Comedy Actor Appanna: ಕರಗಿತು ಕೊಬ್ಬು ಒಲಿಯಿತು ಅದೃಷ್ಟ; ಅಪ್ಪಣ್ಣ ಈಗ Apple Cut ಚಿತ್ರದ ಸಿಕ್ಸ್ ಪ್ಯಾಕ್ ಸೆಕೆಂಡ್ ಹೀರೋ

20 ಕೆಜಿ ತೂಕ ಇಳಿಸಿಕೊಳ್ಳುವುದು ಸುಲಭದ ಮಾತು ಅಲ್ಲವೇ ಅಲ್ಲ. ಇದಕ್ಕೆ ಡೆಡಿಕೇಷನ್ ಬೇಕು. ಕಠಿಣ ಡಯೆಟ್ ಕೂಡ ಬೇಕಾಗುತ್ತದೆ. ಇದನ್ನೆಲ್ಲ ಮಾಡಿಯೇ ಅಪ್ಪಣ್ಣ ಈಗ ಟ್ರಿಮ್ & ಸ್ಲಿಮ್ ಆಗಿ ಬಿಟ್ಟಿದ್ದಾರೆ.

ಹಾಸ್ಯ ನಟ ಅಪ್ಪಣ್ಣ ಈಗ ಹೀರೋ

ಹಾಸ್ಯ ನಟ ಅಪ್ಪಣ್ಣ ಈಗ ಹೀರೋ

  • Share this:
ಹಾಸ್ಯ ಕಲಾವಿದರು ನಾಯಕ (Hero) ನಟರಾಗೋದು ಕನ್ನಡದಲ್ಲಿ ಹೊಸದೇನೂ ಅಲ್ಲ. ಅದರಂತೆ ಇಲ್ಲಿ ಸಾಕಷ್ಟು ಉದಾಹರಣೆಗಳಿವೆ. ಇವತ್ತು ನಾವು ಹೇಳ್ತಿರೋ ನಾಯಕ ನಟ ಕೂಡ ಒಬ್ಬ ಹಾಸ್ಯ ಕಲಾವಿದನೇ. ಇವರ ಹಾಸ್ಯಕ್ಕೆ ನಗದವ್ರೇ ಇಲ್ಲ. ಇವರ ಡೈಲಾಗ್​ಗೆ (Dialogue) ನಕ್ಕು ನಕ್ಕು ಸುಸ್ತಾಗಿರೋದೇ ಹೆಚ್ಚು. ಇದಕ್ಕೆ ಕಾರಣ ದೇಹದ ತೂಕ ಮತ್ತು ಹಾಸ್ಯದ ಮ್ಯಾನರಿಸಂ. ಆದರೆ ಈಗ ಇದೇ ಹಾಸ್ಯ ಕಲಾವಿದ ಸಖತ್ ಸ್ಲಿಮ್ ಆಗಿದ್ದಾರೆ. 20 ಕೆಜಿಯಷ್ಟು ತೂಕವನ್ನೂ (Weight loss) ಇಳಿಸಿಕೊಂಡಿದ್ದಾರೆ. ತೂಕ ಇಳಿಸಿಕೊಂಡು ಮಸ್ತ್ ಹೀರೋ ಹಾಗೇನೆ ಕಾಣುತ್ತಾರೆ. ಚಿತ್ರದಲ್ಲಿ ಸೆಕೆಂಡ್ ಹೀರೋ ಬೇರೆ. ಇದಕ್ಕೆ ಇದು ಅವಶ್ಯ ಅನ್ನೋ ಹಾಗೆ ಫುಲ್ ತಯಾರಿ ಮಾಡಿಕೊಂಡಿದ್ದಾರೆ. ಕೊಂಚ ಸ್ಟೈಲಿಶ್ ಕೂಡ ಆಗಿದ್ದಾರೆ.

ಇವರ ಸ್ಟೈಲ್​ ಕಂಡ್ರೆ ಇದು ಯಾರಪ್ಪ ಹೊಸ ಹೀರೋ ಅಂತ ತಟ್ಟನೆ ನಿಮಗೆ ಅನಿಸದೇ ಇರದು. ಅಷ್ಟು ಬದಲಾಗಿದ್ದಾರೆ ಕನ್ನಡದ ಹಾಸ್ಯ ಕಲಾವಿದ ಅಪ್ಪಣ್ಣ.

ಹಾಸ್ಯ ಕಲಾವಿದ ಅಪ್ಪಣ್ಣನ ಹಾಸ್ಯದ ಶೈಲಿ ವಿಭಿನ್ನವಾಗಿಯೇ ಇದೆ. ಇದನ್ನ ನೋಡಿದವ್ರು ಮತ್ತು ಕೇಳಿದವರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಅಷ್ಟೊಂದು ನಗಿಸುತ್ತಿದ್ದ ಅಪ್ಪಣ್ಣ ನೋಡಲು ಹೀರೋ ರೀತಿನೆ ಇದ್ದರು. ದೇಹದ ತೂಕ ಕೂಡ ಹೆಚ್ಚು ಇತ್ತು. ಆದರೆ ಈಗ ಇದೇ ಅಪ್ಪಣ್ಣನಿಗೆ ಹೀರೋ ಚಾನ್ಸ್ ಸಿಕ್ಕಿದ್ದೆ ತಡ, ಕಂಪ್ಲೀಟ್ ಬದಲಾಗಿದ್ದಾರೆ.

Apple Cut ಚಿತ್ರದಲ್ಲಿ ಹಾಸ್ಯ ಕಲಾವಿದ ಅಪ್ಪಣ್ಣ ಸೆಕೆಂಡ್ ಹೀರೋ
ಹಾಸ್ಯ ಕಲಾವಿದ ಅಪ್ಪಣ್ಣ ಈ ಚಿತ್ರದಲ್ಲಿ ಹೀರೋ. ಆದರೆ ಸೆಕೆಂಡ್ ಹೀರೋ. ಈ ಚಿತ್ರದಲ್ಲಿ ಇಬ್ಬರು ಹೀರೋಯಿನ್ ಇದ್ದಾರೆ. ಅಪ್ಪಣ್ಣ ಸೇರಿ ಇಬ್ಬರು ಹೀರೋಗಳೂ ಇದ್ದಾರೆ. ಇವರ ಫೋಟೋಗಳನ್ನ ಕಂಡ್ರೆ ವಾರೆ ವ್ಹಾ ಅಂತ ನೀವೂ ಹೇಳದೆ ಇರೋದಿಲ್ಲ. ಅಪ್ಪಣ್ಣ ಇಲ್ಲಿ ಬದಲಾಗಿ ಹೋಗಿದ್ದಾರೆ.

ಕನ್ನಡದ Apple Cut ಯಾವ ಜಾನರ್​ನ ಸಿನಿಮಾ
Apple Cut ಸಿನಿಮಾದಲ್ಲಿ ಕಾಮಿಡಿ ಇದ್ದಂಗೆ ಇಲ್ಲ. ಇಲ್ಲಿ ಹಾಸ್ಯ ಕಲಾವಿದನೇ ನಾಯಕ ಆಗಿರೋದ್ರಿಂದ ಕಾಮಿಡಿ ಕೊಂಚ ಕಡಿಮೆ ಇರಬಹುದು. ಆದರೆ ಈ ಸಿನಿಮಾ ಒಂದು ಮರ್ಡರ್ ಮಿಸ್ಟರಿ ಕಥೆ ಇರೋ ಚಿತ್ರ. ಈ ಚಿತ್ರಕ್ಕಾಗಿಯೆ ಅಪ್ಪಣ್ಣ ಕಂಪ್ಲೀಟ್ ಬದಲಾಗಿದ್ದಾರೆ. ಇದಕ್ಕಾಗಿಯೇ ದೇಹದ ತೂಕವನ್ನೂ ಕಡಿಮೆ ಮಾಡಿಕೊಂಡಿದ್ದಾರೆ.

Actor Appanna Now Second Hero For Apple Cut kannada
ಅಪ್ಪಣ್ಣ ಆ್ಯಪಲ್ ಕಟ್ ಸಿನಿಮಾ ಲುಕ್


Apple Cut ಚಿತ್ರಕ್ಕಾಗಿ ಅಪ್ಪಣ್ಣನ ಕಠಿಣ ಡಯೆಟ್
ಅಪಣ್ಣ ಕಠಿಣ ಡಯೆಟ್ ಮಾಡಿದ್ದಾರೆ. 20 ಕೆಜಿ ತೂಕ ಇಳಿಸಿಕೊಳ್ಳುವುದು ಸುಲಭದ ಮಾತು ಅಲ್ಲವೇ ಅಲ್ಲ. ಇದಕ್ಕೆ ಡೆಡಿಕೇಷನ್ ಬೇಕು. ಕಠಿಣ ಡಯೆಟ್ ಕೂಡ ಬೇಕಾಗುತ್ತದೆ. ಇದನ್ನೆಲ್ಲ ಮಾಡಿಯೇ ಅಪ್ಪಣ್ಣ ಈಗ ಟ್ರಿಮ್ And ಸ್ಲಿಮ್ ಆಗಿ ಬಿಟ್ಟಿದ್ದಾರೆ. ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಳ್ಳುತ್ತಿದ್ದು, ಕಠಿಣ ಡಯೆಟ್​ ನಲ್ಲಿಯೇ ಸಿನಿಮಾದ ಚಿತ್ರೀಕರಣದಲ್ಲೂ ಈಗ ಭಾಗಿ ಆಗಿದ್ದಾರೆ.

ಇದನ್ನೂ ಓದಿ: Action Director Ravi Varma: ಬಾಲಿವುಡ್ ಅಂಗಳದಲ್ಲಿ ರವಿ ವರ್ಮಾ ಸಾಹಸ!

ಅಪ್ಪಣ್ಣ ಹಾಸ್ಯದ ಹೊನೆಲು ಹರಿಸಿ ಎಲ್ಲರ ಹೊಟ್ಟೆ ಹುಣ್ಣಾಗಿಸಿದವರು. ಈಗ ತಮ್ಮ ಹೊಟ್ಟೆಗೆ ಕಡಿಮೆ ಊಟ ಹಾಕಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಇವರ ಈ ಒಂದು ಕಠಿಣ ಪರಿಶ್ರಮದ ಹಿಂದೆ ಲೇಡಿ ಡೈರೆಕ್ಟರ್ ಒಬ್ಬರ ಕಲ್ಪನೆ ಇದೆ. ಅವರ ಕಲ್ಪನೆಯಂತೇನೆ ಅಪ್ಪಣ್ಣ ಈ ಒಂದು ಪಾತ್ರಕ್ಕಾಗಿಯೇ ರೆಡಿಯಾಗಿದ್ದು ಶೂಟಿಂಗ್​ ನಲ್ಲೂ ಬ್ಯುಸಿ ಆಗಿದ್ದಾರೆ.

Appanna Now Second Hero For Apple Cut kannada Cinema
ಅಪ್ಪಣ್ಣ ಅಭಿನಯದ ಆ್ಯಪಲ್ ಕಟ್ ಸಿನಿಮಾ


ಕನ್ನಡದ ಹಿರಿಯ ನಿರ್ದೇಶಕ ರಾಜ ಕಿಶೋರ್ ಮಗಳು ಈ ಚಿತ್ರದ ಡೈರೆಕ್ಟರ್
ಕನ್ನಡದ ಹಿರಿಯ ಡೈರೆಕ್ಟರ್ ರಾಜ ಕಿಶೋರ್ ಮಗಳು ಸಿಂಧೂ ಗೌಡ ಅವರೇ ಈ Apple Cut ಸಿನಿಮಾವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಇಬ್ಬರು ಹೀರೋಗಳು ಇಬ್ಬರು ಹೀರೋಯಿನ್​ಗಳನ್ನ ಇಟ್ಟುಕೊಂಡು ಒಂದು ಮರ್ಡರ್ ಮಿಸ್ಟರಿ ಕಥೆಯನ್ನ ಹೇಳೋಕೆ ಶುರು ಮಾಡಿದ್ದಾರೆ.

ಇದನ್ನೂ ಓದಿ: Duniya Vijay: ಭೀಮನ ಅಂಗಳಕ್ಕೆ Ash Melo ಎಂಟ್ರಿ, ಸ್ಕೈಲರ್​ಗೂ ಚಾನ್ಸ್ ಕೊಟ್ಟ ದುನಿಯಾ ವಿಜಯ್

Apple Cut ಟೈಟಲ್ ಲಾಂಚ್ ಮಾಡಿದ ಜೋಗಿ ಸಿನಿಮಾ ಡೈರೆಕ್ಟರ್
Apple Cut ಅನ್ನೋದೇ ವಿಶೇಷವಾದ ಟೈಟಲ್. ಇದನ್ನ ವಿಶೇಷವಾಗಿಯೇ ಲಾಂಚ್ ಮಾಡಲಾಗಿದೆ. ಡೈರೆಕ್ಟರ್ ಜೋಗಿ ಪ್ರೇಮ್ ಈ ಒಂದು ಚಿತ್ರದ ಟೈಟಲ್ ಅನ್ನ ಲಾಂಚ್ ಮಾಡಿಕೊಟ್ಟಿದ್ದಾರೆ. ಹೊಸಬರ ಚಿತ್ರಕ್ಕೆ ತಮ್ಮದೇ ರೀತಿಯಲ್ಲಿ ಸಪೋರ್ಟ್ ಮಾಡಿದ್ದಾರೆ.
ಆಪಲ್ ಕಟ್ ಸಿನಿಮಾ ತನ್ನ ವಿಶೇಷ ಟೈಟಲ್ ಮೂಲಕ ಗಮನ ಸೆಳೆದಿದೆ. ಹಾಸ್ಯ ಕಲಾವಿದ ಅಪ್ಪಣ್ಣ ಈ ಚಿತ್ರಕ್ಕಾಗಿ ಸಣ್ಣ ಆಗಿ ಹೀರೋ ಆಗಿ ಹೊಳೆಯುತ್ತಿದ್ದಾರೆ. ಇತರ ಅಪ್​ ಡೇಟ್​ಗಾಗಿ ವೇಟ್ ಮಾಡಿ.
First published: