• Home
 • »
 • News
 • »
 • entertainment
 • »
 • Ramachari: ಇಂದೇ ರಾಮಾಚಾರಿ ಮದುವೆ! ಅಮ್ಮನ ಮಾತಿಗೆ ಕಟ್ಟು ಬಿದ್ದು ಅತ್ತೆ ಮಗಳಿಗೆ ತಾಳಿ ಕಟ್ತಾನಾ?

Ramachari: ಇಂದೇ ರಾಮಾಚಾರಿ ಮದುವೆ! ಅಮ್ಮನ ಮಾತಿಗೆ ಕಟ್ಟು ಬಿದ್ದು ಅತ್ತೆ ಮಗಳಿಗೆ ತಾಳಿ ಕಟ್ತಾನಾ?

ರಾಮಾಚಾರಿ

ರಾಮಾಚಾರಿ

ರಾಮಾಚಾರಿ ಅಮ್ಮ ತನ್ನ ಅಣ್ಣನಿಗೆ ಕರೆ ಮಾಡಿ ದೀಪಾಳನ್ನು ಈ ಕೂಡಲೇ ಮದುವೆ ಹೆಣ್ಣಿನ ಅಲಂಕಾರ ಮಾಡಿ, ನಮ್ಮ ಮನೆಗೆ ಕರೆದುಕೊಂಡು ಬನ್ನಿ ಎನ್ನುತ್ತಾಳೆ. ಅಂತೆಯೇ ದೀಪಾ ರೆಡಿ ಆಗಿ ರಾಮಾಚಾರಿ ಮನೆಗೆ ಬಂದಿದ್ದಾಳೆ. ರಾಮಾಚಾರಿಯೂ ಅಮ್ಮನ ಮಾತಿನಂತೆ ತಾಳಿ ಹಿಡಿದು ನಿಂತಿದ್ದಾನೆ.

 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಮನೆಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದೆ. ಹೇಗಾದ್ರೂ ಮಾಡಿ ಪ್ರಾಜೆಕ್ಟ್  (Project) ಪಡೆಯಲು ಒದ್ದಾಡುತ್ತಿದ್ದಾನೆ. ಚಿತ್ರದುರ್ಗದಿಂದ (Chitradurga) ಪ್ರಾಜೆಕ್ಟ್ ಕೆಲಸ ಮುಗಿಸಿ ಮನೆಗೆ ಬಂದ ರಾಮಾಚಾರಿಗೆ ಶಾಕ್ (Shock) ಕಾದಿದೆ. ಮನೆಯಲ್ಲಿ ಯಾರೂ ಮಾತನಾಡಿಸುತ್ತಿಲ್ಲ. ಎಲ್ಲರಿಗೂ ಚಾರುಳನ್ನು ಇಷ್ಟ ಪಡ್ತಾನೆ ಅಂತ ಡೌಟ್ ಬಂದಿದೆ. ಅಲ್ಲದೇ ಈ ಕೂಡಲೇ ತನ್ನ ಅತ್ತೆ ಮಗಳ ಜೊತೆ ಮದುವೆ (Marriage) ಆಗುವಂತೆ ಒತ್ತಾಯ ಮಾಡ್ತಾ ಇದ್ದಾರೆ.


  ಮನೆಗೆ ಬಂದ ರಾಮಾಚಾರಿ ಮೇಲೆ ಕೋಪ
  ಚಿತ್ರದುರ್ಗದಿಂದ ಪ್ರಾಜೆಕ್ಟ್ ಮುಗಿಸಿ ರಾಮಾಚಾರಿ ಮನೆಗೆ ಬಂದಿದ್ದಾನೆ. ಆದ್ರೆ ಅವನನ್ನು ಮನೆಯವರು ಸರಿಯಾಗಿ ಮಾತನಾಡಿಸುತ್ತಿಲ್ಲ. ಅಲ್ಲಿಗೆ ಹೋದ ಮೇಲೆ ಮನೆಯವರನ್ನೇ ಮರೆತು ಬಿಟ್ಟಿದ್ಯಾ ನೀನು. ಚಾರು ಮೇಲೆ ಏನಾದ್ರೂ ಪ್ರೀತಿ ಆಗಿದ್ಯಾ ಎಂದು ಕೇಳ್ತಾರೆ. ಅದಕ್ಕೆ ಇಲ್ಲ ಅಮ್ಮ ನಾನು ಯಾರನ್ನೂ ಪ್ರೀತಿ ಮಾಡ್ತಿಲ್ಲ ಎಂದ್ರೂ ಕೇಳ್ತಿಲ್ಲ.


  ದೀಪಾಳನ್ನು ಮದುವೆ ಆಗುವಂತೆ ರಾಮಾಚಾರಿ ಅಮ್ಮ ಒತ್ತಡ
  ರಾಮಾಚಾರಿ ಅಮ್ಮ ತನ್ನ ಅಣ್ಣನ ಮಗಳು ದೀಪಾಳನ್ನು ಮದುವೆ ಆಗುವಂತೆ ಹೇಳ್ತಾಳೆ. ಆಗ್ತೀನಿ ಹೀಗಾಗಲೇ ಮಾತು ಕೊಟ್ಟಿದ್ದೀನಿ ತಾನೇ ಎಂದು ಹೇಳ್ತಾನೆ. ಆದ್ರೂ ಅವರ ಅಮ್ಮನಿಗೆ ನಂಬಿಕೆ ಇಲ್ಲ. ನನ್ನ ಕಣ್ಣ ಮುಂದೆಯೇ ನೀನು ಇವತ್ತೇ ಮದುವೆ ಆಗಬೇಕು ಎನ್ನುತ್ತಾಳೆ. ಅದನ್ನು ಕೇಳಿ ರಾಮಾಚಾರಿ ಶಾಕ್ ಆಗಿದ್ದಾನೆ.


  ಇದನ್ನೂ ಓದಿ: Mahesh Babu: ಹಿರಿಯ ಪುತ್ರನ ಸಾವಿನ ದುಃಖದಲ್ಲಿಯೇ ಕೊನೆಯುಸಿರೆಳೆದ ಮಹೇಶ್ ಬಾಬು ತಾಯಿ; ಮದರ್ಸ್​ ಡೇಗೆ ಸರ್ಪ್ರೈಸ್ ನೀಡಿದ್ದ ಮಗ


  ಮದುವೆಗೆ ರೆಡಿ ಆಗಿ ಬಂದ ಅತ್ತೆ ಮಗಳು
  ಅಲ್ಲದೇ ರಾಮಾಚಾರಿ ಅಮ್ಮ ತನ್ನ ಅಣ್ಣನಿಗೆ ಕರೆ ಮಾಡಿ ದೀಪಾಳನ್ನು ಈ ಕೂಡಲೇ ಮದುವೆ ಹೆಣ್ಣಿನ ಅಲಂಕಾರ ಮಾಡಿ, ನಮ್ಮ ಮನೆಗೆ ಕರೆದುಕೊಂಡು ಬನ್ನಿ ಎನ್ನುತ್ತಾಳೆ. ಅಂತೆಯೇ ದೀಪಾ ರೆಡಿ ಆಗಿ ರಾಮಾಚಾರಿ ಮನೆಗೆ ಬಂದಿದ್ದಾಳೆ. ರಾಮಾಚಾರಿಯೂ ಅಮ್ಮನ ಮಾತಿನಂತೆ ತಾಳಿ ಹಿಡಿದು ನಿಂತಿದ್ದಾನೆ.


  colors Kannada serial, Kannada serial, Ramachari serial, Ramachari serial Kannada cast, New Project episode, Ramachari marriage, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಮದುವೆ ಇವತ್ತೇ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ದೀಪಾ


  ಚಾರುಗೆ ರಾಮಾಚಾರಿ ಮೇಲೆ ಲವ್?
  ಚಾರುಗೆ ಏನೇ ಕಷ್ಟ ಬಂದ್ರು ಅಲ್ಲಿ ರಾಮಾಚಾರಿ ಇದ್ದೇ ಇರುತ್ತಾನೆ. ಚಾರುವನ್ನು ಕಾಪಾಡಲು ಬಿರುಗಾಳಿಯಂತೆ ಎದ್ದು ಬಂದಿರುತ್ತಾನೆ. ಎಲ್ಲಾ ರೌಡಿಗಳನ್ನು ಹೊಡೆದಿರುತ್ತಾನೆ. ಹೆಣ್ಣು ಮಕ್ಕಳನ್ನು ಕಾಪಾಡಲು ತಾನು ಯಾವಾಗಲು ಮುಂದೆ ಇರುತ್ತೇನೆ ಎಂದು ಹೇಳುತ್ತಾನೆ. ರಾಮಾಚಾರಿ ಹೊಡೆಯುವುದನ್ನು ನೋಡಿ ಚಾರು ಖುಷಿಯಾಗಿದ್ದಾಳೆ. ಮಾನ ಕಾಪಾಡಿದ ರಾಮಾಚಾರಿ ಮೇಲೆ ಚಾರುಗೆ ಲವ್ ಆಗಿರಬಹುದು.


  colors Kannada serial, Kannada serial, Ramachari serial, Ramachari serial Kannada cast, New Project episode, Ramachari marriage, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಮದುವೆ ಇವತ್ತೇ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ರಾಮಾಚಾರಿ ಅಮ್ಮ


  ರಾಮಾಚಾರಿ ಇಷ್ಟ ಅಂತೆ
  ಚಾರು ಚಿತ್ರದುರ್ಗದಲ್ಲಿ ನಡೆದ ಎಲ್ಲಾ ವಿಚಾರವನ್ನು ತನ್ನ ಸ್ನೇಹಿತೆಯ ಬಳಿ ಹೇಳುತ್ತಿದ್ದಾಳೆ. ನಾನು ಅವನನ್ನು ಹೊಡೆಸಲು ರೌಡಿಗಳನ್ನು ಕಳಿಸಿದೆ. ಆದ್ರೆ ಅವನು ನನ್ನ ಮಾನ ಕಾಪಾಡಿದ. ಅವನನ್ನು ಕಂಡ್ರೆ ನನಗೆ ಇಷ್ಟ ಎನ್ನುತ್ತಾಳೆ. ಸ್ನೇಹಿತೆ ರಾಮಾಚಾರಿ ಮೇಲೆ ಲವ್ ಆಗಿದ್ಯಾ ಎಂದು ಕೇಳ್ತಾಳೆ. ಚಾರು ಏನೂ ಉತ್ತರ ಕೊಟ್ಟಿಲ್ಲ.


  ಇದನ್ನೂ ಓದಿ: Jodi Number 01: ಜೋಡಿ ನಂಬರ್ 01 ಕಾರ್ಯಕ್ರಮದ ಸೆಮಿ ಫಿನಾಲೆ, ಒಂದೇ ವೇದಿಕೆಯಲ್ಲಿ ದಿಗ್ಗಜರ ಸಮಾಗಮ!


  ರಾಮಾಚಾರಿ ಮದುವೆ ಅತ್ತೆ ಮಗಳು ದೀಪಾ ಜೊತೆ ನಡೆಯುತ್ತಾ? ಅಮ್ಮನ ಮಾತಿಗೆ ಕಟ್ಟು ಬಿದ್ದು ತಾಳಿ ಕಟ್ತಾನಾ? ಎಲ್ಲವನ್ನೂ ನೋಡಲು ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: