Ramachari Serial: 100 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯು ಜನಮನದಲ್ಲಿ ಯಶಸ್ವಿಯಾಗಿದೆ. ಇದೀಗ ಈ ತಂಡವು 100 ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ (Ramachari) ಧಾರಾವಾಹಿಯು ಜನಮನದಲ್ಲಿ ಯಶಸ್ವಿಯಾಗಿದೆ. ಇದೀಗ ಈ ತಂಡವು 100 ಸಂಚಿಕೆಗಳನ್ನು (100 Episode) ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ರಾಮಾಚಾರಿ ಮತ್ತು ಚಾರುಲತಾ ಸಂಭಾಷಣೆಯನ್ನು ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. ಆಚಾರ-ವಿಚಾರ ಸಂಸ್ಕೃತಿಯ ನಡುವೆ ಬೆಳೆದಿರುವ ರಾಮಾಚಾರಿ ಮತ್ತು ದುಡ್ಡು ಪಾರ್ಟಿ ಮೋಜು-ಮಸ್ತಿ ಎಂದು ಟೈಂ ಪಾಸ್ ಮಾಡುತ್ತಿದ್ದ ಚಾರುಲತಾ (Charulatha) ನಡುವೆ ಪ್ರೀತಿ ಹೇಗೆ ಹುಟ್ಟುತ್ತದೆ ಎನ್ನುವುದೇ ಪ್ರೇಕ್ಷಕರ ಲ್ಲಿರುವ ಕುತೂಹಲ. ಚಾರುಲತಾ ಸದ್ಯ ನಾಯಕ ರಾಮಾಚಾರಿ ಮನೆಯಲ್ಲಿದ್ದಾರೆ. ಸಂಸ್ಕಾರ ಕಲಿಸಬೇಕೆಂದು ಚಾರುಲತಾ ತಂದೆ ಮಗಳನ್ನು ರಾಮಾಚಾರಿ ಮನೆಯಲ್ಲಿ ಬಿಟ್ಟಿದ್ದಾರೆ. ಆದರೆ ಚಾರುಲತಾ ತನ್ನ ಹಠವನ್ನು ಬಿಟ್ಟಿಲ್ಲ.
ಶೃತಿ ರಾಮಾಚಾರಿಯ ಮುದ್ದಿನ ತಂಗಿ ಮನೆಯಲ್ಲಿ ಆಚಾರ-ವಿಚಾರ ಸಂಸ್ಕೃತಿಗಳನ್ನು ಪಾಲಿಸಿಕೊಂಡು ಕಾಲೇಜಿಗೆ ಹೋಗುತ್ತಿದ್ದಳು. ತನಗೆ ಅವಮಾನ ಮಾಡಿದಳೆಂದು ಸಿಟ್ಟಿನಲ್ಲಿ ಇದೀಗ ಚಾರು ಶೃತಿ ಬದುಕನ್ನು ಹಾಳು ಮಾಡಲು ಪ್ರಯತ್ನಿಸಿದ್ದಾಳೆ. ತನ್ನ ಕಡೆಯ ಒಬ್ಬ ಹುಡುಗನನ್ನು ಶೃತಿಯ ಜೊತೆ ಗೆಳೆತನ ಮಾಡಿಸಿ, ಶೃತಿ ಪ್ರೀತಿಯಲ್ಲಿ ಬೀಳುವಂತೆ ಮಾಡಿದ್ದಾಳೆ ಚಾರುಲತಾ. ಮನೆಯವರ ಒಪ್ಪಿಗೆ ಪಡೆದು ಮದುವೆಯು ಕೂಡ ನಿಶ್ಚಯವಾಗಿದೆ ಆದರೆ ತಾಳಿ ಕಟ್ಟುವ ಸಂದರ್ಭದಲ್ಲಿ ಮಗ ಕಾಣೆಯಾಗಿದ್ದಾನೆ. ಚಾರುಲತ ಬೀಸಿದ ಬಲೆಗೆ ಇದೀಗ ಶೃತಿ ಮತ್ತು ಅವರ ಮನೆಯವರು ಬಿದ್ದಿದ್ದಾರೆ. ಶೃತಿಯ ಭವಿಷ್ಯ ಹಾಳು ಮಾಡಿದ ಖುಷಿಯಲ್ಲಿ ಬೀಗುತ್ತಿದ್ದಾಳೆ ದುರಹಂಕಾರಿ ಚಾರುಲತಾ.
ಶೃತಿ ಪ್ರೇಮ ವಿವಾಹ ವಿಚಾರ ಕೇಳಿದಾಗ ಮನೆಯಲ್ಲಿ ಎಲ್ಲರೂ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ಮುಂದೆ ಮಗಳ ಸಂತೋಷಕ್ಕಾಗಿ ಎಲ್ಲರೂ ಈ ಮದುವೆಗೆ ಒಪ್ಪಿಗೆಯನ್ನು ಸೂಚಿಸಿದ್ದರು. ಮದುವೆಯ ಮನೆಯಲ್ಲಿ ಆಚಾರ್ಯರ ಮನೆಯ ಬಗ್ಗೆ ಮತ್ತು ಈ ಮದುವೆ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಇದೀಗ ಹೊಸದಾಗಿ ಒಂದು ವಿಚಾರ ದೊರಕಿದೆ. ಮುಂದೆ ಎಲ್ಲರ ಮುಂದೆ ಹೋದ ಮಾನವನ್ನು ಮರಳಿ ರಾಮಾಚಾರಿ ಹೇಗೆ ಪಡೆದುಕೊಳ್ಳುತ್ತಾನೆ ಎನ್ನುವುದನ್ನು ನೋಡಬೇಕಿದೆ.
ರಾಮಾಚಾರಿ ಮತ್ತು ಚಾರುಲತಾ ನಡುವೆ ಪ್ರೀತಿ ಹುಟ್ಟುತ್ತದೆ ಎಂದು ಆಫೀಸ್ನಲ್ಲಿ ಎಲ್ಲರೂ ಬಲವಾಗಿ ನಂಬಿದ್ದಾರೆ. ಆದರೆ ತಂಗಿಯ ಬಾಳನ್ನು ಹಾಳು ಮಾಡಿದ ಚಾರುಲತನನ್ನು ಕ್ಷಮಿಸುತ್ತಾನಾ ರಾಮಾಚಾರಿ? ಪ್ರತಿದಿನ ಇಷ್ಟೊಂದು ಜಗಳವಾಡುತ್ತಿರುತ್ತಾರೆ ಇಬ್ಬರ ಮಧ್ಯೆ ಪ್ರೀತಿ ಹೇಗೆ ಹುಟ್ಟುತ್ತದೆ ಎನ್ನುವುದು ಪ್ರೇಕ್ಷಕರ ಪ್ರಶ್ನೆ. ಮುಂದೆ ಧಾರಾವಾಹಿಯಲ್ಲಿ ಯಾವ ಇರುವ ಎದುರಾಗುತ್ತದೆ ಮತ್ತು ರಾಮಾಚಾರಿ ಮತ್ತು ಚಾರುಲತಾ ಒಂದಾಗುತ್ತಾರಾ? ಸಂಸ್ಕೃತಿ ಆಚರ ಮತ್ತು ವಿಚಾರ ಕಲಿಯಲು ಆಚಾರ್ಯರ ಮನೆಗೆ ಬಂದ ಚಾರುಲತಾ ಇನ್ನೇನು ಅವಾಂತರ ಮಾಡಿ ಹಾಕುತ್ತಾಳೆ.
ಮುಂದೆ ಧಾರಾವಾಹಿಯಲ್ಲಿ ಯಾವ ಇರುವ ಎದುರಾಗುತ್ತದೆ ಮತ್ತು ರಾಮಾಚಾರಿ ಮತ್ತು ಚಾರುಲತಾ ಒಂದಾಗುತ್ತಾರಾ? ಸಂಸ್ಕೃತಿ ಆಚರ ಮತ್ತು ವಿಚಾರ ಕಲಿಯಲು ಆಚಾರ್ಯರ ಮನೆಗೆ ಬಂದ ಚಾರು ಮನೆಯಲ್ಲಿ ಇರೋದು ರಾಮಾಚಾರಿ ಬಿಟ್ಟರೆ ಮತ್ಯಾರಿಗೂ ಇಷ್ಟ ಇದ್ದಂತಿಲ್ಲ. ಆದರೆ ರಾಮಾಚಾರಿ ತಂದೆ ನಾರಾಯಣಾಚಾರ್ಯರು ಇದಕ್ಕೆ ಒಳ್ಳೆಯ ಮನಸ್ಸಿಂದ ಒಪ್ಪಿಗೆ ಕೊಟ್ಟಿದ್ದಾರೆ. ಈ ಮನೆಯಲ್ಲಿ ನಾರಾಯಣಾಚಾರ್ಯರ ತಾಯಿ ಅಜ್ಜಿ ಇದ್ದಾರೆ. ಜೊತೆಗೆ ರಾಮಾಚಾರಿ ತಂಗಿ ಹಾಗೂ ಮಾವನ ಮಗಳಿದ್ದಾಳೆ. ಅಜ್ಜಿ ಹಾಗೂ ಮೊಮ್ಮಕ್ಕಳು ಇದೀಗ ಚಾರುವನ್ನು ಈ ಮನೆಬಿಟ್ಟು ಓಡಿಸಲು ಏನೇನೋ ಪ್ಲಾನ್ ಮಾಡ್ತಿದ್ದಾರೆ. ಆದರೆ ಅವರ ಪ್ಲಾನ್ ಒಂದೊಂದಾಗಿ ಉಲ್ಟಾ ಹೊಡೀತಿದೆ. ರಾಮಾಚಾರಿ ಮತ್ತು ಚಾರುವನ್ನು ಹತ್ತಿರ ತರುತ್ತಿದೆ. ಚಾರುಲತಾ ತನ್ನ ತಂಗಿಯ ಭವಿಷ್ಯವನ್ನು ಹಾಳುಮಾಡಿದ ವಿಚಾರ ರಾಮಾಚಾರಿಗೆ ತಿಳಿದರೆ ಅವನು ಅದನ್ನು ಯಾವ ರೀತಿ ಸ್ವೀಕರಿಸುತ್ತಾನೆ ಎನ್ನುವುದನ್ನೆಲ್ಲ ನೋಡಬೇಕು.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ