ರಾಮಾಚಾರಿ (Ramachari) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಈ ಕತೆಯ ನಾಯಕ ರಾಮಾಚಾರಿ, ನಾಯಕಿ ಚಾರು. ಧಾರಾವಾಹಿ ಶುರವಾದಾಗ ಇಬ್ಬರಿಗೂ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗುತ್ತಿರಲಿಲ್ಲ. ರಾಮಾಚಾರಿ ಒಳ್ಳೆಯ ಗುಣ, ನಡತೆ, ಅವನ ಸ್ವಾಭಿಮಾನ ನೋಡಿ ಚಾರುಗೆ ಪ್ರೀತಿಯಾಗುತ್ತೆ. ಚಾರು ಮತ್ತು ರಾಮಾಚಾರಿ ಒಂದೇ ಕಂಪನಿಯಲ್ಲಿ (Comapny) ಕೆಲಸ ಮಾಡುತ್ತಿದ್ದಾರೆ. ರಾಮಾಚಾರಿ ಮಾಡಿದ ಯಡವಟ್ಟಿನಿಂದ ಕೆಮಿಕಲ್ ಬಿದ್ದು ಚಾರು ಕಣ್ಣು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತೆ. ಅದಕ್ಕೆ ರಾಮಾಚಾರಿ ಕೊರಗುತ್ತಾ ಇರುತ್ತಾನೆ. ಕಣ್ಣು ಕಾಣದ ಚಾರುಗೆ ನಾನೇ ಬೆಳಕಾಗಬೇಕು ಎಂದು ರಾಮಾಚಾರಿ ಯಾರಿಗೂ ಹೇಳದೇ ಚಾರುಗೆ ತಾಳಿ ಕಟ್ಟಿದ್ದಾನೆ. ಈಗ ಚಾರುಳನ್ನು ಬಿಟ್ಟು ಹೋಗು ಎನ್ನುತ್ತಿದ್ದಾನೆ.
ಚಾರು ಪ್ರಶ್ನೆಗೆ ರಾಮಾಚಾರಿಯ ಉತ್ತರ
ಚಾರು: ನನಗೆ ಗಂಭೀರವಾಗಿರೋ ಗಂಡ ಅಂದ್ರೆ ಇಷ್ಟ ಇಲ್ಲ. ನಾನು ಏನು ಮಾಡಬೇಕು?
ರಾಮಾಚಾರಿ: ಗಂಡ ಅನ್ನುವುದನ್ನು ಮರೆಯಬೇಕು.
ಚಾರು: ಮರೆಯುವುದು ಅಷ್ಟು ಸುಲಭ ಅಲ್ಲ
ರಾಮಾಚಾರಿ: ಕಷ್ಟ ಆದ್ರೂ ಬೇರೆ ಆಯ್ಕೆ ಇಲ್ಲ.
ಚಾರು: ಹಾಗಾದ್ರೆ ತಾಳಿ ಯಾಕೆ ಕಟ್ಟಬೇಕಿತ್ತು.
ರಾಮಾಚಾರಿ: ಅದಕ್ಕೆ ಸಂದರ್ಭ ತಂದ ಸಂಕಷ್ಟ ಕಾರಣವಾಗಿತ್ತು.
ಚಾರು: ಗಂಡ, ಹೆಂಡ್ತಿ ಸಂಬಂಧಕ್ಕೆ ಬೇಕಿರೋದು ಸಂದರ್ಭನೂ ಅಲ್ಲ, ಕಾರಣನೂ ಅಲ್ಲ. ಅದು ಋಣ
ರಾಮಾಚಾರಿ: ಯಾವುದೇ ಋಣ ಆದ್ರೂ ಮರೆಯಲೇಬೇಕು. ಮುಗಿಸಿಕೊಳ್ಳೋಣ
ಚಾರು: ತಾಳಿ ಸಂಬಂಧ ಮುಗಿಯುವ ಋಣ ಅಲ್ಲ. ಮುಂದಿನ ಜನ್ಮಕ್ಕೂ ಮುಂದುವರೆಯುವ ಅನುಬಂಧ.
ರಾಮಾಚಾರಿ: ನನಗೆ ಆ ಅನುಬಂಧ ಬೇಡ ಮೇಡಂ.
ಚಾರು: ಬೇಡ ಅನ್ನೋಕೆ ಆಗಲ್ಲ. ಒಂದು ಸಲ ತಾಳಿ ಕಟ್ಟಿದ್ರೆ ಮುಗೀತು.
ರಾಮಾಚಾರಿ: ಇನ್ನೂ ಏನೂ ಶುರವಾಗೇ ಇಲ್ಲ, ಮುಗಿಯಿತೂ ಎನ್ನುವ ಮಾತ್ಯಾಕೆ?
ಚಾರು: ನೀವು ಧೈರ್ಯ ಮಾಡಿ, ಮನೆಯವರ ಮುಂದೆ ನಿಂತ್ರೆ ಎಲ್ಲಾ ಸರಿ ಹೋಗುತ್ತೆ. ನಾನು ನಿಮ್ಮ ಹೆಂಡ್ತಿ ಆಗ್ತೀನಿ. ನಿಮ್ಮ ಮನೆ ಸೊಸೆಯಾಗ್ತೀನಿ.
ರಾಮಾಚಾರಿ: ನಿಮ್ಮ ಜೀವ ಉಳಿಸೋಕೆ ನಿಮಗೆ ತಾಳಿ ಕಟ್ಟಿದೆ ಅಷ್ಟೆ. ಬೇರೆ ಯಾವ ಸ್ಥಾನವನ್ನೂ ನಾನು ನಿಮಗೆ ಕೊಟ್ಟಿಲ್ಲ.
ಚಾರು: ಕೊಡದೇ ಇದ್ದ ಮೇಲೆ, ಮೂರೆಳೆ ಜನಿವಾರ, ಆರೇಳೆ ಯಾಕಾಯ್ತು? ಮೂರಕ್ಕೆ ಮೂರೆಳೆ ಸೇರಿಸಿಕೊಂಡಿದ್ದು ನನಗೋಸ್ಕರ ತಾನೇ.
ರಾಮಾಚಾರಿ: ಈಗ ಮತ್ತೆ ಜನಿವಾರ ಮೂರೆಳೆ ಆಗಿದೆ. ನೀವು ಎಂದುಕೊಂಡಿದ್ದ ಮೂರೆಳೆಯನ್ನು ನಾನು ತೆಗೆದಿದ್ದೇನೆ. ಅದಕ್ಕೆ ನೀವು ನಾನು ಎಂದುಕೊಂಡಿರುವ ಆ ತಾಳಿಯನ್ನು ತೆಗೆದುಬಿಡಿ.
ಚಾರು: ಬಿಚ್ಚಿ ಬಿಸಾಡೋಕೆ ತಾಳಿ ಒಡವೆಯಲ್ಲ. ಅದಕ್ಕೊಂದು ಬೆಲೆ ಇದೆ.
ರಾಮಾಚಾರಿ: ಅಗತ್ಯ ಇಲ್ಲ ಎಂದುಕೊಂಡ್ರೆ, ಯಾವುದಕ್ಕೂ ಬೆಲೆ ಇಲ್ಲ. ಅದೇ ಸತ್ಯ.
ಚಾರು: ಸುಳ್ಳು, ಸುಳ್ಳು, ಸುಳ್ಳು.
ರಾಮಾಚಾರಿ: ಒಂದು ಚಿಕ್ಕ ಮಗು ಮುಂದೆ ಒಂದು ಕಡೆ ಒಂದು ಕೋಟಿ ರೂಪಾಯಿ. ಇನ್ನೊಂದು ಕಡೆ 2 ರೂಪಾಯಿ ಚಾಕೋಲೇಟ್ ಇಡಿ. ಆ ಮಗು 2 ರೂಪಾಯಿ ಚಾಕೋಲೇಟ್ ತೆಗೆದುಕೊಳ್ಳುತ್ತೆಮ ಹೊರತು 1 ಕೋಟಿ ರೂಪಾಯಿ ತೆಗೆದುಕೊಳ್ಳಲ್ಲ.
ಚಾರು: ಆ ಮಗು ತರ ನಾನು ಚಾಕೋಲೇಟ್ ನೀನು.
ರಾಮಾಚಾರಿ: ನೀವು ಮಗು ಅಲ್ಲ. ಅದನ್ನು ಅರ್ಥ ಮಾಡಿಕೊಳ್ಳಿ. ನನ್ನ ಕುಟುಂಬದ ಘನತೆ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಿ. ನನ್ನ ಮೇಲೆ ನಂದೇ ಆದ ಜವಾಬ್ದಾರಿ ಇದೆ. ಅರ್ಥ ಮಾಡಿಕೊಳ್ಳಿ. ನಮ್ಮಪ್ಪನ ಮಾತಿನ ರೀತಿ ನಾವು ಬದುಕಲೇ ಬೇಕು.
ಇದನ್ನೂ ಓದಿ: Amruthadhare: 'ಅಮೃತಧಾರೆ' ಸುರಿಸಲು ರೆಡಿಯಾದ ಜೀ ಕನ್ನಡ, ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ನಟಿ ಛಾಯಾ ಸಿಂಗ್
ಚಾರು: ಅದಕ್ಕೆ ನನ್ನ ಬದುಕನ್ನು ಏಕೆ ಹಾಳು ಮಾಡ್ತೀಯಾ ರಾಮಾಚಾರಿ?
ರಾಮಾಚಾರಿ: ಅದನ್ನು ಹಾಳು ಮಾಡಿಕೊಳ್ಳಬೇಡಿ ಅಂತಾನೇ, ಬಿಟ್ಟು ಹೋಗಿ ಅಂತ ಹೇಳ್ತಾ ಇದ್ದೇನೆ.
ಚಾರು: ನನಗೆ ನೀನೇ ಜೀವನ. ನೀನೇ ಎಲ್ಲ.
ರಾಮಾಚಾರಿ: ಆದ್ರೆ ನನ್ನ ಜೀವನದಲ್ಲಿ ನೀವು ಇಲ್ಲ. ನನ್ನ ಜೀವನದಲ್ಲಿ ಇರೋರು ನನ್ನ ಮನೆ, ಕುಟುಂಬ ಮಾತ್ರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ