Ramachari: ಪ್ರಪಾತದಿಂದ ಹೆಲಿಕಾಪ್ಟರ್ ಹತ್ತಿ ಹಾರಿ ಹೋದ ಜಂಭದ ರಾಣಿ! ರಾಮಾಚಾರಿ ಕಥೆ ಏನು?

ಚಾರುಳನ್ನು ಮೇಲೆ ಕರೆದುಕೊಂಡು ಹೋಗಲು ಚಾಪರ್ ಬಂದಿದೆ. ಅದನ್ನು ಹತ್ತಿದ ಚಾರು. ರಾಮಾಚಾರಿಗೆ ವ್ಯಂಗ್ಯವಾದ ಮಾತುಗಳನ್ನು ಹೇಳುತ್ತಿದ್ದಾಳೆ. ನಿನ್ನ ಕೈಯಲ್ಲಿ ಏನೂ ಆಗಲ್ಲ. ಇದು ನನ್ನ ಪವರ್ ಅಂತಿದ್ದಾಳೆ.

ಹೆಲಿಕಾಪ್ಟರ್ ಹತ್ತಿ ಹಾರಿ ಹೋದ ಚಾರು

ಹೆಲಿಕಾಪ್ಟರ್ ಹತ್ತಿ ಹಾರಿ ಹೋದ ಚಾರು

 • Share this:
  ರಾಮಾಚಾರಿ (Ramachari)  ಕಲರ್ಸ್ ಕನ್ನಡದಲ್ಲಿ (Colors Kannada)  ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಮನೆಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದ್ದು. ಪ್ರಾಜೆಕ್ಟ್ ಕೆಲಸದ ಮೇಲೆ ಚಿತ್ರದುರ್ಗಕ್ಕೆ (Chitra Durga) ಬಂದಿದ್ದಾನೆ. ಅವನ ಜೊತೆ ಚಾರು ಸಹ ಬಂದಿದ್ದಾಳೆ. ಚಾರು ಮೇಲಿನಿಂದ ಪ್ರಪಾತಕ್ಕೆ ಬಿದ್ದಿದ್ದಾಳೆ. ಅವಳನ್ನು ಕಾಪಾಡಲು (Save) ಹೋಗಿ ರಾಮಾಚಾರಿ ಸಹ ಪ್ರಪಾತಕ್ಕೆ ಬಿದ್ದಿದ್ದಾನೆ. ಅಲ್ಲಿಂದ ಮೇಲೆ ಹೋಗಲು ಬೆಟ್ಟ ಹತ್ತಿ ಇಳಿಯಬೇಕು. ಅದಕ್ಕೆ ಚಾರು ಹೆಲಿಕಾಪ್ಟರ್ (Helicopter) ತರಿಸಿಕೊಂಡಿದ್ದಾಳೆ.

  ಪ್ರಪಾತದಲ್ಲಿ ಚಾರು-ಚಾರಿ
  ಚಿತ್ರದುರ್ಗದಲ್ಲೂ ರಾಮಾಚಾರಿ ಮತ್ತು ಚಾರು ಕಿತ್ತಾಟ ಮುಂದುವರೆದಿದೆ. ರಾಮಾಚಾರಿ ತನ್ನ ಅಮ್ಮನ ಬಗ್ಗೆ ಮಾತನಾಡಿದ ಎಂದು ಕೋಪ ಮಾಡಿಕೊಂಡ ಚಾರು, ಅವನ ಮೇಲೆ ಕಲ್ಲು ಎತ್ತಿ ಹಾಕಲು ಹೋಗಿ, ಅವಳೇ ಪ್ರಪಾತಕ್ಕೆ ಬೀಳುತ್ತಾಳೆ. ಅವಳನ್ನು ಕಾಪಾಡಲು ಹೋದ ರಾಮಾಚಾರಿ ಸಹ ಪ್ರಪಾತಕ್ಕೆ ಬೀಳುತ್ತಾನೆ. ಸದ್ಯ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಜೀವಕ್ಕೆ ಏನೂ ತೊಂದರೆ ಇಲ್ಲ. ಆದ್ರೆ ಪ್ರಪಾತದಿಂದ ಮೇಲೆ ಬರುವುದಕ್ಕೆ ಕಷ್ಟ ಪಡುತ್ತಿದ್ದಾರೆ.

  ಊರು ಸೇರಲು ಬೆಟ್ಟ ಹತ್ತಿ ಇಳಿಯಬೇಕು
  ಚಾರು ಮತ್ತು ರಾಮಾಚಾರಿ ಪ್ರಪಾತದಲ್ಲಿ ಇರುವ ಕಾರಣ, ಊರು ಸೇರಲು ಬೆಟ್ಟ ಹತ್ತಿ ಇಳಿಯಬೇಕು. ಆದ್ರೆ ಚಾರು ಕೈಯಲ್ಲಿ ಆಗುತ್ತಿಲ್ಲ. ಆಗ ರಾಮಾಚಾರಿ ಊರು ಸೇರಲು ಇರುವುದೊಂದೆ ದಾರಿ ಬೆಟ್ಟ ಎನ್ನುತ್ತಾನೆ. ಆಗ ಚಾರು ತನ್ನ ಕ್ಯಪಾಸಿಟಿ ಏನು ಎಂದು ತೋರಿಸುತ್ತೇನೆ ಎಂದು ತನ್ನ ಅಮ್ಮನಿಗೆ ಕಾಲ್ ಮಾಡುತ್ತಾಳೆ. ಅದಕ್ಕೆ ಅವರ ಅಮ್ಮ ಒಂದು ವ್ಯವಸ್ಥೆ ಮಾಡುತ್ತಾಳೆ.

  ಇದನ್ನೂ ಓದಿ: Kannadathi: ಸಾನಿಯಾಳನ್ನು ಬಿಟ್ಟು ಬಿಡದೇ ಕಾಡ್ತಿದ್ದಾನೆ ಹರ್ಷ, ಅಮ್ಮಮ್ಮ-ಭುವಿ ಸುದ್ದಿಗೆ ಬಂದ್ರೆ ಸುಮ್ನೆ ಬಿಡಲ್ಲ!

  ಚಾರು ಇರೋ ಜಾಗಕ್ಕೆ ಬಂದ ಹೆಲಿಕಾಪ್ಟರ್
  ಚಾರು ಅಮ್ಮ ಮಾನ್ಯತಾ ಮಗಳಿಗಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದಾಳೆ. ಚಾರುಳನ್ನು ಮೇಲೆ ಕರೆದುಕೊಂಡು ಹೋಗಲು ಚಾಪರ್ ಬಂದಿದೆ. ಅದನ್ನು ಹತ್ತಿದ ಚಾರು. ರಾಮಾಚಾರಿಗೆ ವ್ಯಂಗ್ಯವಾದ ಮಾತುಗಳನ್ನು ಹೇಳುತ್ತಿದ್ದಾಳೆ. ನಿನ್ನ ಕೈಯಲ್ಲಿ ಏನೂ ಆಗಲ್ಲ. ಇದು ನನ್ನ ಪವರ್ ಅಂತಿದ್ದಾಳೆ.

  colors Kannada serial, Kannada serial, Ramachari serial, Ramachari serial Kannada cast, ರಾಮಾಚಾರಿ ಧಾರಾವಾಹಿ, ಹೆಲಿಕಾಪ್ಟರ್ ಹತ್ತಿ ಹಾರಿ ಹೋದ ಜಂಭದ ರಾಣಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಚಾರು


  ಇದು ನನ್ನ ಲೆವೆಲ್
  ರಾಮಾಚಾರಿ ನಾನು ಆಕಾಶ ಅನ್ನೋದು ಗೊತ್ತಾಯ್ತಾ? ತಾಕತ್ತಿದ್ರೆ ಹಾರ್ಕೊಂಡು ಹೋಗಿ ಅಂದೆ. ನೋಡೋ ಹಾರ್ಕೊಂಡೇ ಹೋಗ್ತೀನಿ. ಇದು ಕಣೋ ನನ್ನ ಲೆವೆಲ್ ತಿಳ್ಕೋ. ನಾನ್ ಮೇಲೆ. ನಿನ್ ಯಾವತ್ತಿದ್ರೂ ಕೆಳಗೆ. ನನ್ನನ್ನು ಮುಟ್ಟೋಕೆ ನಿನಗೆ ಸಾಧ್ಯವಿಲ್ಲ. ನಾನು ಗೋಪುರ ಕಣೋ. ನಿನ್ ಕಸ. ನನ್ ಲೆವೆಲ್ ಮುಟ್ಟೋಕೆ ಇನ್ನೊಂದು ಜನ್ಮ ಬಂದ್ರೂ ಸಾಧ್ಯ ಆಗಲ್ಲ. ನಿನ್ ಅಲ್ಲೇ ಇದಿಯ ಕಣೋ. ನಾನ್ ಎಲ್ಲೋ ಇದೀನಿ ಎಂದು ಚಾರು ಹೇಳುತ್ತಾಳೆ.

  ಹತ್ತಿದ್ರೆ ದಾರಿ, ಇಲ್ಲ ಗೋರಿ
  ಅಲ್ಲದೇ ಅಂದಾಜಿಗೆ ಸಿಗದ ಅಂತಸ್ತು ನಂದು ರಾಮಾಚಾರಿ. ಹೇಳೋ, ನಾನು-ನೀನು ಒಂದಾ? ಏನೋ ಬುದ್ದಿ ಇದೆ ಅಂತ, ನಮ್ಮ ಶ್ರೀಮಂತಿಕೆ ಮುಂದೆ ತೊಡೆ ತಟ್ತೀಯಾ? ಅಹಂಕಾರ ಮುರೀತಾ ಈಗ. ಅರ್ಥ ಮಾಡ್ಕೋ. ಜಗತ್ತಿನಲ್ಲಿ ಇರೋದು ಎರಡೇ ಲೆವೆಲ್.

  colors Kannada serial, Kannada serial, Ramachari serial, Ramachari serial Kannada cast, ರಾಮಾಚಾರಿ ಧಾರಾವಾಹಿ, ಹೆಲಿಕಾಪ್ಟರ್ ಹತ್ತಿ ಹಾರಿ ಹೋದ ಜಂಭದ ರಾಣಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ರಾಮಾಚಾರಿ


  ಒಂದು ದುಡ್ಡು ಇರುವವರದ್ದು, ಇನ್ನೊಂದು ದುಡ್ಡು ಇಲ್ಲದೇ ಇರುವವರದ್ದು. ಒಂದು ಮೇಲಿರೋದು. ಇನ್ನೊಂದು ಕೆಳಗೆ ಇರೋದು. ಇದು ನನ್ನ ತಾಕತ್. ಗೊತ್ತಾಯ್ತಾ ರಾಮಾಚಾರಿ, ನೆನಪಿಟ್ಕೋ. ಹತ್ತಿದ್ರೆ ದಾರಿ. ಇಲ್ಲ ಗೋರಿ ಎಂದು ಚಾರು ಹಾರಿ ಹೋಗುತ್ತಾರೆ.

  ಇದನ್ನೂ ಓದಿ: Lakshana Serial: ಭೂಪತಿ-ಶೌರ್ಯನ ಆಪರೇಷನ್ ಖೆಡ್ಡಾ ಸಕ್ಸಸ್, ನಕ್ಷತ್ರಾ ಕೊಲ್ಲಲು ಬಂದ ಮೌರ್ಯ ಲಾಕ್!

  ರಾಮಾಚಾರಿ ಹೇಗೆ ಊರು ಸೇರ್ತಾನೆ? ಚಾರುಗೆ ಬುದ್ಧಿ ಕಲಿಸ್ತಾನಾ? ಎಲ್ಲವನ್ನೂ ನೋಡಲು ರಾಮಾಚಾರಿ ಸೀರಿಯಲ್ ನೋಡಬೇಕು.
  Published by:Savitha Savitha
  First published: