ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿ ದಿನ ರಾತ್ರಿ 10 ಗಂಟೆಗೆ ತ್ರಿಪುರ ಸುಂದರಿ (Tripura Sundari) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಇದೊಂದು ವಿಭಿನ್ನ ಕಥೆಯಾಗಿದೆ. ಗಂಧರ್ವ ಲೋಕದ ಸಿಂಹಾಸನದ ಮೇಲೆ ಧನಂಜಯ ಎಂಬ ದುಷ್ಟ ಕೂತಿದ್ದಾನೆ. ಅವನ ದರ್ಪದಿಂದ ಗಂಧರ್ವರೆಲ್ಲೆರೂ ಕಳೆದ 27 ವರ್ಷಗಳಿಂದ ಬಳಲುತ್ತಿದ್ದಾರೆ. ಸಿಂಹಾಸನದ ಮೇಲೆ ಗಂಧರ್ವ ರಾಜ (King) ರಾರಾಜಿಸದ ಹೊರತು, ಗಂಧರ್ವ ಲೋಕಕ್ಕೆ ನೆಮ್ಮದಿ ಇಲ್ಲ. ಮಯೂರು ಸಿಂಹಾಸನದ ಮೇಲೆ ಹಕ್ಕಿರುವುದು ಅಥರ್ವ ದೇವರದ್ದೇ, ಆದ್ರೆ ಆ ಧನಂಜಯ ಅವರನ್ನು ಸೆರೆ ಹಿಡಿದು, ಯಾರ ಅನುಮತಿಯೂ ಇಲ್ಲದೇ ಬಲವಂತವಾಗಿ ಸಿಂಹಾಸನದ ಮೇಲೆ ಕುಳಿತಿದ್ದಾನೆ. ಅದಕ್ಕೆ ರಾಜಕುಮಾರನ್ನು ಕರೆದುಕೊಂಡು ಹೋಗಲು ಆಮ್ರಪಾಲಿ ಭೂಲೋಕಕ್ಕೆ ಬಂದಿದ್ದಾಳೆ.
ಪದಕ ಕಳೆದುಕೊಂಡ ಆಮ್ರಪಾಲಿ
ಆಮ್ರಪಾಲಿ ಭೂಲೋಕದಲ್ಲಿ ರಾಜಕುಮಾರನನ್ನು ಹುಡುಕಲು ಕೊಟ್ಟಿದ್ದ ಪದಕವನ್ನು ಕಳೆದುಕೊಂಡಿದ್ದಾರೆ. ಪದಕ ಇದ್ದಿದ್ರೆ ರಾಜಕುಮಾರ ಹತ್ತಿರ ಇದ್ರೆ ಆ ಪದಕ ಹೊಳೆಯುತ್ತಿತ್ತು. ಈಗ ಅದು ಇಲ್ಲದೇ ಹುಡುಕಲು ಕಷ್ಟವಾಗ್ತಿದೆ.
ಆಮ್ರಪಾಲಿ ಯಾವ ರಾಜಕುಮಾರನನ್ನು ಹುಡುಕುತ್ತಿದ್ದಾಳೋ ಅದೇ ಮನೆಗೆ ಬಂದಿದ್ದಾಳೆ. ಕಷ್ಟದಲ್ಲಿದ್ದ ಆಮ್ರಪಾಲಿಯನ್ನು ಪ್ರದ್ಯುಮ್ನ ಕಾಪಾಡಿದ್ದ. ಮನೆಗೆ ಕರೆದುಕೊಂಡು ಬಂದಿದ್ದಾನೆ. ಅವನೇ ರಾಜಕುಮಾರ.
ಆಮ್ರಪಾಲಿ ಸ್ನೇಹ ಮಾಡಿರುವ ಬೃಂದಾ
ಪ್ರದ್ಯುಮ್ನ ಮನೆಯಲ್ಲಿರುವ ಆಮ್ರಪಾಲಿಗೆ ಬೃಂದಾ ಸ್ನೇಹ ಸಿಕ್ಕಿದೆ. ಬೃಂದಾಗೆ ಆಮ್ರಪಾಲಿ ಗಂಧರ್ವ ಕನ್ನೆ ಎನ್ನುವುದು ಗೊತ್ತಾಗಿದೆ. ಅದಕ್ಕೆ ಆಕೆಗೆ ಭೂಲೋಕದಲ್ಲಿ ಹೇಗಿರಬೇಕು ಎಂದು ಹೇಳಿಕೊಡ್ತಿದ್ದಾಳೆ. ನಿನ್ನ ಮಾಯಾಶಕ್ತಿಯನ್ನು ಇಲ್ಲಿ ಬಳಸಬೇಡ. ನಿನ್ನೆ ಮೇಲೆ ಅನುಮಾನ ಬರುತ್ತೆ ಎಂದೆಲ್ಲಾ ಹೇಳಿದ್ದಾಳೆ. ಆಮ್ರಪಾಲಿ ಆಕೆ ಹೇಳಿದಂತೆ ಕೇಳುತ್ತಿದ್ದಾಳೆ.
ಆಮ್ರಪಾಲಿ ಕಣ್ಣೀರು ಹಾಕಿದ್ರೆ ಮಳೆ
ಆಮ್ರಪಾಲಿ ಭೂಲೋಕದಲ್ಲಿ ಇದ್ದಾಳೆ. ಆಕೆ ಕಣ್ಣೀರು ಹಾಕಿದ್ರೆ ಮಳೆ ಬರುತ್ತದೆ. ಅದು ಬೃಂದಾಗೆ ಗೊತ್ತು. 2 ಬಾರಿ ಮಳೆ ಬಂದಿದೆ. ಆಮ್ರಪಾಲಿ ಅಳುವ ರೀತಿ ಕಂಡ್ರೆ, ಆಕೆ ಅವಳನ್ನು ನಗಿಸುತ್ತಾಳೆ. ಸುತ್ತಮುತ್ತ ಇರುವವರಿಗೆ ಅನುಮಾನ ಬರದಂತೆ ನೋಡಿಕೊಳ್ತಾಳೆ. ಆಮ್ರಪಾಲಿಗೆ ಒಂದು ಕಾವಲುಗಾರ್ತಿಯಾಗಿದ್ದಾಳೆ.
ಛಾಯಾಗೆ ಅನುಮಾನ
ಪ್ರದ್ಯುಮ್ನನ ಅಕ್ಕ ಛಾಯಾ. ಛಾಯಾಗೆ ಆಮ್ರಪಾಲಿ ಮೇಲೆ ಅನುಮಾನ ಬಂದಿದೆ. ಇವಳು ನಾವು ಅಂದುಕೊಂಡಂತೆ ಸಾಮಾನ್ಯ ಹುಡುಗಿ ಅಲ್ಲ ಅನ್ನಿಸುತ್ತೆ. ಇವಳ ಸುತ್ತಮುತ್ತ ಏನೋ ನಡೆಯುತ್ತಿದೆ. ಇವಳ ಮೇಲೆ ಒಂದು ಕಣ್ಣಿಡಬೇಕು ಎಂದುಕೊಳ್ತಿದ್ದಾಳೆ. ಛಾಯಾ ಒಂದು ಸಾರಿ ಯಾರ ಮೇಲಾದ್ರೂ ಕಣ್ಣಿಟ್ರೆ ಅವರ ಬಗ್ಗೆ ತಿಳಿದುಕೊಳ್ಳದೇ ಬಿಡುವುದಿಲ್ಲ. ಛಾಯಾಗೆ ಆಮ್ರಪಾಲಿ ಬಗ್ಗೆ ಗೊತ್ತಾಗುತ್ತಾ ಎನ್ನುವುದನ್ನು ನೋಡಬೇಕು.
ಛಾಯಾ ವಿಲನ್
ಪ್ರದ್ಯುಮ್ನ ಅಕ್ಕ ಛಾಯಾ ವಿಲನ್. ಎಲ್ಲಾ ಪ್ರೀತಿಯನ್ನು ಪ್ರದ್ಯುಮ್ನಗೆ ತೋರಿಸುತ್ತಾರೆ ಎಂದು ದ್ವೇಷ ಮಾಡ್ತಾ ಇದ್ದಾಳೆ. ಕಾಲು ಚೆನ್ನಾಗಿದ್ರೂ ನಡೆಯೋಕೆ ಬರಲ್ಲ ಎಂದು ಸುಳ್ಳು ಹೇಳಿದ್ದಾಳೆ. ವಿಲ್ ಚೇರ್ ಮೇಲೆ ಸದಾ ಕೂತಿರುತ್ತಾಳೆ. ಎಲ್ಲಾ ಆಸ್ತಿ ತನ್ನ ತಮ್ಮನ ಪಾಲಾಗುತ್ತೆ ಎಂದು ಹೊಟ್ಟೆ ಉರಿದುಕೊಳ್ತಾ ಇದ್ದಾಳೆ. ಅದಕ್ಕೆ ಡ್ರಾಮಾ ಮಾಡಿ ಎಲ್ಲರ ಕರುಣೆ ಗಿಟ್ಟಿಸಿಕೊಳ್ತಾ ಇದ್ದಾಳೆ.
ಇದನ್ನೂ ಓದಿ: Punyavathi: ಹೊಲ, ಮನೆ ಅಡವಿಟ್ಟು ಪದ್ಮಿನಿ ಮದುವೆ, ಎಲ್ಲವೂ ಮಗಳಿಗಾಗಿ ಎಂದ ಭುಜಂಗಯ್ಯ!
ಪದಕ ಕಳೆದುಕೊಂಡುರವ ಆಮ್ರಪಾಲಿಗೆ ರಾಜಕುಮಾರ ಸಿಗ್ತಾನಾ? ಆಮ್ರಪಾಲಿ ಆ ಪದಕವನ್ನು ಹೇಗೆ ಹುಡುಕುತ್ತಾಳೆ? ಜೊತೆಗಿರುವ ರಾಜಕುಮಾರನ ಗುರುತು ಸಿಗುತ್ತಾ? ಆಮ್ರಪಾಲಿಗೆ ಸಹಾಯ ಮಾಡುವವರು ಯಾರು? ಛಾಯಾಗೆ ಆಮ್ರಪಾಲಿ ಬಗ್ಗೆ ನಿಜ ಗೊತ್ತಾಗುತ್ತಾ? ಮುಂದೇನಾಗುತ್ತೆ ಎಂದು ನೋಡೋಕೆ ತ್ರಿಪುರ ಸುಂದರಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ