Nannarasi Radhe Serial: ಅಶ್ವಿನಿಯ ನಿಜರೂಪ ಬಯಲು ಮಾಡಿಬಿಟ್ಲಾ ಲಾವಣ್ಯ? ಮುಂದಿದೆ ಬಿಗ್ ಟ್ವಿಸ್ಟ್

 ಹೆತ್ತ ತಾಯಿ ಒಡಹುಟ್ಟಿದ ತಂಗಿ ಮತ್ತೆ ಮರಳಿ ಸಿಕ್ಕಿದ ಖುಷಿಯಲ್ಲಿ ಅಗಸ್ತ್ಯ ಇದ್ದಾನೆ. ಆದರೆ ಅಶ್ವಿನಿಯ ವರ್ತನೆ ಇದೀಗ ಮನೆಯಲ್ಲಿ ಎಲ್ಲರಿಗೂ ವಿಚಿತ್ರವೆನಿಸುತ್ತಿದೆ ಆಕೆಯ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಲು ಇಂಚರ ಮತ್ತು ಲಾವಣ್ಯ ಆರಂಭಿಸಿದ್ದಾರೆ.

ಲಾವಣ್ಯ

ಲಾವಣ್ಯ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ನನ್ನರಸಿ ರಾದೆ (Nannarasi Radhe) ಪ್ರತಿದಿನ ಹೊಸ ಹೊಸ ತಿರುವುಗಳನ್ನು ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ. ಅಗಸ್ತ್ಯ (Agasthya) ರಾಥೋಡ್ ಮತ್ತು ಇಂಚರ (Inchara) ನಡುವಿನ ಕ್ಯೂಟ್ ಲವ್ ಸ್ಟೋರಿ ನೋಡಲು ಪ್ರೇಕ್ಷಕರು ಕಾಯುತ್ತಿರುತ್ತಾರೆ. ಇದೀಗ ನನ್ನರಸಿ ರಾದೆ ರೋಚಕ ತಿರುವಿನೊಂದಿಗೆ ಮುಂದೆ ಸಾಗುತ್ತಿದೆ. ಹೆತ್ತ ತಾಯಿ ಒಡಹುಟ್ಟಿದ ತಂಗಿ ಮತ್ತೆ ಮರಳಿ ಸಿಕ್ಕಿದ ಖುಷಿಯಲ್ಲಿ ಅಗಸ್ತ್ಯ ಇದ್ದಾನೆ. ಆದರೆ ಅಶ್ವಿನಿಯ (Ashwini) ವರ್ತನೆ ಇದೀಗ ಮನೆಯಲ್ಲಿ ಎಲ್ಲರಿಗೂ ವಿಚಿತ್ರವೆನಿಸುತ್ತಿದೆ ಆಕೆಯ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಲು ಇಂಚರ ಮತ್ತು ಲಾವಣ್ಯ ಆರಂಭಿಸಿದ್ದಾರೆ.

    ವಾಸ್ತವದಲ್ಲಿ ಅಶ್ವಿನಿ ಇಂದ್ರಾಣಿ ಹೆತ್ತ ಮಗಳು ತನ್ನ ದ್ವೇಷ ಸಾಧಿಸಿಕೊಳ್ಳಲು ರಾತೋಡ್ ಮನೆಗೆ ಅಗಸ್ಥ್ಯನ ತಂಗಿ ಎಂದು ಅಶ್ವಿನಿಯನ್ನು ಬಿಟ್ಟಿದ್ದಾರೆ. ಮೊದಮೊದಲು ಭಯದಲ್ಲಿದ್ದ ಅಶ್ವಿನಿ ಕೇವಲ ಇಂಚರಳ ಬಳಿ ಮಾತ್ರ ಮಾತನಾಡುತ್ತಿದ್ದಳು ಆದರೆ ಇದೀಗ ಎಲ್ಲರ ಜೊತೆಯಲ್ಲಿ ಚೆನ್ನಾಗಿ ಮಾತನಾಡಿಕೊಂಡು ತನ್ನ ಬೇಳೆಯನ್ನು ಬಿಡಿಸಿಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡಿದ್ದಾಳೆ. ಪರಸ್ಪರ ತುಂಬಾ ಅನ್ಯೋನ್ಯತೆಯಿಂದ ಇರುವ ಅಗಸ್ಥ್ಯ ಮತ್ತು ಇಂಚರಾಳ ನಡುವೆ ಭಿನ್ನಾಭಿಪ್ರಾಯ ತಂದಿಡುವ ಕೆಟ್ಟ ಯೋಚನೆ ಅಶ್ವಿನಿಯ ಮನದಲ್ಲಿದೆ. ಇದೇ ಕಾರಣಕ್ಕೆ ಅಗಸ್ತ್ಯನ ಮುಗ್ಧತೆಯನ್ನು ಅಶ್ವಿನಿ ಬಳಸಿಕೊಳ್ಳಲು ಆರಂಭಿಸಿದ್ದಾಳೆ.

    ಇದನ್ನೂ ಓದಿ: Kannadathi Serial: ಕನ್ನಡತಿಯಲ್ಲಿ ಕೊನೆಯಾಗುತ್ತಾ ಅಮ್ಮಮ್ಮನ ಪಾತ್ರ? ವಾಹಿನಿಯವರಲ್ಲಿ ಅಭಿಮಾನಿಗಳ ಕೋರಿಕೆ ಏನು?

    ಲಾವಣ್ಯಳ ಮುಂದೆ ಸಿಕ್ಕಿಬಿದ್ದ ಅಶ್ವಿನಿ

    ಲಾವಣ್ಯ ರಾತೋಡ್ ಮನೆಯ ಮಗಳು ಆರಂಭದಲ್ಲಿ ದುಡ್ಡಿನಾಸೆಗೆ ರಾತೋಡ್ ಮನೆಗೆ ಮೋಸ ಮಾಡಲು ಹೊರಟಿದ್ದಳಾದರೂ‌ ತನ್ನ ನಿಜರೂಪ ಮನೆಯಲ್ಲಿ ಬಯಲಾದ ಬಳಿಕ ರಾಥೋಡ್ ಮನೆಯಿಂದ ಹೊರ ಹೋಗಿದ್ದಳು ಲಾವಣ್ಯ. ಆದರೆ ಇದೀಗ ಆಕೆ ತನ್ನ ತಪ್ಪಿನ ಅರಿವಾಗಿ ತಾನು ಹುಟ್ಟಿ ಬೆಳೆದ ಮನೆಗೆ ಒಳ್ಳೆಯದು ಮಾಡುವ ಉದ್ದೇಶದಿಂದ ಒಳ್ಳೆಯ ವ್ಯಕ್ತಿಯಾಗಿ ಜೀವನ ನಡೆಸುತ್ತಿದ್ದಾಳೆ.

    ಅಶ್ವಿನಿಯ ಬಗ್ಗೆ ಆರಂಭದಿಂದಲೂ ಲಾವಣ್ಯಳಿಗೆ ಸಂಶಯವಿತ್ತು ಕಳೆದ ಕೆಲವು ದಿನಗಳ ಹಿಂದೆ ಡಿನ್ನರ್ ಗೆ ಹೋದಾಗ ಅಲ್ಲಿ ವೈಟರ್ ಆಗಿದ್ದ ಹುಡುಗಿ ಅಶ್ವಿನಿಯನ್ನು ಈ ಹಿಂದೆ ನೋಡಿದ್ದೇನೆ ಎಂದು ಬಹಳ ವಿಶ್ವಾಸದಿಂದ ಹೇಳಿದ್ದನ್ನು ಕೇಳಿದ ಬಳಿಕ ಮತ್ತೆ ಲಾವಣ್ಯಳಿಗೆ ಅಶ್ವಿನಿಯವರ ಇನ್ನಷ್ಟು ಹೆಚ್ಚಾಗಿತ್ತು. ಬಳಿಕ ಇದೀಗ ಲಾವಣ್ಯಳಿಗೆ ಆಕೆಯ ಬಗ್ಗೆ ಒಂದು ಮಹತ್ವದ ಸುಳಿವು ಕೂಡ ದೊರಕಿತ್ತು. ಅಶ್ವಿನಿ ಕಲಿತಿರುವ ಯುನಿವರ್ಸಿಟಿಯ ಬಗ್ಗೆ ಲಾವಣ್ಯ ಮಾಹಿತಿಯನ್ನು ಪಡೆದು ಮನೆಯವರ ಮುಂದೆ ಬಯಲು ಮಾಡಬೇಕು ಎನ್ನುವಷ್ಟರಲ್ಲಿ ಅದನ್ನು ಅಶ್ವಿನಿ ಆ ಮಾಹಿತಿಯನ್ನು ಹರಿದು ಹಾಕಿದ್ದಾಳೆ.

    ಇದನ್ನೂ ಓದಿ: Paaru Serial: ಅರುಂಧತಿಯ ಮೋಸದ ಜಾಲ ಕಂಡುಹಿಡಿದರಾ ಆದಿ-ಪ್ರೀತೂ? ಮುಂದಿದೆ ಬಿಗ್ ಟ್ವಿಸ್ಟ್

    ಲಾವಣ್ಯ ಜೊತೆ ಅಶ್ವಿನಿಯ ರೂಪ ಬಯಲುಮಾಡಲು ಕೈಜೋಡಿಸಿದ ಇಂಚರಾ

    ಲಾವಣ್ಯಳ ಬುದ್ಧಿವಂತಿಕೆ ಮೇಲೆ ನಂಬಿಕೆ ಇರುವ ಇಂಚರಾ ಆಕೆ ಹೇಳುವ ಮಾತುಗಳು ಸತ್ಯ ಇರಬಹುದು ಎಂದು ನಂಬಲು ಆರಂಭಿಸಿದ್ದಾಳೆ. ಅಷ್ಟೇ ಅಲ್ಲದೆ ಇಡೀ ಮನೆಯಲ್ಲಿ ಯಾರೂ ಕೂಡ ಲಾವಣ್ಯಳನ್ನು ನಂಬದಿದ್ದರೂ ಇಂಚರಾ ಲಾವಣ್ಯ ಜೊತೆ ಅನ್ಯೋನ್ಯತೆಯಿಂದ ಇದ್ದಾಳೆ. ಅಷ್ಟೇ ಅಲ್ಲದೆ ಅಶ್ವಿನಿ ಬಗ್ಗೆ ಇರುವ ಸಂಶಯ ಕೂಡ ಲಾವಣ್ಯಳನ್ನು ನಂಬುವಂತೆ ಮಾಡುತ್ತಿದೆ ಇಂಚರಾ ಳಿಗೆ ಈಗಾಗಲೇ ಇಂಚರಳ ಕೈಗೆ ಅಶ್ವಿನಿ ಹರಿದು ಹಾಕಿದಂತಹ ಯಶಸ್ವಿನಿ ಯುನಿವರ್ಸಿಟಿ ಬಗ್ಗೆ ಮಾಹಿತಿಯ ಪೇಪರ್ ಪೀಸ್ ದೊರಕಿದೆ. ಮುಂದೆ ಇದೇ ವಿಚಾರವಾಗಿ ಅಶ್ವಿನ್ ಇನ್ನೇನು ಪ್ಲಾನ್ ಮಾಡುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ. ಮುಂದೆ ಲಾವಣ್ಯ ಮತ್ತು ಇಂಚರಾ ಸೇರಿ ಅಶ್ವಿನಿಯ ನಿಜ ಮುಖವನ್ನು ಮನೆಯವರ ಮುಂದೆ ಯಾವಾಗ ಬಯಲು ಮಾಡುತ್ತಾರೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ.
    Published by:Swathi Nayak
    First published: