• Home
  • »
  • News
  • »
  • entertainment
  • »
  • Sandalwood: ಚಿತ್ರರಂಗಕ್ಕೆ ಎಂಟ್ರಿಯಾಗ್ತಿದ್ದಾರೆ ತಬಲಾ ನಾಣಿ ಪುತ್ರಿ! ನಟಿಯಾಗಿ ಅಲ್ಲ.. ಮತ್ತಿನ್ನೇನು? ಇಲ್ಲಿದೆ ನೋಡಿ

Sandalwood: ಚಿತ್ರರಂಗಕ್ಕೆ ಎಂಟ್ರಿಯಾಗ್ತಿದ್ದಾರೆ ತಬಲಾ ನಾಣಿ ಪುತ್ರಿ! ನಟಿಯಾಗಿ ಅಲ್ಲ.. ಮತ್ತಿನ್ನೇನು? ಇಲ್ಲಿದೆ ನೋಡಿ

ತಬಲಾ ನಾಣಿ, ಚಿತ್ರಾ ನಾಣಿ

ತಬಲಾ ನಾಣಿ, ಚಿತ್ರಾ ನಾಣಿ

ತಬಲಾ ನಾಣಿಯವರಿಗೆ ಮಗಳೂ ಕೂಡ ಇದ್ದಾರೆ. ತಂದೆಯಂತೆಯೇ ಇವರೂ ಕೂಡ ಅದ್ಭುತ ಪ್ರತಿಭೆ. ತಂದೆ ನಟನೆಯಲ್ಲಿ ಹೆಸರು ಮಾಡಿದರೆ, ಮಗಳೂ ಗಾಯಕಿಯಾಗಿ ಹೆಸರು ಮಾಡಲು ಮುಂದಾಗಿದ್ದಾರೆ. ಇವರು ಡಬ್ಬಿಂಗ್​ ಆರ್ಟಿಸ್ಟ್​ ಕೂಡ ಹೌದು.

  • Share this:

ಸ್ಯಾಂಡಲ್​ವುಡ್​(Sandalwood)ನಲ್ಲಿ ಹಾಸ್ಯ ನಟ(Comedy Actor)ರಾಗಿ ಮತ್ತು ಪೋಷಕ ಪಾತ್ರದಲ್ಲಿ ಅಭಿನಯಿಸುವ ಮೂಲಕ ತಬಲಾ ನಾಣಿ(Tabla Nani)ಯವರು ತಾವೂ ಅತ್ಯುತ್ತ, ಕಲಾವಿದ ಎಂದು ಪ್ರೋವ್ (Prove)​ ಮಾಡಿದ್ದಾರೆ. ಅವರೊಬ್ಬ ಅದ್ಭುತ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಮೊದಮೊದಲು ಕಿರುತೆರೆ(Small Screen)ಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾಣಿಯವರು ನಂತರ ತಮಗೆ ಸಿಕ್ಕ ಸಣ್ಣ ಪುಟ್ಟ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡ ಬೆಳ್ಳಿತೆರೆಗೆ ಎಂಟ್ರಿಯಾದರು. ಇಲ್ಲಿ ಬಂದಮೇಲೆ ತಾನೇನು ಮತ್ತು ತಮ್ಮ ನಟನಾ ಕೌಶಲ್ಯವೇನು ಎಂಬುದನ್ನು ಈಗಾಗಲೇ ಹಲವು ಸಿನಿಮಾಗಳಲ್ಲಿ ಸಾಬೀತುಪಡಿಸಿಕೊಂಡಿದ್ದಾರೆ. ಅದರಲ್ಲೂ ತಬಲಾ ನಾಣಿ ಎಂದರೆ ಥಟ್​ ಅಂತ ಎಲ್ಲರ ತಲೆಗೆ ಮಠ ಸಿನಿಮಾ(Mata Movie)ದಲ್ಲಿ ಇವರು ಹೇಳುವ ಜೋಕ್​ ನೆನಪಿಗೆ ಬರುತ್ತೆ. ಹೀಗೆ ನೂರಾರು ಪಾತ್ರಗಳಲ್ಲಿ ಜನರನ್ನು ನಕ್ಕು ನಗಿಸಿದ್ದಾರೆ ತಬಲಾ ನಾಣಿ. ಕಿರುತೆರೆಯಲ್ಲೂ ಸಾಕಷ್ಟು ಹೆಸರು ಮಾಡಿದ್ದರು ನಾಣಿಯವರು. ಮೊಟ್ಟ ಮೊದಲ ಬಾರಿಗೆ ನಿರ್ದೇಶಕ ಗುರು ಪ್ರಸಾದ್ (Guru Prasad)​ ನಿರ್ದೇಶನದ ಜಗ್ಗೇಶ್ (Jaggesh)​ ಅವರ 100 ನೇ ಸಿನಿಮಾದಲ್ಲಿ ಮಠ ಚಿತ್ರದ ಮೂಲಕ ಎಂಟ್ರಿಯಾದರು. ಅದಾದ ಮೇಲೆ ಹಲವು ಸಿನಿಮಾಗಳಲ್ಲಿ ಕುಡುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಸ್ಯಾಂಡಲ್​ವುಡ್​ಗೆ ಎಂಟ್ರಿಯಾಗ್ತಿದ್ದಾರೆ ನಾಣಿ ಪುತ್ರಿ!


ತಬಲಾ ನಾಣಿಯವರಿಗೆ ಮಗಳೂ ಕೂಡ ಇದ್ದಾರೆ. ತಂದೆಯಂತೆಯೇ ಇವರೂ ಕೂಡ ಅದ್ಭುತ ಪ್ರತಿಭೆ. ತಂದೆ ನಟನೆಯಲ್ಲಿ ಹೆಸರು ಮಾಡಿದರೆ, ಮಗಳೂ ಗಾಯಕಿಯಾಗಿ ಹೆಸರು ಮಾಡಲು ಮುಂದಾಗಿದ್ದಾರೆ. ಇವರು ಡಬ್ಬಿಂಗ್​ ಆರ್ಟಿಸ್ಟ್​ ಕೂಡ ಹೌದು. ಈಗಾಗಲೇ ತಬಲಾ ನಾಣಿಯವರ ಮಗಳು ಚಿತ್ರಾ ಹಾಡುಗಳು ಹಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತಂದೆಯಂತೆಯೇ ಮಗಳು ಕೂಡ ಪ್ರತಿಭೆಯಲ್ಲಿ ಕಮ್ಮಿಯಿಲ್ಲ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಶೀಘ್ರದಲ್ಲೇ ಸ್ಯಾಂಡಲ್​ವುಡ್​ಗೂ ಗಾಯಕಿಯಗಿ ತಬಲಾ ನಾಣಿ ಪುತ್ರಿ ಎಂಟ್ರಿಯಾಗಲಿದ್ದಾರೆ ಎಂಬ ಮಾಹಿತಿ ಇದೆ.


ಇದನ್ನೂ ಓದಿ: ರಕ್ಷಿತ್​ ಶೆಟ್ಟಿ ಜೊತೆ ಇದೇ ಕಾರಣಕ್ಕೆ ಬ್ರೇಕಪ್​, 4 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ!


ಕುಡುಕನ ಪಾತ್ರದಲ್ಲಿ ಇವರನ್ನು ಮೀರಿಸುವವರಿಲ್ಲ!


ಇನ್ನೂ ತಬಲಾ ನಾಣಿಯವರ ಪೂರ್ತಿ ಹೆಸರು ಲಕ್ಷ್ಮೀ ನಾರಾಯಣ. ಮೂಲತಃ ತುಮಕೂರಿನ ಕೊರಟಗೆರೆಯಲ್ಲಿ ಜನಿಸಿದವರು. ಬಾಲ್ಯದಿಂದಲೂ ಕೂಡ ಕಲೆಯ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದ ನಾಣಿ ಮಠ ಸಿನಿಮಾ ಬಳಿಕ ಇವರ ಪ್ರತಿಭೆ ಕಂಡು ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೂ ಶರಣ್​ ಅವರೊಟ್ಟಿಗಿನ ನಟನಯಿಂದ ಕನ್ನಡಿಗರಿಗೆ ನಗೆ ಕಚಗುಳಿ ನೀಡಿದ ತವಲಾ ನಾಣಿಯವರು ಕುಡುಕನ ಪಾತ್ರದಲ್ಲಿ ಇವರನ್ನು ಮೀರಿಸುವವರಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.


‘ಡವ್ ಮಾಸ್ಟರ್‌' ಚಿತ್ರದಲ್ಲಿ ನಟಿಸುತ್ತಿರುವ ತಬಲಾ ನಾಣಿ


‘ಡವ್ ಮಾಸ್ಟರ್’ ಶೀರ್ಷಿಕೆಯನ್ನು ಇಟ್ಟುಕೊಂಡು ಹೊಸ ಸಿನಿಮಾ ಶುರು ಮಾಡಿದೆ. ಇಲ್ಲಿ ಶ್ವಾನಕ್ಕೆ ಮದುವೆ ಮಾಡಿಸುವ ಕಥೆ ಇದೆಯಂತೆ. ಆರ್ಯ ಇದರ ನಿರ್ದೇಶಕರು. ಮುಖ್ಯ ಪಾತ್ರದಲ್ಲಿ 'ತಬಲಾ' ನಾಣಿ, ಶಕೀಲಾ, ಸುಂದರ್ ವೀಣಾ, ನವೀನ್ ಪಡೀಲ್‌ ಮುಂತಾದವರು ಇದ್ಧಾರೆ.ಈ ಸಿನಿಮಾಕ್ಕೆ ರೋಷನ್ ಪಾಷಾ ಬಂಡವಾಳ ಹೂಡುತ್ತಿದ್ದಾರೆ. ಸಂಗೀತ ನಿರ್ದೇಶಕ ಶಕೀಲ್ ಅಹ್ಮದ್ ಹಾಡುಗಳಿಗ ರಾಗ ಸಂಯೋಜನೆ ಮಾಡುತ್ತಿದ್ದಾರೆ. ಛಾಯಾಗ್ರಹಣದ ಹೊಣೆ ಕಿರಣ್ ಅವರದ್ದು.


ಇದನ್ನೂ ಓದಿ: ‘ಜೊತೆ ಜೊತೆಯಲಿ‘ ಸೀರಿಯಲ್​ನಲ್ಲಿ ‘ರಾಜನಂದಿನಿ‘ಯಾಗಿ ಸೋನು ಗೌಡ, ಆರ್ಯನ ಮೊದಲ ಹೆಂಡ್ತಿ ಸಾವಿನ ರಹಸ್ಯ ಬಯಲು


ತಬಲಾ ನಾಣಿಯವರಿಗೆ ಕೊರಗೊಂದು ಕಾಡುತ್ತಿದ್ದು, ಈಗಾಗಲೇ ಬಹಳಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು ಸಿನಿ ಪ್ರೇಕ್ಷಕರನ್ನು ನಕ್ಕು ನಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಇವರಿಗೆ ಈವರೆಗೂ ಯಾವುದೇ ಫಿಲ್ಮ್​ಫೇರ್​ ಅವಾರ್ಡ್​ ಸಹ ಬಂದಿಲ್ಲ.ಇದು ತಬಲ ನಾಣಿಯವರನ್ನು ಕಾಡುತ್ತಿದ್ದರೂ ಸಹ ನಟನೆಯನ್ನು ಮೆಚ್ಚಿ ಅಭಿಮಾನಿಗಳು ಕೊಡುತ್ತಿರುವ ಪ್ರಶಸ್ತಿ ಈಗಾಗಲೇ ನನ್ನ ಬಳಿ ಇದೆ ಎಂದು ತಬಲಾ ನಾಣಿ ಹೇಳಿದ್ದಾರೆ.

Published by:Vasudeva M
First published: