ಗಜನ ಫೋಟೋಗೆ ದುಬಾರಿ ಬೆಲೆ ಕೊಟ್ಟ ಚಿಕ್ಕಣ್ಣ: ಕಾಮಿಡಿ ನಟನ ಕಳಕಳಿಗೆ ಡಿ ಬಾಸ್ ಬಹುಪರಾಕ್

ಈ ಹಿಂದೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್​ನಲ್ಲಿ ದರ್ಶನ್ ಸೆರೆ ಹಿಡಿದ ವನ್ಯಜೀವಿಗಳ ಫೋಟೋಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

zahir | news18
Updated:May 15, 2019, 8:18 PM IST
ಗಜನ ಫೋಟೋಗೆ ದುಬಾರಿ ಬೆಲೆ ಕೊಟ್ಟ ಚಿಕ್ಕಣ್ಣ: ಕಾಮಿಡಿ ನಟನ ಕಳಕಳಿಗೆ ಡಿ ಬಾಸ್ ಬಹುಪರಾಕ್
ಚಿಕ್ಕಣ್ಣ-ದರ್ಶನ್
  • News18
  • Last Updated: May 15, 2019, 8:18 PM IST
  • Share this:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿ ಎಲ್ಲರಿಗೂ ಗೊತ್ತಿರುವ ವಿಷಯ. ಬಿಡುವಿನ ವೇಳೆಯೆಲ್ಲಾ ತಮ್ಮ ಸಂಗಡಿಗರೊಂದಿಗೆ ಡಿ ಬಾಸ್ ಫಾರ್ಮ್​ ಹೌಸ್​ನಲ್ಲೇ ಕಾಲ ಕಳೆಯುತ್ತಾರೆ. ಇವರ ಪ್ರಾಣಿ ಪ್ರೀತಿಯನ್ನು ಗಮನಿಸಿಯೇ ಕರ್ನಾಟಕ ಅರಣ್ಯ ಇಲಾಖೆಯು ಇವರನ್ನು ರಾಯಭಾರಿಯನ್ನಾಗಿ ಮಾಡಿದೆ ಎಂದರೆ ತಪ್ಪಾಗಲಾರದು.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ದಾಸ ಅರಣ್ಯ ಸಫಾರಿ ಮಾಡಿ ಒಂದಷ್ಟು ಫೋಟೋಗಳನ್ನು ಸೆರೆ ಹಿಡಿದಿದ್ದರು. ಆ ಫೋಟೋಗಳನ್ನು ಮಾರಾಟಕ್ಕಿಟ್ಟು, ಅದರಿಂದ ಸಿಗುವ ಹಣವನ್ನು ವನ್ಯಜೀವಿ ಸಂರಕ್ಷಣೆಯ ನೆರವಿಗೆ ನೀಡುವುದಾಗಿ ದಚ್ಚು ತಿಳಿಸಿದ್ದರು. ಅದರಂತೆ ಇತ್ತೀಚೆಗಷ್ಟೇ ನಟ ಧರ್ಮ ಕೀರ್ತಿರಾಜ್ ದಾಸನ ಕ್ಯಾಮೆರಾದಲ್ಲಿ ಸೆರೆಯಾದ ಫೋಟೋವನ್ನು ಖರೀದಿಸಿದ್ದರು. ಇದೀಗ ಡಿ ಬಾಸ್ ಸೆರೆ ಹಿಡಿದ ಮತ್ತೊಂದು ಫೋಟೋವನ್ನು ಸ್ಯಾಂಡಲ್​ವುಡ್​ ಕಾಮಿಡಿ ಕಿಂಗ್ ಪಾಲಾಗಲಿದೆ.

ಹೌದು, ಚಾಲೆಂಜಿಂಗ್ ಸ್ಟಾರ್ ಕ್ಲಿಕ್ಕಿಸಿದ ಆನೆ ಫೋಟೋವನ್ನು ಹಾಸ್ಯ ನಟ ಚಿಕ್ಕಣ್ಣ ಖರೀದಿಸಿದ್ದಾರೆ. ಅದು ಕೂಡ ಬರೋಬ್ಬರಿ 1 ಲಕ್ಷ ರೂ. ನೀಡಿ ಎಂಬುದು ವಿಶೇಷ. ಖುದ್ದು ದರ್ಶನ್ ಅವರನ್ನು ಭೇಟಿಯಾಗಿ ಚಿಕ್ಕಣ್ಣ ಗಜನ ಫೋಟೋ ಖರೀದಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಡಿ ಬಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ 1 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು" ಎಂದು ಡಿ ಬಾಸ್ ಟ್ವೀಟರ್​ನಲ್ಲಿ ಹೇಳಿಕೊಂಡಿದ್ದರು.


ಈ ಹಿಂದೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್​ನಲ್ಲಿ ದರ್ಶನ್ ಸೆರೆ ಹಿಡಿದ ವನ್ಯಜೀವಿಗಳ ಫೋಟೋಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಅನೇಕ ನಟರು ಹಾಗೂ ನಿರ್ಮಾಪಕರು ಡಿ ಬಾಸ್​ ಕ್ಯಾಮೆರಾದಲ್ಲಿ ಸೆರೆಯಾದ ಫೋಟೋಗಳನ್ನು ಖರೀದಿಸಿದ್ದರು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗುವುದಕ್ಕಿಂತ ಮುಂಚೆ ಸ್ಯಾಂಡಲ್​ವುಡ್​ನಲ್ಲಿ ಅಸಿಸ್ಟೆಂಟ್ ಕ್ಯಾಮೆರಾಮೆನ್ ಆಗಿ ಕಾರ್ಯನಿರ್ವಹಿಸಿದ್ದರು ಎಂಬುದು ವಿಶೇಷ.
First published:May 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading