Nannarasi Radhe Serial: ಇಂಚರಾ ಮುಂದೆ ಅಶ್ವಿನಿಯ ನಿಜಮುಖ ಬಯಲು? ನನ್ನರಸಿ ರಾಧೆಯಲ್ಲಿ ಹೊಸ ತಿರುವು

ಅಗಸ್ತ್ಯನ ತಂಗಿ ಎಂದು ಹೊಸದಾಗಿ ಮನೆಗೆ ಎಂಟ್ರಿ ಕೊಟ್ಟ ಅಶ್ವಿನಿ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ ಇದೀಗ ಅಶ್ವಿನಿಯ ನಿಗೂಢವಾದ ವರ್ತನೆಯ ಇಂಚರಾಳ ಮನಸಲ್ಲಿ ಸಾವಿರಾರು ಪ್ರಶ್ನೆಗಳನ್ನು ಕೂಡ ಮೂಡಿಸಿದೆ.

ನನ್ನರಸಿ ರಾಧೆ

ನನ್ನರಸಿ ರಾಧೆ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ (Nannarasi Radhe) ಕೂಡ ಒಂದು. ಇಂಚರ (Inchara) ಮತ್ತು ಅಗಸ್ತ್ಯ (Agasthya) ಕ್ಯೂಟ್ ಲವ್ ಸ್ಟೋರಿ (Love Story) ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. ಇದೀಗ ಧಾರಾವಾಹಿಯಲ್ಲಿ ಪ್ರತಿದಿನ ಹೊಸ ಹೊಸ ತಿರುವುಗಳು ಬಂದು ಇನ್ನಷ್ಟು ಕುತೂಹಲಗಳನ್ನು ಕಾದಿರಿಸುವಂತೆ ಮಾಡುತ್ತಿದೆ. ಅಗಸ್ತ್ಯನ ತಂಗಿ ಎಂದು ಹೊಸದಾಗಿ ಮನೆಗೆ ಎಂಟ್ರಿ ಕೊಟ್ಟ ಅಶ್ವಿನಿ (Ashwini) ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ ಇದೀಗ ಅಶ್ವಿನಿಯ ನಿಗೂಢವಾದ ವರ್ತನೆಯ ಇಂಚರಾಳ ಮನಸಲ್ಲಿ ಸಾವಿರಾರು ಪ್ರಶ್ನೆಗಳನ್ನು ಕೂಡ ಮೂಡಿಸಿದೆ.

    ರಾಥೋಡ್ ಮನೆ ಮಂದಿಯ ವಿರುದ್ಧ ಪಿತೂರಿ ಮಾಡುತ್ತಿರುವ ಅಶ್ವಿನಿ

    ಇಂದ್ರಾಣಿ ತನ್ನ ದ್ವೇಷವನ್ನು ತೀರಿಸಿಕೊಳ್ಳಲು ಅಶ್ವಿನಿಯನ್ನು ಅಗಸ್ತ್ಯನ ತಂಗಿಯನ್ನಾಗಿ ಆ ಮನೆಗೆ ಕಳುಹಿಸಿದ್ದಾಳೆ. ಅಷ್ಟೇ ಅಲ್ಲ ಅಶ್ವಿನಿ ಆ ಮನೆಯಲ್ಲಿ ಎಲ್ಲರ ನೆಮ್ಮದಿ ಕೆಡಿಸಲು ಸದಾ ಪ್ರಯತ್ನ ಪಡುತ್ತಿದ್ದಾಳೆ. ಮುಗ್ದತೆಯ ನಾಟಕವಾಡಿ ಇಂಚರ ಅಗಸ್ತ್ಯ ಹೀಗೆ ಮನೆ ಮಂದಿಯ ಮನಸ್ಸನ್ನು ಗೆದ್ದು ಅವರ ವಿರುದ್ಧವೇ ಹೊಸ ಪಿತೂರಿಗಳನ್ನು ಮಾಡುತ್ತಿದ್ದಾಳೆ. ಅಷ್ಟೇ ಅಲ್ಲ ಇಂದ್ರಾಣಿಯನ್ನು ಜೈಲಿನಿಂದ ಹೊರತರಲು ಸಂತೋಷ್ ರಾಥೋಡ್ ಅವರ ಸಹಿಯನ್ನು ಮೋಸದಲ್ಲಿ ಹಾಕಿಸಿಕೊಂಡಿದ್ದಾಳೆ‌ ಅಶ್ವಿನಿ. ಇಂಚರಳ ತಂದೆಯ ವಾಚ್ ಅನ್ನು ಅವಳು ಬಹಳ ಹಿಂದಿನಿಂದಲೇ ತುಂಬಾ ಜೋಪಾನ ಮಾಡಿಕೊಂಡು ಬಂದಿದ್ದಾಳೆ. ಆದರೆ ಇದೀಗ ಇಂಚರಳ ತಂದೆಯ ನೆನಪಿಗಿದ್ದ ಒಂದೇ ಒಂದು ವಾಚನ್ನು ಕೂಡ ಕುತಂತ್ರಿ ಅಶ್ವಿನಿ ಹೊಡೆದು ಹಾಕಿದ್ದಾಳೆ.

    ಇದನ್ನೂ ಓದಿ: Kannadathi Serial: ಸುಸೂತ್ರವಾಗಿ ನಡೆಯುತ್ತಾ ಹರ್ಷ ಭುವಿ ಮದುವೆ? ಕನ್ನಡತಿಯಲ್ಲಿ ಬಿಗ್ ಟ್ವಿಸ್ಟ್

    ಮತ್ತೆ ರಾಥೋಡ್ ಮನೆ ಸೇರಿಕೊಂಡ ಲಾವಣ್ಯ!

    ರಾಥೋಡ್ ಮನೆಯ ಮಗಳು ಲಾವಣ್ಯ ಆಸ್ತಿಗೆ ಆಸೆಪಟ್ಟು ಮನೆಯವರ ವಿರುದ್ಧವೇ ಸಂಚುಗಳನ್ನು ಮಾಡಿ ಎಲ್ಲರ ಮುಂದೆ ಸಿಕ್ಕಿಹಾಕಿಕೊಂಡಿದ್ದಳು. ಹಾಗೆ ತಾನು ಮಾಡಿದ ಮೋಸ ಮನೆಮಂದಿಗೆಲ್ಲ ತಿಳಿದು ಲಾವಣ್ಯಳನ್ನು ಮನೆಯಿಂದ ಹೊರಗೆ ಕೂಡ ಹಾಕಿದ್ದರು. ಕೆಲದಿನಗಳಿಂದ ಲಾವಣ್ಯ ಪಾತ್ರಧಾರಿಯು ಧಾರಾವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲಾ. ಆದರೆ ಇದೀಗ ಮತ್ತೆ ಲಾವಣ್ಯ ರಾತೋಡ್ ಮನೆ ಸೇರಿಕೊಂಡಿದ್ದಾಳೆ.

    ಈ ಹಿಂದೆ ವಿಲನ್ ಆಗಿ ಕಾಣಿಸಿ ಕೊಂಡ ಲಾವಣ್ಯ ಮರಳಿ ಮನೆಗೆ ಬಂದ ನಂತರ ತನ್ನ ದ್ವೇಷ ಮನೋಭಾವವನ್ನು ಮರೆತು ಪ್ರಾರಂಭದಲ್ಲಿ ಲಾವಣ್ಯ ಒಳ್ಳೆಯವಳ ಹಾಗೆ ನಟಿಸುತ್ತಾ ಮನೆಯ ಆಸ್ತಿ ಹೊಡೆಯುವ ಸಂಚು ರೂಪಿಸುತ್ತಿದ್ದಳು. ಬಳಿಕ ಲಾವಣ್ಯ ಕರಾಳ ಮುಖ ಬಯಲಾದ ಬಳಿಕ ಮನೆಯವರೇ ಹೊರಹಾಕುತ್ತಾರೆ. ನಂತರ ಲಾವಣ್ಯ ಪಾತ್ರ ಧಾರಾವಾಹಿಯಿಂದ ನಾಪತ್ತೆಯಾಗಿತ್ತು. ಇದೀಗ ಮತ್ತೆ ಎಂಟ್ರಿ ಕೊಟ್ಟ ಬಳಿಕ ಧಾರಾವಾಹಿ ಯಾವೆಲ್ಲ ಟ್ವಿಸ್ಟ್ ಪಡೆದುಕೊಳ್ಳಲಿದೆ ಎಂದು ಪ್ರೇಕ್ಷಕರು ಕಾತರರಾಗಿದ್ದಾರೆ.

    ಆದರೆ ಈ ಬಾರಿ ಲಾವಣ್ಯ ಮನೆಗೆ ಒಳ್ಳೆಯದನ್ನೇ ಮಾಡಲು ಪ್ರಯತ್ನಪಟ್ಟರೂ ಯಾರೂ ಆಕೆಯನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಹೆತ್ತ ತಾಯಿ ಕೂಡ ಲಾವಣ್ಯಳನ್ನು ದ್ವೇಷಿಸುತ್ತಿದ್ದಾರೆ. ಇತ್ತ ಅಶ್ವಿನಿ ಮಾಡುತ್ತಿರುವ ಪಿತೂರಿ ಮತ್ತು ಆಕೆಯ ಮೋಸದ ಬಗ್ಗೆ ಲಾವಣ್ಯಳಿಗೆ ಕೂಡ ಮೂಡಿದೆ ಆದರೆ ಈ ಬಗ್ಗೆ ಹೇಳಿದರೆ ಯಾರೂ ನಂಬುವ ಪ್ರಯತ್ನ ಕೂಡ ಮಾಡುತ್ತಿಲ್ಲ.

    ಇದನ್ನೂ ಓದಿ: Ramachari Serial: 100 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿ

    ಅಶ್ವಿನಿಯ ನಿಜಮುಖ ಇಂಚರಳಾ ಮುಂದೆ ಬದಲಾಗುವುದಂತು ಖಚಿತ

    ಕಳೆದುಕೊಂಡ ನಂಬಿಕೆಯನ್ನು ಮತ್ತೆ ಲಾವಣ್ಯ ಹೇಗೆ ಪಡೆದುಕೊಳ್ಳುತ್ತಾರೆ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಷ್ಟೇ. ಹಾಗೆ ಅಶ್ವಿನಿಯ ನಿಜರೂಪವನ್ನು ಬಯಲು ಮಾಡಲು ಲಾವಣ್ಯ ಮತ್ತು ಇಂಚರಾಳಿಂದ ಮಾತ್ರ ಸಾಧ್ಯ. ಇದೀಗ ಇಂಚರಾಳಿಗೂ ಅಶ್ವಿನಿಯ ವರ್ತನೆಯಲ್ಲಿ ನಿಗೂಢತೆ ಕಾಣಿಸುತ್ತಿದೆ ಅಷ್ಟೇ ಅಲ್ಲ ಆಕೆ ಲ್ಯಾಪ್ ಟಾಪ್ ಉಪಯೋಗಿಸುತ್ತಿರುವುದನ್ನು ಕೂಡ ಇಂಚರ ನೋಡಿದ್ದಾಳೆ ಮತ್ತು ಅದರ ಬಗ್ಗೆ ಪ್ರಶ್ನಿಸಿದ್ದಾಳೆ ಕೂಡ. ಆದ್ದರಿಂದ ಸದ್ಯದಲ್ಲೇ ಅಶ್ವಿನಿಯ ನಿಜಮುಖ ಇಂಚರಳಾ ಮುಂದೆ ಬದಲಾಗುವುದಂತು ಖಚಿತ.
    Published by:Swathi Nayak
    First published: