Ramachari Serial: ಅಪ್ಪನ ಆರೋಗ್ಯಕ್ಕಾಗಿ ಮದುವೆಗೆ ಒಪ್ಪುತ್ತಾನಾ ರಾಮಾಚಾರಿ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ರಾಮಾಚಾರಿ. ಶ್ರೀಮಂತಿಕೆ ದರ್ಪ ತೋರಿಸುತ್ತಿರುವ ಚಾರುಲತಾ ಮತ್ತು ವೇದ ಪಾಠ ಸಂಸ್ಕೃತಿ ಎಂದು ಬದುಕುತ್ತಿರುವ ರಾಮಾಚಾರಿ ನಡುವಿನ ಜಗಳ ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. 

ರಾಮಾಚಾರಿ

ರಾಮಾಚಾರಿ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ರಾಮಾಚಾರಿ (Ramachari). ಶ್ರೀಮಂತಿಕೆ ದರ್ಪ ತೋರಿಸುತ್ತಿರುವ ಚಾರುಲತಾ (Charulatha) ಮತ್ತು ವೇದ ಪಾಠ ಸಂಸ್ಕೃತಿ ಎಂದು ಬದುಕುತ್ತಿರುವ ರಾಮಾಚಾರಿ ನಡುವಿನ ಜಗಳ ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. ಶತ್ರುಗಳಂತೆ ಜಗಳವಾಡುತ್ತಿರುತ್ತಿರುವ ರಾಮಾಚಾರಿ ಮತ್ತು ಚಾರುಲತಾ ಹೇಗೆ ಒಂದಾಗುತ್ತಾರೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ.ಈಗಾಗಲೇ ರಾಮಾಚಾರಿ ಚಾರುಲತಾಳನ್ನು ಮದುವೆಯಾಗಲು(Marriage) ತಯಾರಿ ನಡೆಸಿದ್ದಾನೆ. ಚಾರುಲತಳನ್ನು ಮದುವೆಯಾಗಿ ಆಕೆಯ ಸೊಕ್ಕನ್ನು ಮುರಿಯುತ್ತಾನಾ ರಾಮಾಚಾರಿ. ಈ ಕುತೂಹಲಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ದೊರಕಲಿದೆ.

    ಅಪ್ಪನ ಆರೋಗ್ಯದ ಹಿತಾಸಕ್ತಿಯಿಂದ ಮದುವೆಗೆ ಒಪ್ಪುತ್ತಾನಾ ರಾಮಾಚಾರಿ?

    ರಾಮಾಚಾರಿ ಅತ್ತೆ ಮಗಳು ದೀಪಾ ಜೊತೆಗೆ ಆತನ ಮದುವೆ ಮಾಡುವುದು ಎಂದು ಬಾಲ್ಯದಿಂದಲೇ ಹೇಳಿಕೊಂಡು ಬಂದಿದ್ದಾರೆ. ದೀಪಾಳಿಗೆ ರಾಮಾಚಾರಿ ಮೇಲೆ ಪ್ರೀತಿಯ ಭಾವನೆ ಇದ್ದರು ಇಲ್ಲಿಯತನಕ ರಾಮಾಚಾರಿ ಆಕೆಯನ್ನು ಪ್ರೀತಿಯಿಂದ ನೋಡಲಿಲ್ಲಾ. ಅಷ್ಟೇ ಅಲ್ಲದೆ ದೀಪಾಳ ಜೊತೆ ಮದುವೆಯಾಗಿ ಸಂಸಾರ ನಡೆಸುವ ಬಗ್ಗೆ ರಾಮಾಚಾರಿಗೆ ಆಸಕ್ತಿ ಕೂಡ ಇಲ್ಲ. ಇದೇ ವಿಚಾರವಾಗಿ ಮನೆ ಮಂದಿಯನ್ನೆಲ್ಲಾ ಎದುರು ಹಾಕಿಕೊಂಡಿದ್ದಾನೆ ರಾಮಾಚಾರಿ. ಮಗ ತನ್ನ ಮಾತು ಕೇಳುತ್ತಿಲ್ಲ ಎಂದು ಆಚಾರ್ಯರು ಕೆಲವು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಉಪವಾಸದಿಂದಾಗಿ ಆಚಾರ್ಯರ ಆರೋಗ್ಯದಲ್ಲಿ ಏರುಪೇರಾಗಿದೆ. ಇದೀಗ ತಂದೆ ಆರೋಗ್ಯಕ್ಕೋಸ್ಕರ ರಾಮಾಚಾರಿ ದೀಪಾಳನ್ನು ಮದುವೆಯಾಗಲು ಒಪ್ಪುತ್ತಾನಾ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ. ಈಗಾಗಲೇ ರಾಮಾಚಾರಿ ತಾಯಿ ಆತನ ಬಳಿ ದೀಪಾಳನ್ನು ಮದುವೆಯಾಗುವಂತೆ ಬೇಡುತ್ತಿದ್ದಾಳೆ.

    ಇದನ್ನೂ ಓದಿ: Mouna Guddemane: ರಾಮಾಚಾರಿಯ ಚಾರು ಡಾಕ್ಟರ್​ ಆಗ್ಬೇಕಿತ್ತಂತೆ, ನಟಿ ಮೌನ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ

    ಚಾರುಲತಾಳಿಗೆ ಸಿಇಓ ಪೋಸ್ಟ್ ದೊರಕಬೇಕಾದರೆ ರಾಮಾಚಾರಿ ಆಕೆಯ ಪರ್ಫಾರ್ಮೆನ್ಸ್ ಮೇಲೆ ಸರ್ಟಿಫಿಕೇಟ್ ಕೊಡಬೇಕು ಎಂದು ಚಾರುನ ಈಗಾಗಲೇ ಹೇಳಿದ್ದಾರೆ. ಆದರೆ ಇದನ್ನು ಕೊಡಲು ಒಪ್ಪದ ರಾಮಚಾರಿ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹಾಕಿದ್ದಾಳೆ ಚಾರು.ತನ್ನ ಸ್ವಾರ್ಥಕ್ಕಾಗಿ ರಾಮಾಚಾರಿ ಮತ್ತು ಚಾರುಲತಾ ಪರಸ್ಪರ ತುಂಬಾ ಪ್ರೀತಿಸುತ್ತಿದ್ದಾರೆ ಎಂದು ಇಲ್ಲಸಲ್ಲದ ವಿಚಾರಗಳನ್ನು ರಾಮಾಚಾರಿಯ ಮನೆಯವರ ಮುಂದೆ ಹೇಳಿದ್ದಾಳೆ ಚಾರುಲತಾ‌. ಇದೇ ವಿಚಾರವಾಗಿ ಮನೆಯವರು ಎಲ್ಲರೂ ರಾಮಾಚಾರಿ ಬಳಿ ಮಾತನ್ನು ಬಿಟ್ಟಿದ್ದಾರೆ ಕೂಡ. ಇದೇ ಸಿಟ್ಟಿನಲ್ಲಿ ರಾಮಾಚಾರಿ ಚಾರುಲತಾಳನ್ನು ಮದುವೆಯಾಗಲು ತಯಾರಾಗಿದ್ದನ್ನು. ಚಾರುಲತಾಳ ಸೊಕ್ಕನ್ನು ಮುರಿಯಲು ರಾಮಾಚಾರಿ ಮಾಡಿದ ಪ್ರಯತ್ನ ಈ ಬಾರಿ ಫಲಿಸಿದಂತೆ ಕಾಣಿಸುತ್ತಿದೆ.

    ಚಾರುಲತಾ ಸ್ವಾರ್ಥಕ್ಕೆ ರಾಮಾಚಾರಿ ಬಲಿ

    ಆಚಾರ್ಯರ ಆರೋಗ್ಯದ ವಿಚಾರವಾಗಿ ಇದೀಗ ರಾಮಾಚಾರಿ ಸೋತು ಹೋಗಿದ್ದಾನೆ. ಅಷ್ಟೇ ಅಲ್ಲದೆ ತಾಯಿಯ ಮಾತಿಗೆ ಕಟ್ಟುಬಿದ್ದು ರಾಮಾಚಾರಿ ದೀಪಾಳನ್ನು ಮದುವೆಯಾಗಲು ಒಪ್ಪುತ್ತಾನಾ ಎಂದು ಕಾದುನೋಡಬೇಕಿದೆ. ಆಚಾರ ಸಂಸ್ಕೃತಿ ಮತ್ತು ಗುಣನಡತೆಗೆ ಬೆಲೆ ಕೊಡುತ್ತಿದ್ದ ರಾಮಾಚಾರಿ ಮನೆಯ ಮುಂದೆ ರಾಮಾಚಾರಿ ತಪ್ಪೇ ಮಾಡದೆ ತಪ್ಪಿತಸ್ಥ ಸ್ಥಾನದಲ್ಲಿ ಇದ್ದಾನೆ. ಮುಂದೆ ಧಾರಾವಾಹಿಯಲ್ಲಿ ಯಾವ ಇರುವ ಎದುರಾಗುತ್ತದೆ ಮತ್ತು ರಾಮಾಚಾರಿ ಮತ್ತು ಚಾರುಲತಾ ಒಂದಾಗುತ್ತಾರಾ?

    ಇದನ್ನೂ ಓದಿ: Paaru Serial: ಅಪರಾಧಿ ಸ್ಥಾನದಲ್ಲಿ ನಿಂತಿರುವ ಜನನಿ ಕಳೆದುಕೊಂಡ ನಂಬಿಕೆ ಮರಳಿ ಪಡೆಯುತ್ತಾಳಾ?

    ಸಿಇಓ ಪೋಸ್ಟ್ ಚಾರುಲತಾ ಪಾಲಾಗುತ್ತಾ?

    ಸೊಕ್ಕಿನ ಚಾರುಲತಾ ಮಾಡಿದ ಎಲ್ಲಾ ತಪ್ಪುಗಳು ಈಗಾಗಲೇ ಅವಳ ತಂದೆಗೆ ತಿಳಿದಿದೆ. ಅಷ್ಟೇ ಅಲ್ಲದೆ ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಅವರಿಗೆ ಚಾರುಲತ ಮೇಲೆ ಎಲ್ಲಿಲ್ಲದ ಕೋಪ ಕೂಡ ಬಂದಿದೆ. ಇಷ್ಟೆಲ್ಲಾ ವಿಚಾರಗಳು ನಡೆದ ಬಳಿಕ ಸಿಇಓ ಪೋಸ್ಟ್ ಅನ್ನು ಚಾರುಲತಾಳಿಗೆ ನೀಡುತ್ತಾರಾ? ಪ್ರತಿದಿನ ಇಷ್ಟೊಂದು ಜಗಳವಾಡುತ್ತಿರುತ್ತಾರೆ ಇಬ್ಬರ ಮಧ್ಯೆ ಪ್ರೀತಿ ಹೇಗೆ ಹುಟ್ಟುತ್ತದೆ ಎನ್ನುವುದನ್ನು ಇನ್ನು ನೋಡಬೇಕಿದೆ.
    Published by:Swathi Nayak
    First published: