• Home
  • »
  • News
  • »
  • entertainment
  • »
  • Kendasampige: ತೀರ್ಥಂಕರ್ ನನ್ನನ್ನು ಮದ್ವೆಯಾಗಿದ್ದೇ ವೋಟ್‌ಗಾಗಿ ಅಂತ ಸುಮನಾಗೆ ಗೊತ್ತಾಯ್ತಾ?

Kendasampige: ತೀರ್ಥಂಕರ್ ನನ್ನನ್ನು ಮದ್ವೆಯಾಗಿದ್ದೇ ವೋಟ್‌ಗಾಗಿ ಅಂತ ಸುಮನಾಗೆ ಗೊತ್ತಾಯ್ತಾ?

ಸುಮನಾಗೆ ಸತ್ಯ ಗೊತ್ತಾಯ್ತಾ?

ಸುಮನಾಗೆ ಸತ್ಯ ಗೊತ್ತಾಯ್ತಾ?

ತೀರ್ಥಂಕರ್‌ನ ಅಣ್ಣ ಎಲೆಕ್ಷನ್ ಮುಗಿಯುವವರೆಗೂ ಮಾತ್ರ ಇವಳು ಇರ್ತಾಳೆ ಎನ್ನುವುದನ್ನು ಕೇಳಿಸಿಕೊಂಡ ಸುಮನಾ, ಶಾಕ್ ಆಗಿದ್ದಾಳೆ. ಹಾಗಾದ್ರೆ ವೋಟ್‌ಗಾಗಿ ನನ್ನನ್ನು ಮದುವೆ ಆದ್ರಾ ಎಂದು ಅನುಮಾನ ಪಡುತ್ತಿದ್ದಾಳೆ. ಇದೀಗ ಕೆಂಡಸಂಪಿಗೆಯಲ್ಲಿ ಏನಾಗುತ್ತಿದೆ?

  • News18 Kannada
  • Last Updated :
  • Karnataka, India
  • Share this:

    ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಹೀಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗಿದೆ. ಅವರ ಅಪ್ಪ ತೀರ್ಥಂಕರ್ ನನ್ನು ಮಾತನಾಡಿಸುವುದು ಬಿಟ್ಟಿದ್ದಾರೆ. ಮನೆ ಬಿಟ್ಟು ಹೋಗಿದ್ದಾರೆ. ಇನ್ನು ತೀರ್ಥಂಕರ್ ತಮ್ಮ ಸಹ ಸುಮನಾಳನ್ನು ಅತ್ತಿಗೆ ಎಂದು ಒಪ್ಪಿಕೊಳ್ತಿಲ್ಲ. ಮನೆಯಲ್ಲಿ ದಿನವೂ ಜಗಳ ನಡೆಯುತ್ತಿದೆ. ಸುಮನಾಗೆ ತನ್ನನ್ನು ಕಾರ್ಪೊರೇಟರ್ ಮದುವೆ (Marriage) ಆಗಿದ್ದು ವೋಟ್ (Vote) ಗಾಗಿ ಎಂದು ಗೊತ್ತಾಗಿದೆ.


    ಮದುವೆ ಚುನಾವಣೆ ಗಿಮಿಕ್
    ತೀರ್ಥಂಕರ್ ಗೆ ಸುಮನಾ ಕಂಡ್ರೆ ಇಷ್ಟ ಇಲ್ಲ. ಅನಿವಾರ್ಯವಾಗಿ ಎಲ್ಲರ ಮುಂದೆ ಒಳ್ಳೆವನಾಗಲು ತಾಳಿ ಕಟ್ಟಿದ್ದಾನೆ. ಅದಕ್ಕೆ ಸುಮ್ಮನೇ ಸುಮನಾ ಮುಂದೆ ಮತ್ತೆ ಗೌರವ ಇದೆ ಎನ್ನೋ ತರ ನಾಟಕ ಆಡ್ತಾ ಇದ್ದಾನೆ. ಸುಮನಾ ತೀರ್ಥಂಕರ್ ನಾಟಕವನ್ನು ನಿಜ ಎಂದುಕೊಂಡಿದ್ದಾಳೆ. ಆತ ಹೇಳಿದಂತೆ ಕೇಳುತ್ತಿದ್ದಾಳೆ. ಆದ್ರೆ ಇದೆಲ್ಲಾ ಚುನಾವಣೆ ಗಿಮಿಕ್ ಮಾತ್ರ.


    ಎಲೆಕ್ಷನ್ ಆದ ಮೇಲೆ ಸುಮನಾಗೆ ಡಿವೋರ್ಸ್
    ಸುಮನಾ ಮದುವೆ ಆಗಿದ್ದನ್ನು ತನ್ನ ಮನೆಯವರ ಬಳಿ ತೀಥರ್ಂಕರ್ ಸಮರ್ಥನೆ ಮಾಡಿಕೊಂಡಿದ್ದಾನೆ. ನನ್ನ ಇಷ್ಟು ದಿನದ ಕನಸು ಹಾಳಾಗುತ್ತಿತ್ತು. ಅದಕ್ಕೆ ಮದುವೆ ಆಗಿದ್ದೀನಿ. ಎಲೆಕ್ಷನ್ ಮುಗಿದ ಮೇಲೆ ಆಕೆಯನ್ನು ಬಿಡುತ್ತೇನೆ. ಡಿವೋರ್ಸ್ ಕೊಡುತ್ತೇನೆ. ಮನೆಯವರು ನಿಶ್ಚಯ ಮಾಡಿರೋ ನಿತ್ಯಾಳನ್ನು ಮದುವೆ ಆಗುತ್ತೇನೆ ಎಂದು ಮನೆಯವರ ಬಳಿ ಹೇಳಿದ್ದಾನೆ.


    ಇದನ್ನೂ ಓದಿ: Kannadathi: ಅಮ್ಮಮ್ಮ ಕೋಮಾದತ್ತ; ಸಾನಿಯಾ ಮುಂದೆ ಸತ್ಯ ಬಾಯ್ಬಿಟ್ಟ ರತ್ನಮಾಲಾ!


    ಸುಮನಾಗೆ ಸತ್ಯ ಗೊತ್ತಾಯ್ತಾ?
    ಸುಮನಾ ತೀರ್ಥ ಮನೆಯಲ್ಲಿ ಯಾವುದೇ ಅಡುಗೆ ಮಾಡಿದ್ರೂ ಅವರ ಅತ್ತಿಗೆ ಊಟ ಮಾಡಲ್ಲ. ಆದ್ರೆ ಅವರ ಅಣ್ಣ ಸೂಪರ್ ಆಗಿದೆ ಎಂದು ಹೇಳಿ ತಿನ್ನುತ್ತಾರೆ. ಇವತ್ತೂ ಅದೇ ರೀತಿ ಆಗುತ್ತೆ. ಸುಮನಾ ಮಾಡಿದ ಈರುಳ್ಳಿ ದೋಸೆಯನ್ನು ಚೆನ್ನಾಗಿದೆ ಎಂದು ಹೇಳಿ ತೀರ್ಥ ಅಣ್ಣ ತಿನ್ನುತ್ತಾರೆ. ಅದಲ್ಲದೇ ಎಲೆಕ್ಷನ್ ಮುಗಿಯುವವರೆಗೂ ತಾನೇ ಇದೆಲ್ಲಾ ಎಂದು ಹೇಳ್ತಾನೆ. ಅದನ್ನು ಸುಮನಾ ಕೇಳಿಸಿಕೊಂಡಿದ್ದಾಳೆ.


    ಶಾಕ್ ಆದ ಸುಮನಾ!
    ತೀರ್ಥಂಕರ್  ಅಣ್ಣ ಎಲೆಕ್ಷನ್ ಮುಗಿಯುವವರೆಗೂ ಮಾತ್ರ ಇವಳು ಇರ್ತಾಳೆ ಎನ್ನುವುದನ್ನು ಕೇಳಿಸಿಕೊಂಡ ಸುಮನಾ ಶಾಕ್ ಆಗಿದ್ದಾಳೆ. ಹಾಗಾದ್ರೆ ವೋಟ್ ಗಾಗಿ ನನ್ನನ್ನು ಮದುವೆ ಆದ್ರಾ ಎಂದು ಅನುಮಾನ ಪಡುತ್ತಿದ್ದಾಳೆ. ತೀರ್ಥಂಕರ್ ನನ್ನು ಸಂಪೂರ್ಣವಾಗಿ ನಂಬಿ ಮನೆಗೆ ಬಂದ ಸುಮನಾಗೆ ಮೋಸ ಆಗ್ತಿದೆ.


    Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಎಲೆಕ್ಷನ್ ಆದ ಮೇಲೆ ಸುಮನಾಗೆ ಡಿವೋರ್ಸ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತೀರ್ಥಂಕರ್


    ನಿತ್ಯಾಳಗೆ ಮತ್ತೆ ಸಮರ್ಥನೆ
    ಕಾರ್ಪೊರೇಟರ್ ತೀರ್ಥಂಕರ್ ತಾನು ಮದುವೆ ಆಗ ಬೇಕಿದ್ದ ನಿತ್ಯಾಳಿಗೆ ಮತ್ತೆ ಸಮರ್ಥನೆ ಮಾಡುತ್ತಿದ್ದಾನೆ. ನಿತ್ಯಾ ನಿನ್ನ ಕಂಡ್ರೆ ನನಗೆ ತುಂಬಾ ಪ್ರೀತಿ. ಎಲೆಕ್ಷನ್ ಆಗೋವರೆಗೆ ಕಾಯಿ ನಾನು ನಿನ್ನನ್ನು ಖಂಡಿತವಾಗಿಯೂ ಮದುವೆ ಆಗ್ತೀನಿ ಎಂದು ಹೇಳಿದ್ದಾನೆ. ಅದಕ್ಕೆ ನಿತ್ಯ , ಸರಿ ನೀವೇ ನನ್ನ ಗಂಡ. ನಾನು ಕಾಯ್ತೀನಿ ಎಂದು ಹೇಳಿದ್ದಾಳೆ.


    Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಎಲೆಕ್ಷನ್ ಆದ ಮೇಲೆ ಸುಮನಾಗೆ ಡಿವೋರ್ಸ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತೀರ್ಥಂಕರ್ ಅತ್ತಿಗೆ


    ಇದನ್ನೂ ಓದಿ: BBK Season 09: ಸಾನ್ಯಾ ಮಾಡಿದ್ದನ್ನು ಪವಾಡ ಎಂದುಕೊಂಡ ರೂಪೇಶ್ ರಾಜಣ್ಣ, ಮಜಾ ತೆಗೆದುಕೊಂಡ ಪ್ರಶಾಂತ್!


    ಸುಮನಾ ಮುಂದಿನ ನಡೆ ಏನು?
    ಸುಮನಾಗೆ ತೀರ್ಥಂಕರ್ ಅಣ್ಣ ಮಾತನಾಡಿದ್ದರ ಅರ್ಥ ಗೊತ್ತಾಗಿದ್ಯಾ? ಕಾರ್ಪೊರೇಟರ್ ಮತಕ್ಕಾಗಿ ಮದುವೆ ಆಗಿದ್ದಾರೆ ಎಂದು ತಿಳಿದಿದ್ಯಾ? ಹಾಗಾದ್ರೆ ಸುಮನಾ ಈಗ ಏನ್ ಮಾಡ್ತಾಳೆ. ತೀರ್ಥನನ್ನು ಬಿಟ್ಟು ತನ್ನ ತವರು ಮನೆ ಸೇರ್ತಾಳಾ? ಎಲ್ಲವನ್ನೂ ನೋಡಲು ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    Published by:Savitha Savitha
    First published: