ಜೀವನದಲ್ಲಿ ಮೊದಲ ಬಾರಿ ಹುಟ್ಟುಹಬ್ಬ ಆಚರಿಸಿದ ಬಿರಾದಾರ್; ಇದಕ್ಕೆ ಪ್ರಥಮ್ ಕಾರಣ!

Kannada Actor Pratham | 68 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಿರಾದಾರ್ ಅವರ ಮನೆಗೆ ಪ್ರಥಮ್ ಸರ್ಪೈಸ್ ಆಗಿ ಕೇಕ್ ಹಿಡಿದುಕೊಂಡು ಹೋಗಿ ಎಂಟ್ರಿಕೊಟ್ಟಿದ್ದಾರೆ. ಬಿರಾದಾರ್ ಅವರಿಂದ ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ.

ವೈಜನಾಥ್ ಬಿರಾದಾರ್ ಹಾಗೂ ಪ್ರಥಮ್.

ವೈಜನಾಥ್ ಬಿರಾದಾರ್ ಹಾಗೂ ಪ್ರಥಮ್.

 • Share this:
  ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಹಾಸ್ಯ ನಟ ವೈಜನಾಥ್ ಬಿರಾದಾರ್ ನಿನ್ನೆ (ಜೂ. 26) 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೋಳು ಮುಂದಲೆ, ಹಿಂಬದಿಯಲ್ಲಿ ಕೆದರಿದ ಕೂದಲು, ಬಡಕಲು ದೇಹ, ಕೀರಲು ದನಿ – ಇದು ಇವರ ಮೇಲ್ನೋಟದ ಚಹರೆ. ತಮ್ಮ ವಿಭಿನ್ನ ನಟನೆಯಿಂದಲೇ ಮನೆ ಮಾತಾಗಿರುವ ಬಿರಾದಾರ್, ಸುಮಾರು ಮೂರು ದಶಕಗಳಿಂದ ಕನ್ನಡ ಸಿನಿ ರಸಿಕರನ್ನು ರಂಜಿಸುತ್ತ ಬರುತ್ತಿದ್ದಾರೆ.

  68 ವಯಸ್ಸಿನ ಈ ಪ್ರಬುದ್ಧ ನಟ ಹುಟ್ಟಿದಾಗಿನಿಂದ ಮಾಡದೇ ಇರುವ ಒಂದು ಕೆಲಸವನ್ನು ನಟ ಪ್ರಥಮ್, ಬಿರಾದಾರ್ ಅವರ ಕೈಯಲ್ಲಿ ಮಾಡಿಸಿ ಮೆಚ್ಚುಗೆ ಪಡೆದಿದ್ದಾರೆ‌. ಹೌದು, ಬಡತನದಲ್ಲೇ ಹುಟ್ಟಿ ಬೆಳೆದ ಬಿರಾದಾರ್ ಇಂದೂಕೂಡ ತಮ್ಮ ಪುಟ್ಟ ಕುಟುಂಬದ ಜೊತೆ ಸರಳವಾಗಿಯೇ ಜೀವನ ಸಾಗಿಸುತ್ತಿದ್ದಾರೆ.

  Shah Rukh Khan: ಕಿಂಗ್ ಖಾನ್​​ ಶಾರುಖ್​ ಸಹ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ: ವಿಡಿಯೋ ವೈರಲ್​..!

  ಸಿಕ್ಕ ಚಿಕ್ಕ-ಪುಟ್ಟ ಅವಕಾಶಗಳಲ್ಲೇ ನಿರ್ಮಾಪಕರಿಗೂ ಹೊರೆಯಾಗದ ರೀತಿ ಸಂಭಾವನೆ ಪಡೆದು ಜೀವನ ನಡೆಸುತ್ತಿದ್ದಾರೆ. ಅವರ ಜೀವನದಲ್ಲಿ ಇದುವರೆಗೆ ಒಮ್ಮೆಯೂ ಹುಟ್ಟುಹಬ್ಬ ಆಚರಿಸಿಲ್ಲವಂತೆ. ಅಲ್ಲದೆ ಕೇಕ್ ಕೂಡ ಕಟ್ ಮಾಡಿಲ್ಲವಂತೆ. ಇದನ್ನು ಅರಿತ ಪ್ರಥಮ್, ಬಿರಾದಾರ್ ಅವರ ಮನೆಗೆ ಹೋಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ.

  68 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಿರಾದಾರ್ ಅವರ ಮನೆಗೆ ಪ್ರಥಮ್ ಸರ್ಪೈಸ್ ಆಗಿ ಕೇಕ್ ಹಿಡಿದುಕೊಂಡು ಹೋಗಿ ಎಂಟ್ರಿಕೊಟ್ಟಿದ್ದಾರೆ. ಬಿರಾದಾರ್ ಅವರಿಂದ ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಇನ್ನು ಈ ಅನಿರೀಕ್ಷಿತ ಹುಟ್ಟುಹಬ್ಬ ಆಚರಣೆಗೆ ಬಿರಾದಾರ್ ಸಂತಸ ಕೂಡ ವ್ಯಕ್ತಪಡಿಸಿದ್ದಾರೆ.

   
  ಎಲ್ಲರ ಬಾಡಿಗೆ ಮನ್ನಾ...ಇದು ನಟಿಯ ಹೃದಯವಂತಿಕೆ..!

  ಸುಮಾರು 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಬಿರಾದಾರ್ ಅವರು ಕನ್ನಡ ಮಾತ್ರವಲ್ಲದೇ ಲಂಬಾಣಿ, ತುಳು ಹಾಗೂ ಹಿಂದಿ ಚಿತ್ರಗಳಲ್ಲೂ ಬಣ್ಣಹಚ್ಚಿದ್ದಾರೆ. ಇವರು ನೂರಾರು ಕಾಲ ಸುಖವಾಗಿರಲಿ, ಇವರ ಕನಸುಗಳೆಲ್ಲಾ ನನಸಾಗಲಿ ಮತ್ತು ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿರಲಿ ಎಂಬುದು ಎಲ್ಲರ ಆಶಯ.
  First published: