Raju Srivastav Health Update: ರಾಜು ಶ್ರೀವಾಸ್ತವ ಸ್ಥಿತಿ ಚಿಂತಾಜನಕ, ವೆಂಟಿಲೇಟರ್​ನಲ್ಲಿ ಹಾಸ್ಯನಟ!

ಹಾಸ್ಯನಟ ರಾಜು ಶ್ರೀವಾಸ್ತವ್​

ಹಾಸ್ಯನಟ ರಾಜು ಶ್ರೀವಾಸ್ತವ್​

'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ಮೂಲಕ ಛಾಪು ಮೂಡಿಸಿದ ನಟ ಹಾಸ್ಯನಟ ರಾಜು ಶ್ರೀವಾಸ್ತವ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ AIIMSನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೆಂಟಿಲೇಟರ್​ನ್ನಲಿರಿಸಲಾಗಿದೆ.

  • Share this:

ಮುಂಬಬೈ(ಆ.11): ಖ್ಯಾತ ಹಾಸ್ಯನಟ ಹಾಗೂ ನಟ ರಾಜು ಶ್ರೀವಾಸ್ತವ್ (Comedian Raju Srivastav) ಅವರ ಸ್ಥಿತಿ ಚಿಂತಾಜನಕವಾಗಿದೆ. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ (AIIMS) ತೀವ್ರ ನಿಗಾ ಘಟಕದಲ್ಲಿ (ಐಸಿಯು) ಅವರನ್ನು ವೆಂಟಿಲೇಟರ್​ನಲ್ಲಿ ಇರಿಸಲಾಗಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ, ಬುಧವಾರ ಹೃದಯಾಘಾತಕ್ಕೆ ಒಳಗಾದ ನಂತರ, 58 ವರ್ಷದ ಶ್ರೀವಾಸ್ತವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ಇದೇ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಕೂಡ ರಾಜು ಶ್ರೀವಾಸ್ತವ ಅವರ ಆರೋಗ್ಯ ವಿಚಾರಿಸಿದ್ದಾರೆ. ಪಿಟಿಐ ಪ್ರಕಾರ, ರಾಜು ಶ್ರೀವಾಸ್ತವ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಐಸಿಯುನಲ್ಲಿ ಜೀವ ಬೆಂಬಲ ವ್ಯವಸ್ಥೆಯಲ್ಲಿದ್ದಾರೆ. ಡಾ.ನಿತೀಶ್ ನಾಯ್ಕ್ ನೇತೃತ್ವದಲ್ಲಿ ಶ್ರೀವತ್ಸ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.


ಶ್ರೀವಾಸ್ತವ ಅವರ ಸೋದರ ಮಾವ ಅಶೋಕ್ ಶ್ರೀವಾಸ್ತವ ಅವರು ಮಾಹಿತಿ ನೀಡುತ್ತಾ, ಹಾಸ್ಯನಟ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಬುಧವಾರ ಹೇಳಿದ್ದಾರೆ. ನಿತ್ಯ ವ್ಯಾಯಾಮ ಮಾಡುತ್ತಿದ್ದ ಅವರು ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣವೇ ಅವರನ್ನು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿದ್ದರು.


ಇದನ್ನು ಓದಿ:  Chest Pain: ಎದೆ ನೋವೇ? ಈ ಮೂರು ಚಿಹ್ನೆಗಳಿದ್ದರೆ ಅವು ಹೃದಯಾಘಾತದ ಲಕ್ಷಣಗಳಲ್ಲ ಅಂತಾರೆ ತಜ್ಞರು


ಆರೋಗ್ಯ ಮಾಹಿತಿ ನೀಡಿದ್ದ ಸುನಿಲ್ ಪಾಲ್


ಇದಕ್ಕೂ ಮುನ್ನ ಹಾಸ್ಯನಟ ಸುನಿಲ್ ಪಾಲ್ ಅವರು ತಮ್ಮ ಸ್ನೇಹಿತ ಶ್ರೀವಾಸ್ತವ್ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ. "ಅವರು ಉತ್ತಮವಾಗಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ" ಎಂದು ಪಾಲ್ ಮಾಧ್ಯಮಗಳೊಂದಿಗೆ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ. ಅವರು ಶ್ರೀವಾಸ್ತವ್ ಅವರ ಅಭಿಮಾನಿಗಳಿಗೆ ಅವರ ಹಾರೈಕೆಗಳಿಗೆ ಧನ್ಯವಾದ ಹೇಳಿದ್ದರು. ಶ್ರೀವಾಸ್ತವ ಅವರು 1980 ರ ದಶಕದ ಉತ್ತರಾರ್ಧದಿಂದ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ, ಆದರೆ ಅವರು 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ ನಂತರ ಜನಪ್ರಿಯರಾದರು.


ಅವರು 'ಮೈನೆ ಪ್ಯಾರ್ ಕಿಯಾ', 'ಬಾಜಿಗರ್', 'ಬೊಬ್ಬೆ ಟು ಗೋವಾ' ಮತ್ತು 'ಆಮ್ದಾನಿ ಅಥಾನಿ ಖರ್ಚಾ ರುಪಯ್ಯ' ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀವಾಸ್ತವ ಅವರು 'ಬಿಗ್ ಬಾಸ್' ಸೀಸನ್ ಮೂರರಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಶ್ರೀವಾಸ್ತವ ಅವರು ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ.


ಇದನ್ನು ಓದಿ:  Heart Attack: ನಿಮ್ಮ ರಕ್ತದ ಗುಂಪು ಯಾವುದು? ಹೆಚ್ಚಾಗಿ ಈ ಗುಂಪಿನವರಿಗೆ ಹೃದಯಾಘಾತವಾಗೋದು ನಿಜವೇ?


ಮಿಮಿಕ್ರಿಯ ವಿಡಿಯೋ ಹಂಚಿಕೊಂಡಿದ್ದರು
ರಾಜು ಶ್ರೀವಾಸ್ತವ ಅವರು ಹೃದಯಾಘಾತಕ್ಕೆ ಒಳಗಾಗುವ ಕೆಲವೇ ಗಂಟೆಗಳ ಮೊದಲು ತಮ್ಮ Instagram ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅವರು ಫೋನ್‌ನಲ್ಲಿ ಅಮಿತಾಬ್ ಬಚ್ಚನ್ ಅವರ ಕಾಲರ್ ಟ್ಯೂನ್ ಮೂಲಕ ಕೋವಿಡ್ -19 ಕುರಿತು ಹರಡುತ್ತಿರುವ ಮಾಹಿತಿಗೆ ಟ್ವಿಸ್ಟ್ ನೀಡಿದ್ದಾರೆ. ಕೆಲವು ದಿಗ್ಗಜ ನಟರನ್ನು ಅನುಕರಿಸಿ, ವಿನೋದ್ ಖನ್ನಾ, ಶಶಿ ಕಪೂರ್ ಮತ್ತು ಇತರ ನಟರು ಅದನ್ನು ಹೇಗೆ ಮಾಡುತ್ತಿದ್ದರು ಎಂಬುದನ್ನು ರಾಜು ತೋರಿಸಿದ್ದರು

First published: