• Home
  • »
  • News
  • »
  • entertainment
  • »
  • Raju Srivastav: ಹೃದಯಾಘಾತಕ್ಕೂ ಮುನ್ನ ವಿಡಿಯೋ ಮಾಡಿ ವೀಕ್ಷಕರನ್ನು ನಗಿಸಿದ್ದ ರಾಜು ಶ್ರೀವಾಸ್ತವ್!

Raju Srivastav: ಹೃದಯಾಘಾತಕ್ಕೂ ಮುನ್ನ ವಿಡಿಯೋ ಮಾಡಿ ವೀಕ್ಷಕರನ್ನು ನಗಿಸಿದ್ದ ರಾಜು ಶ್ರೀವಾಸ್ತವ್!

ಹಾಸ್ಯನಟ ರಾಜು ಶ್ರೀವಾಸ್ತವ್​

ಹಾಸ್ಯನಟ ರಾಜು ಶ್ರೀವಾಸ್ತವ್​

ಹಾಸ್ಯನಟ ರಾಜು ಶ್ರೀವಾಸ್ತವ ಹೃದಯಾಘಾತದಿಂದ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದಾರೆ. ದೆಹಲಿಯ ಹೊಟೇಲ್‌ನಲ್ಲಿ ಜಿಮ್ ಮಾಡುತ್ತಿದ್ದ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಅವರ ಸಹೋದರ ಮತ್ತು ಪಿಆರ್‌ಒ ಕೂಡ ಇದನ್ನು ಖಚಿತಪಡಿಸಿದ್ದಾರೆ.

  • Share this:

ಮುಂಬೈ(ಆ,10): ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ (Comedian Raju Srivastava) ಅವರಿಗೆ ಹೃದಯಾಘಾತವಾಗಿದೆ. ಅವರು ದೆಹಲಿಯ ಹೋಟೆಲ್‌ನಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ಅವರು ಹೃದಯಾಘಾತಕ್ಕೆ Raju Srivastava suffers heart attack ) ಒಳಗಾಗಿದ್ದರು. ಇದಾದ ಬಳಿಕ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಈಗ ಸ್ಥಿರವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ರಾಜು ಹೋಟೆಲ್‌ನಲ್ಲಿ ಮಧ್ಯಾಹ್ನದ ತಾಲೀಮು ನಡೆಸುತ್ತಿದ್ದರು. ಟ್ರೆಡ್‌ಮಿಲ್‌ನಲ್ಲಿದ್ದ ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಅವರಿಗೆ ಲಘು ಹೃದಯಾಘಾತವಾಗಿತ್ತು. ಎರಡು ದಿನಗಳ ಕಾಲ ಅವರನ್ನು ನಿಗಾದಲ್ಲಿರಿಸಲಾಗಿದೆ ಮತ್ತು ಅವರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ.


ರಾಜು ಶ್ರೀವಾಸ್ತವ್ ಅವರ ಅಭಿಮಾನಿಗಳು ಈ ವಿಚಾರದಿಂದ ಬಹಳ ಬೇಸರಗೊಂಡಿದ್ದು, ಅವರ ಯೋಗಕ್ಷೇಮಕ್ಕಾಗ ಪ್ರಾರ್ಥಿಸಿದ್ದಾರೆ. ಇಂಡಿಯಾ ಟಿವಿ ವರದಿ ಪ್ರಕಾರ, ಹೃದಯಾಘಾತವಾದಾಗ ರಾಜು ಟ್ರೆಡ್ ಮಿಲ್ ಮೇಲೆ ವ್ಯಾಯಾಮ ಮಾಡುತ್ತಿದ್ದರು. ಹೀಗಿರುವಾಗ ಎದೆ ನೋವು ಕಾಣಿಸಿಕೊಂಡು, ಏಕಾಏಕಿ ಅವರು ಕುಸಿದಿದ್ದಾರೆ. ಕೂಡಲೇ ಅವರನ್ನು ತರಬೇತುದಾರರು ಆಸ್ಪತ್ರೆಗೆ ಕರೆತಂದಿದ್ದಾರೆ. ಇಲ್ಲಿ ಎರಡು ಬಾರಿ ಸಿಪಿಆರ್ ನೀಡಲಾಗಿದೆ.


ಇದನ್ನು ಓದಿ:  Chest Pain: ಎದೆ ನೋವೇ? ಈ ಮೂರು ಚಿಹ್ನೆಗಳಿದ್ದರೆ ಅವು ಹೃದಯಾಘಾತದ ಲಕ್ಷಣಗಳಲ್ಲ ಅಂತಾರೆ ತಜ್ಞರು


ರಾಜು ಶ್ರೀವಾಸ್ತವ್ ಅವರ ಸ್ನೇಹಿತ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರು ರಾಜು ಅವರ ಆರೋಗ್ಯದ ಬಗ್ಗೆ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಕಾಮಿಡಿ ಕಿಂಗ್ ರಾಜು ಶ್ರೀವಾಸ್ತವ್ ಅವರಿಗೆ ಹೃದಯಾಘಾತವಾಗಿರುವುದು ನಿಜ. ಅವರನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು. ಮತ್ತು ಈಗ ಅವರ ಆರೋಗ್ಯ ತುಂಬಾ ಚೆನ್ನಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ, ದೇವರ ದಯೆಯಿಂದ, ಅವರು ತುಂಬಾ ಆರೋಗ್ಯವಾಗಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ.


ರಾಜು ಶ್ರೀವಾಸ್ತವ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ


ಸುನಿಲ್ ಪಾಲ್ ಮತ್ತಷ್ಟು ಮಾತನಾಡುತ್ತಾ, “ರಾಜು ಭಾಯ್, ನೀವು ಬೇಗ ಗುಣಮುಖರಾಗುತ್ತೀರಿ. ನಾವೆಲ್ಲರೂ ನಿನ್ನನ್ನು ತುಂಬಾ ಪ್ರೀತಿಸುತ್ತೇವೆ. ನೀವು ಚೆನ್ನಾಗಿದ್ದಾರೆ ಎಂಬುದು ನಮಗೆಲ್ಲರಿಗೂ ಒಳ್ಳೆಯ ಸುದ್ದಿ" ಎಂದಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಅವರು, "ಬೇಗ ಗುಣಮುಖರಾಗಿ ರಾಜು ಶ್ರೀವಾಸ್ತವ ಭಾಯಿ ಜೀ.. ಆರೋಗ್ಯವಾಗಿರಿ, ಹೀಗೆಂದು ನಾನು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.


ಇದನ್ನು ಓದಿ:  Heart Attack: ನಿಮ್ಮ ರಕ್ತದ ಗುಂಪು ಯಾವುದು? ಹೆಚ್ಚಾಗಿ ಈ ಗುಂಪಿನವರಿಗೆ ಹೃದಯಾಘಾತವಾಗೋದು ನಿಜವೇ?


ಮಿಮಿಕ್ರಿಯ ವಿಡಿಯೋ ಹಂಚಿಕೊಂಡಿದ್ದರು



ರಾಜು ಶ್ರೀವಾಸ್ತವ ಅವರು ಹೃದಯಾಘಾತಕ್ಕೆ ಒಳಗಾಗುವ ಕೆಲವೇ ಗಂಟೆಗಳ ಮೊದಲು ತಮ್ಮ Instagram ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅವರು ಫೋನ್‌ನಲ್ಲಿ ಅಮಿತಾಬ್ ಬಚ್ಚನ್ ಅವರ ಕಾಲರ್ ಟ್ಯೂನ್ ಮೂಲಕ ಕೋವಿಡ್ -19 ಕುರಿತು ಹರಡುತ್ತಿರುವ ಮಾಹಿತಿಗೆ ಟ್ವಿಸ್ಟ್ ನೀಡಿದ್ದಾರೆ. ಕೆಲವು ದಿಗ್ಗಜ ನಟರನ್ನು ಅನುಕರಿಸಿ, ವಿನೋದ್ ಖನ್ನಾ, ಶಶಿ ಕಪೂರ್ ಮತ್ತು ಇತರ ನಟರು ಅದನ್ನು ಹೇಗೆ ಮಾಡುತ್ತಿದ್ದರು ಎಂಬುದನ್ನು ರಾಜು ತೋರಿಸಿದ್ದರು

Published by:Precilla Olivia Dias
First published: