• Home
 • »
 • News
 • »
 • entertainment
 • »
 • Ramachari: ಮೋಸದಿಂದ ರಾಮಾಚಾರಿಯಿಂದ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದೇ ಬಿಟ್ಟಳು ಚಾರು!

Ramachari: ಮೋಸದಿಂದ ರಾಮಾಚಾರಿಯಿಂದ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದೇ ಬಿಟ್ಟಳು ಚಾರು!

ರಾಮಾಚಾರಿಯಿಂದ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದ ಚಾರು

ರಾಮಾಚಾರಿಯಿಂದ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದ ಚಾರು

ಪ್ರಾಜೆಕ್ಟ್ ಗೆದ್ದಿರುವ ಚಾರುಗೆ ರಾಮಾಚಾರಿ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ನೀಡ್ತಾ ಇದ್ದಾನೆ. ಅದಕ್ಕೆ ಚಾರು ಬಬ್ಲಿ ಸರ್ ನೀವು ಹೇಳಿದ್ದು ನಿಜ. ಗೆಲುವಿಗೆ ಯಾವ ಬಹುಮಾನ ಬರಬೇಕು ಅದೇ ಬಂದಿದೆ. ಅಲ್ಲದೇ ಅದನ್ನು ರಾಮಾಚಾರಿ ಓದಿ ಹೇಳಬೇಕು ಎಂದು ಚಾರು ಹೇಳ್ತಾಳೆ.

 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿಗೆ ಮನೆಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದೆ. ತನ್ನ ಅತ್ತಿಗೆಗೆ ಕ್ಯಾನ್ಸರ್ (Cancer) ಇದ್ದು, ಅವರ ಚಿಕಿತ್ಸೆಗೆ ದುಡ್ಡು ಬೇಕಾಗಿದೆ. ಅದಕ್ಕೆ ಅವನು ತುಂಬಾ ಕಷ್ಟ ಪಟ್ಟು ಪ್ರಾಜೆಕ್ಟ್ (Project) ಮಾಡಿದ್ದನ್ನು ಚಾರು ಕದ್ದು, ತಾನು ಮಾಡಿದ್ದು ಎಂದು ಹೇಳಿದ್ದಾಳೆ. ಇದರಿಂದ ರಾಮಾಚಾರಿಗೆ ಹಣ ಸಿಕ್ಕಿಲ್ಲ. ಅಲ್ಲದೇ ಚಾರು ಮೋಸದಿಂದ ಪ್ರಾಜೆಕ್ಟ್ ಕದ್ದಿದ್ದಲ್ಲದೇ, ರಾಮಾಚಾರಿಯಿಂದ ಪರ್ಫಾರ್ಮೆನ್ಸ್ (Performance) ಸರ್ಟಿಫಿಕೇಟ್ ಸಹ ಪಡೆದಿದ್ದಾಳೆ.

  ಕೈ ತಪ್ಪಿತು ಕಷ್ಟ ಪಟ್ಟು ಮಾಡಿದ್ದ ಪ್ರಾಜೆಕ್ಟ್
  ರಾಮಾಚಾರಿ ಅತ್ತಿಗೆ ಅಪರ್ಣಗೆ ಕ್ಯಾನ್ಸರ್ ಇದೆ. ಅದರ ಆಪರೇಷನ್ ಮಾಡಿಸಲು 40 ಲಕ್ಷ ಹಣ ಬೇಕಾಗಿದೆ. ಅದಕ್ಕೆ ರಾಮಾಚಾರಿ ಕಛೇರಿ ಗೆ ಕಲ್ಪನಾ ವಿಲಾಸ ಪ್ರಾಜೆಕ್ಟ್ ಕೈಗೆ ಸಿಗುವಂತೆ ಮಾಡಿದ್ರೆ, ಅವನಿಗೆ ಬೇಕಾದಷ್ಟು ದುಡ್ಡು ಸಿಗುತ್ತದೆ. ಅದಕ್ಕೆ ಕಷ್ಟ ಪಟ್ಟು, ಪ್ರಾಜೆಕ್ಟ್ ಮಾಡುತ್ತಿದ್ದ. ಅದಕ್ಕೆ ಚಿತ್ರದುರ್ಗಕ್ಕೂ ಸಹ ಹೋಗಿ ಬಂದಿದ್ದ. ಪ್ರಾಜೆಕ್ಟ್ ಒಪ್ಪಿಗೆ ಆಗುತ್ತೆ ಹಣ ಸಿಕ್ಕೇ ಸಿಗುತ್ತೆ ಅನ್ನೋ ಖುಷಿಯಲ್ಲಿದ್ದ. ಆದ್ರೆ ಅದೆಲ್ಲಾ ಸುಳ್ಳಾಗಿ ಹೋಗಿದೆ.

  ಮೋಸದಿಂದ ಪ್ರಾಜೆಕ್ಟ್ ಕದ್ದ ಚಾರು
  ರಾಮಾಚಾರಿ ಹಗಲು, ರಾತ್ರಿ ಎನ್ನದೇ, ಊಟ, ತಿಂಡಿ ಬಿಟ್ಟು ಪ್ರಾಜೆಕ್ಟ್ ಮಾಡಿದ್ದನ್ನು, ಚಾರು ಕದ್ದಿರುತ್ತಾಳೆ. ಅಲ್ಲದೇ ಅದನ್ನು ಡಿಲಿಟ್ ಮಾಡಿರುತ್ತಾಳೆ. ತಾನೇ ಪ್ರಾಜೆಕ್ಟ್ ಮಾಡಿದ್ದು ಎಂದು ಎಲ್ಲರ ಬಳಿ ಸುಳ್ಳು ಹೇಳ್ತಾಳೆ. ಅದನ್ನು ಎಲ್ಲರೂ ನಂಬ್ತಾರೆ. ಚಾರುಳನ್ನು ಹೊಗಳುತ್ತಾರೆ. ರಾಮಾಚಾರಿಗೆ ಪ್ರಾಜೆಕ್ಟ್ ಜೊತೆ ದುಡ್ಡು ಕೈ ತಪ್ಪಿ ಹೋಗುತ್ತೆ.

  ಇದನ್ನೂ ಓದಿ: BBK Season 09: ಬಿಗ್ ಬಾಸ್ ಗೋಲ್ಡ್ ಮೈನ್ ನಲ್ಲಿ ಚಿನ್ನ ತೆಗೆಯುವವನೇ ಕ್ಯಾಪ್ಟನ್! ಇದ್ರರಲ್ಲೂ ಸಂಬರ್ಗಿ ಕಿತಾಪತಿ

  ಮೋಸದಿಂದ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದೇ ಬಿಟ್ಟಳು
  ಪ್ರಾಜೆಕ್ಟ್ ಗೆದ್ದಿರುವ ಚಾರುಗೆ ರಾಮಾಚಾರಿ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ನೀಡ್ತಾ ಇದ್ದಾನೆ. ಅದಕ್ಕೆ ಚಾರು ಬಬ್ಲಿ ಸರ್ ನೀವು ಹೇಳಿದ್ದು ನಿಜ. ಗೆಲುವಿಗೆ ಯಾವ ಬಹುಮಾನ ಬರಬೇಕು ಅದೇ ಬಂದಿದೆ. ಅಲ್ಲದೇ ಅದನ್ನು ರಾಮಾಚಾರಿ ಓದಿ ಹೇಳಬೇಕು ಎಂದು ಚಾರು ಹೇಳ್ತಾಳೆ. ರಾಮಾಚಾರಿ ಅದನ್ನು ಓದಿ ಹೇಳಿದ್ದಾನೆ.

  colors Kannada serial, Kannada serial, Ramachari serial, Ramachari serial Kannada cast, Charu receive performance certificate from Ramachari, ರಾಮಾಚಾರಿ ಧಾರಾವಾಹಿ, ರಾಮಾಚಾರಿಯಿಂದ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದೇ ಬಿಟ್ಟಳು ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ರಾಮಾಚಾರಿ

  ಪಾರ್ಟಿ ಮಾಡಲು 15 ಲಕ್ಷ ಬೇಕಂತೆ
  ಚಾರು ಪ್ರಾಜೆಕ್ಟ್ ತನ್ನ ಕಡೆ ಮಾಡಿಕೊಂಡ ಕಾರಣ ಆಕೆಗೆ 15 ಲಕ್ಷ ಬರುತ್ತೆ. ಅದನ್ನು ಬೇಗ ಕೊಡಿ ಬಬ್ಲಿ ಸರ್ ಪಾರ್ಟಿ ಮಾಡಬೇಕು ಎನ್ನುತ್ತಿದ್ದಾಳೆ. 15 ಲಕ್ಷದಲ್ಲಿ ಒಂದು ಪೈಸೆಯನ್ನೂ ಉಳಿಸುವುದಿಲ್ವಂತೆ. ಪಾರ್ಟಿ ಮಾಡಿ ಚೆಲ್ಲಾಡ್ತೀನಿ. ಧೂಳ್ ಮಾಡ್ತೀನಿ. ಚಾರು ಸೆಲಬ್ರೇಟ್ ಮಾಡೋ ಅಬ್ಬರನೇ ಬೇರೆ ನೋಡ್ತಾ ಇರಿ ಎಂದು ಹೇಳ್ತಾಳೆ.

  colors Kannada serial, Kannada serial, Ramachari serial, Ramachari serial Kannada cast, Charu receive performance certificate from Ramachari, ರಾಮಾಚಾರಿ ಧಾರಾವಾಹಿ, ರಾಮಾಚಾರಿಯಿಂದ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದೇ ಬಿಟ್ಟಳು ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಬಬ್ಲಿ ಸರ್

  ಅತ್ತಿಗೆ ಆಪರೇಷನ್ ಚಿಂತೆ
  ರಾಮಾಚಾರಿ ಅತ್ತಿಗೆ ಕ್ಯಾನ್ಸರ್ ನಿಂದ ಆಸ್ಪತ್ರೆ ಸೇರಿದ್ದಾಳೆ. ಅದಕ್ಕೆ ದುಡ್ಡು ಬೇಕು. ಆದ್ರೆ ದುಡ್ಡು ಸಿಕ್ಕಿಲ್ಲ. ಆ ಚಿಂತೆಯಲ್ಲಿ ರಾಮಾಚಾರಿ ಇದ್ದಾನೆ. ಆದ್ರೆ ಚಾರು ಮಾತ್ರ ರಾಮಾಚಾರಿ ಮಾಡಿದ ಪ್ರಾಜೆಕ್ಟ್ ಕದ್ದು, ಆ ದುಡ್ಡಿನಲ್ಲಿ ಎಂಜಾಯ್ ಮಾಡ್ತಾ ಇದ್ದಾಳೆ.

  colors Kannada serial, Kannada serial, Ramachari serial, Ramachari serial Kannada cast, Charu receive performance certificate from Ramachari, ರಾಮಾಚಾರಿ ಧಾರಾವಾಹಿ, ರಾಮಾಚಾರಿಯಿಂದ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದೇ ಬಿಟ್ಟಳು ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಚಾರು

  ಇದನ್ನೂ ಓದಿ: Amitabh Bachchan: ಹ್ಯಾಪಿ ಬರ್ತ್ ಡೇ ಅಮಿತಾಬ್ ಬಚ್ಚನ್, ಬಿಗ್ ಬಿಗೆ ಶುಭಾಶಯಗಳ ಮಹಾಪೂರ

  ಚಾರು ಪ್ರಾಜೆಕ್ಟ್ ಕದ್ದ ವಿಷ್ಯ ರಾಮಾಚಾರಿಗೆ ಗೊತ್ತಾಗುತ್ತಾ? ಅತ್ತಿಗೆ ಆಪರೇಷನ್ ಗೆ ದುಡ್ಡು ಸಿಗುತ್ತಾ? ಎಲ್ಲವನ್ನೂ ನೋಡಲು ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು