• Home
 • »
 • News
 • »
 • entertainment
 • »
 • Ramachari: ಚಾರು ಕಾಪಾಡೋಕೆ ಸಿಡಿದೆದ್ದು ಬಂದ ರಾಮಾಚಾರಿ, ಹನುಮ ಭಕ್ತನ ಮುಂದೆ ರೌಡಿಗಳು ಉಡೀಸ್!

Ramachari: ಚಾರು ಕಾಪಾಡೋಕೆ ಸಿಡಿದೆದ್ದು ಬಂದ ರಾಮಾಚಾರಿ, ಹನುಮ ಭಕ್ತನ ಮುಂದೆ ರೌಡಿಗಳು ಉಡೀಸ್!

ಸಂಕಷ್ಟಕ್ಕೆ ಸಿಲುಕಿದ ಚಾರು

ಸಂಕಷ್ಟಕ್ಕೆ ಸಿಲುಕಿದ ಚಾರು

ಚಾರುಗೆ ಏನೇ ಕಷ್ಟ ಬಂದ್ರು ಅಲ್ಲಿ ರಾಮಾಚಾರಿ ಇದ್ದೇ ಇರುತ್ತಾನೆ. ಚಾರುವನ್ನು ಕಾಪಾಡಲು ಬಿರುಗಾಳಿಯಂತೆ ಎದ್ದು ಬಂದಿದ್ದಾನೆ. ಎಲ್ಲಾ ರೌಡಿಗಳನ್ನು ಹೊಡೆಯುತ್ತಿದ್ದಾನೆ. ಹೆಣ್ಣು ಮಕ್ಕಳನ್ನು ಕಾಪಾಡಲು ತಾನು ಯಾವಾಗಲು ಮುಂದೆ ಇರುತ್ತೇನೆ ಎಂದು ಹೇಳುತ್ತಿದ್ದಾನೆ

 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಮನೆಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದ್ದು. ಪ್ರಾಜೆಕ್ಟ್ (Project) ಕೆಲಸದ ಮೇಲೆ ಚಿತ್ರದುರ್ಗಕ್ಕೆ (Chitra Durga) ಬಂದಿದ್ದಾನೆ. ಅವನ ಜೊತೆ ಚಾರು ಸಹ ಬಂದಿದ್ದಾಳೆ. ಚಾರುಗೆ ಎಷ್ಟೇ ಸಹಾಯ ಮಾಡಿದ್ರೂ ಆಕೆ ತನ್ನ ಕೆಟ್ಟ ಬುದ್ದೀ ಬಿಡಲ್ಲ. ರಾಮಾಚಾರಿಗೆ ಬುದ್ಧಿ ಕಲಿಸಬೇಕು ಎಂದು ಮುಂದಾಗಿ, ತಾನೇ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಆಕೆಯನ್ನೂ ಕಾಪಾಡಲು (Save) ರಾಮಾಚಾರಿಯೇ ಬರಬೇಕಾಯ್ತು.


  ಕುಡಿದಿದ್ದ ಚಾರುಗೆ ಸಹಾಯ ಮಾಡಿದ್ದ ರಾಮಾಚಾರಿ
  ಚಿತ್ರದುರ್ಗದ ಹೋಟೆಲ್‍ನಲ್ಲಿ ಚಾರು ಸಿಕ್ಕಾಪಟ್ಟೆ ಕುಡಿದಿರುತ್ತಾಳೆ. ಕುಡಿದು ಲೋಕಲ್ ಹುಡುಗರ ಜೊತೆ ಜಗಳ ಆಡ್ತಾ ಇರ್ತಾಳೆ. ಅದನ್ನು ತಡೆದ ರಾಮಾಚಾರಿ. ಆಕೆಯನ್ನು ಬಿಡಲು ರೂಮ್‍ಗೆ ಹೋಗಿರುತ್ತಾನೆ. ಆಗ ಆಕೆ ವಾಂತಿ ಮಾಡಿದ ಕಾರಣ, ಅವಳನ್ನು ಕಾವಲು ಕಾಯುತ್ತಾ, ಆಕೆಯ ರೂಮ್‍ನಲ್ಲೇ ಕೂತಿರುತ್ತಾನೆ. ಆದ್ರೆ ಎದ್ದಾಗ ರಾಮಾಚಾರಿಯನ್ನು ತನ್ನ ರೂಮಿನಲ್ಲಿ ನೋಡಿ ಕೋಪಗೊಂಡ ಚಾರು, ಬೇಕು ಅಂತ ಬಂದಿದ್ದೀಯಾ ಅಂತ ಜಗಳ ಆಡ್ತಾಳೆ. ಮತ್ತೆ ಇಬ್ಬರ ಮಧ್ಯೆ ಜಗಳ ಆಗುತ್ತೆ.
  ರಾಮಾಚಾರಿ ಹೊಡೆಯಲು ರೌಡಿಗಳನ್ನು ಬಿಟ್ಟ ಚಾರು
  ಚಾರುಗೆ ಎಷ್ಟೇ ಸಹಾಯ ಮಾಡಿದ್ರೂ ಆಕೆ ತನ್ನ ಕೆಟ್ಟ ಬುದ್ದೀ ಬಿಡಲ್ಲ. ರಾಮಾಚಾರಿಗೆ ಬುದ್ಧಿ ಕಲಿಸಬೇಕು ಎಂದು ಮುಂದಾಗಿ, ರೌಡಿಗಳಿಗೆ ರಾಮಾಚಾರಿಯನ್ನು ಹೊಡೆಯುವಂತೆ ಹೇಳಿದ್ದಾಳೆ. ಅವರು ಸಹ ಚಾರು ಹೇಳಿದಂತೆ ರಾಮಾಚಾರಿಗೆ ಸಿಕ್ಕಾಪಟ್ಟೆ ಹೊಡೆದಿದ್ದಾರೆ. ರೌಡಿಗಳು ಹೊಡೆದಿದ್ದಕ್ಕೆ, ರಾಮಾಚಾರಿ ಎಚ್ಚರ ತಪ್ಪಿ ಬೀಳುತ್ತಾನೆ. ಆಗ ಖುಷಿಯಿಂದ ಚಾರು ದುಡ್ಡು ಕೊಡಲು ಹೋಗುತ್ತಾಳೆ. ಆಗ ಆಕೆಯನ್ನೇ ರೌಡಿಗಳು ಎಳೆದುಕೊಂಡು ಹೋಗುತ್ತಾರೆ.
  ಇದನ್ನೂ ಓದಿ: BBK Season 9: ಬಿಗ್‍ಬಾಸ್ ಮನೆಯಲ್ಲಿ ಮೊದಲ ದಿನವೇ 12 ಜನ ನಾಮಿನೇಟ್, 100 ದಿನದ ಕನಸು ಹೊತ್ತವರಿಗೆ ಶಾಕ್!


  ತಾನೇ ಸಂಕಷ್ಟಕ್ಕೆ ಸಿಲುಕಿದ ಚಾರು
  ಚಾರು ರಾಮಾಚಾರಿಯನ್ನು ಸಂಕಷ್ಟದಲ್ಲಿ ಸಿಲುಕಿಸಲು ಹೋಗಿ ತಾನೇ ಸಂಕಷ್ಟದಲ್ಲಿ ಸಿಲುಕಿದ್ದಾಳೆ. ಆ ರೌಡಿ ಚಾರು ಮೇಲೆ ಕಣ್ಣು ಹಾಕಿದ್ದಾನೆ. ಆಕೆಯನ್ನು ಹಾಳು ಮಾಡಬೇಕು ಎಂದು ಮುಂದಾಗಿರುತ್ತಾನೆ. ಚಾರು ಎಷ್ಟೇ ಕೇಳಿಕೊಂಡ್ರು ಅವನು ಬಿಡುತ್ತಿರಲಿಲ್ಲ. ಚಾರು ತಾನು ಬೀಸಿದ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾಳೆ.


  ಬಿರುಗಾಳಿಯಂತೆ ಎದ್ದು ಬಂದ ರಾಮಾಚಾರಿ
  ಚಾರುಗೆ ಏನೇ ಕಷ್ಟ ಬಂದ್ರು ಅಲ್ಲಿ ರಾಮಾಚಾರಿ ಇದ್ದೇ ಇರುತ್ತಾನೆ. ಚಾರುವನ್ನು ಕಾಪಾಡಲು ಬಿರುಗಾಳಿಯಂತೆ ಎದ್ದು ಬಂದಿದ್ದಾನೆ. ಎಲ್ಲಾ ರೌಡಿಗಳನ್ನು ಹೊಡೆಯುತ್ತಿದ್ದಾನೆ. ಹೆಣ್ಣು ಮಕ್ಕಳನ್ನು ಕಾಪಾಡಲು ತಾನು ಯಾವಾಗಲು ಮುಂದೆ ಇರುತ್ತೇನೆ ಎಂದು ಹೇಳುತ್ತಿದ್ದಾನೆ. ರಾಮಾಚಾರಿ ಹೊಡೆಯುವುದನ್ನು ನೋಡಿ ಚಾರು ಖುಷಿಯಾಗಿದ್ದಾಳೆ.


  colors Kannada serial, Kannada serial, Ramachari serial, Ramachari serial Kannada cast, Ramachari saves Charu Life, ರಾಮಾಚಾರಿ ಧಾರಾವಾಹಿ, ಚಾರು ಕಾಪಾಡೋಕೆ ಸಿಡಿದೆದ್ದು ಬಂದ ರಾಮಾಚಾರಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಬಿರುಗಾಳಿಯಂತೆ ಎದ್ದು ಬಂದ ರಾಮಾಚಾರಿ


  ಅತ್ತ ಮನೆಯವರಿಗೆ ಚಿಂತೆ
  ಇತ್ತ ರಾಮಾಚಾರಿ-ಚಾರು ಚಿತ್ರದುರ್ಗದಲ್ಲಿ ಇದ್ರೆ, ಬೆಂಗಳೂರಿನಲ್ಲಿ ರಾಮಾಚಾರಿ ಮನೆಯವರಿಗೆ ಚಿಂತೆ ಶುರುವಾಗಿದೆ. ಎಲ್ಲಿ ರಾಮಾಚಾರಿ ಚಾರು ಪ್ರೀತಿಯ ಬಲೆಗೆ ಬೀಳುತ್ತಾನೋ ಅನ್ನೋ ಭಯ ಶುರುವಾಗಿದೆ.


  colors Kannada serial, Kannada serial, Ramachari serial, Ramachari serial Kannada cast, Ramachari saves Charu Life, ರಾಮಾಚಾರಿ ಧಾರಾವಾಹಿ, ಚಾರು ಕಾಪಾಡೋಕೆ ಸಿಡಿದೆದ್ದು ಬಂದ ರಾಮಾಚಾರಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ರಾಮಾಚಾರಿ


  ರಾಮಾಚಾರಿ ತಾಯಿ ಇಬ್ಬರ ಜಾತಕ ತೋರಿಸಿದ್ದಾಳೆ. ಅದಕ್ಕೆ ಇವರು ಹುಟ್ಟಿರೋದೇ ಮದುವೆ ಆಗೋಕೆ ಎಂದಿದ್ದಾರೆ. ಅದರಿಂದ ಮನೆಯವರು ಚಿಂತೆಯಲ್ಲಿ ಮುಳುಗಿದ್ದಾರೆ.


  ಇದನ್ನೂ ಓದಿ: Bigg Boss Season 9: ಅರವಿಂದ್ ಇಲ್ಲದೇ ಬಿಗ್‍ಬಾಸ್ ಗೆಲ್ಲೋಕೆ ಬಂದಿದ್ದಾರಂತೆ ದಿವ್ಯಾ ಉರುಡುಗ! ಅರವಿ ಜೋಡಿ ಮಿಸ್ ಮಾಡಿಕೊಳ್ತಾರೆ ಜನ


  ಮುಂದೇನಾಗುತ್ತೆ, ಚಾರು-ಚಾರಿ ಜಗಳ ಬಿಟ್ಟು ಒಂದಾಗ್ತಾರಾ? ಮನೆಯವರು ಆತಂಕದಂತೆ ಇಬ್ಬರು ಮದುವೆ ಆಗ್ತಾರಾ? ಮುಂದೆನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: