಸಿನಿಮಾದ ಟ್ರೈಲರ್ ಭಾರೀ ಭರವಸೆ ಮೂಡಿಸಿದೆ. ಚಿತ್ರದ ಒಟ್ಟು ಹಾಸ್ಯದ ಚಿತ್ರಣವೂ ಈ ಒಂದೇ ಟ್ರೈಲರ್ ಹೇಳಿ ಬಿಡುತ್ತದೆ. ಇದೇ ತಿಂಗಳು 30ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.

ಗುರು ಶಿಷ್ಯರು ಚಿತ್ರದ ಟ್ರೈಲರ್ ರಿವ್ಯೂ

ಗುರು ಶಿಷ್ಯರು ಚಿತ್ರದ ಟ್ರೈಲರ್ ರಿವ್ಯೂ

  • Share this:
ಹಾಸ್ಯ ನಾಯಕ ನಟ ಶರಣ್ (Comedy Hero Sharan)ಅಭಿನಯದ ಗುರು ಶಿಷ್ಯರು ಚಿತ್ರದ ಟ್ರೈಲರ್ (Cinema Trailer) ಸಖತ್ ಆಗಿಯೇ ಇದೆ. ಚಿತ್ರದ ಒಟ್ಟು ಚಿತ್ರಣವನ್ನೇ ಕಟ್ಟಿಕೊಡುವ ಈ ಟ್ರೈಲರ್ ನಲ್ಲಿ ಕಾಮಿಡಿ ಕಿಕ್ (Comedy Kick) ಕೊಡುವ ಡೈಲಾಗ್​ಗಳೂ ಇವೆ. ಆದರೆ, ಅವು ಒಂಚೂರು ಮುಜುಗುರ ಮೂಡಿಸಿದ್ರೂ ಕೂಡ ಹಾಸ್ಯ ಪ್ರಿಯರಿಗೆ ಮಜಾ ಕೊಡುವಂತಿದೆ. ಟ್ರೈಲರ್ ನಲ್ಲಿ ಇನ್ನೂ ಸಾಕಷ್ಟು ವಿಷಯ ಇದೆ. ಅದನ್ನ ಇಲ್ಲಿ ವಿಶ್ಲೇಷಣೆ ಮಾಡಿದ್ದೇವೆ. ಮುಂದೆ ಇದೆ ಓದಿ. ಗುರು ಶಿಷ್ಯರು ಸಿನಿಮಾ ಕಂಪ್ಲೀಟ್ ಹಾಸ್ಯಮಯ ಸಿನಿಮಾನೇ ಅಂತ ಚಿತ್ರದ ಟ್ರೈಲರ್ ನೋಡಿದ್ರೆ ಅನಿಸೋದಿಲ್ಲ. ಯಾಕೆಂದ್ರೆ, ಇಲ್ಲಿ ಗಂಭೀರವಾದ ಸುಮಾರು ವಿಷಯಗಳು ಇವೆ. ಅವುಗಳನ್ನ ಹಾಸ್ಯದ ಮೂಲಕ ಹೇಳೋ ಕೆಲಸ ಆಗಿದೆ ಅಂತಲೇ ಒಂದೊಮ್ಮೆ ಅನಿಸದೇ ಇರದು. ಆದರೂ ಇಲ್ಲಿ ತೆಗೆದುಕೊಂಡ ಆ ವಿಷಯ ಖೋ ಖೋ ಆಟ.

ಖೋ ಖೋ ಆಟ-ಹಾಸ್ಯ ಪ್ರಿಯರಿಗೆ ಹಾಸ್ಯದ ಊಟ

ಹೌದು ಈ ಆಟ ಈಗ ಶಾಲೆಗಳಲ್ಲಿಯೇ ಉಳಿದು ಹೋಗಿದೆ. ಅದು ಮುಂದೆ ಬೆಳೆಯಲೇ ಇಲ್ಲ ಅನ್ನೊದು ಕೂಡ ಅಷ್ಟೇ ಸತ್ಯ. ಅದನ್ನ ಈ ಒಂದು ಚಿತ್ರದಲ್ಲಿ ತೋರಲಾಗಿದೆ. ಅದರಲ್ಲೂ ಈಗ ಹೊರ ಬಂದ ಟ್ರೈಲರ್ ನಲ್ಲಿಯೇ ಅದನ್ನ ವಿಶೇಷವಾಗಿಯೇ ಪಂಚಿಂಗ್ ಡೈಲಾಗ್ ಮೂಲಕವೇ ಹೇಳಿದರು ಹಾಸ್ಯ ಪ್ರೀಯರಿಗೆ ಅದು ಮಜಾ ಕೊಡುತ್ತದೆ.

ಇಡೀ ಚಿತ್ರದ ಕಥೆ ಹೇಳಿದಂತಿದೆ ಗುರುಶಿಷ್ಯರು ಟ್ರೈಲರ್

ಗುರು ಶಿಷ್ಯರು ಟ್ರೈಲರ್ ಅನ್ನ ಸಖತ್ ಆಗಿಯೇ ಮಾಡಿದ್ದಾರೆ.ಒಂದು ಚಿತ್ರದ ಒಟ್ಟು ಪುಟ್ಟ ಚಿತ್ರಣ ಅನ್ನೋ ಹಂಗೇನೆ ಈ ಟ್ರೈಲರ್ ಇದೆ. ಇಲ್ಲಿ ಗುರುಶಿಷ್ಯರ ಸಂಬಂಧದ ಝಲಕ್ ಇದೆ. ಗುರು ಹೇಳಿದ್ರು ಅಂತಲೇ ಹಳ್ಳಿಗೆ ಬರೋ ದೈಹಿಕ ಶಿಕ್ಷಣ ಹಾಸ್ಯಮಯ ಬದುಕಿನ ಚಿತ್ರಣವೂ ಇದೆ. ಅಷ್ಟೇ ಯಾಕೆ, ಲವ್ಲಿ ನಿಶ್ವಿಕಾ ನಾಯ್ಡು ಹಳ್ಳಿ ಬೆಡಗಿಯಾಗಿ ಇಲ್ಲಿ ಎಲ್ಲರ ದಿಲ್ ಕದಿಯುತ್ತಾರೆ. ದೈಹಿಕ ಶಿಕ್ಷಕನ ಪ್ರೇಮದರಸಿಯಾಗಿಯೂ ಕಂಗೊಳಿಸುತ್ತಾರೆ.

ಗಾಂಧಿವಾದಿ ರೀತಿ ಕಾಣ್ತಾರೆ ಪರಿಸರವಾದಿ ಸುರೇಶ್ ಹೆಬ್ಳೀಕರ್

ಗುರು ಶಿಷ್ಯರು ಚಿತ್ರದ ವಿಶೇಷತೆಗಳಲ್ಲಿ ಸುರೇಶ್ ಹೆಬ್ಳೀಕರ್ ಪಾತ್ರವೂ ಕೂಡ ಒಂದಾಗಿದೆ. ಊರಿನ ಹಿರಿಯ ಮುಖಂಡನಾಗಿಯೇ ಕಾಣಿಸಿಕೊಂಡಿರೋ ಸುರೇಶ್ ಹೆಬ್ಳೀಕರ್ ಅವ್ರು ಉಡುಗೆ ತೊಡುಗೆಯಿಂದಲೂ ಒಬ್ಬ ಗಾಂಧಿವಾದಿ ಹಾಗೇನೆ ಕಾಣಿಸುತ್ತಾರೆ.

ಇದನ್ನೂ ಓದಿ: Actress Ramya: ಎಷ್ಟು ಚಂದ ಕಾಣ್ತಾರೆ ನೋಡಿ ರಮ್ಯಾ! ಪ್ಲೀಸ್ ಮೂವಿ ಮಾಡಿ ಅಂತಿದ್ದಾರೆ ಫ್ಯಾನ್ಸ್

ಗುರುಶಿಷ್ಯರು ಚಿತ್ರದಲ್ಲಿ ಡೈಲಾಗ್ ಹೆಂಗಿದೆ ಗೊತ್ತೆ ?

ಗುರು ಶಿಷ್ಯರು ಚಿತ್ರದ ಡೈಲಾಗ್​ ಗಳು ಸಖತ್ ಆಗಿಯೇ ಇವೆ. ಒಂದೊಂದು ಡೈಲಾಗ್ ಕೂಡ ನಿಮ್ಗೆ ಪಂಚ್ ಕೊಡುತ್ತವೆ. ನಿಜ,ಸ್ಯಾಂಪಲ್​ಗೆ ಇಲ್ಲೊಂದೆರಡು ಇವೆ ಓದಿ. ಶಿಷ್ಯ: ಗುರುಗಳೇ ಖೋ ಖೋ ಆಟ ಯಾಕೆ ಬೆಳೆಯಲೇ ಇಲ್ಲ. ಗುರು ಶರಣ್: ಯಾಕಂದ್ರೆ ಆ ಕಡೆಯೊಂದು ಈ ಕಡೆಯೊಂದು ಎರಡು ಗೂಟ ಇವೆ. ಅದಕ್ಕೆ ಇದು ಬೆಳೆದಿಲ್ಲ. ಹೀಗೆ ಇರೋ ಡೈಲಾಗ್​ ನಲ್ಲಿ ಶರಣ್ ಮೇಷ್ಟ್ರ ಪಾತ್ರಕ್ಕೆ ಹುಡುಗರು ಒಂದು ಅಡ್ಡ ಹೆಸರು ಇಟ್ಟಿರುತ್ತಾರೆ. ಮಾಡೋಕೂ ಬರೋದಿಲ್ಲ.ಕಿಸಿಯೋಕೂ ಬರೋದಿಲ್ಲ.ಇದನ್ನ ಮೇಷ್ಟ್ರ ಮುಂದೇನೆ ಮಕ್ಕಳು ಹೇಳ್ತಾರೆ. ಈ ರೀತಿ ವಿಶೇಷ ಅನಿಸೋ ಡೈಲಾಗ್​ಳನ್ನ ಮಾಸ್ತಿ ಬರೆದುಕೊಟ್ಟಿದ್ದಾರೆ.

ಇದನ್ನೂ ಓದಿ: Actor Dwarakish: ಹಾಸ್ಯ ಕಲಾವಿದ ಹೀರೋ ಆದ್ರೆ ಚಿತ್ರ ಹಿಟ್, ಹೀರೋ ಕಾಮಿಡಿ ಮಾಡಿದ್ರೆ ಸೂಪರ್ ಡೂಪರ್ ಹಿಟ್!

ಗುರುಶಿಷ್ಯರು ಚಿತ್ರಕ್ಕೆ ಶರಣ್-ತರುಣ್ ಸುಧೀರ್ ಪ್ರೋಡ್ಯೂಸರ್

ಗುರುಶಿಷ್ಯರು ಚಿತ್ರಕ್ಕೆ ಶರಣ್ ಮತ್ತು ತರುಣ್ ನಿರ್ಮಾಪಕರಾಗಿದ್ದಾರೆ. ಇನ್ನೂ ಒಂದು ರೀತಿ ಹೇಳೋದಾದ್ರೆ, ಶರಣ್ ಮಗ,ರವಿಶಂಕರ್ ಗೌಡ ಪುತ್ರ,ಪ್ರೇಮ್ ಪುತ್ರ,ಬುಲೆಟ್ ಪ್ರಕಾಶ್ ಪುತ್ರ, ಹೀಗೆ ಇವರೆಲ್ಲರಿಗೂ ಈ ಚಿತ್ರ ಒಂದು ವೇದಿಕೇನೆ ಆಗಿದೆ.ಯಾಕೆಂದ್ರೆ, ಇಲ್ಲಿ ಗುರು ಶರಣ್ ಗೆ ಇವರೇ ಶಿಷ್ಯರು ಆಗಿದ್ದಾರೆ. ಇಂತಹ ಈ ಚಿತ್ರ ಇದೇ 30ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಟ್ರೈಲರ್ ಅತಿ ಹೆಚ್ಚು ಕಾಮಿಡಿ ಕಿಕ್ ಕೊಡುವಂತಿದೆ.ಜಡೇಶ್ ಹಂಪಿ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ.
First published: