Olavina Nildana: ಸಿದ್ಧಾಂತ್ ಕುಟುಂಬ ಖುಷಿಯಾಗಿರುವಂತೆ ಮಾಡಿದ್ದಾಳೆ ತಾರಿಣಿ! ಎಲ್ಲ ಅವನ ಪ್ರೀತಿಗಾಗೇನಾ?

ತಾರಿಣಿ ಹೇಳಿದಂತೆ ಸಿದ್ಧಾಂತ್ 12 ಗಂಟೆಗೆ ಕೇಕ್ ಕಟ್ ಮಾಡಿಸ್ತಾನೆ. ಅದಕ್ಕೆ ಅವರ ಅಮ್ಮ ತುಂಬಾ ಖುಷಿಯಾಗಿದ್ದಾಳೆ. ಇದಕ್ಕೆಲ್ಲಾ ತಾರಿಣಿಯೇ ಕಾರಣ. ತಾರಿಣಿಯೇ ಸಿದ್ಧಾಂತ್ ಅಮ್ಮನಿಗೆ ಸೀರೆ ಸೆಲೆಕ್ಟ್ ಮಾಡಿರುತ್ತಾಳೆ. ಅದು ಅವರ ಅಮ್ಮನಿಗೆ ಇಷ್ಟ ಆಗುತ್ತೋ, ಇಲ್ವೋ ಎನ್ನೋ ಕುತೂಹಲದಲ್ಲಿ ಇದ್ದಾಳೆ. ಮುಂದೇನಾಗುತ್ತೆ?

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

  • Share this:
    ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ (Siddhant) ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ, ಸಿದ್ಧಾಂತ್ ಮೇಲಿನ ಪ್ರೀತಿ, ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಪ್ರೀತಿ (Love) ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ.

    ಸಿದ್ಧಾಂತ್ ಪ್ರೀತಿ ಪಡೆಯಬೇಕು ತಾರಿಣಿ
    ತಾರಿಣಿ-ಸಿದ್ಧಾಂತ್ ಮಧ್ಯೆ ಸುಳ್ಳು ನಿಶ್ಚಿತಾರ್ಥ ಆಗಿದ್ದು ನಿಜ, ಆದ್ರೆ ತಾರಿಣಿಗೆ ಸಿದ್ಧಾಂತ್ ಕಂಡ್ರೆ ತುಂಬಾ ಪ್ರೀತಿ. ಹೇಗಾದ್ರೂ ಮಾಡಿ ಅವನ ಪ್ರೀತಿ ಪಡೆಯಬೇಕು ಎಂದು ಹಂಬಲಿಸುತ್ತಿದ್ದಾಳೆ. ಸಿದ್ಧಾಂತ್ ಗೆ ತಾರಿಣಿ ಕಂಡ್ರೆ ಇಷ್ಟ. ಆದ್ರೆ ಪ್ರೀತಿ ಅಲ್ಲ. ಒಳ್ಳೆಯ ಸ್ನೇಹಿತೆಯಾಗಿ ತಾರಿಣಿ ಇಷ್ಟ. ಇಬ್ಬರೂ ಯಾವಾಗಲು ಜೊತೆಗೆ ಇರುತ್ತಾರೆ. ಎಲ್ಲ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

    ಸಿದ್ಧಾಂತ್ ಅಮ್ಮನಿಗೆ ಸೀರೆ ಸೆಲೆಕ್ಟ್ ಮಾಡಿದ ತಾರಿಣಿ
    ಸಿದ್ಧಾಂತ್ ತಂದೆ ತನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಸೀರೆ ಉಡುಗೊರೆ ಕೊಡಬೇಕು ಎಂದುಕೊಂಡಿರುತ್ತಾರೆ. ಅದಕ್ಕೆ ಸೀರೆಯನ್ನು ಸೆಲೆಕ್ಟ್ ಮಾಡಲು, ಸಿದ್ಧಾಂತ್, ತಾರಿಣಿ ಹೋಗಿರುತ್ತಾರೆ. ತಾರಿಣಿಯೇ ಸಿದ್ಧಾಂತ್ ಅಮ್ಮನಿಗೆ ಸೀರೆ ಸೆಲೆಕ್ಟ್ ಮಾಡಿರುತ್ತಾಳೆ. ಅದು ಅವರ ಅಮ್ಮನಿಗೆ ಇಷ್ಟ ಆಗುತ್ತೋ, ಇಲ್ವೋ ಎನ್ನೋ ಕುತೂಹಲದಲ್ಲಿ ಇದ್ದಾಳೆ.

    ಇದನ್ನೂ ಓದಿ: Jothe Jotheyali: ಜೊತೆ ಜೊತೆಯಲಿ ಮೆಗಾ ಟ್ವಿಸ್ಟ್! ಹರೀಶ್ ರಾಜ್ ಬಂದಿರೋದೇ ಆರ್ಯವರ್ಧನ್ ಬದಲಿಗೆ!

    ಸಿದ್ಧಾಂತ್ ಕುಟುಂಬದ ಖುಷಿಗೆ ತಾರಿಣಿ ಕಾರಣ
    ತಾರಿಣಿ ಸಿದ್ಧಾಂತ್‍ಗೆ ಕರೆ ಮಾಡಿ, ನಿಮ್ಮ ಅಮ್ಮನಿಗೆ ರಾತ್ರಿ 12 ಗಂಟೆಗೆ ವಿಶ್ ಮಾಡಲ್ವಾ ಎಂದು ಕೇಳುತ್ತಾಳೆ. ಅದಕ್ಕೆ ಸಿದ್ಧಾಂತ್ ಆ ರೀತಿಯ ಅಭ್ಯಾಸ ಇಲ್ಲ ಎನ್ನುತ್ತಾನೆ. ಅದಕ್ಕೆ ತಾರಿಣಿ ಮಾಡಿ ನೋಡಿ ಎಷ್ಟು ಖುಷಿ ಆಗ್ತಾರೆ ಅಂತ ಎನ್ನುತ್ತಾಳೆ. ಅದಕ್ಕೆ ತಾರಿಣಿ ಹೇಳಿದಂತೆ ಸಿದ್ಧಾಂತ್ 12 ಗಂಟೆಗೆ ಕೇಕ್ ಕಟ್ ಮಾಡಿಸ್ತಾನೆ. ಅದಕ್ಕೆ ಅವರ ಅಮ್ಮ ತುಂಬಾ ಖುಷಿಯಾಗಿದ್ದಾಳೆ. ಇದಕ್ಕೆಲ್ಲಾ ತಾರಿಣಿಯೇ ಕಾರಣ.

    Colors Kannada serial, Kannada serial, Olavina nildana Serial, Olavina Nildana serial today episode, interestin episode in serial, ಒಲವಿನ ನಿಲ್ದಾಣ ಧಾರಾವಾಹಿ, ಸಿದ್ಧಾಂತ್ ಕುಟುಂಬ ಖುಷಿಯಾಗಿರುವಂತೆ ಮಾಡಿದ್ದಾಳೆ ತಾರಿಣಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸಿದ್ಧಾಂತ್ ಕುಟುಂಬ


    ಸಿದ್ಧಾಂತ್ ಮನವೊಲಿಸಬೇಕು ತಾರಿಣಿ
    ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿರೋದು ತಾರಿಣಿ ಮನೆಯಲ್ಲಿ ಗೊತ್ತಿಲ್ಲ. ಅದಕ್ಕೆ, ಸಿದ್ಧಾಂತ್ ಕುಟುಂಬದವರನ್ನು ಮನೆಗೆ ಕರೆದುಕೊಂಡು ಬರಬೇಕು ಎಂದು ಆಕೆಯ ಅಮ್ಮ ಹೇಳಿದ್ದಾಳೆ. ಆದ್ರೆ ಅವರನ್ನೆಲ್ಲಾ ಹೇಗೆ ಮನೆಗೆ ಕರೆದುಕೊಂಡು ಹೋಗಬೇಕು ಎಂದು ಗೊತ್ತಾಗದೇ ಒದ್ದಾಟ ನಡೆಸುತ್ತಿದ್ದಾಳೆ. ಹೇಗಾದ್ರೂ ಸಿದ್ಧಾಂತ್ ಪ್ರೀತಿ ಪಡೆದ್ರೆ, ಅವರನ್ನು ಮನೆಗೆ ಕರೆದುಕೊಂಡು ಹೋಗಬಹುದು ಎಂದು ಪರದಾಡುತ್ತಿದ್ದಾಳೆ.

    ಇದನ್ನೂ ಓದಿ: Lakshana Serial: ಮೌರ್ಯನ ಬಗ್ಗೆ ಹೇಳಲಾಗದೇ ನಕ್ಷತ್ರಾ ಒದ್ದಾಟ, ತಮ್ಮನ ಬಗ್ಗೆ ಸತ್ಯ ತಿಳಿದುಕೊಳ್ತಾನಾ ಭೂಪತಿ?

    ತಾರಿಣಿ-ಸಿದ್ಧಾಂತ್ ದೂರ ಮಾಡಲು ಪಾಲಾಕ್ಷನ ಕುತಂತ್ರ
    ಪಾಲಾಕ್ಷಾ, ತಾರಿಣಿ ಮಾವ. ಆತನಿಗೆ ತಾರಿಣಿ-ಸಿದ್ಧಾಂತ್ ಮದುವೆ ಆಗೋದು ಇಷ್ಟ ಇಲ್ಲ. ಅದಕ್ಕೆ ಇಬ್ಬರನ್ನೂ ಹೇಗಾದ್ರೂ ದೂರ ಮಾಡಬೇಕು ಎಂದು ಪಣ ತೊಟ್ಟಿದ್ದಾನೆ. ಅದಕ್ಕೆ ಧೀರಜ್ ಎನ್ನುವವನ ಜೊತೆ ಸೇರಿ, ಬೆಂಗಳೂರಿಗೆ ಬಂದಿದ್ದಾನೆ. ಕಾಲೇಜಿನಲ್ಲಿ ಸಿದ್ಧಾಂತ್‍ಗೆ ಆಗದೇ ಇರೋರನ್ನು ಪರಿಚಯ ಮಾಡಿಕೊಂಡು, ಸಿದ್ಧಾಂತ್ ಹೆಸರು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾನೆ.
    Published by:Savitha Savitha
    First published: