Bigg Boss OTT: ಬದುಕು ಸಾಗಿಸಲು ಭಿಕ್ಷೆ ಬೇಡಿದ್ರಂತೆ ಈ ನಟ! ಬಿಗ್​ ಬಾಸ್​ ಸ್ಪರ್ಧಿಯ ರಿಯಲ್​ ಲೈಫ್​ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ನಿಮಗೆ ಗೊತ್ತಾ? ಬಿಗ್​ ಬಾಸ್​ ಮನೆಯಲ್ಲಿ ಹಾಸ್ಯನಟರೊಬ್ಬರಿದ್ದಾರೆ. ಅವರೇ ಹೆಸರೇ ಹಾಸ್ಯ ನಟ ಲೋಕಿ. ಈಗಾಗಲೇ ಕಿರು ತೆರೆಯಲ್ಲಿ ಅವರ ಹಾಸ್ಯವನ್ನು ಕಂಡಿರಬಹುದು. ಲೋಕೇಶ್​ ಶ್ರೀಮಂತ ಮನೆತನದಿಂದ ಬಂದವರಂತೂ ಅಲ್ಲ, ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸುವ ಮೂಲಕ ತೆರೆಯ ಮೇಲೆ ಬಂದವರು. ಇಂದು ಹಾಸ್ಯನಟನಾಗಿ ಮಾತ್ರವಲ್ಲದೆ, ದೊಡ್ಡನೆಗೆ ಬರುವ ಅವಕಾಶ ಅವರ ಪಾಲಿಗೆ ಬಂದಿದೆ.

ಬಿಗ್​ ಬಾಸ್​

ಬಿಗ್​ ಬಾಸ್​

 • Share this:
  ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​ (Kiccha Sudeep) ನಿರೂಪಣೆಯಲ್ಲಿ ಬಿಗ್ ಬಾಸ್ (Bigg Boss) ಕನ್ನಡ ಓಟಿಟಿ ಕಾರ್ಯಕ್ರಮ ನಿನ್ನೆಯಿಂದ ಪ್ರಾರಂಭವಾಗಿದೆ. ವಿವಿಧ ವೃತ್ತಿಗಳ 16 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಒಬ್ಬೊಬ್ಬಾ ಸ್ಪರ್ಧಿಗಳು ಒಂದೊಂದು ವಿಶೇಷತೆಯನ್ನು ಹೊಂದಿದ್ದಾರೆ. ಅವರ ಜೀವನ ಶೈಲಿಯೂ ಕೂಡ ವಿಭಿನ್ನವಾಗಿದೆ. ಕಲ್ಲು ಮುಳ್ಳಿನ ಹಾದಿಯಲ್ಲಿ ಬಂದು ನಂತರ ನಟನಾ (Acting) ಲೋಕಕಕ್ಕೆ ಎಂಟ್ರಿಕೊಟ್ಟವರೂ ಕೂಡ ದೊಡ್ಡನೆ ಮನೆಯಲ್ಲಿದ್ದಾರೆ. ಅಷ್ಟೇ ಏಕೆ ಬಿಕ್ಷೆ ಬೇಡುತ್ತಿದ್ದ ವ್ಯಕ್ತಿ ಕೂಡ ಜೀವನದಲ್ಲಿ ಸಕ್ಸಸ್​​ ಕಂಡು, ಆ ಬಳಿಕ ಹಾಸ್ಯ ನಟನಾಗಿ (Comedy Actor) ಇದೀಗ ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ್ದಾರೆ. ಅವರು ಯಾರು? ಅವರ ನಿಜ ಜೀವನದಲ್ಲಿ ಎದುರಾದ ಕಷ್ಟಗಳೇನು? ತಿಳಿಯೋಣ

  ನಿಮಗೆ ಗೊತ್ತಾ? ಬಿಗ್​ ಬಾಸ್​ ಮನೆಯಲ್ಲಿ ಹಾಸ್ಯನಟರೊಬ್ಬರಿದ್ದಾರೆ. ಅವರೇ ಹೆಸರೇ ಹಾಸ್ಯ ನಟ ಲೋಕಿ. ಈಗಾಗಲೇ ಕಿರು ತೆರೆಯಲ್ಲಿ ಅವರ ಹಾಸ್ಯವನ್ನು ಕಂಡಿರಬಹುದು. ಲೋಕೇಶ್​ ಶ್ರೀಮಂತ ಮನೆತನದಿಂದ ಬಂದವರಂತೂ ಅಲ್ಲ, ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸುವ ಮೂಲಕ ತೆರೆಯ ಮೇಲೆ ಬಂದವರು. ಇಂದು ಹಾಸ್ಯನಟನಾಗಿ ಮಾತ್ರವಲ್ಲದೆ, ದೊಡ್ಡನೆಗೆ ಬರುವ ಅವಕಾಶ ಅವರ ಪಾಲಿಗೆ ಬಂದಿದೆ.

  ಲೋಕೇಶ್​ ಅವರ ನಿಜ ಜೀವನ ಬಗ್ಗೆ ತಿಳಿಯಲು ಬಯಸಿದರೆ. ಲೋಕಿ ಅವರು ಬಿಕ್ಷಾಟನೆ ಬೇಡಿ ಬದುಕು ಸಾಗಿದ್ದಾರಂತೆ. ಈ ಕಲಾವಿದನ ಜೀವನಗಾಥೆ ಕೇಳಿದ್ರೆ ಕಲ್ಲು ಮನಸ್ಸಿನವರ ಕಣ್ಣಲ್ಲಿಯೂ ನೀರು ಬರುತ್ತದೆ. ಪೇಪರ್ ಆಯ್ದು, ಭಿಕ್ಷೆ ಬೇಡಿ ಬದುಕು ಕಟ್ಟಿಕೊಂಡ ಈ ಕಲಾವಿದ ನಡೆದು ಬಂದ ಹಾದಿ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

  ಬಿಗ್​ ಬಾಸ್​ ಮನೆಗೆ 6 ನೇ ಸ್ಪರ್ಧಿಯಾಗಿ ಲೋಕೇಶ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ, ಲೋಕಿ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಕಾರ್ಯಕ್ರಮದ ಮೂಲಕ ಜನಪ್ರಿಯರಾದರು. ಇವರು 9ನೇ ತರಗತಿಯಲ್ಲಿ ಇದ್ದಾಗ ಬೆಂಗಳೂರಿಗೆ ಓಡಿಬಂದರು. ಆದರೆ ವಿವಿಧ ಕೆಲಸ ಮಾಡುತ್ತಾ  ಇಂದು ಹಾಸ್ಯನಟನಾಗಿ ದೊಡ್ಡನೆಗೆ ಬಂದಿದ್ದಾರೆ.

  ಇದನ್ನೂ ಓದಿ: Bigg Boss OTT: ಬಿಗ್​ಬಾಸ್​ ಮನೆಗೆ ಹೋಗಿಲ್ಲ ಕಾಫಿನಾಡು ಚಂದು, ಕಾಯ್ತಿದ್ದ ಫ್ಯಾನ್ಸ್​ಗೆ ನಿರಾಸೆ

  ಕಿಚ್ಚ ಸುದೀಪ್‌ ಬಳಿ ಬಂದ ಲೋಕೇಶ್‌ ತನ್ನೊಳಗಿನ ನೋವನ್ನು ಹಂಚಿಕೊಂಡಿದ್ದಾರೆ, "ನನ್ನ ಕಂಡರೆ ಎಲ್ಲರೂ ನೆಗ್ಲೆಟ್ ಮಾಡುತ್ತಿದ್ರು. ಆದರೆ ಈಗ ನನ್ನನ್ನು ಕಂಡ ಕೂಡಲೇ ಸೆಲ್ಫಿ ಕೇಳುತ್ತಿದ್ದಾರೆ. ನನ್ನ ಕಥೆಯಿಂದ ಬೇರೆಯವರಿಗೆ ಸ್ಫೂರ್ತಿ ಸಿಗಬಹುದು. ನನ್ನ ತಂದೆಯ ಮೊದಲ ಹೆಂಡತಿ ತೀರಿಹೋದರು. ಆ ಬಳಿಕ ಅವರು ಮತ್ತೊಂದು ಮದುವೆಯಾದರು. 2ನೇ ಹೆಂಡತಿಗೆ ಹುಟ್ಟಿದ ಮಗ ನಾನು. 9 ನೇ ವಯಸ್ಸಿಗೆ ಮನೆ ಬಿಟ್ಟು ಬೆಂಗಳೂರಿನ ಕಡೆಗೆ ಪ್ರಯಾಣ ಮಾಡಿದೆ. ರೈಲು ಹತ್ತಿ ಬೇರೆ ಬೇರೆ ಊರುಗಳನ್ನು ನೋಡಿದ್ದೇನೆ. ನಾನು ಪೇಪರ್ ಆಯ್ದುಕೊಂಡು ಜೀವನ ಮಾಡಿದ್ದೀನಿ" ಎಂದು ಬಿಗ್​ ಬಾಸ್​ ವೇದಿಕೆಯಲ್ಲಿ ಹೇಳಿದ್ದಾರೆ.  ಇದನ್ನೂ ಓದಿ: Malaika Arora: ಮಲೈಕಾ ಅರೋರಾ ಇವರನ್ನೇ ಲೈಫ್​ಲೈನ್​ ಎಂದು ಪರಿಗಣಿಸಿದ್ದಾರಂತೆ! ಹಾಗಿದ್ರೆ ಅರ್ಜುನ್​ ಕಪೂರ್​?

  ಬಿಗ್​ ಬಾಸ್​ ವೇದಿಕೆಯಲ್ಲಿ ಕಿಚ್ಚನ ಎದುರು ತನ್ನ ಜೀವನದ ನಿಜ ಸಂಗತಿಯನ್ನು ಹಂವಿಕೊಂಡ ಲೋಕಿ ಬದುಕು ನಡೆಸಲು ಭಿಕ್ಷೆ ಬೇಡಿದ್ದೇನೆ ಎಂದಿದ್ದಾರೆ. ನನ್ನ ನಟನೆ ಕೂಡ ಭಿಕ್ಷೆ ಬೇಡುತ್ತಲೇ ಆರಂಭವಾಯಿತು. ಬೆಂಗಳೂರಿನ ಕಬ್ಬನ್ ಪಾರ್ಕ್​ನಲ್ಲಿ ಮೂಕ ಎಂದು ಹೇಳಿಕೊಂಡು ಬಿಕ್ಷೆ ಬೇಡಿದ್ದೇನೆ.

  ಹೀಗೆ ಭಿಕ್ಷೆ ಬೇಡುತ್ತಿದ್ದ ನನಗೆ ಒಂದು ಟ್ರಸ್ಟ್​​ನವರು ನೋಡಿ ಬಳಿಕ ನನ್ನನ್ನು ಅವರು ಕರೆದುಕೊಂಡು ಹೋದರು. ಬಳಿಕ ಆಶ್ರಯ ನೀಡಿದರು. ಆ ಟ್ರಸ್ಟ್‌ನಿಂದ ನನ್ನ  ಜೀವನ ಬದಲಾಯಿತು. ಅದು ಇಲ್ಲದಿದ್ದರೆ ಜೀವನದಲ್ಲಿ ಇಲ್ಲಿಯವರೆಗೆ ಬರುತ್ತಲೇ ಇರಲಿಲ್ಲ" ಎಂದು ಹಾಸ್ಯ ನಟ ಲೋಕಿ ತಮ್ಮ ಜೀವಗಾಥೆಯನ್ನು ಹಂಚಿಕೊಂಡಿದ್ದಾರೆ..
  Published by:Harshith AS
  First published: